AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ವಾರ ‘ಧುರಂಧರ್’, ‘ಅಖಂಡ 2’, ‘ಧರ್ಮಂ’ ಜೊತೆ ಇನ್ನಷ್ಟು ಸಿನಿಮಾ ರಿಲೀಸ್

ಈ ವಾರ ಬಾಕ್ಸ್ ಆಫೀಸ್​​ನಲ್ಲಿ ರಣವೀರ್ ಸಿಂಗ್, ಬಾಲಯ್ಯ, ಮಮ್ಮೂಟ್ಟಿ ಮುಂತಾದವರ ನಡುವೆ ಪೈಪೋಟಿ ಏರ್ಪಟ್ಟಿದೆ. ‘ಧುರಂಧರ್’, ‘ಅಖಂಡ 2’, ‘ಕಲಂಕಾವಲ್’, ‘ಧರ್ಮಂ’ ಮುಂತಾದ ಸಿನಿಮಾಗಳು ಡಿಸೆಂಬರ್ 5ಕ್ಕೆ ರಿಲೀಸ್ ಆಗುತ್ತಿವೆ. ಒಂದಲ್ಲ ಒಂದು ಕಾರಣದಿಂದ ಈ ಸಿನಿಮಾಗಳು ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿವೆ. ಆ ಬಗ್ಗೆ ಇಲ್ಲಿದೆ ವಿವರ..

ಈ ವಾರ ‘ಧುರಂಧರ್’, ‘ಅಖಂಡ 2’, ‘ಧರ್ಮಂ’ ಜೊತೆ ಇನ್ನಷ್ಟು ಸಿನಿಮಾ ರಿಲೀಸ್
Dhurandhar, Akhanda 2, Dharmam
ಮದನ್​ ಕುಮಾರ್​
|

Updated on: Dec 04, 2025 | 9:20 PM

Share

ಡಿಸೆಂಬರ್ 5ರಂದು ಒಂದಷ್ಟು ಸಿನಿಮಾಗಳು ಬಿಡುಗಡೆ ಆಗುತ್ತಿವೆ. ರಣವೀರ್ ಸಿಂಗ್ ನಟನೆಯ ‘ಧುರಂಧರ್’ (Dhurandhar), ನಂದಮೂರಿ ಬಾಲಕೃಷ್ಣ ನಟನೆಯ ‘ಅಖಂಡ 2’ (Akhanda 2) ಸಿನಿಮಾಗಳು ಪ್ರಮುಖವಾಗಿವೆ. ಇವುಗಳ ಜೊತೆ ಬೇರೆ ಬೇರೆ ಭಾಷೆಯ ಒಂದಷ್ಟು ಸಿನಿಮಾಗಳು ತೆರೆಗೆ ಬರುತ್ತಿವೆ. ಪ್ರತಿ ಶುಕ್ರವಾರದಂತೆ ಈ ಶುಕ್ರವಾರ ಕೂಡ ಬಾಕ್ಸ್ ಆಫೀಸ್​​ನಲ್ಲಿ ಪೈಪೋಟಿ ಜೋರಾಗುತ್ತಿದೆ. ‘ಧುರಂಧರ್’ ಮೂಲಕ ರಣವೀರ್ ಸಿಂಗ್ ಅವರು ಗೆಲ್ಲುವ ಭರವಸೆ ಹೊಂದಿದ್ದಾರೆ. ಕನ್ನಡದ ‘ಧರ್ಮಂ’ ಸಿನಿಮಾ ಕೂಡ ಡಿಸೆಂಬರ್ 5ರಂದು ಬಿಡುಗಡೆ ಆಗುತ್ತಿದೆ.

ಟ್ರೇಲರ್ ಮೂಲಕ ನಿರೀಕ್ಷೆ ಮೂಡಿಸಿರುವ ‘ಧುರಂಧರ್’ ಸಿನಿಮಾದಲ್ಲಿ ನೈಜ ಘಟನೆ ಆಧಾರಿತ ಕಥೆ ಇದೆ. ಬಿಡುಗಡೆಗೂ ಮೊದಲೇ ಈ ಸಿನಿಮಾ ಕೆಲವು ವಿವಾದಗಳನ್ನು ಮಾಡಿಕೊಂಡಿದೆ. ಹುತಾತ್ಮ ಮೇಜರ್ ಮೋಹಿತ್ ಶರ್ಮಾ ಅವರ ಜೀವನವನ್ನು ಆಧರಿಸಿ ಈ ಸಿನಿಮಾ ಸಿದ್ಧವಾಗಿದೆ. ಹಾಗಾಗಿ ಅವರ ಕುಟುಂಬದವರು ತಕರಾರು ತೆಗೆದಿದ್ದಾರೆ. ವಿವಾದ ಆದ ಬಳಿಕ ‘ಈ ಸಿನಿಮಾಗೂ ಮೋಹಿತ್ ಶರ್ಮಾ ಅವರ ಜೀವನಕ್ಕೂ ಸಂಬಂಧ ಇಲ್ಲ’ ಎಂದು ಚಿತ್ರತಂಡ ಹೇಳಿದೆ. ಹಾಗಾಗಿ ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಾಗಿದೆ.

‘ಅಖಂಡ 2’ ಸಿನಿಮಾದಲ್ಲಿ ನಂದಮೂರಿ ಬಾಲಕೃಷ್ಣ ಅವರು ಸಿಕ್ಕಾಪಟ್ಟೆ ಮಾಸ್ ಆಗಿ ಕಾಣಿಸಿಕೊಂಡಿದ್ದಾರೆ. ಬಾಲಯ್ಯ ಅವರ ಸಿನಿಮಾಗಳ ಶೈಲಿಯೇ ಬೇರೆ. ಅವರ ಸಿನಿಮಾಗಳಲ್ಲಿ ಲಾಜಿಕ್ ಅಂದರೆ ಏನು ಅಂತ ಹುಡುಕಲು ಸಾಧ್ಯವೇ ಇಲ್ಲ. ಹಾಗಿದ್ದರೂ ಕೂಡ ಅಭಿಮಾನಿಗಳು ಅವರ ಸಿನಿಮಾವನ್ನು ಇಷ್ಟಪಡುತ್ತಾರೆ. ‘ಅಖಂಡ 2’ ಸಿನಿಮಾ ನೋಡಲು ಬಾಲಯ್ಯ ಅಭಿಮಾನಿಗಳು ಕಾತರರಾಗಿದ್ದಾರೆ.

ಕನ್ನಡದ ‘ಧರ್ಮಂ’ ಸಿನಿಮಾಗೆ ನಾಗಮುಖ ಅವರು ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ಕಥಾಹಂದರ ಏನು ಎಂಬುದನ್ನು ಟ್ರೇಲರ್​ನಲ್ಲಿ ತಿಳಿಸಲಾಗಿದೆ. ಜಾತಿ ವ್ಯವಸ್ಥೆಯ ಬಗ್ಗೆ ನಿರ್ದೇಶಕ ನಾಗಮುಖ ಅವರು ಈ ಸಿನಿಮಾ ಮಾಡಿದ್ದಾರೆ. ಸಾಯಿ ಶಶಿಕುಮಾರ್, ವಿರಾನಿಕಾ ಶೆಟ್ಟಿ, ಅಶೋಕ್ ಹೆಗ್ಡೆ, ಭೀಷ್ಮ ರಾಮಯ್ಯ, ಎಸ್​.ಕೆ. ರಾಮಕೃಷ್ಣ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ: ‘ಅಖಂಡ 2’ಗೆ ಸಿಕ್ಕಿತು ತೆಲಂಗಾಣ ಸರ್ಕಾರದ ಅನುಮತಿ ಆದರೆ…

ಮಮ್ಮೂಟ್ಟಿ ಅಭಿನಯದ ‘ಕಲಂ ಕಾವಲ್’ ಸಿನಿಮಾ ಸಹ ಡಿಸೆಂಬರ್ 5ರಂದು ರಿಲೀಸ್ ಆಗುತ್ತಿದೆ. ಸಸ್ಪೆನ್ಸ್ ಥ್ರಿಲ್ಲರ್ ಕಹಾನಿ ಈ ಸಿನಿಮಾದಲ್ಲಿ ಇದೆ. ಜಿತಿನ್ ಕೆ. ಜೋಸ್ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ‘ಮಮ್ಮೂಟ್ಟಿ ಕಂಪನಿ’ ಮೂಲಕ ಈ ಸಿನಿಮಾ ನಿರ್ಮಾಣ ಆಗಿದೆ. ಅಭಿಮಾನಿಗಳಿಗೆ ಈ ಸಿನಿಮಾ ಮೇಲೆ ಸಖತ್ ನಿರೀಕ್ಷೆ ಇದೆ. ಈ ಎಲ್ಲ ಸಿನಿಮಾಗಳ ಜೊತೆ ಕನ್ನಡದಲ್ಲಿ ‘ಚಿತ್ರಲಹರಿ’, ‘ಕೆಂಪು ಹಳದಿ ಹಸಿರು’ ಸಿನಿಮಾಗಳು ಕೂಡ ತೆರೆಕಾಣುತ್ತಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ವಿಮಾನ ನಿಲ್ದಾಣದಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಮನಸೋತ ರಷ್ಯಾ ಅಧ್ಯಕ್ಷ ಪುಟಿನ್
ವಿಮಾನ ನಿಲ್ದಾಣದಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಮನಸೋತ ರಷ್ಯಾ ಅಧ್ಯಕ್ಷ ಪುಟಿನ್
ಭಾರತಕ್ಕೆ ಬಂದ ಗೆಳೆಯ ಪುಟಿನ್​ಗೆ ಪ್ರಧಾನಿ ಮೋದಿಯ ಅಪ್ಪುಗೆಯ ಸ್ವಾಗತ
ಭಾರತಕ್ಕೆ ಬಂದ ಗೆಳೆಯ ಪುಟಿನ್​ಗೆ ಪ್ರಧಾನಿ ಮೋದಿಯ ಅಪ್ಪುಗೆಯ ಸ್ವಾಗತ
ಧ್ರುವಂತ್ ಮೇಲೆ ಬುಕ್ ಬರೆಯುತ್ತಾರಂತೆ ಗಿಲ್ಲಿ: ಸೀರಿಯಸ್ ಪ್ರಶ್ನೆಗೆ ಕಾಮಿಡಿ
ಧ್ರುವಂತ್ ಮೇಲೆ ಬುಕ್ ಬರೆಯುತ್ತಾರಂತೆ ಗಿಲ್ಲಿ: ಸೀರಿಯಸ್ ಪ್ರಶ್ನೆಗೆ ಕಾಮಿಡಿ
ರಷ್ಯಾ ಅಧ್ಯಕ್ಷ ಪುಟಿನ್​​ ಸ್ವಾಗತಕ್ಕೆ ವಿಮಾನ ನಿಲ್ದಾಣಕ್ಕೆ ತೆರಳಿದ ಮೋದಿ
ರಷ್ಯಾ ಅಧ್ಯಕ್ಷ ಪುಟಿನ್​​ ಸ್ವಾಗತಕ್ಕೆ ವಿಮಾನ ನಿಲ್ದಾಣಕ್ಕೆ ತೆರಳಿದ ಮೋದಿ