ಒಟಿಟಿಗೆ ಬಂದ ‘ಧುರಂಧರ್’ ಸಿನಿಮಾ; ಕನ್ನಡ ಪ್ರೇಕ್ಷಕರಿಗೆ ನಿರಾಸೆ
ಥಿಯೇಟರ್‌ಗಳಲ್ಲಿ ಎರಡು ತಿಂಗಳು ಅಬ್ಬರಿಸಿದ ‘ಧುರಂಧರ್’ ಸಿನಿಮಾ ಈಗ ನೆಟ್‌ಫ್ಲಿಕ್ಸ್ ಮೂಲಕ ಪ್ರಸಾರವಾಗುತ್ತಿದೆ. ರಣವೀರ್ ಸಿಂಗ್ ನಟನೆಯ, ಆದಿತ್ಯ ಧಾರ್ ನಿರ್ದೇಶನದ ಈ ಸ್ಪೈ ಚಿತ್ರ ಒಟಿಟಿಯಲ್ಲಿ ತೆಲುಗು, ತಮಿಳಿಗೆ ಡಬ್ ಆಗಿದ್ದರೂ, ಕನ್ನಡದಲ್ಲಿ ಲಭ್ಯವಿಲ್ಲದಿರುವುದು ಕನ್ನಡಿಗರಿಗೆ ನಿರಾಸೆ ಮೂಡಿಸಿದೆ. ಒಟಿಟಿ ಪ್ಲಾಟ್‌ಫಾರ್ಮ್‌ಗಳು ಕನ್ನಡಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡದಿರುವುದು ಬೇಸರದ ಸಂಗತಿ.

ಒಟಿಟಿ ಯುಗದಲ್ಲೂ ಸುಮಾರು ಎರಡು ತಿಂಗಳುಗಳ ಕಾಲ ಥಿಯೇಟರ್ನಲ್ಲಿ ಅಬ್ಬರಿಸಿದ ‘ಧುರಂಧರ್’ ಸಿನಿಮಾ ಈಗ ನೆಟ್‌ಫ್ಲಿಕ್ಸ್ ಮೂಲಕ ಪ್ರಸಾರ ಆರಂಭಿಸಿದೆ. ‘ಧರುಂಧರ್’ ಚಿತ್ರ (Dhurandhar Movie) ಡಿಸೆಂಬರ್ 5ರಂದು ಥಿಯೇಟರ್ನಲ್ಲಿ ಬಿಡುಗಡೆ ಆಯಿತು. ಚಿತ್ರವನ್ನು ಎಲ್ಲರೂ ನೋಡಿ ಕೊಂಡಾಡಿದರು. ಈಗ ಚಿತ್ರವನ್ನು ಒಟಿಟಿಯಲ್ಲಿ ವೀಕ್ಷಿಸಬಹುದಾಗಿದೆ. ಒಟಿಟಿ ಪ್ರೇಕ್ಷಕರು ಈ ಚಿತ್ರವನ್ನು ಯಾವ ರೀತಿ ಸ್ವೀಕರಿಸುತ್ತಾರೆ ಎಂಬ ಕುತೂಹಲ ಮೂಡಿದೆ.
‘ಧುರಂಧರ್’ ಚಿತ್ರ ಥಿಯೇಟರ್ನಲ್ಲಿ ಹಿಂದಿ ಭಾಷೆಯಲ್ಲಿ ಮಾತ್ರ ರಿಲೀಸ್ ಆಯಿತು. ಈಗ ಒಟಿಟಿಯಲ್ಲಿ ತಂಡದವರು ತಮಿಳು ಹಾಗೂ ತೆಲುಗು ಭಾಷೆಗೂ ಡಬ್ ಮಾಡಿ ರಿಲೀಸ್ ಮಾಡಿದ್ದಾರೆ. ಆದರೆ, ಕನ್ನಡಿಗರಿಗೆ ಈ ವಿಷಯದಲ್ಲಿ ನಿರಾಸೆ ಆಗಿದೆ. ಈ ಚಿತ್ರದ ಕನ್ನಡ ವರ್ಷನ್ ವೀಕ್ಷಣೆಗೆ ಲಭ್ಯವಿಲ್ಲ. ಇದು ಕನ್ನಡಿಗರ ಬೇಸರಕ್ಕೆ ಕಾರಣ ಆಗಿದೆ. ಬಹುತೇಕ ಒಟಿಟಿಗಳು ಕನ್ನಡಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡುತ್ತಿಲ್ಲ. ಇದು ಕರ್ನಾಟಕದ ಜನತೆಗೆ ನಿಜಕ್ಕೂ ಬೇಸರದ ವಿಷಯ.
DHURANDHAR ⚔️ Watch the Epic Saga unfold. Now out on Netflix in Hindi, Tamil and Telugu 🌪️🔥#DhurandharOnNetflix pic.twitter.com/yQhFTrJFEX
— Netflix India (@NetflixIndia) January 29, 2026
‘ಧುರಂಧರ್’ ಸಿನಿಮಾದಲ್ಲಿ ರಣವೀರ್ ಸಿಂಗ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರಕ್ಕೆ ಆದಿತ್ಯ ಧಾರ್ ಅವರ ನಿರ್ದೇಶನ ಇದೆ. ಈ ಚಿತ್ರ ರಿಲೀಸ್ಗೂ ಮೊದಲು ಸಾಕಷ್ಟು ನೆಗೆಟಿವ್ ಪ್ರಚಾರ ಪಡೆಯಿತು. ಆದರೆ, ಇದನ್ನು ಸಿನಿಮಾ ಮೆಟ್ಟಿ ನಿಂತಿತು. ಹಿಂದಿ ಚಿತ್ರರಂಗದ ಇತಿಹಾಸದಲ್ಲೇ ಅತಿ ದೀರ್ಘ ಸಿನಿಮಾ ಎಂಬ ಹೆಗ್ಗಳಿಕೆ ಈ ಚಿತ್ರಕ್ಕೆ ಸಿಕ್ಕಿದೆ. ಸಿನಿಮಾದ ಅವಧಿ ಒಟಿಟಿಯಲ್ಲಿ ಮೂರುವರೆ ಗಂಟೆ ಇದೆ.
ಇದನ್ನೂ ಓದಿ: ದಕ್ಷಿಣದ ಮೇಲೆ ಕಣ್ಣು ಪ್ಯಾನ್ ಇಂಡಿಯಾ ಆಗಲಿದೆ ‘ಧುರಂಧರ್ 2’
ಆದಿತ್ಯ ಧಾರ್ ನಿರ್ದೇಶನಕ್ಕೆ ಜನರು ಮರುಳಾಗಿದ್ದಾರೆ. ಈ ಚಿತ್ರ ಸ್ಪೈ ಕಥೆಯನ್ನು ಹೊಂದಿದೆ. ಈ ಸಿನಿಮಾನ ಥಿಯೇಟರ್ನಲ್ಲಿ ಮಿಸ್ ಮಾಡಿಕೊಂಡವರು ಅಥವಾ ಸಿನಿಮಾನ ಚಿತ್ರಮಂದಿರದಲ್ಲಿ ನೋಡಿ ಮತ್ತೊಮ್ಮೆ, ಮಗದೊಮ್ಮೆ ನೋಡಬೇಕು ಎಂದುಕೊಂಡವರು ಈ ಚಿತ್ರವನ್ನು ಒಟಿಟಿಯಲ್ಲಿ ಕಣ್ತುಂಬಿಕೊಳ್ಳಬಹುದು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 10:15 am, Fri, 30 January 26




