AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಣಕಾಸು ವಂಚನೆ ಆರೋಪ: ನಟ ಮಹೇಶ್ ಬಾಬುಗೆ ನೊಟೀಸ್

Mahesh Babu: ಮಹೇಶ್ ಬಾಬು, ತಾವಾಯ್ತು ತಮ್ಮ ಕೆಲಸವಾಯ್ತು ಎಂದು ಇರುವ ನಟ. ಸಿನಿಮಾ, ಕುಟುಂಬದ ಹೊರತಾಗಿ ಯಾವುದೇ ವಿವಾದಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದಿಲ್ಲ ಮಹೇಶ್ ಬಾಬು. ಆದರೆ ಈಗ ಮಹೇಶ್ ಬಾಬು ಅವರನ್ನು ವಿವಾದವೊಂದು ತಾನಾಗಿಯೇ ಹುಡುಕಿಕೊಂಡು ಬಂದಿದೆ. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹೇಶ್ ಬಾಬುಗೆ ನೊಟೀಸ್ ನೀಡಲಾಗಿದೆ.

ಹಣಕಾಸು ವಂಚನೆ ಆರೋಪ: ನಟ ಮಹೇಶ್ ಬಾಬುಗೆ ನೊಟೀಸ್
Mahesh Babu
ಮಂಜುನಾಥ ಸಿ.
|

Updated on: Jul 08, 2025 | 3:46 PM

Share

ನಟ ಮಹೇಶ್ ಬಾಬು (Mahesh Babu) ವಿವಾದಗಳಿಂದ ದೂರವೇ ಇರುವ ನಟ. ಅವರು ಮಾತ್ರವಲ್ಲ, ಅವರ ಅಭಿಮಾನಿಗಳು ಸಹ ಯಾರೊಂದಿಗೂ ಜಗಳಕ್ಕೆ ನಿಲ್ಲುವುದಿಲ್ಲ. ತಾವಾಯ್ತು, ತಮ್ಮ ಸಿನಿಮಾ ಆಯ್ತು, ತಮ್ಮ ಕುಟುಂಬವಾಯ್ತು ಎಂದು ಆರಾಮವಾಗಿದ್ದಾರೆ. ಆದರೆ ಕೆಲವೊಮ್ಮೆ ವಿವಾದಗಳೇ ಮಹೇಶ್ ಬಾಬು ಅವರನ್ನು ಹುಡುಕಿಕೊಂಡು ಬರುವುದು ಉಂಟು. ಈಗ ಹಾಗೆಯೇ ಆಗಿದೆ. ಮಹೇಶ್ ಬಾಬು ಅವರ ವಿರುದ್ಧ ವಂಚನೆ ಆರೋಪ ಬಂದಿದ್ದು, ನೊಟೀಸ್ ಸಹ ನೀಡಲಾಗಿದೆ.

ಮಹೇಶ್ ಬಾಬು ಹಲವಾರು ಜಾಹೀರಾತುಗಳಲ್ಲಿ ನಟಿಸಿದ್ದಾರೆ, ನಟಿಸುತ್ತಲೇ ಇರುತ್ತಾರೆ. ಅವರೇ ಒಮ್ಮೆ ಹೇಳಿಕೊಂಡಿದ್ದಂತೆ ಕೋವಿಡ್ ಸಮಯದಲ್ಲಿ ಕೇವಲ ಜಾಹೀರಾತುಗಳಲ್ಲಿ ನಟಿಸಿ ಒಂದು ದೊಡ್ಡ ಪ್ರಾಪರ್ಟಿ ಖರೀದಿಸಿ ಒಂದು ಮನೆಯನ್ನೂ ಕಟ್ಟಿಸಿದ್ದರಂತೆ. ಆದರೆ ಈಗ ಜಾಹೀರಾತೊಂದರಿಂದಲೇ ಮಹೇಶ್ ಬಾಬು ಮೇಲೆ ವಂಚನೆ ಆರೋಪ ಬಂದಿದೆ.

ಸಾಯಿ ಸೂರ್ಯ ಡೆವೆಲಪರ್ಸ್ ಹೆಸರಿನ ರಿಯಲ್ ಎಸ್ಟೇಟ್ ಸಂಸ್ಥೆಗೆ ಮಹೇಶ್ ಬಾಬು ರಾಯಭಾರಿ ಆಗಿದ್ದರು. ಸಾಯಿ ಸೂರ್ಯ ಡೆವೆಲಪರ್ಸ್​ ನವರು ಮಹೇಶ್ ಬಾಬು ಅವರ ಚಿತ್ರ ಬಳಸಿ ಕೆಲವು ಅನಧಿಕೃತ ಸ್ಥಳಗಳನ್ನು ಗ್ರಾಹಕರಿಗೆ ಮಾರಾಟ ಮಾಡಿದೆಯಂತೆ. ಸೂಕ್ತ ದಾಖಲೆ ಇಲ್ಲದ, ನಿಬಂಧನೆಗಳಿಗೆ ಒಳಪಟ್ಟ ಸ್ಥಳಗಳನ್ನು ಗ್ರಾಹಕರಿಗೆ ಸಾಯಿ ಸೂರ್ಯ ಡೆವೆಲಪರ್ಸ್ ಮಾರಾಟ ಮಾಡಿದ್ದು, ಆ ಲೇಔಟ್​​ನ ಜಾಹೀರಾತಿಗೆ ಮಹೇಶ್ ಬಾಬು ಚಿತ್ರವನ್ನು ಸಂಸ್ಥೆ ಬಳಸಿತ್ತಂತೆ.

ಇದನ್ನೂ ಓದಿ:ಶೋಭಿತಾ ಹಾಗೂ ನಾಗ ಚೈತನ್ಯರನ್ನು ನಿರ್ಲಕ್ಷಿಸಿದ್ರಾ ಮಹೇಶ್ ಬಾಬು?

ಹೈದರಾಬಾದ್ ಬಳಿಯ ಬಾಲಾಪುರ ಹಳ್ಳಿ ವ್ಯಾಪ್ತಿಯಲ್ಲಿ ಲೇಔಟ್ ಮಾಡಿದ್ದ ಸಾಯಿ ಸೂರ್ಯ ಡೆವೆಲಪರ್ಸ್ ಹಲವಾರು ಮಂದಿ ಗ್ರಾಹಕರಿಗೆ ಪ್ರತಿ ಸೈಟಿಗೆ ಸುಮಾರು 35 ಲಕ್ಷದಂತೆ ಹಲವಾರು ಸೈಟುಗಳನ್ನು ಮಾರಾಟ ಮಾಡಿತ್ತು. ಆದರೆ ತಡವಾಗಿ ಗೊತ್ತಾಗಿದ್ದೆಂದರೆ ಸಾಯಿ ಸೂರ್ಯ ಡೆವೆಲಪರ್ಸ್ ಮಾರಾಟ ಮಾಡಿದ್ದ ಲೇಔಟ್ ಅಸ್ಥಿತ್ವದಲ್ಲೇ ಇರಲಿಲ್ಲವಂತೆ. ಗ್ರಾಹಕರು ಹೇಳಿರುವಂತೆ, ಸಾಯಿ ಸೂರ್ಯ ಡೆವೆಲಪರ್ಸ್​ ನವರು ಲೇಔಟ್​ಗೆ ಸಂಬಂಧಿಸಿದ ಬ್ರೋಚರ್​ಗಳನ್ನು ತಯಾರು ಮಾಡಿ ಗ್ರಾಹಕರಿಗೆ ನೀಡಿತ್ತಂತೆ. ಬ್ರೋಚರ್​​ಗಳಲ್ಲಿ ಮಹೇಶ್ ಬಾಬು ಅವರ ಚಿತ್ರಗಳು ಸಹ ಇದ್ದವಂತೆ.

ಗ್ರಾಹಕರ ವೇದಿಕೆ, ಇಡಿ ಸೇರಿದಂತೆ ಇನ್ನೂ ಕೆಲವು ಕಡೆಗಳಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಾಗಿದೆ. ಇಡಿ ತನಿಖೆಯಿಂದ ಗೊತ್ತಾಗಿರುವಂತೆ ಸಾಯಿ ಸೂರ್ಯ ಡೆವೆಲಪರ್ಸ್​ನವರು ಮಹೇಶ್ ಬಾಬುಗೆ 5.90 ಕೋಟಿ ರೂಪಾಯಿ ಸಂಭಾವನೆಯನ್ನು ನೀಡಲಾಗಿದೆಯಂತೆ. ಇದೀಗ ಇಡಿ ಮಹೇಶ್ ಬಾಬುಗೆ ನೊಟೀಸ್ ಜಾರಿ ಮಾಡಿದ್ದು, ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ಮಹೇಶ್ ಬಾಬು ಮುಂದಿನ ದಿನಗಳಲ್ಲಿ ವಿಚಾರಣೆಗೆ ಹಾಜರಾಗುವುದಾಗಿ ಹೇಳಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..