AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಅದರ ಹಿಂದಿನ ಸತ್ಯ ಜನರಿಗೆ ತಿಳಿದಿಲ್ಲ’; ಆದಿತ್ಯ ನಾರಾಯಣ್ ದುರ್ವರ್ತನೆಗೆ ಕಾರಣ ತಿಳಿಸಿದ ಮ್ಯಾನೇಜರ್

ಆ ಹುಡುಗ ಕಾಲೇಜು ವಿದ್ಯಾರ್ಥಿ ಅಲ್ಲವೇ ಅಲ್ಲ. ಅವನು ಹೊರಗಿನವನೇ ಆಗಿರಬೇಕು. ಅವನು ನಿರಂತರವಾಗಿ ಆದಿತ್ಯ ಕಾಲನ್ನು ಎಳೆಯುತ್ತಿದ್ದ. ಇದರಿಂದ ಅವರಿಗೆ ತುಂಬಾ ಕಿರಿಕಿರಿ ಉಂಟಾಗುತ್ತಿತ್ತು. ಅವನು ತನ್ನ ಫೋನ್​ನಿಂದ ಆದಿತ್ಯನ ಪಾದಗಳಿಗೆ ಹಲವು ಬಾರಿ ಹೊಡೆದಿದ್ದಾನೆ. ಹೀಗಾಗಿ ಆದಿತ್ಯ ಕೋಪಗೊಂಡಿದ್ದಾರೆ ಎಂದಿದ್ದಾರೆ ಇವೆಂಟ್ ಮ್ಯಾನೇಜರ್.

‘ಅದರ ಹಿಂದಿನ ಸತ್ಯ ಜನರಿಗೆ ತಿಳಿದಿಲ್ಲ’; ಆದಿತ್ಯ ನಾರಾಯಣ್ ದುರ್ವರ್ತನೆಗೆ ಕಾರಣ ತಿಳಿಸಿದ ಮ್ಯಾನೇಜರ್
ಆದಿತ್ಯ ನಾರಾಯಣ್
ರಾಜೇಶ್ ದುಗ್ಗುಮನೆ
|

Updated on: Feb 14, 2024 | 8:09 AM

Share

ಗಾಯಕ ಆದಿತ್ಯ ನಾರಾಯಣ್ (Aditya Narayan) ಅವರು ಇತ್ತೀಚೆಗೆ ಚತ್ತೀಸ್​ಗಢದ ಭಿಲೈನ ಕಾಲೇಜ್ ಒಂದರಲ್ಲಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟಿದ್ದರು. ಈ ವೇಳೆ ಅವರು ವಿದ್ಯಾರ್ಥಿಯೊಬ್ಬರ ಮೊಬೈಲ್​ನ ಎಸೆದ ವಿಡಿಯೋ ವೈರಲ್ ಆಗಿತ್ತು. ಇದು ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ಆದಿತ್ಯ ಅವರು ಈ ರೀತಿ ಮಾಡಿದ್ದಕ್ಕೆ ಎಲ್ಲರೂ ಟೀಕೆ ವ್ಯಕ್ತಪಡಿಸಿದ್ದರು. ಆದರೆ ಆದಿತ್ಯ ಅವರ ತಪ್ಪು ಇರಲಿಲ್ಲ ಎಂಬುದು ಈಗ ಗೊತ್ತಾಗಿದೆ. ಈ ಬಗ್ಗೆ ಆಯೋಜಕರು ಸ್ಪಷ್ಟನೆ ನೀಡಿದ್ದಾರೆ. ಆದಿತ್ಯ ಸಿಟ್ಟಾಗಿದ್ದೇಕೆ ಎಂಬುದನ್ನು ಅವರು ವಿವರಿಸಿದ್ದಾರೆ.

‘ಆ ಹುಡುಗ ಕಾಲೇಜು ವಿದ್ಯಾರ್ಥಿ ಆಗಿರಲಿಲ್ಲ. ಅವನು ಹೊರಗಿನವನೇ ಇರಬೇಕು ಅನಿಸುತ್ತದೆ. ಅವನು ನಿರಂತರವಾಗಿ ಆದಿತ್ಯ ಅವರ ಕಾಲನ್ನು ಎಳೆಯುತ್ತಿದ್ದ. ಇದರಿಂದ ಅವರಿಗೆ ತುಂಬಾ ಕಿರಿಕಿರಿ ಉಂಟಾಗುತ್ತಿತ್ತು. ಅವನು ತನ್ನ ಫೋನ್​ನಿಂದ ಆದಿತ್ಯನ ಪಾದಗಳಿಗೆ ಹಲವು ಬಾರಿ ಹೊಡೆದಿದ್ದಾನೆ. ಆರಂಭದಲ್ಲಿ ಸುಮ್ಮನಿದ್ದ ಅವರು ನಂತರ ಸಿಟ್ಟಾದರು. ಹೀಗಾಗಿ ಮೊಬೈಲ್ ಎಸೆದರು. ಈ ಘಟನೆ ಬಳಿಕ ಎರಡು ಗಂಟೆ ಶೋ ನಡೆದಿದೆ. ವಿದ್ಯಾರ್ಥಿ ತನ್ನ ತಪ್ಪು ಇಲ್ಲದಿದ್ದರೆ ಮುಂದೆ ಬರುತ್ತಿದ್ದ’ ಎಂದಿದ್ದಾರೆ ಈವೆಂಟ್ ಮ್ಯಾನೇಜರ್.

ಇದನ್ನೂ ಓದಿ: ಪರ್ಫಾರ್ಮೆನ್ಸ್ ವೇಳೆ ಅಭಿಮಾನಿಯ ಮೊಬೈಲ್​ನ ಕಸಿದು ಎಸೆದ ಆದಿತ್ಯ ನಾರಾಯಣ್; ಗಾಯಕನಿಗೆ ಛೀಮಾರಿ

‘ಅನೇಕ ಗಾಯಕರು ಕಾಲೇಜುಗಳಲ್ಲಿ ಶೋ ಮಾಡುವುದನ್ನು ನಿಲ್ಲಿಸಿದ್ದಾರೆ. ಈ ರೀತಿಯ ಘಟನೆಗಳು ಎಲ್ಲಾ ಕಡೆಗಳಲ್ಲೂ ನಡೆಯುತ್ತಲೇ ಇರುತ್ತವೆ. ಇದರ ಹಿಂದಿನ ಸತ್ಯ ಜನರಿಗೆ ತಿಳಿದಿಲ್ಲ. ನೀವು ಕೇವಲ ಒಂದು ಸೈಡ್​ ಅನ್ನು ಮಾತ್ರ ನೋಡುತ್ತೀರಿ. ಆದಿತ್ಯ ಅವರು ಆಯತಪ್ಪಿ ಕೆಳಗೆ ಬಿದ್ದಿದ್ದರೆ? ಈ ಹುಡುಗ ಸರಿಯಾಗಿದ್ದಿದ್ದರೆ ಮುಂದೆ ಬಂದು ತನಗೆ ಹೀಗಾಯಿತು ಎಂದು ಕಾಲೇಜು ಅಧಿಕಾರಿಗಳಿಗೆ ಹೇಳುತ್ತಿದ್ದ. ನಾನು ಅನೇಕ ವರ್ಷಗಳಿಂದ ಕಾಲೇಜಿನ ಜೊತೆ ಸಂಪರ್ಕದ್ದಲ್ಲಿ ಇದ್ದೇನೆ. ಈ ರೀತಿಯ ಸಂಗೀತ ಕಾರ್ಯಕ್ರಮ ಅವರ ಕಾಲೇಜಿನಲ್ಲಿ ಈವರೆಗೆ ನಡೆದಿರಲಿಲ್ಲ’ ಎಂದಿದ್ದಾರೆ ಅವರು.

ವಿಡಿಯೋದಲ್ಲೇನಿದೆ?

ವೈರಲ್ ವಿಡಿಯೋದಲ್ಲಿ ಆದಿತ್ಯ ನಾರಾಯಣ್ ಅವರು ‘ಆಜ್ ಕಿ ರಾತ್’ ಹಾಡನ್ನು ಹಾಡುತ್ತಿದ್ದರು. ನಂತರ ಏಕಾಏಕಿ ಕೋಪಗೊಂಡ ಅವರು ಅಭಿಮಾನಿಯ ಮೊಬೈಲ್​ನ ಎಸೆದರು. ಈ ಘಟನೆ ಬಳಿಕ ಆದಿತ್ಯ ಅವರನ್ನು ಅನೇಕರು ಟೀಕಿಸಿದ್ದರು. ಈಗ ಆದಿತ್ಯ ಅವರು ಸಿಟ್ಟಾಗಲು ಅಸಲಿ ಕಾರಣ ಏನು ಎಂಬುದು ತಿಳಿದು ಬಂದಂತಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow Us