ಮತ್ತೆ ಕೈ ಕೊಡ್ತಾ ವಿಜಯ್​ ದೇವರಕೊಂಡ ಅದೃಷ್ಟ? ‘ಫ್ಯಾಮಿಲಿ ಸ್ಟಾರ್​’ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ

ಇಂದು (ಏಪ್ರಿಲ್​ 2) ಬಿಡುಗಡೆ ಆಗಿರುವ ‘ಫ್ಯಾಮಿಲಿ ಸ್ಟಾರ್​’ ಸಿನಿಮಾ ಹಲವು ಕಡೆಗಳಲ್ಲಿ ಹೌಸ್​ಫುಲ್​ ಪ್ರದರ್ಶನ ಕಂಡಿದೆ. ಕೆಲವರಿಗೆ ಈ ಚಿತ್ರ ಸ್ವಲ್ಪವೂ ಇಷ್ಟವಾಗಿಲ್ಲ. ಆದರೆ ವಿಜಯ್​ ದೇವರಕೊಂಡ ಅವರ ಅಪ್ಪಟ ಅಭಿಮಾನಿಗಳು ಸಿನಿಮಾವನ್ನು ಹೊಗಳುತ್ತಿದ್ದಾರೆ. ಮಿಶ್ರ ಪ್ರತಿಕ್ರಿಯೆ ಸಿಕ್ಕಿರುವುದರಿಂದ ಬಾಕ್ಸ್​ ಆಫೀಸ್​ ಗಳಿಕೆ ಕಡಿಮೆ ಆಗುವ ಸಾಧ್ಯತೆ ಇದೆ.

ಮತ್ತೆ ಕೈ ಕೊಡ್ತಾ ವಿಜಯ್​ ದೇವರಕೊಂಡ ಅದೃಷ್ಟ? ‘ಫ್ಯಾಮಿಲಿ ಸ್ಟಾರ್​’ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ
ಮೃಣಾಲ್​ ಠಾಕೂರ್​, ವಿಜಯ್​ ದೇವರಕೊಂಡ
Follow us
|

Updated on: Apr 05, 2024 | 3:25 PM

ನಟ ವಿಜಯ್​ ದೇವರಕೊಂಡ (Vijay Deverakonda) ಅವರು ಒಂದು ಬಿಗ್​ ಹಿಟ್​ ಸಲುವಾಗಿ ಕಾದಿದ್ದಾರೆ. ಈ ಹಿಂದೆ ಅವರು ನಟಿಸಿದ್ದ ‘ಲೈಗರ್​’ ಸಿನಿಮಾ ಮಕಾಡೆ ಮಲಗಿತು. ಆ ಬಳಿಕ ಬಂದ ‘ಖುಷಿ’ ಚಿತ್ರ ಕೂಡ ಹೇಳಿಕೊಳ್ಳುವಂತಹ ಯಶಸ್ಸು ಕಾಣಲಿಲ್ಲ. ಈಗ ಅವರು ನಟಿಸಿರುವ ‘ಫ್ಯಾಮಿಲಿ ಸ್ಟಾರ್​’ ಸಿನಿಮಾ (Family Star Movie) ಬಿಡುಗಡೆ ಆಗಿದೆ. ಏಪ್ರಿಲ್​ 5ರಂದು ತೆರೆಕಂಡಿರುವ ಈ ಸಿನಿಮಾಗೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಸಿಗುತ್ತಿದೆ. ವಿಜಯ್​ ದೇವರಕೊಂಡ ಅವರ ಅಪ್ಪಟ ಅಭಿಮಾನಿಗಳು ಈ ಚಿತ್ರವನ್ನು ಹಾಡಿ ಹೊಗಳುತ್ತಿದ್ದಾರೆ. ಆದರೆ ಒಂದಷ್ಟು ಜನರು ಸಿಕ್ಕಾಪಟ್ಟೆ ಟ್ರೋಲ್​ ಮಾಡುತ್ತಿದ್ದಾರೆ. ಟ್ವಿಟರ್​ ಮೂಲಕ ನೆಟ್ಟಿಗರು ತಮ್ಮ ವಿಮರ್ಶೆ (Family Star Twitter Review) ತಿಳಿಸುತ್ತಿದ್ದಾರೆ.

‘80ರ ದಶಕದ ಹಳೇ ಕಥೆ. ಸಿಲ್ಲಿ ಎನಿಸುವ ಸನ್ನಿವೇಶಗಳ ಜೊತೆ ಸಿಕ್ಕಾಪಟ್ಟೆ ಬೋರಿಂಗ್​ ಆದಂತಹ ನಿರೂಪಣೆ. ಸುಮಾರು 3 ಗಂಟೆ ಅವಧಿಯ ಈ ಸಿನಿಮಾದಲ್ಲಿ 2 ಹಾಡು, ಮಧ್ಯಂತರದ ದೃಶ್ಯ, ಕೆಲವು ಕಾಮಿಡಿ ಸನ್ನಿವೇಶ ಮಾತ್ರ ಚೆನ್ನಾಗಿವೆ. ಭಾವನಾತ್ಮಕವಾಗಿ ಕಿಂಚಿತ್ತೂ ಕನೆಕ್ಟ್​ ಆಗುವುದಿಲ್ಲ. ಕಳಪೆಯಾಗಿದೆ’ ಎಂದು ಪ್ರೇಕ್ಷಕರೊಬ್ಬರು ಖಾರವಾಗಿ ‘ಫ್ಯಾಮಿಲಿ ಸ್ಟಾರ್​’ ಚಿತ್ರವನ್ನು ವಿಮರ್ಶೆ ಮಾಡಿದ್ದಾರೆ.

ಹಲವು ಕಡೆಗಳಲ್ಲಿ ‘ಫ್ಯಾಮಿಲಿ ಸ್ಟಾರ್​’ ಸಿನಿಮಾ ಹೌಸ್​ಫುಲ್​ ಆಗಿದೆ. ಕೆಲವರಿಗೆ ಈ ಸಿನಿಮಾ ಕಿಂಚಿತ್ತೂ ಇಷ್ಟ ಆಗಿಲ್ಲ. ವಿಜಯ್​ ದೇವರಕೊಂಡ ಸಾಲು ಸಾಲು ಡಿಸಾಸ್ಟರ್​ ಅನುಭವಿಸುತ್ತಿದ್ದಾರೆ ಎಂದು ಅನೇಕರು ಪೋಸ್ಟ್​ ಮಾಡಿದ್ದಾರೆ. ಅವರ ಮುಂದಿನ ಸಿನಿಮಾಗಳ ಮೇಲೆ ಇದು ಪರಿಣಾಮ ಬೀರಲಿದೆ ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ. ಅಪ್ಪಟ ಅಭಿಮಾನಿಗಳು ಮಾತ್ರ ಈ ಚಿತ್ರಕ್ಕೆ ಮೆಚ್ಚುಗೆ ಸೂಚಿಸುತ್ತಿದ್ದಾರೆ.

‘ಇದು ಅನಗತ್ಯ ಫ್ಯಾಮಿಲಿ ಡ್ರಾಮಾದ ರೀತಿ ಇದೆ. ಮೊದಲಾರ್ಧ ಚನ್ನಾಗಿದೆ. ಆದರೆ ದ್ವಿತೀಯಾರ್ಧವನ್ನು ಉತ್ತಮಗೊಳಿಸಬಹುದಿತ್ತು’ ಎಂದು ಪ್ರೇಕ್ಷಕರೊಬ್ಬರು ಅನಿಸಿಕೆ ಹಂಚಿಕೊಂಡಿದ್ದಾರೆ.

ನಟಿ ಮೃಣಾಲ್​ ಠಾಕೂರ್​ ಅವರಿಗೆ ಇದು ತೆಲುಗಿನಲ್ಲಿ ಮೂರನೇ ಸಿನಿಮಾ. ಈ ಮೊದಲು ಅವರು ‘ಸೀತಾ ರಾಮಂ’ ಮತ್ತು ‘ಹಾಯ್​ ನಾನ್ನ’ ಚಿತ್ರಗಳ ಮೂಲಕ ಗೆಲುವು ಕಂಡಿದ್ದರು. ಆದರೆ ಈಗ ಅವರಿಗೆ ಟಾಲಿವುಡ್​ನಲ್ಲಿ ಮೊದಲ ಬಾರಿ ಸೋಲು ಎದುರಾಗುತ್ತಿದೆ ಎಂದು ಕೂಡ ನೆಟ್ಟಿಗರು ಪೋಸ್ಟ್​ ಮಾಡಿದ್ದಾರೆ.

ಇದನ್ನೂ ಓದಿ: ‘ಅವತಾರ ಪುರುಷ 2’ ವಿಮರ್ಶೆ: ಓವರ್ ಆ್ಯಕ್ಟಿಂಗ್ ಅನಿಲನ ವಾಮಾಚಾರದ ಅಧ್ಯಾಯ

‘ಸಿನಿಮಾದ ಚಿತ್ರಕಥೆ ಔಟ್​ಡೇಟೆಡ್​ ಆಗಿದೆ. ತುಂಬ ಬೋರಿಂಗ್​ ಆಗಿದೆ. ವಿಶೇಷವಾದದ್ದು ಈ ಸಿನಿಮಾದಲ್ಲಿ ಏನೂ ಇಲ್ಲ’ ಎಂದು ನೆಟ್ಟಿಗರೊಬ್ಬರು ಬರೆದುಕೊಂಡಿದ್ದಾರೆ. ಈ ಸಿನಿಮಾಗೆ ‘ಗೀತ ಗೋವಿಂದಂ’ ಖ್ಯಾತಿಯ ಪರಶುರಾಮ್​ ಅವರು ನಿರ್ದೇಶನ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ‘ಫ್ಯಾಮಿಲಿ ಸ್ಟಾರ್​’ ಸಿನಿಮಾ ಎಷ್ಟು ಕಲೆಕ್ಷನ್​ ಮಾಡಲಿದೆ ಎಂಬುದನ್ನು ಕಾದುನೋಡಬೇಕು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.