ಸಿನಿಮಾ ಬಿಡುಗಡೆ ಮುಂದಿರುವಾಗ ಮಂಚು ವಿಷ್ಣು ಕಚೇರಿ ಮೇಲೆ ಅಧಿಕಾರಿಗಳ ದಾಳಿ
Manchu Vishnu: ಮಂಚು ವಿಷ್ಣು ನಟನೆಯ ‘ಕಣ್ಣಪ್ಪ’ ಸಿನಿಮಾ ನಾಳೆ ಅಂದರೆ ಜೂನ್ 27 ರಂದು ಬಿಡುಗಡೆ ಆಗಲಿದೆ. ಭಾರಿ ಬಂಡವಾಳ ತೊಡಗಿಸಿ ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಸಿನಿಮಾ ಅನ್ನು ಬಿಡುಗಡೆ ಮಾಡಲಾಗುತ್ತಿದೆ. ಸಿನಿಮಾ ಬಿಡುಗಡೆ ಮುಂದಿರುವಾಗಲೇ ನಟ, ನಿರ್ಮಾಪಕ ಮಂಚು ವಿಷ್ಣು ಅವರ ಕಚೇರಿ ಮೇಲೆ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಮಂಚು ವಿಷ್ಣು (Manchu Vishnu) ನಟನೆಯ ‘ಕಣ್ಣಪ್ಪ’ ಸಿನಿಮಾ ಬಿಡುಗಡೆ ನಾಳೆ (ಜೂನ್ 27) ಆಗಲಿದೆ. ಸಿನಿಮಾ ಬಿಡುಗಡೆ ಕೆಲವೇ ದಿನ ಇರುವಂತೆ ಮಂಚು ವಿಷ್ಣು ಕಚೇರಿ ಮೇಲೆ ಅಧಿಕಾರಿಗಳು ದಾಳಿ ನಡೆಸಿ ತಪಾಸಣೆ ನಡೆಸಿದ್ದಾರೆ. ಮಂಚು ವಿಷ್ಣು ಅವರು ಸಿನಿಮಾ ನಿರ್ಮಾಣ ನಟನೆಯ ಜೊತೆಗೆ ಇನ್ನೂ ಹಲವು ಉದ್ಯಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು, ಇದೀಗ ಜಿಎಸ್ಟಿ ಅಧಿಕಾರಿಗಳು ಮಂಚು ವಿಷ್ಣು ಅವರ ಕೆಲವು ಕಚೇರಿಗಳ ಮೇಲೆ ಕೆಲ ದಿನಗಳ ಹಿಂದೆಯಷ್ಟೆ ದಾಳಿ ನಡೆಸಿ ತಪಾಸಣೆ ನಡೆಸಿದ್ದಾರೆ.
ಮಂಚು ವಿಷ್ಣು ಅವರು ಹೈದರಾಬಾದ್ನ ಕಾವೇರಿ ಹಿಲ್ಸ್ ಮತ್ತು ಜೂಬ್ಲಿ ಹಿಲ್ಸ್ನ ಕಚೇರಿಗಳ ಮೇಲೆ ದಾಳಿ ನಡೆಸಿ ಕಾಗದ ಪತ್ರಗಳ ಪರಿಶೀಲನೆ ಮಾಡಿದ್ದಾರೆ. ಮಂಚು ವಿಷ್ಣು ಅವರ ತೆರಿಗೆ ಮಾಹಿತಿ, ವಿವಿಧ ಉದ್ಯಮಗಳಿಂದ ಬರುತ್ತಿರುವ ಆದಾಯ, ವಿಷ್ಣು ಅವರ ವ್ಯಾಪಾರದ ಖರ್ಚುಗಳು ಇನ್ನಿತರೆ ಮಾಹಿತಿಗಳ ತನಿಖೆಯನ್ನು ಅಧಿಕಾರಿಗಳು ನಡೆಸಿದ್ದಾರೆ ಎನ್ನಲಾಗುತ್ತಿದೆ. ವಿಶೇಷವಾಗಿ ಮಂಚು ವಿಷ್ಣು ಅವರ ಸಿನಿಮಾ ಸಂಬಂಧಿತ ದಾಖಲೆಗಳನ್ನು ಪರಿಶೀಲನೆ ನಡೆಸಲಾಗಿದೆಯಂತೆ.
ದಾಳಿಯ ಬಗ್ಗೆ ಮಾತನಾಡಿರುವ ಮಂಚು ವಿಷ್ಣು, ‘ನಾವು ಯಾವುದನ್ನೂ ಮುಚ್ಚಿಟ್ಟಿಲ್ಲ, ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ ನಾವು ಅವರಿಗೆ ಸಹಕಾರ ನೀಡಿದ್ದೇವೆ’ ಎಂದಿದ್ದಾರೆ. ಇನ್ನು ಅಧಿಕಾರಿಗಳು, ಈ ರೀತಿಯ ತಪಾಸಣೆ ಸಾಮಾನ್ಯವಾದುದು, ತೆರಿಗೆ ಸೋರಿಕೆ ಆಗದೇ ಇರಲೆಂದು ಈ ರೀತಿಯ ತಪಾಸಣೆಗಳನ್ನು ಕಾಲ ಕಾಲಕ್ಕೆ ಮಾಡುತ್ತಿರುತ್ತೇವೆ ಎಂದಿದ್ದಾರೆ.
ಇದನ್ನೂ ಓದಿ:ವಿಡಿಯೋ ಡಿಲೀಟ್ ಮಾಡದಿದ್ದರೆ ಕಾನೂನು ಕ್ರಮ: ಮಂಚು ವಿಷ್ಣು ಎಚ್ಚರಿಕೆ
ಮಂಚು ವಿಷ್ಣು ಅವರು ಮೋಹನ್ ಬಾಬು ಪುತ್ರನಾಗಿದ್ದು, ಸಿನಿಮಾ ನಿರ್ಮಾಣದ ಜೊತೆಗೆ ಖಾಸಗಿ ಶಾಲೆಗಳು, ಆಸ್ಪತ್ರೆ, ರಿಯಲ್ ಎಸ್ಟೇಟ್ ಇನ್ನೂ ಕೆಲವು ಉದ್ಯಮಗಳ ಮೇಲೆ ಹೂಡಿಕೆ ಮಾಡಿದ್ದಾರೆ. ತೆಲುಗು ಚಿತ್ರರಂಗದ ಶ್ರೀಮಂತ ನಟರಲ್ಲಿ ಮಂಚು ವಿಷ್ಣು ತಂದೆ ಮೋಹನ್ ಬಾಬು ಸಹ ಒಬ್ಬರು. ಇತ್ತೀಚೆಗಷ್ಟೆ ಮಂಚು ವಿಷ್ಣು ಹಾಗೂ ಮೋಹನ್ ಬಾಬು ಅವರ ವಿಡಿಯೋ ಒಂದು ವೈರಲ್ ಆಗಿತ್ತು. ವಿಡಿಯೋನಲ್ಲಿ ಮೋಹನ್ ಬಾಬು ಹಾಗೂ ಮಂಚು ವಿಷ್ಣು ಅವರು ತಾವು ನ್ಯೂಜಿಲೆಂಡ್ನಲ್ಲಿ ಬರೋಬ್ಬರಿ ಏಳು ಸಾವಿರ ಎಕರೆ ಜಮೀನು ಖರೀದಿ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ. ಆ ವಿಡಿಯೋ ವೈರಲ್ ಆದ ಬೆನ್ನಲ್ಲೆ ಜಿಎಸ್ಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಮಂಚು ವಿಷ್ಣು ನಟನೆಯ ‘ಕಣ್ಣಪ್ಪ’ ಸಿನಿಮಾ ನಾಳೆ (ಜೂನ್ 26) ಬಿಡುಗಡೆ ಆಗಲಿದೆ. ಸಿನಿಮಾನಲ್ಲಿ ಪ್ರಭಾಸ್, ಅಕ್ಷಯ್ ಕುಮಾರ್, ಮೋಹನ್ಲಾಲ್, ಕಾಜೊಲ್ ಇನ್ನೂ ಕೆಲವರು ಅತಿಥಿ ಪಾತ್ರಗಳಲ್ಲಿ ನಟಿಸಿದ್ದಾರೆ. ಬೇಡರ ಕಣ್ಣಪ್ಪನ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಸಿನಿಮಾಕ್ಕೆ ಭಾರಿ ಬಂಡವಾಳವನ್ನು ಮಂಚು ವಿಷ್ಣು ತೊಡಗಿಸಿದ್ದು, ಸಿನಿಮಾ ಅನ್ನು ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಬಿಡುಗಡೆ ಮಾಡುತ್ತಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




