ಮಹೇಶ್ ಬಾಬು ಸಿನಿಮಾ ಎದುರು ‘ಹನುಮಾನ್’ ರಿಲೀಸ್ ಮಾಡಿದ್ದೇಕೆ? ಕಾರಣ ನೀಡಿದ ನಿರ್ದೇಶಕ

‘ಹನುಮಾನ್’ ಸಿನಿಮಾದಲ್ಲಿ ತೇಜ ಸಜ್ಜಾ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಾಮಾನ್ಯ ವ್ಯಕ್ತಿಗೆ ವಿಶೇಷ ಶಕ್ತಿ ದೊರೆಯುತ್ತದೆ. ಈ ರೀತಿಯಲ್ಲಿ ಕಥೆ ಸಾಗುತ್ತದೆ. ಹನುಮಂತನ ಪಾತ್ರವನ್ನು ಸ್ಫೂರ್ತಿಯಾಗಿಟ್ಟುಕೊಂಡು ಸಿನಿಮಾ ಮಾಡಲಾಗಿದೆ.

ಮಹೇಶ್ ಬಾಬು ಸಿನಿಮಾ ಎದುರು ‘ಹನುಮಾನ್’ ರಿಲೀಸ್ ಮಾಡಿದ್ದೇಕೆ? ಕಾರಣ ನೀಡಿದ ನಿರ್ದೇಶಕ
ಮಹೇಶ್ ಬಾಬು-ತೇಜ ಸಜ್ಜ
Follow us
|

Updated on: Jan 28, 2024 | 3:59 PM

ನಿರ್ದೇಶಕ ಪ್ರಶಾಂತ್ ವರ್ಮಾ ಆ್ಯಕ್ಷನ್ ಕಟ್ ಹೇಳಿದ ‘ಹನುಮಾನ್’ ಸಿನಿಮಾ ಯಶಸ್ಸು ಕಂಡಿತು. ತೇಜ ಸಜ್ಜಾ (Teja Sajja) ನಟನೆಯ ಈ ಸಿನಿಮಾ 250 ಕೋಟಿ ರೂಪಾಯಿ ಗಳಿಕೆ ಮಾಡಿ ಬೀಗಿದೆ. ಈ ಸಿನಿಮಾ ರಿಲೀಸ್ ಆಗಿದ್ದು ಮಹೇಶ್ ಬಾಬು ನಟನೆಯ ‘ಗುಂಟೂರು ಖಾರಂ’ ಸಿನಿಮಾ ಎದುರು. ಈ ಚಿತ್ರಕ್ಕಿಂತ ‘ಹನುಮಾನ್’ ಸಿನಿಮಾ ಹೆಚ್ಚು ಗಳಿಕೆ ಮಾಡಿದೆ. ಈ ಖುಷಿಯನ್ನು ನಿರ್ದೇಶಕ ಪ್ರಶಾಂತ್ ವರ್ಮಾ ಹಂಚಿಕೊಂಡಿದ್ದಾರೆ. ತಮ್ಮ ಚಿತ್ರವನ್ನು ಮಹೇಶ್ ಬಾಬು ಸಿನಿಮಾ ಎದುರು ರಿಲೀಸ್ ಮಾಡಿದ್ದೇಕೆ ಎನ್ನುವ ಕಾರಣವನ್ನು ಅವರು ನೀಡಿದ್ದಾರೆ.

‘ನಮ್ಮ ಹಾಗೂ ಮಹೇಶ್ ಬಾಬು ಸಿನಿಮಾ ಒಟ್ಟಿಗೆ ರಿಲೀಸ್ ಆದವು. ಮಹೇಶ್ ಬಾಬು ದೊಡ್ಡ ಸ್ಟಾರ್. ಅವರ ವಿರುದ್ಧ ಹೋಗೋಕೆ ಯಾರಿಂದಲೂ ಸಾಧ್ಯವಿಲ್ಲ. ಕನಸಿನಲ್ಲೂ ಯಾರೂ ಈ ರೀತಿ ಅಂದುಕೊಳ್ಳುವುದಿಲ್ಲ. ಅದೂ ಸಂಕ್ರಾಂತಿ ಸಂದರ್ಭದಲ್ಲಿ. ತ್ರಿವಿಕ್ರಂ ಶ್ರೀನಿವಾಸ್ ಜೊತೆಗಿನ ಮಹೇಶ್ ಬಾಬು ಸಿನಿಮಾ ಎಂದಾಗ ಅದು ಮ್ಯಾಡ್ ಕಾಂಬಿನೇಷನ್’ ಎಂದಿದ್ದಾರೆ ಪ್ರಶಾಂತ್ ವರ್ಮಾ. ಆದರೂ ಸಿನಿಮಾ ರಿಲೀಸ್ ಮಾಡುವ ಸಾಹಸಕ್ಕೆ ಪ್ರಶಾಂತ್ ವರ್ಮ ಮುಂದಾದರು.

‘ಮಹೇಶ್ ಬಾಬು ಹಾಗೂ ತ್ರಿವಿಕ್ರಂ ಶ್ರೀನಿವಾಸ್ ಒಟ್ಟಾಗಿ ಎರಡು ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಅವರ ನಿರ್ಮಾಣ ಸಂಸ್ಥೆ ತುಂಬಾ ದೊಡ್ಡದು. ಅವರನ್ನು ನಿಲ್ಲಿಸಲು ಯಾರಿಂದಲೂ ಸಾಧ್ಯವಿಲ್ಲ. ನಮ್ಮ ಸಿನಿಮಾದ ಹಿಂದಿ ವರ್ಷನ್ ರಿಲೀಸ್ ಡೇಟ್​ನ ಅನಿಲ್ ತಡಾನಿ ಅನೌನ್ಸ್ ಮಾಡಿ ಬಿಟ್ಟಿದ್ದರು. ಹೀಗಾಗಿ, ನಾವು ರಿಲೀಸ್ ಮಾಡಲೇಬೇಕಾಯಿತು’ ಎಂದಿದ್ದಾರೆ ಪ್ರಶಾಂತ್ ವರ್ಮ.

ಇದನ್ನೂ ಓದಿ: 250 ಕೋಟಿ ರೂಪಾಯಿ ಕಲೆಕ್ಷನ್​; ವಿಶ್ವ ಬಾಕ್ಸ್​ ಆಫೀಸ್​ನಲ್ಲಿ ‘ಹನುಮಾನ್​’ ಸಾಧನೆ

‘ಹನುಮಾನ್’ ಸಿನಿಮಾದಲ್ಲಿ ತೇಜ ಸಜ್ಜಾ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಾಮಾನ್ಯ ವ್ಯಕ್ತಿಗೆ ವಿಶೇಷ ಶಕ್ತಿ ದೊರೆಯುತ್ತದೆ. ಈ ರೀತಿಯಲ್ಲಿ ಕಥೆ ಸಾಗುತ್ತದೆ. ಹನುಮಂತನ ಪಾತ್ರವನ್ನು ಸ್ಫೂರ್ತಿಯಾಗಿಟ್ಟುಕೊಂಡು ಸಿನಿಮಾ ಮಾಡಲಾಗಿದೆ. ಈ ಚಿತ್ರದಿಂದ ಪ್ರಶಾಂತ್ ವರ್ಮಾ ದೊಡ್ಡ ಗೆಲುವು ಕಂಡಿದ್ದಾರೆ. ಇತ್ತೀಚೆಗೆ ಅವರು ‘ಜೈ ಹನುಮಾನ್’ ಸಿನಿಮಾ ಘೋಷಣೆ ಮಾಡಿದ್ದಾರೆ. ಈ ಚಿತ್ರದ ಸ್ಕ್ರಿಪ್ಟ್ ಪೂಜೆ ಇತ್ತೀಚೆಗೆ ನಡೆದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ತಾಜಾ ಸುದ್ದಿ
ಡ್ರೋನ್​ ಕಣ್ಣಲ್ಲಿ ವಿಶ್ವದ ಅತಿ ದೊಡ್ಡ ಪುರಿ ಜಗನ್ನಾಥ ರಥಯಾತ್ರೆ: ವಿಡಿಯೋ
ಡ್ರೋನ್​ ಕಣ್ಣಲ್ಲಿ ವಿಶ್ವದ ಅತಿ ದೊಡ್ಡ ಪುರಿ ಜಗನ್ನಾಥ ರಥಯಾತ್ರೆ: ವಿಡಿಯೋ
ಮುಂಗಾರು ಮಳೆಗೆ ಚಾರ್ಮಾಡಿ ಘಾಟ್​ನಲ್ಲಿ ಜಲವೈಭವ; ನೂರಾರು ಜಲಪಾತಗಳ ಸೃಷ್ಟಿ
ಮುಂಗಾರು ಮಳೆಗೆ ಚಾರ್ಮಾಡಿ ಘಾಟ್​ನಲ್ಲಿ ಜಲವೈಭವ; ನೂರಾರು ಜಲಪಾತಗಳ ಸೃಷ್ಟಿ
ಸತತ ಮಳೆ; ಜಿಗಣೆ ಕಾಟಕ್ಕೆ ಹೈರಾಣಾದ ಪ್ರವಾಹ ತಂಡದ ಅಧಿಕಾರಿಗಳು
ಸತತ ಮಳೆ; ಜಿಗಣೆ ಕಾಟಕ್ಕೆ ಹೈರಾಣಾದ ಪ್ರವಾಹ ತಂಡದ ಅಧಿಕಾರಿಗಳು
ಸುಧಾಕರ್ ಅಭಿನಂದನಾ ಕಾರ್ಯಕ್ರಮದಲ್ಲಿ ಬಾಡೂಟ: ಡ್ರಿಂಕ್ಸ್​​ಗೆ ಮುಗಿಬಿದ್ದ ಜನ
ಸುಧಾಕರ್ ಅಭಿನಂದನಾ ಕಾರ್ಯಕ್ರಮದಲ್ಲಿ ಬಾಡೂಟ: ಡ್ರಿಂಕ್ಸ್​​ಗೆ ಮುಗಿಬಿದ್ದ ಜನ
ಜಲಾವೃತವಾದ ಸೇತುವೆ ಮೇಲೆ ಸಂಚಾರ;ನೀರು ರಭಸವಾಗಿ ಹರಿಯುತ್ತಿದ್ದರೂ ಡೋಂಟ್​ಕೇರ
ಜಲಾವೃತವಾದ ಸೇತುವೆ ಮೇಲೆ ಸಂಚಾರ;ನೀರು ರಭಸವಾಗಿ ಹರಿಯುತ್ತಿದ್ದರೂ ಡೋಂಟ್​ಕೇರ
ಗೋಕಾಕ್ ಜಲಪಾತದಲ್ಲಿ ಪ್ರವಾಸಿಗರ ಹುಚ್ಚಾಟ; ಸ್ವಲ್ಪ ಯಾಮಾರಿದ್ರು ಅಪಾಯ ಖಚಿತ
ಗೋಕಾಕ್ ಜಲಪಾತದಲ್ಲಿ ಪ್ರವಾಸಿಗರ ಹುಚ್ಚಾಟ; ಸ್ವಲ್ಪ ಯಾಮಾರಿದ್ರು ಅಪಾಯ ಖಚಿತ
ಸಂಸದ ಡಾ.ಕೆ ಸುಧಾಕರ್​ ಕಾರ್ಯಕ್ರಮದಲ್ಲಿ ಭರ್ಜರಿ ಬಾಡೂಟ ಜೊತೆ ಮದ್ಯ ಆಯೋಜನೆ
ಸಂಸದ ಡಾ.ಕೆ ಸುಧಾಕರ್​ ಕಾರ್ಯಕ್ರಮದಲ್ಲಿ ಭರ್ಜರಿ ಬಾಡೂಟ ಜೊತೆ ಮದ್ಯ ಆಯೋಜನೆ
‘ಯಜಮಾನ’ ತಂದುಕೊಟ್ಟ ಭರ್ಜರಿ ಲಾಭದ ಬಗ್ಗೆ ನಿರ್ಮಾಪಕರ ಮಾತು
‘ಯಜಮಾನ’ ತಂದುಕೊಟ್ಟ ಭರ್ಜರಿ ಲಾಭದ ಬಗ್ಗೆ ನಿರ್ಮಾಪಕರ ಮಾತು
ಕಿರಿದಾದ ಸೇತುವೆ ಮೇಲೆ ಹೆಣ ಹೊತ್ತು ಸಾಗಿದ ಗ್ರಾಮಸ್ಥರು, ವಿಡಿಯೋ ವೈರಲ್
ಕಿರಿದಾದ ಸೇತುವೆ ಮೇಲೆ ಹೆಣ ಹೊತ್ತು ಸಾಗಿದ ಗ್ರಾಮಸ್ಥರು, ವಿಡಿಯೋ ವೈರಲ್
ಧೋನಿ ಹುಟ್ದಬ್ಬ... ಬರೋಬ್ಬರಿ 100 ಅಡಿ ಕಟೌಟ್ ನಿಲ್ಲಿಸಿದ ಫ್ಯಾನ್ಸ್
ಧೋನಿ ಹುಟ್ದಬ್ಬ... ಬರೋಬ್ಬರಿ 100 ಅಡಿ ಕಟೌಟ್ ನಿಲ್ಲಿಸಿದ ಫ್ಯಾನ್ಸ್