ಖ್ಯಾತಿ ಪಡೆಯಲು ಹಿನಾ ಖಾನ್ ನಾಟಕ? ನಟಿಯ ವಿರುದ್ಧ ಆಕ್ರೋಶ

ಹಿನಾ ಖಾನ್ ಅವರು ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ ಮತ್ತು ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ, ನಟಿ ರೋಸ್ಲೀನ್ ಖಾನ್ ಅವರು ಇದೊಂದು PR ಸ್ಟಂಟ್ ಎಂದು ಆರೋಪಿಸಿದ್ದಾರೆ. ಹಿನಾ ಅವರ ಸಾಮಾಜಿಕ ಮಾಧ್ಯಮ ಚಟುವಟಿಕೆಗಳನ್ನು ಪ್ರಶ್ನಿಸಿರುವ ರೋಸ್ಲೀನ್, ಕ್ಯಾನ್ಸರ್‌ನ ಗಂಭೀರತೆಯನ್ನು ಅವರು ಲಘುವಾಗಿ ತೆಗೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಖ್ಯಾತಿ ಪಡೆಯಲು ಹಿನಾ ಖಾನ್ ನಾಟಕ? ನಟಿಯ ವಿರುದ್ಧ ಆಕ್ರೋಶ
Hina Khan
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Jan 25, 2025 | 10:00 AM

‘ಯೇ ರಿಶ್ತಾ ಕ್ಯಾ ಕೆಹ್ಲಾತಾ ಹೈ’ ಧಾರಾವಾಹಿಯ ಮೂಲಕ ಮನೆಮಾತಾಗಿರುವ ನಟಿ ಹಿನಾ ಖಾನ್ ಅವರು ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಹಿನಾ ಸ್ತನ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಕ್ಯಾನ್ಸರ್ ಚಿಕಿತ್ಸೆಯು ತುಂಬಾ ಕಷ್ಟಕರವಾಗಿದೆ ಮತ್ತು ಕೀಮೋಥೆರಪಿ ಸಮಯದಲ್ಲಿ ಎಲ್ಲಾ ಕೂದಲುಗಳು ಉದುರಿಹೋಗುತ್ತವೆ. ಈ ಪರಿಸ್ಥಿತಿಯನ್ನು ಧೈರ್ಯದಿಂದ ಎದುರಿಸುತ್ತಿದ್ದಾರೆ. ಹಿನಾ ತನ್ನ ಚಿಕಿತ್ಸೆಯ ಬಗ್ಗೆ ಸಾಮಾಜಿಕ ಮಾಧ್ಯಮದ ಮೂಲಕ ನಿರಂತರವಾಗಿ ಮಾಹಿತಿಯನ್ನು ಹಂಚಿಕೊಳ್ಳುತ್ತಾರೆ. ಅವರು ಇತರ ಕ್ಯಾನ್ಸರ್ ಪೀಡಿತರಿಗೂ ಸ್ಫೂರ್ತಿ ನೀಡುತ್ತಾರೆ. ಅವರ ಧೈರ್ಯವನ್ನು ಹಲವರು ಕೊಂಡಾಡುತ್ತಿದ್ದಾರೆ. ಆದರೆ ಇದೇ ಕಾರಣಕ್ಕೆ ನಟಿಯೊಬ್ಬರು ಹಿನಾ ಅವರನ್ನು ಟೀಕಿಸಿದ್ದಾರೆ . ಇದೆಲ್ಲ PR ಸ್ಟಂಟ್ ಮತ್ತು ಪ್ರಚಾರಕ್ಕಾಗಿ ಎಲ್ಲವನ್ನೂ ಉತ್ಪ್ರೇಕ್ಷಿಸುತ್ತಿದ್ದಾರೆ ಎಂದು ರೋಸ್ಲೀನ್ ಖಾನ್ ಟೀಕಿಸಿದ್ದಾರೆ.

ರೋಸ್ಲಿನ್ ತಮ್ಮ ಇನ್‌ಸ್ಟಾ ಸ್ಟೋರಿಯಲ್ಲಿ ಈ ಬಗ್ಗೆ ಬರೆದಿದ್ದಾರೆ. ‘ಕಿಮೋಥೆರಪಿಯಿಂದ ತನ್ನ ಕೂದಲನ್ನು ಕಳೆದುಕೊಳ್ಳುವುದು ಮಹಿಳೆಗೆ ದೊಡ್ಡ ನೋವು. ನೀವು ಈ ವಿಷಯವನ್ನು ಸಾಮಾನ್ಯಗೊಳಿಸಬಹುದೇ? ಮೃಗಾಲಯದಲ್ಲಿರುವ ಸಿಂಹಿಣಿ ಧೈರ್ಯ ತೋರಿಸಬಹುದೇ? ಮೂರನೇ ಹಂತದ ಚಿಕಿತ್ಸೆಯ ಬಗ್ಗೆ ಅವರು ಒಂದೆರಡು ಸಾಲುಗಳನ್ನು ಹೇಳಬಹುದೇ? ಅಥವಾ ಅವರು ಜನಮನದಲ್ಲಿ ಉಳಿಯಲು ಕ್ಯಾನ್ಸರ್ ಅನ್ನು ಬಳಸುತ್ತಿದ್ದಾರೆಹೇ?’ ಎಂದು ರೋಸ್ಲಿನ್ ಪ್ರಶ್ನೆ ಮಾಡಿದ್ದಾರೆ.

‘ತಪ್ಪು ವಿಚಾರ ಹರಡಲು ಇದು ಅತ್ಯಂತ ಕರುಣಾಜನಕ ಮತ್ತು ನಾಚಿಕೆಗೇಡಿನ ಕೃತ್ಯವಾಗಿದೆ. ವೈದ್ಯಕೀಯ ತಪ್ಪು ಕಲ್ಪನೆಗಳನ್ನು ಹರಡಲು ಭಾರತದಲ್ಲಿ ಯಾವುದೇ ಶಿಕ್ಷೆಯಿಲ್ಲ ಎಂದು ನಿಮಗೆ ತಿಳಿದಿದೆ. ಸೋನಾಲಿ ಬೇಂದ್ರೆ, ಲೀಸಾ, ಮನೀಶಾ ಕೊಯಿರಾಲಾ ಅವರಂತಹ ಕೆಲವು ಪ್ರಜ್ಞಾವಂತ ನಟಿಯರೂ ಇಷ್ಟು ಕೀಳು ಮಟ್ಟಕ್ಕೆ ಇಳಿದು ಜನರನ್ನು ದಾರಿ ತಪ್ಪಿಸಿಲ್ಲ’ ಎಂದಿದ್ದಾರೆ ಅವರು.

ಇದನ್ನೂ ಓದಿ: ಬ್ರೆಸ್ಟ್ ಕ್ಯಾನ್ಸರ್​ನಿಂದ ತತ್ತರಿಸಿದ ನಟಿ ಹಿನಾ ಖಾನ್ 

‘ಇಂತಹ ಮಾರಣಾಂತಿಕ ಸವಾಲುಗಳನ್ನು ಎದುರಿಸುತ್ತಿರುವ ಜನರ ಬಗ್ಗೆ ನಿಮಗೆ ಯಾವುದೇ ಸಾಮಾಜಿಕ ಜವಾಬ್ದಾರಿ ಇದೆಯೇ ಅಥವಾ ನಿಮ್ಮ ವಾಣಿಜ್ಯ ಉದ್ದೇಶಗಳಿಗಾಗಿ ಕ್ಯಾನ್ಸರ್ ಅನ್ನು ಬಳಸುತ್ತಿದ್ದೀರಾ? ಅವರು ತಮ್ಮ ಕ್ಯಾನ್ಸರ್‌ನ ಹಂತದ ಬಗ್ಗೆ ಸರಿಯಾದ ಮಾಹಿತಿಯನ್ನು ನೀಡುತ್ತಿದ್ದಾರೆ ಎಂದು ನನಗೆ ಅನಿಸುತ್ತಿಲ್ಲ. 3ನೇ ಹಂತದ ರೋಗಿತ MRM ಮತ್ತು ವಿಕಿರಣದ ಬಗ್ಗೆ ಅವರು ಎಂದಾದರೂ ಮಾತನಾಡಿದ್ದಾರೆಯೇ? ಕ್ಯಾನ್ಸರ್‌ನಿಂದ ಬಳಲುತ್ತಿರುವ ಮತ್ತು ಅದನ್ನು ಪ್ರಚಾರದ ಸ್ಟಂಟ್‌ಗೆ ಬಳಸುತ್ತಿರುವ ಮಾನಸಿಕ ಅಸ್ವಸ್ಥರಿಗಾಗಿ ಮಾತ್ರ ನಾನು ಪ್ರಾರ್ಥಿಸಬಲ್ಲೆ. ಬನ್ನಿ, ಕ್ಯಾನ್ಸರ್ ಬಂದಿದೆ, ಸುದ್ದಿಯಾಗಿದೆ, ಸುದ್ದಿ ಮಾಡೋಣ’ ಎಂದು ಅವರು ಹೇಳಿದ್ದಾರೆ. ಇದಕ್ಕೆ ಹಿನಾ ಅವರಿಂದ ಇನ್ನೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.