ಐಟಿ ದಾಳಿಯಿಂದ ಕಂಗೆಡದ ಮೈತ್ರಿ; ಒಂದೇ ದಿನ ಎರಡು ಸಿನಿಮಾಗಳು ರಿಲೀಸ್

ಐಟಿ ಇಲಾಖೆಯ ದಾಳಿಯ ನಂತರ ಮೈತ್ರಿ ಮೂವೀ ಮೇಕರ್ಸ್ ಏಪ್ರಿಲ್ 10 ರಂದು ಎರಡು ದೊಡ್ಡ ಬಜೆಟ್ ಚಿತ್ರಗಳನ್ನು ಬಿಡುಗಡೆ ಮಾಡುತ್ತಿದೆ. ‘ಗುಡ್ ಬ್ಯಾಡ್ ಆ್ಯಂಡ್ ಅಗ್ಲಿ’ ಮತ್ತು ‘ಜಾಟ್’ ಚಿತ್ರಗಳು ಬಿಡುಗಡೆಯಾಗಲಿವೆ. ಮೈತ್ರಿಯ ಈ ಧೈರ್ಯ ಮತ್ತು ಯಶಸ್ಸಿನ ಹಿಂದಿನ ಕಾರಣಗಳನ್ನು ಲೇಖನ ವಿವರಿಸುತ್ತದೆ.

ಐಟಿ ದಾಳಿಯಿಂದ ಕಂಗೆಡದ ಮೈತ್ರಿ; ಒಂದೇ ದಿನ ಎರಡು ಸಿನಿಮಾಗಳು ರಿಲೀಸ್
ಅಜಿತ್-ಸನ್ನಿ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Jan 25, 2025 | 8:27 AM

‘ಮೈತ್ರಿ ಮೂವೀ ಮೇಕರ್ಸ್’ ಮೇಲೆ ಇತ್ತೀಚೆಗೆ ಐಟಿ ಇಲಾಖೆಯಿಂದ ದಾಳಿ ಆಗಿದೆ. ಈ ದಾಳಿ ವೇಳೆ ಅಧಿಕಾರಿಗಳು ಕೆಲ ಪ್ರಮುಖ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ವಿಶೇಷ ಎಂದರೆ ಈ ದಾಳಿಯಿಂದ ಮೈತ್ರಿ ಮೂವೀ ಮೇಕರ್ಸ್ ಕಂಗೆಟ್ಟಿಲ್ಲ. ಬದಲಿಗೆ ಮತ್ತಷ್ಟು ಸ್ಟ್ರಾಂಗ್ ಆಗಿ ಕಂಬ್ಯಾಕ್ ಮಾಡಿದೆ. ಈ ನಿರ್ಮಾಣ ಸಂಸ್ಥೆ ಒಂದೇ ದಿನ ಎರಡು ಚಿತ್ರಗಳನ್ನು ರಿಲೀಸ್ ಮಾಡುವ ಸಾಹಸಕ್ಕೆ ಮುಂದಾಗಿದೆ. ಇದು ಎಲ್ಲರಿಗೂ ಅಚ್ಚರಿ ತಂದಿದೆ.

2024ರಲ್ಲಿ ‘ಪುಷ್ಪ 2’ ಚಿತ್ರವನ್ನು ಮೈತ್ರಿ ಸಂಸ್ಥೆ ರಿಲೀಸ್ ಮಾಡಿತ್ತು. ಈ ಚಿತ್ರ 1900 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಈ ಚಿತ್ರದಿಂದ ಸಂಸ್ಥೆ ದೊಡ್ಡ ಲಾಭ ಕಂಡಿದೆ. ಹೀಗಾಗಿ, ಬೇಸಿಗೆ ಸಂದರ್ಭದಲ್ಲಿ ಎರಡು ಚಿತ್ರಗಳನ್ನು ರಿಲೀಸ್ ಮಾಡುತ್ತಿದೆ. ಈ ಮೂಲಕ 2025ನ್ನು ಆರಂಭಿಸುತ್ತಿದೆ.

ಏಪ್ರಿಲ್ 10ರಂದು ಅಜಿತ್ ನಟನೆಯ ‘ಗುಡ್ ಬ್ಯಾಡ್ ಆ್ಯಂಡ್ ಅಗ್ಲಿ’ ಸಿನಿಮಾ ರಿಲೀಸ್ ಆಗುತ್ತಿದೆ. ಅಧಿಕ್ ರವಿಚಂದ್ರನ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಮೈತ್ರಿ ಹಾಗೂ ಟಿ ಸೀರಿಸ್ ಜಂಟಿಯಾಗಿ ಸಿನಿಮಾ ನಿರ್ಮಾಣ ಮಾಡಿದೆ. ಈ ಚಿತ್ರದ ಬಜೆಟ್ 250 ಕೋಟಿ ರೂಪಾಯಿಗೂ ಅಧಿಕವಾಗಿದೆ.

ಇದೇ ದಿನ ‘ಜಾಟ್’ ಹೆಸರಿನ ಸಿನಿಮಾ ಕೂಡ ರಿಲೀಸ್ ಆಗುತ್ತಿದೆ. ಗೋಪಿಚಂದ್ ಮಲಿನಿನೇನಿ ಅವರು ‘ವೀರ ಸಿಂಹ ರೆಡ್ಡಿ’ ಸಿನಿಮಾ ಬಳಿಕ ಬಾಲಿವುಡ್ ಸೇರಿದ್ದಾರೆ. ‘ಜಾಟ್’ ಹೆಸರಿನ ಸಿನಿಮಾನ ಅವರು ನಿರ್ದೇಶನ ಮಾಡಿದ್ದಾರೆ. ಸನ್ನಿ ಡಿಯೋಲ್ ಅವರು ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರ ಹಿಂದಿ ಜೊತೆಗೆ ತೆಲುಗು ಹಾಗೂ ತಮಿಳಿನಲ್ಲೂ ರಿಲೀಸ್ ಆಗುತ್ತಿದೆ. ಈ ಚಿತ್ರವನ್ನು ಮೈತ್ರಿ ಅವರೇ ನಿರ್ದೇಶನ ಮಾಡಿದ್ದಾರೆ. ಎರಡೂ ದೊಡ್ಡ ಬಜೆಟ್ ಸಿನಿಮಾಗಳು. ಎರಡೂ ಬಿಗ್ ಬಜೆಟ್​ನಲ್ಲಿ ಸಿದ್ಧವಾಗಿರೋ ಸಿನಿಮಾಗಳು ಹೀಗಾಗಿ, ನಿರೀಕ್ಷೆ ಹೆಚ್ಚಿದೆ.

ಇದನ್ನೂ ಓದಿ: ದಳಪತಿ ವಿಜಯ್ ಕೊನೆಯ ಚಿತ್ರಕ್ಕೆ ಮೊದಲ ಸಿನಿಮಾ ಟೈಟಲ್? ಏನಿದು ಸುದ್ದಿ 

ಈ ಮೊದಲು ಕೂಡ ಮೈತ್ರಿ ಈ ರೀತಿಯ ಸಾಹಸ ಮಾಡಿತ್ತು. ‘ವೀರ ಸಿಂಹ ರೆಡ್ಡಿ’ ಹಾಗೂ ‘ವಾಲ್ಟೇರ್ ವೀರಯ್ಯ’ ಚಿತ್ರವನ್ನು 2023ರ ಸಂಕ್ರಾಂತಿಗೆ ಒಟ್ಟಿಗೆ ರಿಲೀಸ್ ಮಾಡಿತ್ತು. ಈ ವರ್ಷ ದಿಲ್ ರಾಜು ಅವರು ‘ಸಂಕ್ರಾಂತಿಕಿ ವಸ್ತುನ್ನಾಮ್’ ಹಾಗೂ ‘ಗೇಮ್ ಚೇಂಜರ್​’ ಚಿತ್ರವನ್ನು ಒಟ್ಟಿಗೆ ತೆರೆಗೆ ತಂದಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.