ದಳಪತಿ ವಿಜಯ್ ಕೊನೆಯ ಚಿತ್ರಕ್ಕೆ ಮೊದಲ ಸಿನಿಮಾ ಟೈಟಲ್? ಏನಿದು ಸುದ್ದಿ
ದಳಪತಿ ವಿಜಯ್ ಅವರ ಹೊಸ ಚಿತ್ರಕ್ಕೆ 'ನಾಲೈಯ ತೀರ್ಪು' ಎಂದು ಹೆಸರಿಡಲಾಗಿದೆ. ಇದು ಅವರ ಮೊದಲ ಚಿತ್ರದ ಹೆಸರೇ ಆಗಿದೆ. ಈ ಚಿತ್ರವನ್ನು ಕೆವಿಎನ್ ಪ್ರೊಡಕ್ಷನ್ ನಿರ್ಮಿಸುತ್ತಿದ್ದು, ಪೂಜಾ ಹೆಗ್ಡೆ ಮತ್ತು ಬಾಬಿ ಡಿಯೋಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. 250-275 ಕೋಟಿ ರೂಪಾಯಿ ವಿಜಯ್ ಸಂಭಾವನೆ ಪಡೆದಿದ್ದಾರೆ. ವಿಜಯ್ ಅವರ ರಾಜಕೀಯ ಪ್ರವೇಶದ ಹಿನ್ನೆಲೆಯಲ್ಲಿ ಈ ಸಿನಿಮಾ ಹೆಚ್ಚು ಗಮನ ಸೆಳೆಯುತ್ತಿದೆ.
ದಳಪತಿ ವಿಜಯ್ ಅವರು ತಮ್ಮ ಹೊಸ ಸಿನಿಮಾದ ಶೂಟ್ನಲ್ಲಿ ಬ್ಯುಸಿ ಆಗಿದ್ದಾರೆ. ಅತಿ ವೇಗದಲ್ಲಿ ಸಿನಿಮಾ ಮಾಡಿ ಮುಗಿಸುವುದನ್ನು ಅವರನ್ನು ನೋಡಿ ಅನೇಕರು ಕಲಿಯಬೇಕಿದೆ. ಸದ್ಯ ಅವರ ನಟನೆಯ ಹೊಸ ಚಿತ್ರಕ್ಕೆ ‘ದಳಪತಿ 69’ ಎಂದು ತಾತ್ಕಾಲಿಕ ಟೈಟಲ್ ಇಡಲಾಗಿದೆ. ಈ ಚಿತ್ರದ ಟೈಟಲ್ ಏನು ಎಂಬುದು ರಿವೀಲ್ ಆಗಿದೆ. ವಿಜಯ್ ನಟನೆಯ ಮೊದಲ ಚಿತ್ರಕ್ಕೆ ಯಾವ ಟೈಟಲ್ ಇಡಲಾಗಿತ್ತೋ ಅದೇ ಟೈಟಲ್ನ ಕೊನೆಯ ಚಿತ್ರಕ್ಕೂ ಇಡಲಾಗುತ್ತಿದೆ ಎನ್ನಲಾಗುತ್ತಿದೆ.
ವಿಜಯ್ ಅವರು ಬಾಲ ಕಲಾವಿದನಾಗಿ ಗಮನ ಸೆಳೆದವರು. ಆ ಬಳಿಕ ಅವರು ಹೀರೋ ಆದರು. 1992ರಲ್ಲಿ ರಿಲೀಸ್ ಆದ ‘ನಾಲೈಯ ತೀರ್ಪು’ ಸಿನಿಮಾ ಗಮನ ಸೆಳೆಯಿತು. ಇದು ಹೀರೋ ಆಗಿ ವಿಜಯ್ ನಟಿಸಿದ ಮೊದಲ ಸಿನಿಮಾ ಆಗಿದೆ. ಈಗ ಅವರ ಕೊನೆಯ ಚಿತ್ರಕ್ಕೆ ಇದೇ ಟೈಟಲ್ ಇಡಲು ನಿರ್ಧರಿಸಲಾಗಿದೆ ಎಂದು ಹೇಳಲಾಗುತ್ತಿದೆ.
ವಿಜಯ್ ಅವರ ಕೊನೆಯ ಚಿತ್ರಕ್ಕೆ ಎಚ್. ವಿನೋದ್ ನಿರ್ದೇಶನ ಮಾಡಿದ್ದಾರೆ. ಈ ಮೊದಲು ಅಜಿತ್ ಜೊತೆ ಸಿನಿಮಾ ಮಾಡಿ ಅವರು ಗಮನ ಸೆಳೆದಿದ್ದಾರೆ. ವಿಜಯ್ ಹೊಸ ಚಿತ್ರದ ಟೈಟಲ್ನ ಶೀಘ್ರವೇ ರಿಲೀಸ್ ಮಾಡಲು ತಂಡ ಪ್ಲ್ಯಾನ್ ಮಾಡಿದೆ ಎನ್ನಲಾಗಿದೆ. ಅವರ ಕೊನೆಯ ಚಿತ್ರಕ್ಕೂ ಮೊದಲ ಚಿತ್ರದ ಟೈಟಲ್ನೇ ಇಟ್ಟಿದ್ದು ವಿಶೇಷ.
ಕರ್ನಾಟಕದ ‘ಕೆವಿಎನ್ ಪ್ರೊಡಕ್ಷನ್’ ವಿಜಯ್ ಸಿನಿಮಾಗೆ ಬಂಡವಾಳ ಹೂಡುತ್ತಿದೆ. ಸೆಟ್ನ ಯಾವುದೇ ವಿಚಾರಗಳು ಲೀಕ್ ಆಗದಂತೆ ತಂಡ ನೋಡಿಕೊಳ್ಳುತ್ತಿದೆ. ಈ ಚಿತ್ರಕ್ಕೆ ವಿಜಯ್ ಅವರಿಗೆ ದೊಡ್ಡ ಮಟ್ಟದ ಸಂಭಾವನೆ ಕೊಡಲು ಕೆವಿಎನ್ ಒಪ್ಪಿದೆ. ಕೆಲವು ವರದಿಗಳ ಪ್ರಕಾರ 250-275 ಕೋಟಿ ರೂಪಾಯಿ ಸಂಭಾವನೆ ನೀಡಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಅಪಘಾತದಲ್ಲಿ ಎಲ್ಲವನ್ನೂ ಮರೆತಿದ್ದ ನಾಸರ್ ಮಗನಿಗೆ ನೆನಪು ತರಿಸಿದ್ದ ದಳಪತಿ ವಿಜಯ್
ಕೆಲವು ವರದಿಗಳ ಪ್ರಕಾರ ‘ನಾಲೈಯ ತೀರ್ಪು’ ಸಿನಿಮಾ ತೆಲುಗಿನ ‘ಭಗವಾನ್’ ಚಿತ್ರದ ರಿಮೇಕ್ ಎನ್ನಲಾಗಿದೆ. ಪೂಜಾ ಹೆಗ್ಡೆ ನಾಯಕಿ ಆಗಿ ನಟಿಸುತ್ತಿದ್ದು, ಬಾಬಿ ಡಿಯೋಲ್ ವಿಲನ್ ಪಾತ್ರ ಮಾಡಿದ್ದಾರೆ. ಈ ಚಿತ್ರ ಈ ವರ್ಷವೇ ರಿಲೀಸ್ ಆಗುವ ಸಾಧ್ಯತೆ ಇದೆ. 2026ರಲ್ಲಿ ತಮಿಳು ನಾಡು ಚುನಾವಣೆ ನಡೆಯಲಿದ್ದು, ವಿಜಯ್ ಪಕ್ಷ ಸ್ಪರ್ಧೆ ಮಾಡಲಿದೆ. ಅವರು ಗೆದ್ದು ಸಿಎಂ ಆಗುವ ನಿರೀಕ್ಷೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.