ಅಪಘಾತದಲ್ಲಿ ಎಲ್ಲವನ್ನೂ ಮರೆತಿದ್ದ ನಾಸರ್ ಮಗನಿಗೆ ನೆನಪು ತರಿಸಿದ್ದ ದಳಪತಿ ವಿಜಯ್

Thalapathy Vijay: ದಳಪತಿ ವಿಜಯ್ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ತಮಿಳುನಾಡು ಮಾತ್ರವಲ್ಲದೆ, ಕನ್ನಡ, ತೆಲುಗು ಹಾಗೂ ಮಲಯಾಳಂನಲ್ಲೂ ಅವರಿಗೆ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ನಾಸರ್ ಅವರ ಮಗ ನೂರುಲ್ ಹಸನ್ ಫೈಜಲ್ ಕೂಡ ದಳಪತಿ ವಿಜಯ್ ಅವರ ಅಭಿಮಾನಿ ಆಗಿದ್ದರು. ಈ ವಿಚಾರದ ಬಗ್ಗೆ ನಾಸರ್ ಮಾಹಿತಿ ಹಂಚಿಕೊಂಡಿದ್ದಾರೆ.

ಅಪಘಾತದಲ್ಲಿ ಎಲ್ಲವನ್ನೂ ಮರೆತಿದ್ದ ನಾಸರ್ ಮಗನಿಗೆ ನೆನಪು ತರಿಸಿದ್ದ ದಳಪತಿ ವಿಜಯ್
Thalapathy Vijay
Follow us
 ಶ್ರೀಲಕ್ಷ್ಮೀ ಎಚ್
| Updated By: ಮಂಜುನಾಥ ಸಿ.

Updated on: Jan 01, 2025 | 3:37 PM

ನಟ ನಾಸರ್ ಅವರು ಟಾಲಿವುಡ್ನಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಅವರಿಗೆ ಕನ್ನಡ ಚಿತ್ರರಂಗದಲ್ಲೂ ಬೇಡಿಕೆ ಇದೆ. ಇಲ್ಲಿಯೂ ಅವರು ಸಿನಿಮಾ ಮಾಡಿದ್ದಾರೆ. ದಕ್ಷಿಣದಲ್ಲಿ ಅವರು ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಅವರು ಮೂರು ದಶಕಗಳಿಂದ ಕಲಾ ಸೇವೆ ಮಾಡುತ್ತಿದ್ದಾರೆ. 2014ರಲ್ಲಿ ಅವರ ಮಗ ಭೀಕರ ರಸ್ತೆ ಅಪಘಾತಕ್ಕೆ ಒಳಗಾಗಿದ್ದರು. ಎರಡು ವಾರ ಕೋಮದಲ್ಲಿ ಇದ್ದ ಅವರ ಮಗ ನಂತರ ಎದ್ದಾಕ್ಷಣ ದಳಪತಿ ವಿಜಯ್ ಹೆಸರನ್ನು ಹೇಳಿದ್ದರು. ಈ ವಿಚಾರದ ಬಗ್ಗೆ ನಾಸರ್ ಈಗ ಮಾತನಾಡಿದ್ದಾರೆ.

ದಳಪತಿ ವಿಜಯ್ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ತಮಿಳುನಾಡು ಮಾತ್ರವಲ್ಲದೆ, ಕನ್ನಡ, ತೆಲುಗು ಹಾಗೂ ಮಲಯಾಳಂನಲ್ಲೂ ಅವರಿಗೆ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ನಾಸರ್ ಅವರ ಮಗ ನೂರುಲ್ ಹಸನ್ ಫೈಜಲ್ ಕೂಡ ದಳಪತಿ ವಿಜಯ್ ಅವರ ಅಭಿಮಾನಿ ಆಗಿದ್ದರು. ಈ ವಿಚಾರದ ಬಗ್ಗೆ ನಾಸರ್ ಮಾಹಿತಿ ಹಂಚಿಕೊಂಡಿದ್ದಾರೆ.

ಮದನ್ ಗೌರಿ ಜೊತೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅವರು, ‘ನನ್ನ ಮಗನಿಗೆ ಅಪಘಾತ ಆಯಿತು. 14 ದಿನ ಆತ ಕೋಮಾದಲ್ಲಿ ಇದ್ದ. ಆತನಿಗೆ ಎಚ್ಚರ ಬಂದಾಗ ಅಪ್ಪ ಅಥವಾ ಅಮ್ಮ ಹೇಳಿಲ್ಲ. ಅವನು ವಿಜಯ್ ಹೆಸರುನ್ನು ಕರೆದ’ ಎಂದಿದ್ದಾರೆ ನಾಸರ್.

ಇದನ್ನೂ ಓದಿ:ದಳಪತಿ ವಿಜಯ್ ಬಗ್ಗೆ ಕಿಚ್ಚ ಸುದೀಪ್ ಹೇಳಿದ್ದೇನು?

ಆತನ ಗೆಳೆಯನ ಹೆಸರು ವಿಜಯ್ ಕುಮಾರ್ ಆಗಿತ್ತು. ಆತನೂ ಅಪಘಾತದಲ್ಲಿ ಇದ್ದ. ಆತನ ಹೆಸರು ನೆನಪಿದೆ ಎಂದು ಕುಟುಂಬದವರು ಖುಷಿಪಟ್ಟರು. ಆದರೆ, ಫೈಜಲ್ಗೆ ವಿಜಯ್ನ ಗುರಿತಿಸೋಕೆ ಸಾಧ್ಯವೇ ಆಗಿಲ್ಲ. ಇದು ಅವರ ಕುಟುಂಬಕ್ಕೆ ಸಾಕಷ್ಟು ಗೊಂದಲ ಮೂಡಿಸಿತ್ತು.

ಆ ಬಳಿಕ ನಾಸರ್ ಮಗ ಹೇಳುತ್ತಿರುವುದು ನಟ ದಳಪತಿ ವಿಜಯ್ ಹೆಸರು ಅನ್ನೋದು ಗೊತ್ತಾಯಿತು. ಆ ಬಳಿಕ ವಿಜಯ್ ಸಿನಿಮಾಗಳನ್ನು ತೋರಿಸೋಕೆ ಆರಂಭಿಸಲಾಯಿತು. ವಿಜಯ್ ನಟನೆಯ ಸಿನಿಮಾಗಳ ಹಾಡುಗಳನ್ನು ಕೇಳಿಸಲಾಯಿತು. ವಿಶೇಷ ಎಂದರೆ ವಿಜಯ್ ಕೂಡ ನಾಸರ್ ಮಗನ ಚೇತರಿಕೆಗೆ ಕಾರಣ ಆದರು. ಹಲವು ಬಾರಿ ಫೈಜಲ್ ಆಸ್ಪತ್ರೆಗೆ ಭೇಟಿ ಕೊಟ್ಟರು. ‘ನನ್ನ ಹಾಗೂ ಫೈಜಲ್ ಬಾಳಲ್ಲಿ ವಿಜಯ್ ಸಾಕಷ್ಟು ಪ್ರಾಮುಖ್ಯತೆ ಪಡೆದುಕೊಂಡಿದ್ದಾರೆ’ ಎನ್ನುತ್ತಾರೆ ನಾಸರ್.

ಸಿನಿಮಾ ವಿಚಾರಕ್ಕೆ ಬರೋದಾದರೆ, ವಿಜಯ್ ನಟನೆಯ ‘ಗೋಟ್’ ಇತ್ತೀಚೆಗೆ ರಿಲೀಸ್ ಆಗಿ ಯಶಸ್ಸು ಕಂಡಿತು. ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ