ಗ್ರಾಫಿಕ್ಸ್ ವಿಚಾರದಲ್ಲಿ ಹೆದರಿದ ಜೂನಿಯರ್ ಎನ್​ಟಿಆರ್​; ಮಹತ್ವದ ನಿರ್ಧಾರ ತೆಗೆದುಕೊಂಡ ಟೀಂ

ಇತ್ತೀಚೆಗೆ ದೊಡ್ಡ ಬಜೆಟ್​ ಚಿತ್ರಗಳಲ್ಲಿ ವಿಎಫ್​ಎಕ್ಸ್ ಬಳಕೆ ಹೆಚ್ಚಿದೆ. ಇದರಿಂದ ಚಿತ್ರದ ಮೆರಗು ಕೂಡ ಜಾಸ್ತಿ ಆಗುತ್ತದೆ. ಆದರೆ, ಕೊಂಚ ವ್ಯತ್ಯಾಸವಾದರೂ ಟ್ರೋಲ್ ಆಗಬೇಕಾಗುತ್ತದೆ.

ಗ್ರಾಫಿಕ್ಸ್ ವಿಚಾರದಲ್ಲಿ ಹೆದರಿದ ಜೂನಿಯರ್ ಎನ್​ಟಿಆರ್​; ಮಹತ್ವದ ನಿರ್ಧಾರ ತೆಗೆದುಕೊಂಡ ಟೀಂ
ಜೂನಿಯರ್ ಎನ್​ಟಿಆರ್​ ಚಿತ್ರಕ್ಕೆ ವಿಎಫ್​ಎಕ್ಸ್ ಭಯ

Updated on: Mar 29, 2023 | 6:30 AM

ಮುಖ್ಯಾಂಶಗಳು

  • ಟ್ರೋಲ್ ಆಗಿದ್ದ ‘ಆದಿಪುರುಷ್’ ಸಿನಿಮಾ
  • ವಿಎಫ್​ಎಕ್ಸ್ ವಿಚಾರದಲ್ಲಿ ಎಚ್ಚರಿಕೆ ವಹಿಸಿದ ಜೂನಿಯರ್ ಎನ್​ಟಿಆರ್
  • ಹಾಲಿವುಡ್ ವಿಎಫ್​ಎಕ್ಸ್ ಡಿಸೈನರ್ ಕರೆತಂದ ನಿರ್ಮಾಪಕರು

ಸ್ಟಾರ್ ನಟರ ಸಿನಿಮಾಗಳು ಸಾಕಷ್ಟು ಗಮನಸೆಳೆಯುತ್ತವೆ. ಸ್ಟಾರ್​ ಹೀರೋಗಳ ಸಿನಿಮಾದ ಪೋಸ್ಟರ್, ಟೀಸರ್​, ಟ್ರೇಲರ್, ಸಾಂಗ್ ರಿಲೀಸ್ ಆದರೆ ಸಾಕಷ್ಟು ಸದ್ದು ಆಗುತ್ತದೆ. ಪ್ರೇಕ್ಷಕರಿಗೆ ಅದು ಹಿಡಿಸದೇ ಇದ್ದರೆ ಟ್ರೋಲ್  ಆಗುತ್ತದೆ. ಪ್ರಭಾಸ್ ನಟನೆಯ ‘ಆದಿಪುರುಷ್​’ (Adipurush) ಸಿನಿಮಾದ ಟೀಸರ್​ಗೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಇದು ಚಿತ್ರಕ್ಕೆ ದೊಡ್ಡ ಹಿನ್ನಡೆ ಎಂದೇ ಹೇಳಾಯಿತು. ‘ಆದಿಪುರುಷ್​’ (Adipurush)ಟ್ರೋಲ್ ಆಗೋಕೆ ಪ್ರಮುಖ ಕಾರಣ ಕಳಪೆ ವಿಎಫ್​ಎಕ್ಸ್. ಈ ವಿಚಾರದಲ್ಲಿ ಜೂನಿಯರ್​ ಎನ್​ಟಿಆರ್​ಗೆ (Jr NTR) ಭಯ ಶುರುವಾಗಿದೆ. ಹೀಗಾಗಿ, ಅವರ ಮುಂದಿನ ಚಿತ್ರಕ್ಕೆ ವಿಎಫ್​ಎಕ್ಸ್ ಕೆಲಸಕ್ಕೆ ಹಾಲಿವುಡ್​ ದಿಗ್ಗಜನ ಕರೆತರಲಾಗಿದೆ.

ಇತ್ತೀಚೆಗೆ ದೊಡ್ಡ ಬಜೆಟ್​ ಚಿತ್ರಗಳಲ್ಲಿ ವಿಎಫ್​ಎಕ್ಸ್ ಬಳಕೆ ಹೆಚ್ಚಿದೆ. ಇದರಿಂದ ಚಿತ್ರದ ಮೆರಗು ಕೂಡ ಜಾಸ್ತಿ ಆಗುತ್ತದೆ. ಆದರೆ, ಕೊಂಚ ವ್ಯತ್ಯಾಸವಾದರೂ ಟ್ರೋಲ್ ಆಗಬೇಕಾಗುತ್ತದೆ. ಪ್ರಭಾಸ್ ನಟನೆಯ ‘ಆದಿಪುರುಷ್​’ ಚಿತ್ರ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದಕ್ಕೆ ಕಳಪೆ ವಿಎಫ್​ಎಕ್ಸ್ ಮುಖ್ಯ ಕಾರಣ ಎಂಬುದು ಎಲ್ಲರಿಗೂ ಅರಿವಾಗಿದೆ. ಕಳೆದ ವರ್ಷ ರಿಲೀಸ್ ಆದ ‘ಬ್ರಹ್ಮಾಸ್ತ್ರ’ ಸಿನಿಮಾದ ಗ್ರಾಫಿಕ್ಸ್ ಬಗ್ಗೆಯೂ ಟೀಕೆ ಎದುರಾಗಿತ್ತು. ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಕೊರಟಾಲ ಶಿವ ಹಾಗೂ ಜೂನಿಯರ್ ಎನ್​ಟಿಆರ್ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ:  NTR 30: ಜೂ ಎನ್​ಟಿಆರ್ ಸಿನಿಮಾಕ್ಕೆ ಹಾಲಿವುಡ್ ಆಕ್ಷನ್ ನಿರ್ದೇಶಕ

ಜೂನಿಯರ್ ಎನ್​ಟಿಆರ್ 30ನೇ ಸಿನಿಮಾಗೆ ವಿಎಫ್​ಎಕ್ಸ್ ಮೇಲ್ವಿಚಾರಕರಾಗಿ ಹಾಲಿವುಡ್​ನ ಬ್ರಾಡ್ ಮಿನ್ನಿಚ್ ಅವರು ಆಗಮಿಸಿದ್ದಾರೆ. ಅವರು ಈ ಚಿತ್ರಕ್ಕೆ ಗ್ರಾಫಿಕ್ಸ್ ನೀಡಲಿದ್ದಾರೆ. ಅವರ ಟೀಂ ಈ ಚಿತ್ರಕ್ಕಾಗಿ ಕೆಲಸ ಮಾಡಲಿದೆ. ಜೂನಿಯರ್​ ಎನ್​ಟಿರ್ ನಟನೆಯ ಈ ಸಿನಿಮಾದಲ್ಲಿ ಗ್ರಾಫಿಕ್ಸ್ ಕೆಲಸಗಳು ಹೆಚ್ಚಿರಲಿವೆಯಂತೆ. ಈ ಕಾರಣಕ್ಕೆ ನಿರ್ಮಾಪಕರು ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ವರದಿ ಆಗಿದೆ. ‘ದಿ ಗುಡ್ ಲಾರ್ಡ್ ಬರ್ಡ್​’, ‘ಒಬಿ-ವ್ಯಾನ್ ಕೆನೋಬಿ’ ಮೊದಲಾದ ಹಾಲಿವುಡ್​ ಸಿನಿಮಾಗಳಲ್ಲಿ ಬ್ರಾಡ್ ಮಿನ್ನಿಚ್ ಕೆಲಸ ಮಾಡಿದ್ದಾರೆ.

ಇದನ್ನೂ ಓದಿ:  NTR 30: ಜೂನಿಯರ್​ ಎನ್​ಟಿಆರ್​ 30ನೇ ಚಿತ್ರಕ್ಕೆ ಮುಹೂರ್ತ; ಇಲ್ಲಿದೆ ಫೋಟೋ ಗ್ಯಾಲರಿ

‘NTR30’ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಲು ಸಾಕಷ್ಟು ಕಾರಣ ಇದೆ. ‘ಆರ್​ಆರ್​ಆರ್​’ ಯಶಸ್ಸಿನ ಬಳಿಕ ಜೂನಿಯರ್ ಎನ್​ಟಿಆರ್ ಒಪ್ಪಿಕೊಂಡಿರೋ ಸಿನಿಮಾ ಇದು. ಜೂನಿಯರ್ ಎನ್​ಟಿಆರ್​ ಹಾಗೂ ಕೊರಟಾಲ ಶಿವ ಕಾಂಬಿನೇಷನ್​ನಲ್ಲಿ ಮೂಡಿಬಂದ ‘ಜನತಾ ಗ್ಯಾರೇಜ್​’ ಸಿನಿಮಾ ಸೂಪರ್ ಹಿಟ್ ಆಯಿತು. ಈಗ ಇದೇ ಜೋಡಿ ಮತ್ತೆ ಒಟ್ಟಾಗಿ ಕೆಲಸ ಮಾಡುತ್ತಿರುವುದರಿಂದ ಸಹಜವಾಗಿಯೇ ನಿರೀಕ್ಷೆ ಹೆಚ್ಚಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us