ಅಮೆಜಾನ್ ವೈಸ್ ಪ್ರೆಸಿಡೆಂಟ್​ಗೆ ಭರ್ಜರಿ ಪಾರ್ಟಿ ಕೊಟ್ಟ ಜೂ ಎನ್​ಟಿಆರ್: ಕಾರಣವೇನು?

Jr NTR: ವಿಶ್ವದ ದೊಡ್ಡ ಸ್ಟುಡಿಯೋಗಳಲ್ಲಿ ಒಂದಾದ ಅಮೆಜಾನ್ ಇಂಟರ್ನ್ಯಾಷನಲ್ ಸ್ಟುಡಿಯೋಸ್​ನ ಉಪಾಧ್ಯಕ್ಷ ಜೇಮ್ಸ್ ಫ್ಯಾರೆಲ್, ಜೂ ಎನ್​ಟಿಆರ್ ಮನೆಗೆ ಆಗಮಿಸಿ ಪಾರ್ಟಿಯಲ್ಲಿ ಭಾಗವಹಿಸಿದ್ದಾರೆ.

ಅಮೆಜಾನ್ ವೈಸ್ ಪ್ರೆಸಿಡೆಂಟ್​ಗೆ ಭರ್ಜರಿ ಪಾರ್ಟಿ ಕೊಟ್ಟ ಜೂ ಎನ್​ಟಿಆರ್: ಕಾರಣವೇನು?
ಜೂ ಎನ್​ಟಿಆರ್
Follow us
ಮಂಜುನಾಥ ಸಿ.
|

Updated on: Apr 13, 2023 | 6:10 PM

ಆರ್​ಆರ್​ಆರ್ (RRR) ಸಿನಿಮಾದ ಬಳಿಕ ಜೂ ಎನ್​ಟಿಆರ್ (Jr NTR) ಸ್ಟಾರ್​ಗಿರಿ ದುಪ್ಪಟ್ಟಾಗಿದೆ. ಹಾಲಿವುಡ್​ನಲ್ಲೂ ಜೂ ಎನ್​ಟಿಆರ್ ಗಮನ ಸೆಳೆದಿದ್ದು, ಹಾಲಿವುಡ್​ನ ಜನಪ್ರಿಯ ನಿರ್ಮಾಣ ಸಂಸ್ಥೆಗಳು ಸಹ ಜೂ ಎನ್​ಟಿಆರ್ ಮೇಲೆ ಕಣ್ಣಿಟ್ಟಿವೆ. ಆರ್​ಆರ್​ಆರ್ ಆಸ್ಕರ್ ಸಮಯದಲ್ಲಂತೂ ಹಲವು ಹಾಲಿವುಡ್ ನಟರು, ನಿರ್ಮಾಪಕರೊಟ್ಟಿಗೆ ಗೆಳೆತನ ಸಂಪಾದಿಸಿದ್ದಾರೆ ಜೂ ಎನ್​ಟಿಆರ್. ಇದೀಗ ಜೂ ಎನ್​ಟಿಆರ್ ಮನೆಗೆ ವಿಶ್ವದ ದೊಡ್ಡ ಸ್ಟುಡಿಯೋ ದರ ಉಪಾಧ್ಯಕ್ಷರು ಬಂದು ಆತಿಥ್ಯ ಸ್ವೀಕರಿಸಿದ್ದು, ಇದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಅಮೆಜಾನ್ ಸ್ಟುಡಿಯೋಸ್ (Amazon Studio) ವಿಶ್ವದ ಅತಿ ದೊಡ್ಡ ನಿರ್ಮಾಣ ಸಂಸ್ಥೆಗಳಲ್ಲಿ ಒಂದಾಗಿದ್ದು ಅದರ ಉಪಾಧ್ಯಕ್ಷ ಆಗಿರುವ ಜೇಮ್ಸ್ ಫ್ಯಾರೆಲ್ (James Farrell) ಜೂ ಎನ್​ಟಿಆರ್ ಮನೆಗೆ ಆಗಮಿಸಿದ್ದರು. ಬುಧವಾರ ರಾತ್ರಿ ಜೇಮ್ಸ್​ಗಾಗಿ ಭರ್ಜರಿ ಪಾರ್ಟಿಯನ್ನು ಸಹ ಜೂ ಎನ್​ಟಿಆರ್ ಆಯೋಜಿಸಿದ್ದರು. ಜೂ ಎನ್​ಟಿಆರ್ ಹಾಗೂ ಜೇಮ್ಸ್ ಫ್ಯಾರೆಲ್ ಒಟ್ಟಿಗೆ ಪಾರ್ಟಿಯಲ್ಲಿ ಮಾತನಾಡುತ್ತಾ, ನಗುತ್ತಿರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜೂ ಎನ್​ಟಿಆರ್ ಹಾಲಿವುಡ್ ಪದಾರ್ಪಣೆ ಸುದ್ದಿಗಳಿಗೆ ಈ ಚಿತ್ರಗಳು ಪುಷ್ಠಿ ನೀಡಿವೆ.

ಕೆಲವೇ ಮಂದಿ ಅತಿಥಿಗಳಿಗೆ ಆಹ್ವಾನವಿದ್ದ ಪಾರ್ಟಿ ಇದಾಗಿದ್ದು, ಜೇಮ್ಸ್ ಫ್ಯಾರೆಲ್ ಜೊತೆಗೆ ನಿರ್ದೇಶಕ ರಾಜಮೌಳಿ, ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್, ಮೈತ್ರಿ ಮೂವಿ ಮೇಕರ್ಸ್​ನ ನವೀನ್, ಶೋಭು ಯರ್ರಲಗಡ್ಡ, ಶ್ರೀನಿ ರೆಡ್ಡಿ, ನಾಗವಂಶಿ, ಸ್ವಪ್ನ ದತ್ ಅವರುಗಳು ಮಾತ್ರವೇ ಪಾರ್ಟಿಯಲ್ಲಿದ್ದರು. ನಿರ್ದೇಶಕ ಸುಕುಮಾರ್, ನಿರ್ಮಾಪಕ ದಿಲ್ ರಾಜುಗೆ ಆಹ್ವಾನವಿತ್ತಾದರೂ ಅವರುಗಳು ಬೇರೆ ಕೆಲಸದಲ್ಲಿ ಬ್ಯುಸಿಯಾಗಿದ್ದ ಕಾರಣ ಪಾರ್ಟಿ ಅಟೆಂಡ್ ಮಾಡಿಲ್ಲ ಎನ್ನಲಾಗುತ್ತಿದೆ. ಅಂದಹಾಗೆ ಆರ್​ಆರ್​ಆರ್ ಸಿನಿಮಾದ ಜೂ ಎನ್​ಟಿಆರ್ ಸಹನಟ, ಗೆಳೆಯ ರಾಮ್ ಚರಣ್ ಪಾರ್ಟಿಯಲ್ಲಿ ಹಾಜರಿರಲಿಲ್ಲ.

ಪಾರ್ಟಿಯ ಕೆಲವು ಚಿತ್ರಗಳನ್ನು ಹಂಚಿಕೊಂಡಿರುವ ನಟ ಜೂ ಎನ್​ಟಿಆರ್, ಸಂಜೆಯನ್ನು ಅರ್ಥಪೂರ್ಣವಾಗಿ ಗೆಳೆಯರೊಟ್ಟಿಗೆ ಕಳೆದೆ. ಕೊಟ್ಟ ಮಾತು ಉಳಿಸಿಕೊಳ್ಳಲು ಭಾರತಕ್ಕೆ ಬಂದು ಭೋಜನಕೂಟದಲ್ಲಿ ಭಾಗವಹಿಸಿದ್ದಕ್ಕೆ ಜೇಮ್ಸ್ ಹಾಗೂ ಎಮಿಲಿಗೆ ಧನ್ಯವಾದ” ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: War 2: ಭರ್ಜರಿಯಾಗಿ ಬಾಲಿವುಡ್​ಗೆ ಎಂಟ್ರಿ ಕೊಡಲಿರುವ ಜೂ ಎನ್​ಟಿಆರ್, ಹೃತಿಕ್ ಜೊತೆ ಜುಗಲ್​ಬಂಧಿ

ಆರ್​ಆರ್​ಆರ್ ಸಿನಿಮಾ ಪ್ರಚಾರ ವೇಳೆಯಲ್ಲಿ ಜೂ ಎನ್​ಟಿಆರ್ ಹಾಗೂ ರಾಮ್ ಚರಣ್ ನಡುವಿನ ಗೆಳೆತನ ಬಹಳ ಚರ್ಚೆಯಾಗಿತ್ತು. ಆದರೆ ಸಿನಿಮಾ ಯಶಸ್ಸಿನ ಬಳಿಕ ಇಬ್ಬರ ಗೆಳೆತನದಲ್ಲಿ ಬಿರುಕು ಬಂದಿದೆ ಎನ್ನಲಾಗುತ್ತಿದೆ. ರಾಮ್ ಚರಣ್ ತಮ್ಮ ಹುಟ್ಟುಹಬ್ಬಕ್ಕೆ ಆಯೋಜಿಸಿದ್ದ ಪಾರ್ಟಿಯಲ್ಲಿ ರಾಮ್ ಚರಣ್ ಭಾಗವಹಿಸಿರಲಿಲ್ಲ. ಇದೀಗ ಜೂ ಎನ್​ಟಿಆರ್ ಆಯೋಜಿಸಿದ ಪಾರ್ಟಿಯಲ್ಲಿ ರಾಮ್ ಚರಣ್ ಭಾಗವಹಿಸಿಲ್ಲ ಇದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಏನೇ ಆಗಲಿ, ದಕ್ಷಿಣ ಭಾರತದ ನಟರು ಗಡಿಗಳನ್ನು ಅಳಿಸಿ ಹಾಲಿವುಡ್​ನತ್ತ ದೃಷ್ಟಿ ನೆಟ್ಟಿರುವುದು ಜೇಮ್ಸ್, ಜೂ ಎನ್​ಟಿಆರ್ ಮನೆಗೆ ಆಗಮಿಸಿದ್ದರಿಂದ ಖಾತ್ರಿಗೊಂಡಿದೆ. ನಟ ರಾಮ್ ಚರಣ್​ಗೆ ಈಗಾಗಲೆ ಹಾಲಿವುಡ್​ನಿಂದ ಆಫರ್​ ಒಂದು ಬಂದಿದೆ. ಅದನ್ನವರು ಖಚಿತಪಡಿಸಿದ್ದಾರೆ. ಇದೀಗ ಜೂ ಎನ್​ಟಿಆರ್ ಸಹ ಹಾರುವ ಮುನ್ಸೂಚನೆ ನೀಡಿದ್ದು, ಯಾವ ನಿರ್ಮಾಣ ಸಂಸ್ಥೆಯ ಸಿನಿಮಾದಲ್ಲಿ ಅವರು ನಟಿಸಲಿದ್ದಾರೆ ಎಂಬುದು ಕುತೂಹಲ ಕೆರಳಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ