AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾಯಿಗೆ ಹಾಕುವ ಆಹಾರವನ್ನು ಮೊಮ್ಮಕ್ಕಳಿಗೆ ತಿನಿಸಿದ ಖ್ಯಾತ ನಟ ಅರ್ನಾಲ್ಡ್​

ಒಂದು ಕಾಲದ ಬಹುಬೇಡಿಕೆಯ ಹಾಲಿವುಡ್​ ನಟ ಅರ್ನಾಲ್ಡ್​ ಶ್ವಾರ್ಜಿನೆಗ್ಗರ್​ ಅವರಿಗೆ ಈಗ 76 ವರ್ಷ ವಯಸ್ಸು. ಮನೆಯ ಸಾಕು ಪ್ರಾಣಿಗಳಿಗೆ ಪ್ರತಿದಿನ ಆಹಾರ ತಿನಿಸುವುದು ಅವರ ಜವಾಬ್ದಾರಿ. ಹಂದಿ, ನಾಯಿ ಮತ್ತು ಕುದರೆಗಳನ್ನು ಅವರು ಸಾಕಿದ್ದಾರೆ. ಆ ಪ್ರಾಣಿಗಳಿಗೆ ಹಾಕುವ ಆಹಾರವನ್ನು ಮೊಮ್ಮಕ್ಕಳಿಗೆ ತಾವು ತಿನಿಸಿದ್ದು ಹೇಗೆ ಎಂಬುದನ್ನು ಅವರು ತಿಳಿಸಿದ್ದಾರೆ. ಮಾಧ್ಯಮವೊಂದಕ್ಕೆ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಅರ್ನಾಲ್ಡ್​ ಅವರು ಈ ಬಗ್ಗೆ ಮಾತನಾಡಿದ್ದಾರೆ.

ನಾಯಿಗೆ ಹಾಕುವ ಆಹಾರವನ್ನು ಮೊಮ್ಮಕ್ಕಳಿಗೆ ತಿನಿಸಿದ ಖ್ಯಾತ ನಟ ಅರ್ನಾಲ್ಡ್​
ಅರ್ನಾಲ್ಡ್​ ಶ್ವಾರ್ಜಿನೆಗ್ಗರ್​
ಮದನ್​ ಕುಮಾರ್​
|

Updated on: Feb 02, 2024 | 3:48 PM

Share

ಹಾಲಿವುಡ್​ನ ಖ್ಯಾತ ನಟ (Hollywood Actor) ಅರ್ನಾಲ್ಡ್​ ಶ್ವಾರ್ಜಿನೆಗ್ಗರ್​ ಅವರು ಈಗ ಅಷ್ಟೇನೂ ಬ್ಯುಸಿ ಆಗಿಲ್ಲ. ಒಂದು ಕಾಲದಲ್ಲಿ ಬಹುಬೇಡಿಕೆಯ ನಟ ಆಗಿದ್ದ ಅವರು ಈಗ ಮನೆಯಲ್ಲಿ ಹಾಯಾಗಿ ಸಮಯ ಕಳೆಯುತ್ತಿದ್ದಾರೆ. ಮಕ್ಕಳು, ಮೊಮ್ಮಕ್ಕಳ ಜೊತೆ ಜೀವನ ಸಾಗಿಸುತ್ತಿದ್ದಾರೆ. ಅಲ್ಲದೇ, ಪ್ರಾಣಿಗಳ (Pets) ಬಗ್ಗೆಯೂ ಅವರು ಅಪಾರ ಕಾಳಜಿ ಹೊಂದಿದ್ದಾರೆ. ಮನೆಯಲ್ಲಿ ಕುದುರೆ, ನಾಯಿ ಹಾಗೂ ಹಂದಿಗಳನ್ನು ಸಾಕಿದ್ದಾರೆ. ಇತ್ತೀಚೆಗೆ ಅರ್ನಾಲ್ಡ್​ ಶ್ವಾರ್ಜಿನೆಗ್ಗರ್ (Arnold Schwarzenegger) ಅವರು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಒಂದು ಅಚ್ಚರಿಯ ವಿಚಾರ ಹಂಚಿಕೊಂಡಿದ್ದಾರೆ. ತಮ್ಮ ಮನೆಯಲ್ಲಿ ಪ್ರಾಣಿಗಳಿಗೆ ಹಾಕುವ ಆಹಾರವನ್ನೇ ಅವರು ಮೊಮ್ಮಕ್ಕಳಿಗೂ ತಿನಿಸಿದ್ದಾರೆ! ಅಷ್ಟಕ್ಕೂ ಅವರು ಆ ರೀತಿ ಮಾಡಿದ್ದು ಯಾಕೆ ಎಂಬುದನ್ನು ಸ್ವತಃ ವಿವರಿಸಿದ್ದಾರೆ.

ಅರ್ನಾಲ್ಡ್​ ಶ್ವಾರ್ಜಿನೆಗ್ಗರ್​ ಅವರಿಗೆ ಈಗ 76 ವರ್ಷ ವಯಸ್ಸು. ಮನೆಯಲ್ಲಿ ಸಾಕಿರುವ ಪ್ರಾಣಿಗಳಿಗೆ ಆಹಾರ ಹಾಕುವುದು ಅವರದ್ದೇ ಜವಾಬ್ದಾರಿ. ಪ್ರತಿ ದಿನ ಅವರು ಚಾಚೂ ತಪ್ಪದೇ ಆ ಕೆಲಸ ಮಾಡುತ್ತಾರೆ. ಪ್ರಾಣಿಗಳಿಗೆ ಹಾಕುವ ಆಹಾರವನ್ನು ಮೊಮ್ಮಕ್ಕಳಿಗೆ ತಿನಿಸಿದ್ದು ಹೇಗೆ ಎಂಬುದನ್ನು ಅವರು ತಿಳಿಸಿದ್ದಾರೆ. ಅರ್ನಾಲ್ಡ್​ ಶ್ವಾರ್ಜಿನೆಗ್ಗರ್​ ಸಾಕಿದ ಪ್ರಾಣಿಗಳನ್ನು ನೋಡಲು ಮೊಮ್ಮಕ್ಕಳು ವಾರಕ್ಕೊಮ್ಮೆ ಬರುತ್ತಾರೆ. ಆಗ ನಡೆದ ಘಟನೆ ಇದು.

ಇದನ್ನೂ ಓದಿ: ‘ಇನ್ಮುಂದೆ ಟರ್ಮಿನೇಟರ್​ ಪಾತ್ರ ಮಾಡಲ್ಲ’: ಫ್ಯಾನ್ಸ್​ಗೆ ಬೇಸರದ ಸುದ್ದಿ ನೀಡಿದ ಅರ್ನಾಲ್ಡ್​ ಶ್ವಾರ್ಚನೆಗರ್​

ತಾವು ಸಾಕಿರುವ ಕುದುರೆ, ಹಂದಿ ಮತ್ತು ನಾಯಿಗಳಿಗೆ ಓಟ್ಸ್​, ಬಾಳೆಹಣ್ಣು ಮತ್ತು ಜೇನುತುಪ್ಪದಿಂದ ತಯಾರಿಸಿದ ಆಹಾರವನ್ನು ಅರ್ನಾಲ್ಡ್​ ಶ್ವಾರ್ಜಿನೆಗ್ಗರ್​ ಅವರು ನೀಡುತ್ತಾರೆ. ‘ನಾನು ಪ್ರಾಣಿಗಳಿಗೆ ಆಹಾರ ತಿನಿಸುವಾಗ ನನ್ನ ಮೊಮ್ಮಕ್ಕಳು ಬಾಯಿ ತೆರೆದುಕೊಂಡು ನಿಂತಿದ್ದರು. ಇದನ್ನು ತಿನ್ನಬಹುದಾ ಎಂದು ಅವರು ಕೇಳಿದರು. ಬಳಿಕ ರುಚಿ ನೋಡಿದರು’ ಎಂದು ಅವರು ಅರ್ನಾಲ್ಡ್​ ಹೇಳಿದ್ದಾರೆ. ಅದು ಆರೋಗ್ಯಯುತವಾದ ಆಹಾರ ಆಗಿದ್ದರಿಂದ ಏನೂ ಸಮಸ್ಯೆ ಆಗಿಲ್ಲ.

ಇದನ್ನೂ ಓದಿ: ಕೈಗಡಿಯಾರದಿಂದಾಗಿ ವಿಮಾನ ನಿಲ್ದಾಣದಲ್ಲಿ ಇಕ್ಕಟ್ಟಿಗೆ ಸಿಲುಕಿದ ಅರ್ನಾಲ್ಡ್ ಷ್ವಾರ್ಸ್ನೆಗರ್

‘ಮೊದಲು ನಾವು ಈ ಆಹಾರ ಸಿದ್ಧಪಡಿಸಿದ್ದು ಕುದುರೆಗಳಿಗಾಗಿ. ನಂತರ ನಾಯಿಗಳಿಗೂ ಅದು ಇಷ್ಟ ಎಂಬುದು ಗೊತ್ತಾಯಿತು. ಬಳಿಕ ಹಂದಿಗಳಿಗೂ ಅದನ್ನೇ ತಿನಿಸಿದೆ’ ಎಂದು ಅರ್ನಾಲ್ಡ್​ ಹೇಳಿದ್ದಾರೆ. ಆರಂಭದ ದಿಗಳಲ್ಲಿ ಬಾಡಿ ಬಿಲ್ಡರ್​ ಆಗಿದ್ದ ಅವರಿಗೆ ಹಾಲಿವುಡ್​ ಸಿನಿಮಾಗಳಲ್ಲಿ ಅವಕಾಶ ಸಿಕ್ಕಿತ್ತು. ‘ಟರ್ಮಿನೇಟರ್​’, ‘ಟ್ರು ಲೈಸ್​’ ಮುಂತಾದ ಸಿನಿಮಾಗಳ ಮೂಲಕ ಫೇಮಸ್​ ಆದರು. ರಾಜಕೀಯಕ್ಕೂ ಕಾಲಿಟ್ಟು ಕ್ಯಾಲಿಫೋರ್ನಿಯದ ಮೇಯರ್​ ಆಗಿ ಸೇವೆ ಸಲ್ಲಿಸಿದರು. ಅವರಿಗೆ ವಿಶ್ವಾದ್ಯಂತ ಅಭಿಮಾನಿಗಳು ಇದ್ದಾರೆ. ಅವರ ಸಿನಿಮಾಗಳು ಈಗಲೂ ಪ್ರೇಕ್ಷಕರ ಫೇವರಿಟ್​ ಲಿಸ್ಟ್​ನಲ್ಲಿ ಇವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ