ವಿಶ್ವದ ಅತ್ಯಂತ ದುಬಾರಿ ಸಿನಿಮಾ ಇದು, ಬಜೆಟ್ ಎಷ್ಟು ಗೊತ್ತೆ?
Avengers: Doomsday: ಸಿನಿಮಾದ ಬಜೆಟ್ಗಳು ಎಲ್ಲೆಡೆ ಏರಿಕೆ ಆಗುತ್ತಿವೆ. ಸಿನಿಮಾದ ಮಾರುಕಟ್ಟೆ ವಿಸ್ತರಣೆ ಆದಂತೆ ಸಿನಿಮಾಗಳ ಮೇಲೆ ಹೂಡಲಾಗುತ್ತಿರುವ ಬಜೆಟ್ನಲ್ಲೂ ಏರಿಕೆ ಆಗುತ್ತಿದೆ. ಭಾರತದಲ್ಲಿಯೇ ಸಿನಿಮಾದ ಮೇಲೆ 500 ರಿಂದ 700 ಕೋಟಿ ವರೆಗೆ ಬಜೆಟ್ ಹಾಕಲಾಗುತ್ತಿದೆ. ಇದೀಗ ಹಾಲಿವುಡ್ನಲ್ಲಿ ವಿಶ್ವದ ಅತ್ಯಂತ ದುಬಾರಿ ಸಿನಿಮಾ ನಿರ್ಮಿಸಲಾಗುತ್ತಿದ್ದು, ಸಿನಿಮಾದ ಬಜೆಟ್ ಎಷ್ಟು ಗೊತ್ತೆ?

ಸಿನಿಮಾ ನಿರ್ಮಾಣಕ್ಕೆ ಹಣವನ್ನು ನೀರಿನಂತೆ ಖರ್ಚು ಮಾಡಲಾಗುತ್ತಿದೆ. ಭಾರತದಲ್ಲಿಯೇ ಸಿನಿಮಾಗಳ ಮೇಳೆ 500 ಕೋಟಿ, 700 ಕೋಟಿ ಬಜೆಟ್ಗಳನ್ನು ಹಾಕಲಾಗುತ್ತದೆ. ಭಾರತದಲ್ಲಿ ಮಾತ್ರವಲ್ಲ ವಿಶ್ವದಾದ್ಯಂತ ಸಿನಿಮಾಗಳ ಬಜೆಟ್ ಹೆಚ್ಚಳವಾಗಿದೆ. ಹಾಲಿವುಡ್ನಲ್ಲಂತೂ ಮೊದಲಿನಿಂದಲೂ ಸಿನಿಮಾಗಳ ಮೇಲೆ ದೊಡ್ಡ ಬಜೆಟ್ ಹಾಕಲಾಗುತ್ತಿದೆ. ಇದೀಗ ವಿಶ್ವದ ಅತ್ಯಂತ ದುಬಾರಿ ಸಿನಿಮಾ ನಿರ್ಮಾಣ ಮಾಡುತ್ತಿದೆ ಹಾಲಿವುಡ್ನ ನಿರ್ಮಾಣ ಸಂಸ್ಥೆ ಮಾರ್ವೆಲ್.
ಮಾರ್ವೆಲ್ ಮೊದಲಿನಿಂದಲೂ ತಮ್ಮ ಅದ್ಧೂರಿ ಮತ್ತು ಫ್ಯೂಚರಿಸ್ಟಿಕ್ ಸಿನಿಮಾಗಳ ನಿರ್ಮಾಣಕ್ಕೆ ಜನಪ್ರಿಯ. ಇದೀಗ ಈ ಹಿಂದೆ ಯಾರೂ ಸಹ ಖರ್ಚು ಮಾಡದಷ್ಟು ಹಣ ಖರ್ಚು ಮಾಡಿ ಸಿನಿಮಾ ನಿರ್ಮಾಣ ಮಾಡಲು ಮುಂದಾಗಿದೆ. ಮಾರ್ವೆಲ್ನ ಬಲು ಜನಪ್ರಿಯ ಸಿನಿಮಾ ಸರಣಿ ‘ಅವೇಂಜರ್ಸ್’ನ ಹೊಸ ಸಿನಿಮಾ ‘ಅವೇಂಜರ್ಸ್: ಡೂಮ್ಸ್ಡೇ’ ಸಿನಿಮಾ ವಿಶ್ವದ ಅತಿ ದೊಡ್ಡ ಬಜೆಟ್ನ ಸಿನಿಮಾ ಆಗಲಿದೆ.
‘ಅವೇಂಜರ್ಸ್: ಡೂಮ್ಸ್ಡೇ’ ಸಿನಿಮಾದ ಘೋಷಣೆ ಕೆಲ ವಾರಗಳ ಹಿಂದಷ್ಟೆ ಮಾರ್ವೆಲ್ ಮಾಡಿದೆ. ಈ ಸಿನಿಮಾನಲ್ಲಿ ಭಾರಿ ದೊಡ್ಡ ತಾರಾಗಣ ಇರಲಿದೆ. ಸಿನಿಮಾದಲ್ಲಿ ನಟಿಸಲಿರುವ ನಟ-ನಟಿಯರ ಸಂಬಳವೇ 2150 ಕೋಟಿ ರೂಪಾಯಿಗಳು ಆಗಲಿದೆಯಂತೆ. ಸಿನಿಮಾದ ಪ್ರಿ ಪ್ರೊಡಕ್ಷನ್ಗೆ ಸುಮಾರು ನೂರು ಕೋಟಿ ರೂಪಾಯಿ ಖರ್ಚಾಗಲಿದೆ. ಸಿನಿಮಾದ ನಿರ್ಮಾಣಕ್ಕೆ ಸುಮಾರು 700 ಮಿಲಿಯನ್ ಡಾಲರ್, ಅಂದರೆ 6 ಸಾವಿರ ಕೋಟಿ, ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಮತ್ತು ಪ್ರಚಾರಕ್ಕೆ 800 ಕೋಟಿ ರೂಪಾಯಿಗಳು ಖರ್ಚಾಗಲಿದೆ.
ಇದನ್ನೂ ಓದಿ:ಹಾಲಿವುಡ್ನಲ್ಲಿ ಸೆಟಲ್ ಆಗುವ ಪ್ರಯತ್ನದಲ್ಲಿ ನಟಿ ನೋರಾ ಫತೇಹಿ
ಅಲ್ಲಿಗೆ ಒಟ್ಟು ಸುಮಾರು 1 ಬಿಲಿಯನ್ ಡಾಲರ್ ಹಣವನ್ನು ಸಿನಿಮಾಕ್ಕಾಗಿ ಖರ್ಚು ಮಾಡಲಾಗುತ್ತಿದೆ. ಭಾರತದ ರೂಪಾಯಿ ಲೆಕ್ಕದಲ್ಲಿ ಸುಮಾರು ಒಂಬತ್ತು ಸಾವಿರ ಕೋಟಿ ರೂಪಾಯಿ ಹಣವನ್ನು ಈ ಸಿನಿಮಾಕ್ಕಾಗಿ ಖರ್ಚು ಮಾಡಲಾಗುತ್ತಿದೆ. ಈ ಮೊದಲು ‘ಸ್ಟಾರ್ ವಾರ್ಸ್’ (2015) ವಿಶ್ವದ ಅತ್ಯಂತ ದುಬಾರಿ ಬಜೆಟ್ನ ಸಿನಿಮಾ ಆಗಿತ್ತು. ಆದರೆ ‘ಅವೇಂಜರ್ಸ್: ಡೂಮ್ಸ್ಡೇ’ ಸಿನಿಮಾ ಆ ಸಿನಿಮಾದ ದುಪ್ಪಟ್ಟು ಹಣವನ್ನು ಖರ್ಚು ಮಾಡುತ್ತಿದೆ.
‘ಅವೇಂಜರ್ಸ್: ಡೂಮ್ಸ್ಡೇ’ ಸಿನಿಮಾನಲ್ಲಿ ಖ್ಯಾತ ಹಾಲಿವುಡ್ ನಟ ರಾಬರ್ಟ್ ಡೌನಿ ಜೂನಿಯರ್ ವಿಲನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸಿನಿಮಾನಲ್ಲಿ ಕ್ರಿಸ್ ಇವಾನ್ಸ್, ಕ್ರಿಸ್ ಹ್ಯಾಮ್ಸ್ವರ್ತ್, ಪೆಡ್ರೊ ಪ್ಯಾಸ್ಕಲ್, ಟಾಮ್ ಹಿಡಲ್ಸ್ಟನ್, ವಾನೆಸ್ಸಾ, ಫ್ಲಾರೆನ್ಸ್ ಇನ್ನೂ ಹಲವಾರು ಮಂದಿ ಟಾಪ್ ತಾರೆಯರು ನಟಿಸುತ್ತಿದ್ದಾರೆ. ಇದೇ ಕಾರಣಕ್ಕೆ ಸಿನಿಮಾದ ಬಜೆಟ್ ಗಗನಕ್ಕೇರಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




