Golden Globes 2024: 81ನೇ ಸಾಲಿನ ‘ಗೋಲ್ಡನ್ ಗ್ಲೋಬ್ಸ್’ ಅವಾರ್ಡ್; ಇಲ್ಲಿದೆ ವಿಜೇತರ ಪಟ್ಟಿ
ಕಳೆದ ವರ್ಷ ಭಾರತೀಯರ ಪಾಲಿಗೆ ‘ಗೋಲ್ಡನ್ ಗ್ಲೋಬ್ಸ್’ ಅವಾರ್ಡ್ ವಿಶೇಷ ಎನಿಸಿಕೊಂಡಿತ್ತು. ‘ಆರ್ಆರ್ಆರ್’ ಸಿನಿಮಾ ಕೂಡ ಕೆಲವು ವಿಭಾಗಗಳಲ್ಲಿ ನಾಮಿನೇಟ್ ಆಗಿ ಅವಾರ್ಡ್ ಪಡೆದಿತ್ತು.
81ನೇ ಸಾಲಿನ ಗೋಲ್ಡನ್ ಗ್ಲೋಬ್ಸ್ ಅವಾರ್ಡ್ (Golden Globes Awards) ಕಾರ್ಯಕ್ರಮ ಭಾನುವಾರ ಸಂಜೆ (ಭಾರತೀಯ ಕಾಲಮಾನದಲ್ಲಿ ಸೋಮವಾರ ಬೆಳಿಗ್ಗೆ) ನಡೆಯುತ್ತಿದೆ. ಅಮೆರಿಕದ ಲಾಸ್ ಏಂಜಲೀಸ್ನಲ್ಲಿ ಈ ಅವಾರ್ಡ್ ಫಂಕ್ಷನ್ ನಡೆಯುತ್ತಿದೆ. ‘ಬಾರ್ಬಿ’ ಸಿನಿಮಾ 9 ವಿಭಾಗಗಳಲ್ಲಿ ನಾಮಿನೇಟ್ ಆಗಿತ್ತು. ‘ಆಪನ್ಹೈಮರ್’ ಸಿನಿಮಾ 8 ವಿಭಾಗಗಳಲ್ಲಿ ನಾಮ ನಿರ್ದೇಶನಗೊಂಡಿತ್ತು. ಎರಡೂ ಸಿನಿಮಾಗಳು ಹಲವು ಪ್ರಶಸ್ತಿ ಗೆದ್ದಿವೆ. ಎರಡೂ ಚಿತ್ರಗಳು ಒಟ್ಟಿಗೆ ರಿಲೀಸ್ ಆಗಿ ಸದ್ದು ಮಾಡಿದ್ದವು.
ಕ್ರಿಸ್ಟೋಫರ್ ನೋಲನ್ ನಿರ್ದೇಶನದ ‘ಆಪನ್ಹೈಮರ್’ ಸಿನಿಮಾ ಕಳೆದ ವರ್ಷ ರಿಲೀಸ್ ಆಗಿ ಮೆಚ್ಚುಗೆ ಪಡೆಯಿತು. ಈ ಚಿತ್ರದ ನಿರ್ದೇಶನಕ್ಕಾಗಿ ಕ್ರಿಸ್ಟೋಫರ್ ನೋಲನ್ ಅವರಿಗೆ ‘ಅತ್ಯುತ್ತಮ ನಿರ್ದೇಶಕ’ ಪ್ರಶಸ್ತಿ ಸಿಕ್ಕಿದೆ. ‘ಅತ್ಯುತ್ತಮ ಸಿನಿಮ್ಯಾಟಿಕ್ ಹಾಗೂ ಬಾಕ್ಸ್ ಆಫೀಸ್ ಅಚೀವ್ಮೆಂಟ್’ ಅವಾರ್ಡ್ ‘ಬಾರ್ಬಿ’ ಪಡೆದಿದೆ. ಈ ರೇಸ್ನಲ್ಲಿ ‘ಆಪನ್ಹೈಮರ್’ ಸಿನಿಮಾ ಕೂಡ ಇತ್ತು.
‘ಅತ್ಯುತ್ತಮ ಸಿನಿಮಾ’ (ಆಂಗ್ಲೇತರ ಭಾಷೆ) ಪ್ರಶಸ್ತಿ ಫ್ರಾನ್ಸ್ನ ‘ಆ್ಯನಟಮಿ ಆಫ್ ಫಾಲ್’ ಚಿತ್ರಕ್ಕೆ ಸಿಕ್ಕಿದೆ. ಅತ್ಯುತ್ತಮ ಮೋಷನ್ ಸಿನಿಮಾ ಅವಾರ್ಡ್ (ಡ್ರಾಮಾ) ‘ಆಪನ್ಹೈಮರ್’ ಚಿತ್ರಕ್ಕೆ ಸಿಕ್ಕಿದೆ. ಅತ್ಯುತ್ತಮ ಪರ್ಫಾರ್ಮೆನ್ಸ್ ಅವಾರ್ಡ್ ಕಿಲಿಯನ್ ಮರ್ಫಿಗೆ ಸಿಕ್ಕಿದೆ. ಅವರು ಆಪನ್ಹೈಮರ್ ಪಾತ್ರದಲ್ಲಿ ನಟಿಸಿ ಗಮನ ಸೆಳೆದಿದ್ದಾರೆ. ಸಿನಿಮಾ ಮಾತ್ರವಲ್ಲದೆ ಟಿವಿ ಸೀರಿಸ್ಗಳಿಗೂ ಇಲ್ಲಿ ಅವಾರ್ಡ್ ನೀಡಲಾಗಿದೆ.
Best Picture – Drama goes to Oppenheimer! 🎥✨ #GoldenGlobes pic.twitter.com/grh3FBzYso
— Golden Globe Awards (@goldenglobes) January 8, 2024
Mark Hamill is here to present the 👏 FIRST EVER 👏 #GoldenGlobes Cinematic and Box Office Achievement award! pic.twitter.com/0YFEsp46ge
— Golden Globe Awards (@goldenglobes) January 8, 2024
ಇದನ್ನೂ ಓದಿ: ‘ಗೋಲ್ಡನ್ ಗ್ಲೋಬ್’: ವೃತ್ತಿಜೀವನದ ಆರಂಭದಲ್ಲಿ ಚಾನ್ಸ್ ನೀಡಿದ ಅರ್ಜುನ್ ಸರ್ಜಾಗೆ ಕೀರವಾಣಿ ಧನ್ಯವಾದ
ಕಳೆದ ವರ್ಷ ಭಾರತೀಯರ ಪಾಲಿಗೆ ‘ಗೋಲ್ಡನ್ ಗ್ಲೋಬ್ಸ್’ ಅವಾರ್ಡ್ ವಿಶೇಷ ಎನಿಸಿಕೊಂಡಿತ್ತು. ‘ಆರ್ಆರ್ಆರ್’ ಸಿನಿಮಾ ಕೂಡ ಕೆಲವು ವಿಭಾಗಗಳಲ್ಲಿ ನಾಮಿನೇಟ್ ಆಗಿ ಅವಾರ್ಡ್ ಪಡೆದಿತ್ತು. ಇದನ್ನು ತಂಡ ಸಂಭ್ರಮಿಸಿತ್ತು. ಈ ವರ್ಷ ಭಾರತದ ಯಾವುದೇ ಸಿನಿಮಾಗಳು ನಾಮಿನೇಟ್ ಆಗಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ