AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಖ್ಯಾತ ಹಾಲಿವುಡ್​ ನಿರ್ದೇಶಕ ಪೀಟರ್​ ಬಾಗ್ಡಾನವಿಚ್​ ನಿಧನ; ಕಂಬನಿ ಮಿಡಿದ ಸಿನಿಮಾ ಜಗತ್ತು

Peter Bogdanovich Death: ಪೀಟರ್​ ಬಾಗ್ಡಾನವಿಚ್ ನಿಧನಕ್ಕೆ ವಿಶ್ವಾದ್ಯಂತ ಸಿನಿಮಾ ಜಗತ್ತಿನ ಅನೇಕರು ಸಂತಾಪ ಸೂಚಿಸಿದ್ದಾರೆ. ದಿಗ್ಗಜ ನಿರ್ದೇಶಕನ ಅಗಲಿಕೆಗೆ ಎಲ್ಲರೂ ಕಂಬನಿ ಮಿಡಿಯುತ್ತಿದ್ದಾರೆ.

ಖ್ಯಾತ ಹಾಲಿವುಡ್​ ನಿರ್ದೇಶಕ ಪೀಟರ್​ ಬಾಗ್ಡಾನವಿಚ್​ ನಿಧನ; ಕಂಬನಿ ಮಿಡಿದ ಸಿನಿಮಾ ಜಗತ್ತು
ಪೀಟರ್​ ಬಾಗ್ಡಾನವಿಚ್
TV9 Web
| Edited By: |

Updated on:Jan 07, 2022 | 11:07 AM

Share

2022ರ ಆರಂಭದಲ್ಲೇ ಸಿನಿಮಾ ಜಗತ್ತಿಗೆ ಕಹಿ ಸುದ್ದಿ ಕೇಳಿಬಂದಿದೆ. ಆಸ್ಕರ್​ ಪ್ರಶಸ್ತಿ ಪುರಸ್ಕೃತ ಲೆಜೆಂಡರಿ ನಿರ್ದೇಶಕ ಪೀಟರ್​ ಬಾಗ್ಡಾನವಿಚ್ (Peter Bogdanovich) ಅವರು ನಿಧನರಾಗಿದ್ದಾರೆ. ಗುರುವಾರ (ಜ.6) ಇಹಲೋಕ ತ್ಯಜಿಸಿದ ಅವರಿಗೆ 82 ವರ್ಷ ವಯಸ್ಸಾಗಿತ್ತು. ಹಲವಾರು ಜನಪ್ರಿಯ ಹಾಲಿವುಡ್​ ಸಿನಿಮಾಗಳಿಗೆ (Hollywood Movies) ನಿರ್ದೇಶನ ಮಾಡಿದ್ದ ಪೀಟರ್​ ಬಾಗ್ಡಾನವಿಚ್ ಅವರು ವಿಶ್ವಾದ್ಯಂತ ಅಭಿಮಾನಿಗಳನ್ನು ಹೊಂದಿದ್ದರು. ಅನೇಕ ನಿರ್ದೇಶಕರಿಗೆ ಅವರು ಸ್ಫೂರ್ತಿ ಆಗಿದ್ದರು. ಸಿನಿಮಾ ನಿರ್ದೇಶಕ ಆಗುವುದಕ್ಕೂ ಮುನ್ನ ಅವರು ವಿಮರ್ಶಕನಾಗಿ ಫೇಮಸ್​ ಆಗಿದ್ದರು. ಗೋಲ್ಡನ್​ ಗ್ಲೋಬ್​, ಆಸ್ಕರ್​, ಗ್ರ್ಯಾಮಿ ಅವಾರ್ಡ್​ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ಅವರು ಪಡೆದುಕೊಂಡಿದ್ದರು.

ಪೀಟರ್​ ಬಾಗ್ಡಾನವಿಚ್ ನಿಧನಕ್ಕೆ ವಿಶ್ವಾದ್ಯಂತ ಸಿನಿಮಾ ಜಗತ್ತಿನ ಅನೇಕರು ಸಂತಾಪ ಸೂಚಿಸಿದ್ದಾರೆ. ದಿಗ್ಗಜ ನಿರ್ದೇಶಕನ ಅಗಲಿಕೆಗೆ ಎಲ್ಲರೂ ಕಂಬನಿ ಮಿಡಿಯುತ್ತಿದ್ದಾರೆ. ಮೊದಲು ವಿಮರ್ಶಕನಾಗಿದ್ದ ಪೀಟರ್​ ಬಾಗ್ಡಾನವಿಚ್ ಅವರು ಸಿನಿಮಾ ನಿರ್ದೇಶನದಲ್ಲಿ ಆಸಕ್ತಿ ಬೆಳೆಸಿಕೊಂಡ ಬಳಿಕ ಹಾಲಿವುಡ್​ಗೆ ಕಾಲಿಟ್ಟರು. 1968ರಲ್ಲಿ ಅವರು ನಿರ್ದೇಶಕನಾಗಿ ಕೆಲಸ ಆರಂಭಿಸಿದರು. 1971ರಲ್ಲಿ ಅವರು ನಿರ್ದೇಶಿಸಿದ ‘ದಿ ಲಾಸ್ಟ್​ ಪಿಕ್ಚರ್​ ಶೋ’ ಸಿನಿಮಾ ಸೂಪರ್​ ಹಿಟ್​ ಆಗಿತ್ತು. 8 ವಿಭಾಗಳಲ್ಲಿ ಆಸ್ಕರ್​ ಪ್ರಶಸ್ತಿಗೆ ಆ ಚಿತ್ರ ನಾಮಿನೇಟ್​ ಆಗಿತ್ತು.

ನಟನಾಗಿಯೂ ಪೀಟರ್​ ಬಾಗ್ಡಾನವಿಚ್ ಫೇಮಸ್​ ಆಗಿದ್ದರು. ಅನೇಕ ಸಾಕ್ಷ್ಯಚಿತ್ರಗಳನ್ನೂ ಅವರು ನಿರ್ದೇಶಿಸಿದ್ದರು. ಸಿನಿಮಾ ಸಂಬಂಧಿತ ಹಲವು ಕೃತಿಗಳನ್ನು ಕೂಡ ಅವರ ರಚಿಸಿದ್ದರು. ಪೀಟರ್​ ಬಾಗ್ಡಾನವಿಚ್ ಕೆಲಸಗಳು ವಿಶ್ವದ ಅನೇಕ ನಿರ್ದೇಶಕರ ಮೇಲೆ ಪ್ರಭಾವ ಬೀರಿವೆ.

ಪೀಟರ್​ ಬಾಗ್ಡಾನವಿಚ್ ನಿರ್ದೇಶನದ ಪ್ರಮುಖ ಸಿನಿಮಾಗಳು: ದಿ ಲಾಸ್ಟ್​ ಪಿಕ್ಚರ್​ ಶೋ -1971 ವಾಟ್ಸಪ್​ ಡಾಕ್​ – 1972 ಪೇಪರ್​ ಮೂನ್ – 1973 ಸೇಂಟ್​ ಜಾಕ್​ – 1979 ದೇ ಆಲ್​ ಲಾಫ್ಡ್​​ – 1981 ಮಾಸ್ಕ್​ – 1985 ಮುಂತಾದವು

ಇದನ್ನೂ ಓದಿ:

ಸಾವಿರಾರು ಗೀತೆ ಹಾಡಿದ್ದ ಖ್ಯಾತ ಗಾಯಕ ಮಾಣಿಕ ವಿನಾಯಗಂ ನಿಧನ; ಕಂಬನಿ ಮಿಡಿದ ಚಿತ್ರರಂಗ

ಹಾಲಿವುಡ್​ ಆಫರ್​ ಬಗ್ಗೆ ಅಚ್ಚರಿಯ ಪ್ರತಿಕ್ರಿಯೆ ನೀಡಿದ ‘ಆರ್​ಆರ್​ಆರ್​’ ನಿರ್ದೇಶಕ ರಾಜಮೌಳಿ

Published On - 10:40 am, Fri, 7 January 22

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್