ಇನ್​ಸ್ಟಾಗ್ರಾಮ್​ನಲ್ಲಿ ಲೀಕ್​ ಆಯ್ತಾ ಪ್ರಿಯಾಂಕಾ ಮಗುವಿನ ಫೋಟೋ? ಇಲ್ಲಿದೆ ಅಸಲಿ ವಿಚಾರ

ಇನ್​ಸ್ಟಾಗ್ರಾಮ್​ನಲ್ಲಿ ಲೀಕ್​ ಆಯ್ತಾ ಪ್ರಿಯಾಂಕಾ ಮಗುವಿನ ಫೋಟೋ? ಇಲ್ಲಿದೆ ಅಸಲಿ ವಿಚಾರ
ಪ್ರಿಯಾಂಕಾ

ಪ್ರಿಯಾಂಕಾ ಚೋಪ್ರಾ-ನಿಕ್​ ಜೋನಸ್​ ಮಗುವಿನ ವಿಚಾರದಲ್ಲೂ ಹಾಗೆಯೇ ಆಗಿದೆ. ಆರೂವರೆ ತಿಂಗಳಿಗೆ ಈ ಮಗು ಜನಿಸಿದೆ ಎಂದು ‘ಡೈಲಿ ಮೇಲ್​’ ವರದಿ ಮಾಡಿತ್ತು. ಹೀಗಿರುವಾಗಲೇ ಮಗುವಿನ ಫೋಟೋ ವೈರಲ್​ ಆಗಿದೆ.

TV9kannada Web Team

| Edited By: Rajesh Duggumane

Jan 24, 2022 | 9:29 PM

ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಹಾಗೂ ಅಮೆರಿಕದ ಪಾಪ್​ ಸಿಂಗರ್​​ ನಿಕ್​ ಜೋನಸ್ (Nick Jonas)​ ಅವರು ಇತ್ತೀಚೆಗೆ ಬಾಡಿಗೆ ತಾಯಿ ಮೂಲಕ ಮಗು ಪಡೆದಿದ್ದಾರೆ. ಆದರೆ, ಅವರು ಎಲ್ಲಿಯೂ ಮಗುವಿನ ಮುಖವನ್ನು ರಿವೀಲ್​ ಮಾಡಿಲ್ಲ. ಹುಟ್ಟಿರುವ ಮಗು ಗಂಡೋ ಅಥವಾ ಹೆಣ್ಣೋ ಎಂಬುದನ್ನು ಕೂಡ ಹೇಳಿಲ್ಲ. ಈ ವಿಚಾರದ ಬಗ್ಗೆ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಮೂಡಿದೆ. ಹೀಗಿರುವಾಗಲೇ ಸೋಶಿಯಲ್​ ಮೀಡಿಯಾದಲ್ಲಿ ನಿಕ್​ ಹಾಗೂ ಪ್ರಿಯಾಂಕಾ ಚೋಪ್ರಾ ಮಗುವನ್ನು ಹಿಡಿದುಕೊಂಡಿರುವ ಫೋಟೋ ಒಂದು ವೈರಲ್​​ ಆಗಿದೆ. ಇದನ್ನು ನೋಡಿದ ಅಭಿಮಾನಿಗಳು ಸಂತಸಗೊಂಡಿದ್ದಾರೆ. ಈ ಫೋಟೋವನ್ನು ದೊಡ್ಡ ಮಟ್ಟದಲ್ಲಿ ಶೇರ್​ ಮಾಡಲಾಗುತ್ತಿದೆ. ಆದರೆ, ಈ ಫೋಟೋದ ಅಸಲಿಯತ್ತು ಏನು ಎಂಬುದು ಈಗ ಗೊತ್ತಾಗಿದೆ. ಅಸಲಿಗೆ ಇದು ಪ್ರಿಯಾಂಕಾ ಅವರ ಮಗು ಅಲ್ಲವೇ ಅಲ್ಲ.

ಮಗು ಜನಿಸಿದೆ ಎಂಬ ವಿಷಯವನ್ನು ಸೋಶಿಯಲ್ ಮೀಡಿಯಾ ಮೂಲಕ ಹಂಚಿಕೊಂಡ ಪ್ರಿಯಾಂಕಾ-ನಿಕ್​ ದಂಪತಿಯು ಮಗುವಿನ ಫೋಟೋ ತೋರಿಸಿಲ್ಲ. ‘ಬಾಡಿಗೆ ತಾಯಿ ಮೂಲಕ ನಾವು ಮಗು ಪಡೆದಿದ್ದೇವೆ ಎಂಬುದನ್ನು ತಿಳಿಸಲು ತುಂಬ ಖುಷಿ ಆಗುತ್ತಿದೆ. ಕುಟುಂಬದ ಕಡೆಗೆ ಹೆಚ್ಚು ಗಮನ ಹರಿಸಬೇಕಾಗಿರುವ ಈ ವಿಶೇಷ ಸಂದರ್ಭದಲ್ಲಿ ನಮ್ಮ ಖಾಸಗಿತನವನ್ನು ಗೌರವಿಸಿ ಅಂತ ಕೇಳಿಕೊಳ್ಳುತ್ತೇನೆ’ ಎಂದು ಪ್ರಿಯಾಂಕಾ ಚೋಪ್ರಾ ಮತ್ತು ನಿಕ್​ ಜೋನಸ್ ಪೋಸ್ಟ್​ ಮಾಡಿದ್ದರು.

ಇದಾದ ಬಳಿಕ ಅವರ ಮಗುವಿನ ಬಗ್ಗೆ ಸಾಕಷ್ಟು ಅನುಮಾನ ಮೂಡಿತ್ತು. 9 ತಿಂಗಳಿಗೆ ಮಗು ಜನಿಸುವುದು ಸಹಜ. ಅಪರೂಪದ ಪ್ರಕರಣಗಳಲ್ಲಿ ಈ ಅವಧಿಗೂ ಮುನ್ನವೇ ಮಗು ಜನಿಸುತ್ತವೆ. ಪ್ರಿಯಾಂಕಾ ಚೋಪ್ರಾ-ನಿಕ್​ ಜೋನಸ್​ ಮಗುವಿನ ವಿಚಾರದಲ್ಲೂ ಹಾಗೆಯೇ ಆಗಿದೆ. ಆರೂವರೆ ತಿಂಗಳಿಗೆ ಈ ಮಗು ಜನಿಸಿದೆ ಎಂದು ‘ಡೈಲಿ ಮೇಲ್​’ ವರದಿ ಮಾಡಿತ್ತು. ಹೀಗಿರುವಾಗಲೇ ಮಗುವಿನ ಫೋಟೋ ವೈರಲ್​ ಆಗಿದೆ.

View this post on Instagram

A post shared by Priyanka (@priyankachopra)

ಈಗ ವೈರಲ್​ ಆಗುತ್ತಿರುವ ಚಿತ್ರ ಪ್ರಿಯಾಂಕಾ-ನಿಕ್​ ದಂಪತಿ ಅವರದ್ದಲ್ಲ. ಇದು ಪ್ರಿಯಾಂಕಾ ಸೊಸೆ ಕೃಷ್ಣಾ ಸ್ಕೈ ಸರ್ಕಿಷಿಯನ್ ಅವಳದ್ದು. ಪ್ರಿಯಾಂಕಾ ಕಸಿನ್​ ದಿವ್ಯಾ ಜ್ಯೋತಿ ಅವರ ಮಗಳು. ಇದೇ ಫೋಟೋ ಈಗ ಎಲ್ಲ ಕಡೆಗಳಲ್ಲಿ ಷೇರ್​ ಆಗುತ್ತಿದೆ. ಕೆಲ ಅಭಿಮಾನಿಗಳು ಇದು ಪ್ರಿಯಾಂಕಾ ಮಗುವಿನ ಫೋಟೋ ಅಲ್ಲ ಎಂದು ಮನದಟ್ಟು ಮಾಡಿಕೊಡುವ ಪ್ರಯತ್ನ ಮಾಡುತ್ತಿದ್ದಾರೆ.

ನಿಕ್​ ಕಾಲೆಳೆದಿದ್ದ ಪ್ರಿಯಾಂಕಾ..

‘ಜೋನಸ್​ ಬ್ರದರ್ಸ್​ ಫ್ಯಾಮಿಲಿ ರೋಸ್ಟ್​’ ಕಾರ್ಯಕ್ರಮ ನೆಟ್​ಫ್ಲಿಕ್ಸ್​​ನಲ್ಲಿ ನವೆಂಬರ್​ ತಿಂಗಳಲ್ಲಿ ಪ್ರಸಾರವಾಗಿತ್ತು. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪ್ರಿಯಾಂಕಾ ಚೋಪ್ರಾ ಅವರು ನಿಕ್​ ಅವರನ್ನು ಹಿಗ್ಗಾಮುಗ್ಗಾ ಟ್ರೋಲ್​ ಮಾಡಿದ್ದರು. ನಿಕ್​ ಇನ್ನೂ ಚಿಕ್ಕ ಹುಡುಗ ಎಂಬರ್ಥದಲ್ಲಿ ಮಾತನಾಡಿದ್ದರು. ಈ ವೇಳೆ ಅವರು ಮಗುವಿನ ನಿರೀಕ್ಷೆಯಲ್ಲಿರುವ ವಿಚಾರ ಮಾತನಾಡಿದ್ದರು.

‘ಜೋನಸ್​ ಕುಟುಂಬದಲ್ಲಿ ನಾನು ಮತ್ತು ನಿಕ್ ಇಬ್ಬರೇ ಮಗು ಇಲ್ಲದೆ ಇರುವವರು. ಈಗ ನಾನು ಮತ್ತು ನಿಕ್​..’ ಎಂದು ಹೇಳಿದ್ದ ಪ್ರಿಯಾಂಕಾ ಬೇರೆ ವಿಚಾರ ಮಾತನಾಡಿದ್ದರು. ‘ನಾನು ಮತ್ತು ನಿಕ್​ ಮಗುವಿನ ನಿರೀಕ್ಷೆಯಲ್ಲಿದ್ದೇವೆ’ ಎಂದು ಪ್ರಿಯಾಂಕಾ ಹೇಳುತ್ತಾರೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಈ ವಿಚಾರದಲ್ಲಿ ಅವರು ಜೋಕ್​ ಮಾಡಿದ್ದರು. ಆಗ ಅವರು ಹೇಳಲು ಹೊರಟಿದ್ದ ವಿಚಾರ ಏನು ಎಂಬುದು ಈಗ ಗೊತ್ತಾಗಿದೆ ಎಂದು ಎಲ್ಲರೂ ಹೇಳುತ್ತಿದ್ದಾರೆ.

ಇದನ್ನೂ ಓದಿ: Priyanka Chopra: ಬಾಡಿಗೆ ತಾಯಿ ಮೂಲಕ ಮಗು ಪಡೆದ ಪ್ರಿಯಾಂಕಾ ಚೋಪ್ರಾ-ನಿಕ್​ ಜೋನಸ್

ಆರೂವರೆ ತಿಂಗಳಿಗೆ ಜನಿಸಿತಾ ಪ್ರಿಯಾಂಕಾ ಚೋಪ್ರಾ ಮಗು? ಹಲವು ಸತ್ಯಗಳನ್ನು ಮುಚ್ಚಿಟ್ಟ ನಟಿ

Follow us on

Related Stories

Most Read Stories

Click on your DTH Provider to Add TV9 Kannada