
ಚಿತ್ರರಂಗಕ್ಕೆ (Cinema Industry) ಕಾಲಿಟ್ಟ ನಂತರ ನಟ/ನಟಿಯರಿಗೆ ಒಂದಷ್ಟು ವಿವಾದಗಳು ಸುತ್ತಿಕೊಳ್ಳುತ್ತವೆ. ಕೆಲವೊಮ್ಮೆ ತಪ್ಪು ಮಾಡದಿದ್ದರೂ ಕೆಟ್ಟ ಹೆಸರು ಅಂಟಿಕೊಳ್ಳುತ್ತದೆ. ಕೆಲವೊಮ್ಮೆ ಮಾಧ್ಯಮಗಳಲ್ಲಿ (Media) ವರದಿ ಆಗುವ ಗಾಸಿಪ್ಗಳ ಬಗ್ಗೆ ಸೆಲೆಬ್ರಿಟಿಗಳು ಗಂಭೀರವಾಗಿ ಚಿಂತಿಸುವ ಸಂದರ್ಭ ಬರುತ್ತದೆ. ಈಗ ಇದೇ ರೀತಿಯ ವಿಚಾರದಲ್ಲಿ ನಟನೋರ್ವ ನೀಡಿದ ಹೇಳಿಕೆ ಶಾಕಿಂಗ್ ಆಗಿದೆ. ನಟಿಯೊಬ್ಬರ ಜತೆ ಮಲಗಿದ್ದೇನೆ ಎನ್ನುವ ಹೇಳಿಕೆ ನೀಡಿದರೆ 50 ಲಕ್ಷ ರೂಪಾಯಿ ನೀಡುವುದಾಗಿ ಟ್ಯಾಬ್ಲಾಯ್ಡ್ (Tabloid) ಒಂದು ಆಫರ್ ನೀಡಿತ್ತು ಎಂಬುದಾಗಿ ಅಮೆರಿಕದ ನಟನೋರ್ವ ಹೇಳಿಕೊಂಡಿದ್ದಾರೆ.
ಅಮೆರಿಕದ ನಟ ಸೈಮನ್ ರೆಕ್ಸ್ ಅವರು ಈ ಮೊದಲು ಅಮೆರಿಕದ ನಟಿ ಮೇಘನ್ ಮಾರ್ಕೆಲ್ ಜತೆ ನಟಿಸಿದ್ದರು. ಇವರ ಜತೆ ಅನೈತಿಕ ಸಂಬಂಧ ಹೊಂದಿದ್ದೇನೆ ಎಂದು ಹೇಳಿಕೆ ನೀಡುವಂತೆ ಸೈಮನ್ ರೆಕ್ಸ್ಗೆ ಒತ್ತಾಯ ಹೇರಲಾಗಿತ್ತು. ಈ ಸುಳ್ಳು ಹೇಳಿದರೆ 50 ಲಕ್ಷ ರೂಪಾಯಿ ನೀಡುವ ಆಫರ್ ಕೂಡ ನೀಡಲಾಗಿತ್ತು. ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಸೈಮನ್ ಈ ವಿಚಾರವನ್ನು ಬಾಯ್ಬಿಟ್ಟಿದ್ದಾರೆ. ದುಡ್ಡಿನ ಆಸೆಗೆ ಬೀಳದೆ, ಅವರು ಈ ಸುಳ್ಳನ್ನು ಹೇಳಿರಲಿಲ್ಲ ಅನ್ನೋದು ಇಲ್ಲಿ ಮೆಚ್ಚುವಂತಹ ವಿಷಯ.
2005ರಲ್ಲಿ ಪ್ರಸಾರವಾದ ‘ಕಟ್ಸ್ ಬ್ಯಾಕ್’ ಸರಣಿಯ ಒಂದು ಎಪಿಸೋಡ್ನಲ್ಲಿ ಸೈಮನ್ ಹಾಗೂ ಮೇಘನ್ ಒಟ್ಟಾಗಿ ನಟಿಸಿದ್ದರು. ಮೇಘನ್ ಆಗಲೇ ದೊಡ್ಡ ಮಟ್ಟದ ಹೆಸರು ಮಾಡಿದ್ದರು. ಆದರೆ, ಸೈಮನ್ ಅವರು ಇನ್ನೂ ಚಿತ್ರರಂಗದಲ್ಲಿ ನೆಲೆ ಕಂಡುಕೊಳ್ಳೋಕೆ ಒದ್ದಾಡುತ್ತಿದ್ದರು. ಅವರಿಗೆ ಆರ್ಥಿಕವಾಗಿ ತೊಂದರೆ ಇದೆ ಎಂಬುದನ್ನು ತಿಳಿದ ಕೆಲವರು ಹಣದ ಆಫರ್ ನೀಡಿದ್ದರು.
‘ನನಗೆ ನಿಜವಾಗಿಯೂ ಹಣದ ಅಗತ್ಯವಿತ್ತು. ಈ ವೇಳೆ ಮೇಘನ್ ಜತೆ ಮಲಗಿದ್ದೇನೆ ಎನ್ನುವ ಹೇಳಿಕೆ ನೀಡೋಕೆ ಕೆಲವರು ಒತ್ತಾಯ ಹೇರಿದ್ದರು. ನಾನು ಇದಕ್ಕೆ ಒಪ್ಪಿಲ್ಲ. ನಾನು ಹಾಗೂ ಮೇಘನ್ ಇಬ್ಬರೂ ಒಟ್ಟಿಗೆ ಊಟ ಮಾಡಿದ್ದೇವೆ. ನಮ್ಮ ಗೆಳೆತನ ಅಷ್ಟಕ್ಕೆ ಸೀಮಿತವಾಗಿದೆ. ನಾನು ಟ್ಯಾಬ್ಲಾಯ್ಡ್ಗಳು ನೀಡಿದ ಪ್ರಸ್ತಾಪವನ್ನು ನಿರಾಕರಿಸಿದ್ದನ್ನು ತಿಳಿದ ನಂತರ, ಮೇಘನ್ ಅವರು ನನಗೆ ಧನ್ಯವಾದ ಪತ್ರವನ್ನು ಕಳುಹಿಸಿದ್ದರು. ‘ಈಗಲೂ ಒಳ್ಳೆಯ ಜನರಿದ್ದಾರೆ ಎಂಬುದನ್ನು ತಿಳಿದು ಸಂತೋಷವಾಯಿತು’ ಎಂದು ಅವರು ಪತ್ರದಲ್ಲಿ ಬರೆದಿದ್ದರು’ ಎಂಬುದಾಗಿ ಸೈಮನ್ ಹೇಳಿಕೊಂಡಿದ್ದಾರೆ.
ಮೇಘನ್ ಅವರು 2000ರಲ್ಲಿ ಬಣ್ಣದ ಲೋಕಕ್ಕೆ ಕಾಲಿಟ್ಟರು. ಆರಂಭದಲ್ಲಿ ಟಿವಿ ಶೋಗಳಲ್ಲಿ ಚಿಕ್ಕಪುಟ್ಟ ಪಾತ್ರಗಳಲ್ಲಿ ನಟಿಸಿದರು. ‘ಸ್ಯೂಟ್ಸ್’ ಶೋನಲ್ಲಿ ರಚೆಲ್ ಆಗಿ ಕಾಣಿಸಿಕೊಂಡು ಸಾಕಷ್ಟು ಖ್ಯಾತಿ ಪಡೆದರು. 2018ರಲ್ಲಿ ಪ್ರಿನ್ಸ್ ಹ್ಯಾರಿ ಅವರನ್ನು ಮದುವೆ ಆದ ನಂತರ ಚಿತ್ರರಂಗದಿಂದ ನಿವೃತ್ತಿ ಪಡೆದರು.
ಇದನ್ನೂ ಓದಿ: Alia Bhatt: ‘ಗಂಗೂಬಾಯಿ’ ಯಶಸ್ಸಿನ ಬೆನ್ನಲ್ಲೇ ಹಾಲಿವುಡ್ ಕಡೆ ಮುಖ ಮಾಡಿದ್ರಾ ಆಲಿಯಾ? ಇಲ್ಲಿದೆ ಹೊಸ ಸಮಾಚಾರ
ಅಕ್ಷಯ್ ಕುಮಾರ್ ನಟನೆಯ ‘ಬಚ್ಚನ್ ಪಾಂಡೆ’ಯಲ್ಲಿ ‘ಕೆಜಿಎಫ್’ ಚಿತ್ರದ ಬಗ್ಗೆ ಉಲ್ಲೇಖ; ಇಲ್ಲಿದೆ ವಿಡಿಯೋ