AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನನಗೆ ಹಿಂದಿ ಸಿನಿಮಾ ಮಾಡುವ ಅಗತ್ಯ ಬಿದ್ದಿಲ್ಲ’; ಮಹೇಶ್ ಬಾಬು ಖಡಕ್ ಮಾತು

Mahesh Babu | Bollywood: ಬಾಲಿವುಡ್​ಗೆ ಕಾಲಿಡೋದು ಯಾವಾಗ ಎನ್ನುವ ಪ್ರಶ್ನೆ ಮಹೇಶ್ ಬಾಬು ಅವರಿಗೆ ಎದುರಾಯಿತು. ಅವರು ಇದಕ್ಕೆ ಕಡ್ಡಿ ಮುರಿದಂತೆ ಉತ್ತರ ನೀಡಿದ್ದಾರೆ.

‘ನನಗೆ ಹಿಂದಿ ಸಿನಿಮಾ ಮಾಡುವ ಅಗತ್ಯ ಬಿದ್ದಿಲ್ಲ’; ಮಹೇಶ್ ಬಾಬು ಖಡಕ್ ಮಾತು
ಮಹೇಶ್ ಬಾಬು
TV9 Web
| Edited By: |

Updated on:Apr 10, 2022 | 6:07 PM

Share

ದಕ್ಷಿಣ ಭಾರತದ ಚಿತ್ರರಂಗ (South Film Industry) ಹಿರಿದಾಗುತ್ತಿದೆ. ಇಲ್ಲಿನ ಸಿನಿಮಾಗಳು ಬಾಲಿವುಡ್​ ಅಂಗಳದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿವೆ. ಈ ಬೆನ್ನಲ್ಲೇ, ಇಲ್ಲಿನ ಸ್ಟಾರ್​ಗಳಿಗೆ ಬಾಲಿವುಡ್​ ಆಫರ್​ಗಳು ಬರುತ್ತಿವೆ. ಬಾಲಿವುಡ್​ನಿಂದ ಆಫರ್ ಸಿಕ್ಕರೆ ಅದಕ್ಕೆ ನೋ ಎಂದು ಹೇಳೋಕೆ ಅನೇಕರಿಗೆ ಮನಸ್ಸು ಬರುವುದಿಲ್ಲ. ಇದಕ್ಕೆ ಕಾರಣವೂ ಇದೆ. ಬಾಲಿವುಡ್​ನಲ್ಲಿ ನಟಿಸಿದರೆ ಸಂಭಾವನೆ ಹೆಚ್ಚು ಸಿಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಜನಪ್ರಿಯತೆ ಮತ್ತಷ್ಟು ಹೆಚ್ಚುತ್ತದೆ. ಈ ಕಾರಣಕ್ಕೆ ದಕ್ಷಿಣದ ಅನೇಕ ಸ್ಟಾರ್​ಗಳು ಬಾಲಿವುಡ್​​ಗೆ ಕಾಲಿಡೋಕೆ ಪ್ರಯತ್ನಿಸುತ್ತಿದ್ದಾರೆ. ರಾಮ್ ಚರಣ್ (Ram Charan) ಅವರು ಬಾಲಿವುಡ್​ಗೆ ಕಾಲಿಟ್ಟು ಬಂದಿದ್ದಾರೆ. ವಿಜಯ್ ದೇವರಕೊಂಡ (Vijay Devarakonda) ಹಿಂದಿಯಲ್ಲಿ ಸಿನಿಮಾ ಮಾಡುತ್ತಿದ್ದಾರೆ. ಈ ಕಾರಣಕ್ಕೆ ಉಳಿದ ಸ್ಟಾರ್​ಗಳಿಗೂ ಇದೇ ಮಾದರಿಯ ಪ್ರಶ್ನೆ ಎದುರಾಗುತ್ತಿದೆ. ಮಹೇಶ್ ಬಾಬು ಅವರಿಗೂ ಇದೇ ಪ್ರಶ್ನೆ ಎದುರಾಯಿತು. ಅವರು ಇದಕ್ಕೆ ಕಡ್ಡಿ ಮುರಿದಂತೆ ಉತ್ತರ ನೀಡಿದ್ದಾರೆ.

‘ಸರ್ಕಾರು ವಾರಿ ಪಾಟ’ ಸಿನಿಮಾ ಮೇ​ 12ರಂದು ತೆರೆಗೆ ಬರುತ್ತಿದೆ. ಈ ಚಿತ್ರದ ಬಗ್ಗೆ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಈ ಸಿನಿಮಾದಲ್ಲಿ ಮಹೇಶ್​ ಬಾಬು ಭಿನ್ನ ಗೆಟಪ್​ ತಾಳಿದ್ದಾರೆ. ಈ ಚಿತ್ರದ ಬಗ್ಗೆ ಅವರ ಅಭಿಮಾನಿಗಳಿಗೆ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಈಗಾಗಲೇ ಸಿನಿಮಾದ ಹಾಡುಗಳು ಹಿಟ್​ ಆಗಿವೆ. ಅವರು ಸಿನಿಮಾ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಈ ವೇಳೆ ಅವರಿಗೆ ಬಾಲಿವುಡ್​ಗೆ ಕಾಲಿಡೋದು ಯಾವಾಗ ಎನ್ನುವ ಪ್ರಶ್ನೆ ಕೇಳಲಾಗಿದೆ.

‘ನನಗೆ ಹಿಂದಿ ಸಿನಿಮಾ ಮಾಡುವ ಅಗತ್ಯವಿಲ್ಲ. ನಾನು ಕೇವಲ ತೆಲುಗು ಸಿನಿಮಾಗಳನ್ನು ಮಾತ್ರ ಮಾಡಬಲ್ಲೆ. ಅದು ಪ್ರಪಂಚದಾದ್ಯಂತ ಕಾಣಿಸುತ್ತದೆ. ಈಗ ಅದೇ ನಡೆಯುತ್ತಿದೆ’ ಎಂದು ಹೇಳಿದ್ದಾರೆ ಮಹೇಶ್ ಬಾಬು. ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ.

‘ಆರ್​​ಆರ್​ಆರ್’ ಚಿತ್ರದ ನಿರ್ದೇಶಕ ಎಸ್​.ಎಸ್​. ರಾಜಮೌಳಿ ಹಾಗೂ ಮಹೇಶ್​ ಬಾಬು ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ‘ಆರ್​ಆರ್​ಆರ್’ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್​ ಆದ ಕಾರಣ ರಾಜಮೌಳಿ ಮುಂದಿನ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ಇದು ಯಾವ ಶೈಲಿಯಲ್ಲಿ ಮೂಡಿಬರಲಿದೆ ಎಂಬ ಬಗ್ಗೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ಇದನ್ನೂ ಓದಿ: ‘ಕಲಾವತಿ..’ ಹಾಡಿಗೆ ತಲೆದೂಗಿದ ಅಭಿಮಾನಿಗಳು; ಮಹೇಶ್ ಬಾಬು ಡ್ಯಾನ್ಸ್​ಗೆ ಕೋಟಿಕೋಟಿ ವೀಕ್ಷಣೆ

‘ಆರ್​ಆರ್​ಆರ್​’ ಚಿತ್ರದಲ್ಲಿ ಮಲ್ಲಿ ಅಮ್ಮನಾಗಿ ಕಾಣಿಸಿಕೊಂಡವರು ಇವರೇ ನೋಡಿ

Published On - 6:00 am, Sat, 9 April 22

Follow Us
ತಮಿಳುನಾಡಿನಲ್ಲಿ ಡಿಎಂಕೆ ಬದಲು ಎಐಎಡಿಎಂಕೆಯನ್ನು ಹೊಗಳಿದ ರಾಹುಲ್ ಗಾಂಧಿ
ತಮಿಳುನಾಡಿನಲ್ಲಿ ಡಿಎಂಕೆ ಬದಲು ಎಐಎಡಿಎಂಕೆಯನ್ನು ಹೊಗಳಿದ ರಾಹುಲ್ ಗಾಂಧಿ
ಕತ್ತಲಲ್ಲಿ ಬಂದ್ರು,ಕಾರಲ್ಲಿ ಬಂದು ಹಸು ಕದ್ಕೊಂಡು ಹೋದ್ರು!
ಕತ್ತಲಲ್ಲಿ ಬಂದ್ರು,ಕಾರಲ್ಲಿ ಬಂದು ಹಸು ಕದ್ಕೊಂಡು ಹೋದ್ರು!
CCTV Video: ಸಾಲ ಮಾಡಿ ತಂದಿದ್ದ ಕನಸಿನ ಬೈಕ್ ಕೊಂಡ ರಾತ್ರಿಯೇ ಕಳ್ಳತನ!
CCTV Video: ಸಾಲ ಮಾಡಿ ತಂದಿದ್ದ ಕನಸಿನ ಬೈಕ್ ಕೊಂಡ ರಾತ್ರಿಯೇ ಕಳ್ಳತನ!
ಯುವತಿಯರ ಅಂಗಾಂಗ ಮುಟ್ಟಿ ಪರಾರಿಯಾಗುತ್ತಿರುವ ಕಾಮುಕರು: ವಿಡಿಯೋ ವೈರಲ್
ಯುವತಿಯರ ಅಂಗಾಂಗ ಮುಟ್ಟಿ ಪರಾರಿಯಾಗುತ್ತಿರುವ ಕಾಮುಕರು: ವಿಡಿಯೋ ವೈರಲ್
ಜರ್ಮನಿಯ ಗುರುದ್ವಾರದಲ್ಲಿ ಹಿಂಸಾತ್ಮಕ ಘರ್ಷಣೆ, ಬಂದೂಕು, ಚಾಕುವಿನಿಂದ ದಾಳಿ
ಜರ್ಮನಿಯ ಗುರುದ್ವಾರದಲ್ಲಿ ಹಿಂಸಾತ್ಮಕ ಘರ್ಷಣೆ, ಬಂದೂಕು, ಚಾಕುವಿನಿಂದ ದಾಳಿ
ಮತ್ತೊಬ್ಬರ ಏಳಿಗೆಯನ್ನು ನೋಡಿ ಅಸೂಯೆ ಪಟ್ಟರೆ ಏನಾಗುತ್ತೆ?
ಮತ್ತೊಬ್ಬರ ಏಳಿಗೆಯನ್ನು ನೋಡಿ ಅಸೂಯೆ ಪಟ್ಟರೆ ಏನಾಗುತ್ತೆ?
ಇಂದು ಈ ರಾಶಿಯವರಿಗೆ ಸಣ್ಣ ಪುಣ್ಣ ಆರೋಗ್ಯ ಸಮಸ್ಯೆ ಕಾಡಬಹುದು!
ಇಂದು ಈ ರಾಶಿಯವರಿಗೆ ಸಣ್ಣ ಪುಣ್ಣ ಆರೋಗ್ಯ ಸಮಸ್ಯೆ ಕಾಡಬಹುದು!
ಇದ್ದಕ್ಕಿದ್ದಂತೆ ಹೈವೇಗೆ ಹಾರಿದ ಹಸು; ಕಾರಿನ ಸ್ಥಿತಿ ಏನಾಯ್ತು ನೋಡಿ!
ಇದ್ದಕ್ಕಿದ್ದಂತೆ ಹೈವೇಗೆ ಹಾರಿದ ಹಸು; ಕಾರಿನ ಸ್ಥಿತಿ ಏನಾಯ್ತು ನೋಡಿ!
ಅಣ್ಣಾವ್ರ ಹುಟ್ಟುಹಬ್ಬದ ದಿನ ರಿಲೀಸ್ ಆಗಲಿದೆ ಚಂದನ್ ಶೆಟ್ಟಿ ಹೊಸ ಸಿನಿಮಾ
ಅಣ್ಣಾವ್ರ ಹುಟ್ಟುಹಬ್ಬದ ದಿನ ರಿಲೀಸ್ ಆಗಲಿದೆ ಚಂದನ್ ಶೆಟ್ಟಿ ಹೊಸ ಸಿನಿಮಾ
ಪ್ರತಿ ಸಿನಿಮಾದಲ್ಲಿ ಬೇರೆ ರೀತಿ ಕಾಣೋದು ಹೇಗೆ? ಉತ್ತರಿಸಿದ ಕಿರಣ್ ರಾಜ್
ಪ್ರತಿ ಸಿನಿಮಾದಲ್ಲಿ ಬೇರೆ ರೀತಿ ಕಾಣೋದು ಹೇಗೆ? ಉತ್ತರಿಸಿದ ಕಿರಣ್ ರಾಜ್