ಇಳಯರಾಜನಿಗೆ ದೇಗುಲ ಪ್ರವೇಶ ನಿರಾಕರಣೆ ನಿಜವೇ? ಸ್ಪಷ್ಟನೆ ನೀಡಿದ ಸಂಗೀತ ಮಾಂತ್ರಿಕ

ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ಅವರಿಗೆ ತಮಿಳುನಾಡಿನ ದೇವಸ್ಥಾನದಲ್ಲಿ ಪ್ರವೇಶ ನಿರಾಕರಿಸಲ್ಪಟ್ಟಿದ್ದಾರೆ ಎಂಬ ವದಂತಿ ಹರಡಿದೆ. ಆದರೆ ಇಳಯರಾಜ ಅವರು ಇದನ್ನು ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ದೇವಸ್ಥಾನದ ನಿಯಮಗಳಿಗೆ ಅನುಗುಣವಾಗಿ ಅವರ ಪ್ರವೇಶವನ್ನು ಸೀಮಿತಗೊಳಿಸಲಾಗಿತ್ತು ಎಂದು ದೇವಸ್ಥಾನದ ಅಧಿಕಾರಿಗಳು ತಿಳಿಸಿದ್ದಾರೆ. ಕರ್ನಾಟಕ ಸಚಿವ ಮಹದೇವಪ್ಪ ಅವರು ಈ ಘಟನೆಯನ್ನು ಖಂಡಿಸಿದ್ದಾರೆ.

ಇಳಯರಾಜನಿಗೆ ದೇಗುಲ ಪ್ರವೇಶ ನಿರಾಕರಣೆ ನಿಜವೇ? ಸ್ಪಷ್ಟನೆ ನೀಡಿದ ಸಂಗೀತ ಮಾಂತ್ರಿಕ
ಇಳಯರಾಜ
Follow us
ರಾಜೇಶ್ ದುಗ್ಗುಮನೆ
|

Updated on:Dec 17, 2024 | 8:31 AM

ಖ್ಯಾತ ಸಂಗೀತ ಸಂಯೋಜಕ ಹಾಗೂ ರಾಜ್ಯಸಭಾ ಸದಸ್ಯ ಇಳಯರಾಜ ಹೆಸರು ಸಾಕಷ್ಟು ಚರ್ಚೆಯಲ್ಲಿ ಇದೆ. ತಮಿಳುನಾಡಿನ ಶ್ರೀವಿಲ್ಲಿಪುತ್ತೂರ್ ಆಂಡಾಳ್ ದೇವಸ್ಥಾನದ ಒಳಗೆ ಇಳಯರಾಜ ಅವರನ್ನು ಬಿಟ್ಟಿಲ್ಲ ಎಂಬ ಸುದ್ದಿ ಎಲ್ಲ ಕಡೆಗಳಲ್ಲಿ ಹರಿದಾಡಿದೆ. ಇದರಿಂದ ಅವರಿಗೆ ಅವಮಾನ ಆಗಿದೆ ಎಂಬ ಕೂಗು ಎದ್ದಿದೆ. ಕರ್ನಾಟಕದ ಸಚಿವ ಮಹದೇವಪ್ಪ ಕೂಡ ಈ ಬಗ್ಗೆ ಟ್ವೀಟ್ ಮಾಡಿ ಘಟನೆಯನ್ನು ಖಂಡಿಸಿದ್ದಾರೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಇಳಯರಾಜ, ಆ ರೀತಿಯ ಘಟನೆ ನಡೆದೇ ಇಲ್ಲ ಎಂದಿದ್ದಾರೆ. ಜೊತೆಗೆ ವದಂತಿಗಳಿಗೆ ಕಿವಿಕೊಡದಂತೆ ಕೋರಿದ್ದಾರೆ.

ಘಟನೆ ಬಗ್ಗೆ ತಮಿಳಿನಲ್ಲಿ ಟ್ವೀಟ್ ಮಾಡಿರುವ ಇಳಯರಾಜ, ‘ನನ್ನ ವಿಚಾರದಲ್ಲಿ ಕೆಲವರು ವದಂತಿ ಹಬ್ಬಿಸಿದ್ದಾರೆ. ನಾನು ಯಾವುದೇ ಸಮಯದಲ್ಲಿ ಅಥವಾ ಸ್ಥಳದಲ್ಲಿ ನನ್ನ ಸ್ವಾಭಿಮಾನವನ್ನು ಬಿಟ್ಟುಕೊಡುವವನಲ್ಲ. ನಡೆದಿರದ ಘಟನೆಯನ್ನು ನಡೆದಿರುವ ರೀತಿಯಲ್ಲಿ ಬಿಂಬಿಸಲಾಗುತ್ತಿದೆ. ಅಭಿಮಾನಿಗಳು ಹಾಗೂ ಜನರು ಈ ರೀತಿಯ ವದಂತಿಯನ್ನು ನಂಬಬಾರದು’ ಎಂದು ಇಳಯರಾಜ ಕೋರಿದ್ದಾರೆ.

ನಡೆದ ಘಟನೆ ಏನು?

ವಿರುದುನಗರ ಜಿಲ್ಲೆಯ ಶ್ರೀವಿಲ್ಲಿಪುತ್ತೂರಿನ ಆಂಡಾಳ್ ದೇವಸ್ಥಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಇಳಯರಾಜ ಭಾಗವಹಿಸಿದ್ದರು. ಅವರಿಗೆ ಹೂಮಾಲೆ ಹಾಕಿ ಸ್ವಾಗತಿಸಲಾಯಿತು. ದೇವಸ್ಥಾನದ ಅರ್ಥಮಂಟಪ ದಾಟಿ ಹೋಗದಂತೆ ಇಳಯರಾಜ ಅವರ ಬಳಿ ಕೋರಲಾಗಿದೆ.

ಇದನ್ನೂ ಓದಿ: ‘ಕೇಳದೆ ನಿಮಗೀಗ..’ ಕಂಪೋಸ್ ಮಾಡುವಾಗ ನಡೆದ ಅಪರೂಪದ ಘಟನೆ ಹೇಳಿದ ಇಳಯರಾಜ

ದೇವಸ್ಥಾನದ ಸಂಪ್ರದಾಯದ ಪ್ರಕಾರ ಅರ್ಚಕರು, ಮಠಾಧೀಶರು ಸೇರಿದಂತೆ ಅಧಿಕೃತ ಸಿಬ್ಬಂದಿಗೆ ಮಾತ್ರ ಅರ್ಥಮಂಟಪದ ಬಳಿ ಪ್ರವೇಶವಿದೆ. ಶಿಷ್ಟಾಚಾರದ ಕಾರಣದಿಂದ ಇಳಯರಾಜ ಅವರ ಪ್ರವೇಶವನ್ನು ನಿರ್ಬಂಧಿಸಲಾಗಿದೆ ಎಂದು ಅಲ್ಲಿನ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.

ಬೇರೆ ರೀತಿಯಲ್ಲಿ ಬಿಂಬಿಸಲಾಯಿತು..

ಈ ಘಟನೆಯನ್ನು ಇಟ್ಟುಕೊಂಡು ಬೇರೆ ರೀತಿಯಲ್ಲಿ ಬಿಂಬಿಸಲಾಯಿತು. ಜಾತಿ ವಿಚಾರವನ್ನು ಇಲ್ಲಿ ಎಳೆದು ತರಲಾಯಿತು. ಇಳಯರಾಜ ಅವರಿಗೆ ಅವಮಾನ ಮಾಡಲಾಗಿದೆ ಎಂದು ಅನೇಕರು ಹೇಳಿದ್ದರು. ಇದು ಇಳಯರಾಜ ಗಮನಕ್ಕೂ ಬಂದಿದ್ದು, ಅವರೇ ಘಟನೆ ಬಗ್ಗೆ ಸ್ಪಷ್ಟನೆ ನೀಡಿರುವುದರಿಂದ ಎಲ್ಲಾ ವದಂತಿಗೆ ತೆರೆ ಬಿದ್ದಂತೆ ಆಗಿದೆ.

ಮಹದೇವಪ್ಪ ಟ್ವೀಟ್..

ಕರ್ನಾಟಕ ಸಮಾಜ ಕಲ್ಯಾಣ ಸಚಿವ ಎಚ್​ಸಿ ಮಹದೇವಪ್ಪ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ‘ಸಂಗೀತ ಮಾಂತ್ರಿಕ, ಹಾಲಿ ರಾಜ್ಯ ಸಭಾ ಸದಸ್ಯರಾದ ಇಳಯರಾಜ ಅವರನ್ನು ತಮಿಳುನಾಡಿನ ದೇವಸ್ಥಾನವೊಂದರಲ್ಲಿ ಪ್ರವೇಶ ಮಾಡಲು ನಿರಾಕರಿಸಿದ ಘಟನೆಯು ನಿಜಕ್ಕೂ ಅವಮಾನಕರ ಸಂಗತಿ ಆಗಿದ್ದು, ಸಮಾಜದಲ್ಲಿ  ಜಾತಿ ತಾರತಮ್ಯ ಮತ್ತು ಅಸ್ಪೃಶ್ಯತೆಯು ಇನ್ನೂ ಜೀವಂತವಾಗಿದೆ ಎಂಬುದನ್ನು ಸಾರಿ ಹೇಳುತ್ತಿದೆ. ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿ, ರಾಷ್ಟ್ರ ಮಟ್ಟದಲ್ಲಿ ಖ್ಯಾತಿ ಗಳಿಸಿದವರ ಸ್ಥಿತಿಯೇ ಹೀಗಿದ್ದರೆ, ಸಾಮಾನ್ಯರಾಗಿ ಜೀವಿಸುತ್ತಿರುವ ಪರಿಶಿಷ್ಟ ಸಮುದಾಯಗಳ ಪರಿಸ್ಥಿತಿ ಏನಾಗಿರಬೇಕು ಎಂಬುದನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕು’ ಎಂದು ಬರೆದುಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:26 am, Tue, 17 December 24

Daily Devotional: ತುಳಸಿ ತೀರ್ಥದ ಮಹತ್ವ ತಿಳಿಯಿರಿ
Daily Devotional: ತುಳಸಿ ತೀರ್ಥದ ಮಹತ್ವ ತಿಳಿಯಿರಿ
Daily horoscope: ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿದೆ
Daily horoscope: ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿದೆ
‘ಯುಐ’ ಸಿನಿಮಾ ಪ್ರೀ-ರಿಲೀಸ್ ಇವೆಂಟ್​: ಇಲ್ಲಿದೆ ಲೈವ್ ವಿಡಿಯೋ
‘ಯುಐ’ ಸಿನಿಮಾ ಪ್ರೀ-ರಿಲೀಸ್ ಇವೆಂಟ್​: ಇಲ್ಲಿದೆ ಲೈವ್ ವಿಡಿಯೋ
ಹೊಸ ಹೋಸ್ಟ್ ನನ್ನಂತೆ ನಡೆಸಿಕೊಡುತ್ತಾರೋ ಇಲ್ಲವೋ ಬೇರೆ ವಿಚಾರ: ಸುದೀಪ್
ಹೊಸ ಹೋಸ್ಟ್ ನನ್ನಂತೆ ನಡೆಸಿಕೊಡುತ್ತಾರೋ ಇಲ್ಲವೋ ಬೇರೆ ವಿಚಾರ: ಸುದೀಪ್
ಹಣಕಾಸು ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಲು ಕಾನೂನು ಬಲಪಡಿಸುತ್ತೇವೆ: ಸಚಿವ
ಹಣಕಾಸು ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಲು ಕಾನೂನು ಬಲಪಡಿಸುತ್ತೇವೆ: ಸಚಿವ
ಎತ್ತಿನ ಜನ್ಮದಿನ ಆಚರಣೆ: ಕೇಕ್ ಕತ್ತರಿಸಿ..ಊರಿಗೆಲ್ಲ ಊಟ ಹಾಕಿಸಿದ ರೈತ
ಎತ್ತಿನ ಜನ್ಮದಿನ ಆಚರಣೆ: ಕೇಕ್ ಕತ್ತರಿಸಿ..ಊರಿಗೆಲ್ಲ ಊಟ ಹಾಕಿಸಿದ ರೈತ
ನ್ಯಾಯಾಲಯದಿಂದ ಪುನಃ ಆಸ್ಪತ್ರೆಗೆ ವಾಪಸ್ಸು ಹೋದ ದರ್ಶನ್ ತೂಗುದೀಪ
ನ್ಯಾಯಾಲಯದಿಂದ ಪುನಃ ಆಸ್ಪತ್ರೆಗೆ ವಾಪಸ್ಸು ಹೋದ ದರ್ಶನ್ ತೂಗುದೀಪ
ಕುಮಾರ ಬಂಗಾರಪ್ಪ ಸೊರಬದಲ್ಲಿ ಬಿಜೆಪಿ ಸೊರಗುವಂತೆ ಮಾಡಿದ್ದಾರೆ: ರೇಣುಕಾಚಾರ್ಯ
ಕುಮಾರ ಬಂಗಾರಪ್ಪ ಸೊರಬದಲ್ಲಿ ಬಿಜೆಪಿ ಸೊರಗುವಂತೆ ಮಾಡಿದ್ದಾರೆ: ರೇಣುಕಾಚಾರ್ಯ
ಜುಟ್ಟು ಹಿಡಿದುಕೊಂಡು ಕಿತ್ತಾಡಿದ ಭವ್ಯಾ, ಐಶ್ವರ್ಯಾ; ದೊಡ್ಮನೆಯಲ್ಲಿ ಗದ್ದಲ
ಜುಟ್ಟು ಹಿಡಿದುಕೊಂಡು ಕಿತ್ತಾಡಿದ ಭವ್ಯಾ, ಐಶ್ವರ್ಯಾ; ದೊಡ್ಮನೆಯಲ್ಲಿ ಗದ್ದಲ
ದರ್ಶನ್ ಮೇಲಿನ ಅಭಿಮಾನ ಹೆಚ್ಚಾಗಿದೆಯೇ ಹೊರತು ಕಮ್ಮಿಯಾಗಿಲ್ಲ: ಅಭಿಮಾನಿ
ದರ್ಶನ್ ಮೇಲಿನ ಅಭಿಮಾನ ಹೆಚ್ಚಾಗಿದೆಯೇ ಹೊರತು ಕಮ್ಮಿಯಾಗಿಲ್ಲ: ಅಭಿಮಾನಿ