ಕಳೆದ 25 ವರ್ಷಗಳಿಂದ ಸಿಹಿಯನ್ನು ತಿಂದೇ ಇಲ್ಲ ಜಾನ್ ಅಬ್ರಹಾಂ

ಸಿಹಿ ಪದಾರ್ಥ ಎಂದರೆ ಎಲ್ಲರ ಬಾಯಲ್ಲೂ ನೀರೂರುತ್ತದೆ. ತಂಪು ಪಾನೀಯ, ಸಿಹಿ ಪದಾರ್ಥ ಹೀಗೆ ಅನೇಕ ಸಿಹಿ ಅಂಶ ದೇಹ ಸೇರುತ್ತಲೇ ಇರುತ್ತವೆ. ಆದರೆ, ಜಾನ್ ಅಬ್ರಹಾಂ ಮಾತ್ರ ಈ ರೀತಿ ಅಲ್ಲ. ಅವರಿಗೆ ಈಗ 52 ವರ್ಷ ವಯಸ್ಸು. ಈಗಲೂ ಫಿಟ್ನೆಸ್ ಬಗ್ಗೆ ಗಮನ ನೀಡುವ ಅವರು, ಇದಕ್ಕೆ ತಕ್ಕಂತೆ ಆಹಾರ ಕ್ರಮ ಫಾಲೋ ಮಾಡುತ್ತಾರೆ.

ಕಳೆದ 25 ವರ್ಷಗಳಿಂದ ಸಿಹಿಯನ್ನು ತಿಂದೇ ಇಲ್ಲ ಜಾನ್ ಅಬ್ರಹಾಂ
ಜಾನ್ ಅಬ್ರಹಾಂ
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Dec 17, 2024 | 7:39 AM

ಜಾನ್ ಅಬ್ರಹಾಂ ಅವರಿಗೆ ಇಂದು (ಡಿಸೆಂಬರ್ 17) ಜನ್ಮದಿನ. ಅವರಿಗೆ ಎಲ್ಲರೂ ಶುಭಾಶಯ ಕೋರುತ್ತಿದ್ದಾರೆ. ಜಾನ್ ಅಬ್ರಹಾಂ ಅವರು ಫಿಟ್ನೆಸ್​ಗೆ ಹೆಸರು ವಾಸಿ. ಏನೇ ಮರೆತರೂ ಅವರು ಜಿಮ್​ನಲ್ಲಿ ವರ್ಕೌಟ್ ಮಾಡೋದನ್ನು ಮಾತ್ರ ಎಂದಿಗೂ ಮರೆತರವರಲ್ಲ. ಅವರಿಗೆ ಈಗ 52 ವರ್ಷ. ಈ ವಯಸ್ಸಲ್ಲೂ ಅವರು ಸಾಕಷ್ಟು ಫಿಟ್ನೆಸ್ ಕಾಯ್ದುಕೊಂಡಿದ್ದಾರೆ. ಅವರು ಸಿಹಿ ಪದಾರ್ಥ ತಿನ್ನದೆ 25 ವರ್ಷಗಳೇ ಕಳೆದು ಹೋಗಿವೆ. ಇದು ಅವರು ಫಿಟ್ನೆಸ್​ಗೆ ಹಾಗೂ ಆರೋಗ್ಯಕ್ಕೆ ಕೊಡುವ ಪ್ರಾಮುಖ್ಯತೆ ಇದು.

ಸಿಹಿ ಪದಾರ್ಥ ಎಂದರೆ ಎಲ್ಲರ ಬಾಯಲ್ಲೂ ನೀರೂರುತ್ತದೆ. ತಂಪು ಪಾನೀಯ, ಸಿಹಿ ಪದಾರ್ಥ ಹೀಗೆ ಅನೇಕ ಸಿಹಿ ಅಂಶ ದೇಹ ಸೇರುತ್ತಲೇ ಇರುತ್ತವೆ. ಆದರೆ, ಜಾನ್ ಅಬ್ರಹಾಂ ಮಾತ್ರ ಈ ರೀತಿ ಅಲ್ಲ. ಅವರಿಗೆ ಈಗ 52 ವರ್ಷ ವಯಸ್ಸು. ಈಗಲೂ ಫಿಟ್ನೆಸ್ ಬಗ್ಗೆ ಗಮನ ನೀಡುವ ಅವರು, ಇದಕ್ಕೆ ತಕ್ಕಂತೆ ಆಹಾರ ಕ್ರಮ ಫಾಲೋ ಮಾಡುತ್ತಾರೆ.

ನಟಿ ಆಲಿ ಖಾನ್ ಅವರು ಜಾನ್ ಅಬ್ರಹಾಂ ಅವರ ಬಗ್ಗೆ, ಅವರ ಆಹಾರ ಕ್ರಮದ ಬಗ್ಗೆ ಮಾತನಾಡಿದ್ದರು. ‘ಜಾನ್ ಅಬ್ರಹಾಂ ಅವರು ಈ ಕಾಲದಲ್ಲೂ ಸಖತ್ ಫಿಟ್ ಆಗಿದ್ದಾರೆ. ಅದಕ್ಕೆ ಕಾರಣ ಅವರು ಕಳೆದ 25 ವರ್ಷಗಳಿಂದ ಸಿಹಿ ಪದಾರ್ಥ ಸೇವನೆ ಮಾಡೇ ಇಲ್ಲ’ ಎಂದಿದ್ದಾರೆ ಅವರು. ಈ ವಿಚಾರ ಅನೇಕರಿಗೆ ಅಚ್ಚರಿ ತಂದಿದೆ.

ಸಿಹಿ ಪದಾರ್ಥವನ್ನು ತ್ಯಜಿಸುವುದರಿಂದ ಸಾಕಷ್ಟು ಲಾಭಗಳಿವೆ. ದೇಹದ ತೂಕದಲ್ಲಿ ಇಳಿಕೆ ಆಗುತ್ತದೆ. ಸಕ್ಕರೆ ತಿನ್ನದಿದ್ದರೆ ಡಯಾಬಿಟಿಸ್​ನಿಂದ ದೂರ ಇರಬಹುದು. ಕೊಲೆಸ್ಟ್ರಾಲ್ ಲೆವೆಲನ್​ ನಿಯಂತ್ರಣದಲ್ಲಿ ಇಡಬಹುದು. ಕೊಲೆಸ್ಟ್ರಾಲ್ ಇಲ್ಲ ಎಂದರೆ ಹೃದಯದ ಸಮಸ್ಯೆ ಇಲ್ಲ. ಹೊಟ್ಟೆಯ ಆರೋಗ್ಯವೂ ಉತ್ತಮವಾಗಿರುತ್ತದೆ.

ಜಾನ್ ಅಬ್ರಹಾಂ ಅವರು ಇಷ್ಟೊಂದು ಒಳ್ಳೆಯ ಬಾಡಿ ಮಾಡಿದ್ದಾರೆ ಎಂದ ಮಾತ್ರಕ್ಕೆ ಅವರು ನಾನ್​ವೆಜ್ ತಿನ್ನುತ್ತಾರೆ ಎಂದು ಎಲ್ಲರೂ ಅಂದುಕೊಳ್ಳಬಹುದು. ಆದರೆ, ಅದು ಸುಳ್ಳು. ಅವರು ಪಕ್ಕಾ ಸಸ್ಯಾಹಾರಿ. ಸಸ್ಯಾಹಾರ ಸೇವನೆಯಿಂದ ಇಷ್ಟು ಒಳ್ಳೆಯ ಬಾಡಿ ಮಾಡಿದ್ದಾರೆ.

ಇದನ್ನೂ ಓದಿ: ‘ಪಠಾಣ್’ ಗೆದ್ದ ಖುಷಿಯಲ್ಲಿ ಜಾನ್ ಅಬ್ರಹಾಂ ಕೇಳಿದ್ದೆಲ್ಲ ಕೊಡಿಸಿದ್ದ ಶಾರುಖ್ ಖಾನ್ 

ಜಾನ್ ಅಬ್ರಹಾಂ ಅವರು ಹೀರೋ ಆಗಿ ದೊಡ್ಡ ಮಟ್ಟದಲ್ಲಿ ಗೆಲುವು ಕಂಡಿಲ್ಲ. ಅವರು ಬಾಲಿವುಡ್​ನಲ್ಲಿ ವಿಲನ್ ಆಗಿಯೂ ಹೆಸರು ಮಾಡಿದ್ದಾರೆ. ಅವರ ಜನಪ್ರಿಯತೆ ಹೆಚ್ಚುತ್ತಿದೆ.  ಅವರ ನಟನೆಯ ‘ವೇದ’ ಇತ್ತೀಚೆಗೆ ರಿಲೀಸ್ ಆಗಿ ಸಾಧಾರಣ ಗೆಲುವು ಕಂಡಿತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Daily horoscope: ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿದೆ
Daily horoscope: ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿದೆ
‘ಯುಐ’ ಸಿನಿಮಾ ಪ್ರೀ-ರಿಲೀಸ್ ಇವೆಂಟ್​: ಇಲ್ಲಿದೆ ಲೈವ್ ವಿಡಿಯೋ
‘ಯುಐ’ ಸಿನಿಮಾ ಪ್ರೀ-ರಿಲೀಸ್ ಇವೆಂಟ್​: ಇಲ್ಲಿದೆ ಲೈವ್ ವಿಡಿಯೋ
ಹೊಸ ಹೋಸ್ಟ್ ನನ್ನಂತೆ ನಡೆಸಿಕೊಡುತ್ತಾರೋ ಇಲ್ಲವೋ ಬೇರೆ ವಿಚಾರ: ಸುದೀಪ್
ಹೊಸ ಹೋಸ್ಟ್ ನನ್ನಂತೆ ನಡೆಸಿಕೊಡುತ್ತಾರೋ ಇಲ್ಲವೋ ಬೇರೆ ವಿಚಾರ: ಸುದೀಪ್
ಹಣಕಾಸು ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಲು ಕಾನೂನು ಬಲಪಡಿಸುತ್ತೇವೆ: ಸಚಿವ
ಹಣಕಾಸು ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಲು ಕಾನೂನು ಬಲಪಡಿಸುತ್ತೇವೆ: ಸಚಿವ
ಎತ್ತಿನ ಜನ್ಮದಿನ ಆಚರಣೆ: ಕೇಕ್ ಕತ್ತರಿಸಿ..ಊರಿಗೆಲ್ಲ ಊಟ ಹಾಕಿಸಿದ ರೈತ
ಎತ್ತಿನ ಜನ್ಮದಿನ ಆಚರಣೆ: ಕೇಕ್ ಕತ್ತರಿಸಿ..ಊರಿಗೆಲ್ಲ ಊಟ ಹಾಕಿಸಿದ ರೈತ
ನ್ಯಾಯಾಲಯದಿಂದ ಪುನಃ ಆಸ್ಪತ್ರೆಗೆ ವಾಪಸ್ಸು ಹೋದ ದರ್ಶನ್ ತೂಗುದೀಪ
ನ್ಯಾಯಾಲಯದಿಂದ ಪುನಃ ಆಸ್ಪತ್ರೆಗೆ ವಾಪಸ್ಸು ಹೋದ ದರ್ಶನ್ ತೂಗುದೀಪ
ಕುಮಾರ ಬಂಗಾರಪ್ಪ ಸೊರಬದಲ್ಲಿ ಬಿಜೆಪಿ ಸೊರಗುವಂತೆ ಮಾಡಿದ್ದಾರೆ: ರೇಣುಕಾಚಾರ್ಯ
ಕುಮಾರ ಬಂಗಾರಪ್ಪ ಸೊರಬದಲ್ಲಿ ಬಿಜೆಪಿ ಸೊರಗುವಂತೆ ಮಾಡಿದ್ದಾರೆ: ರೇಣುಕಾಚಾರ್ಯ
ಜುಟ್ಟು ಹಿಡಿದುಕೊಂಡು ಕಿತ್ತಾಡಿದ ಭವ್ಯಾ, ಐಶ್ವರ್ಯಾ; ದೊಡ್ಮನೆಯಲ್ಲಿ ಗದ್ದಲ
ಜುಟ್ಟು ಹಿಡಿದುಕೊಂಡು ಕಿತ್ತಾಡಿದ ಭವ್ಯಾ, ಐಶ್ವರ್ಯಾ; ದೊಡ್ಮನೆಯಲ್ಲಿ ಗದ್ದಲ
ದರ್ಶನ್ ಮೇಲಿನ ಅಭಿಮಾನ ಹೆಚ್ಚಾಗಿದೆಯೇ ಹೊರತು ಕಮ್ಮಿಯಾಗಿಲ್ಲ: ಅಭಿಮಾನಿ
ದರ್ಶನ್ ಮೇಲಿನ ಅಭಿಮಾನ ಹೆಚ್ಚಾಗಿದೆಯೇ ಹೊರತು ಕಮ್ಮಿಯಾಗಿಲ್ಲ: ಅಭಿಮಾನಿ
ಶ್ರೀಲಂಕಾ ಅಧ್ಯಕ್ಷರಿಗೆ ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಅದ್ದೂರಿ ಸ್ವಾಗತ
ಶ್ರೀಲಂಕಾ ಅಧ್ಯಕ್ಷರಿಗೆ ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಅದ್ದೂರಿ ಸ್ವಾಗತ