ಆಸ್ಕರ್ಗೆ ಇನ್ನಷ್ಟು ಹತ್ತಿರವಾದ ‘ಹೋಮ್ಬೌಂಡ್’, ಇನ್ನೆಷ್ಟು ಹಂತ ಬಾಕಿ
Homebound movie at Oscars: ಭಾರತದಿಂದ ಈ ಬಾರಿ ಅಧಿಕೃತವಾಗಿ ಆಸ್ಕರ್ಸ್ಗೆ ಆಯ್ಕೆ ಆಗಿರುವ ‘ಹೋಮ್ಬೌಂಡ್’ ಸಿನಿಮಾ ಈಗಾಗಲೇ ಕೆಲವು ಮೆಟ್ಟಿಲುಗಳನ್ನು ಹತ್ತಿದೆ. ಇದೀಗ ಆಸ್ಕರ್ಗೆ ಇನ್ನಷ್ಟು ಸನಿಹವಾಗಿದೆ ‘ಹೋಮ್ಬೌಂಡ್’ ಈ ಹಿಂದೆ ಪ್ರಾಥಮಿಕ ಹಂತ, ಅದರ ಬಳಿಕದ ಅಂತಿಮ ಹದಿನೈದರ ಪಟ್ಟಿಗೆ ಸಹ ‘ಹೋಮ್ಬೌಂಡ್’ ಆಯ್ಕೆ ಆಗಿತ್ತು. ಈಗ ನಾಮಿನೇಷನ್ಗೆ ಶಾರ್ಟ್ ಲಿಸ್ಟ್ ಆಗುವ ಸಿನಿಮಾಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ.

ಸಿನಿಮಾಗಳಿಗಾಗಿ (Cinema) ನೀಡಲಾಗುವ ವಿಶ್ವಶ್ರೇಷ್ಠ ಪ್ರಶಸ್ತಿ ಎಂದು ನಂಬಲಾಗಿರುವ ಆಸ್ಕರ್ಸ್ ಅಥವಾ ಅಕಾಡೆಮಿ ಅವಾರ್ಡ್ಸ್ನಲ್ಲಿ ಭಾರತದ ಸಿನಿಮಾಗಳು ಪ್ರಶಸ್ತಿಯ ರೇಸಿನಲ್ಲಿದ್ದು, ಭಾರತದಿಂದ ಈ ಬಾರಿ ಅಧಿಕೃತವಾಗಿ ಆಸ್ಕರ್ಸ್ಗೆ ಆಯ್ಕೆ ಆಗಿರುವ ‘ಹೋಮ್ಬೌಂಡ್’ ಸಿನಿಮಾ ಈಗಾಗಲೇ ಕೆಲವು ಮೆಟ್ಟಿಲುಗಳನ್ನು ಹತ್ತಿದೆ. ಇದೀಗ ಆಸ್ಕರ್ಗೆ ಇನ್ನಷ್ಟು ಸನಿಹವಾಗಿದೆ ‘ಹೋಮ್ಬೌಂಡ್’ ಈ ಹಿಂದೆ ಪ್ರಾಥಮಿಕ ಹಂತ, ಅದರ ಬಳಿಕದ ಅಂತಿಮ ಹದಿನೈದರ ಪಟ್ಟಿಗೆ ಸಹ ‘ಹೋಮ್ಬೌಂಡ್’ ಆಯ್ಕೆ ಆಗಿತ್ತು. ಈಗ ನಾಮಿನೇಷನ್ಗೆ ಶಾರ್ಟ್ ಲಿಸ್ಟ್ ಆಗುವ ಸಿನಿಮಾಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ.
ಕರಣ್ ಜೋಹರ್ ನಿರ್ಮಾಣ ಮಾಡಿರುವ ‘ಹೋಮ್ಬೌಂಡ್’ ಸಿನಿಮಾ ಧರ್ಮ ಮತ್ತು ಜಾತಿ ಮತ್ತು ಮಹಿಳಾ ದೌರ್ಜನ್ಯದ ಬಗೆ ವಸ್ತುವನ್ನು ಒಳಗೊಂಡ ಸಿನಿಮಾ ಆಗಿದ್ದು ಸಿನಿಮಾನಲ್ಲಿ ಇಶಾನ್ ಕಟ್ಟರ್, ಜಾನ್ಹವಿ ಕಪೂರ್ ಮತ್ತು ವಿಶಾಲ್ ಜೇಟ್ವಾ ನಟಿಸಿದ್ದಾರೆ. ಸಿನಿಮಾ ನಿರ್ದೇಶನ ಮಾಡಿರುವುದು ನೀರಜ್ ಗಯ್ವಾನ್ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಆಸ್ಕರ್ಸ್ನ ಅತ್ಯುತ್ತಮ ವಿದೇಶಿ ಸಿನಿಮಾ ವಿಭಾಗದಲ್ಲಿ ಸ್ಪರ್ಧೆಯಲ್ಲಿರುವ ‘ಹೋಮ್ಬೌಂಡ್’ ಸಿನಿಮಾ ಅಂತಿಮ ಹದಿನೈದು ಸಿನಿಮಾಗಳ ಪಟ್ಟಿಗೆ ಆಯ್ಕೆ ಆಗಿತ್ತು. ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದೆ.
ಇದನ್ನೂ ಓದಿ:ಕಮಲ್-ರಜನಿ ಕಾಂಬಿನೇಷನ್ ಸಿನಿಮಾ: ಯುವ ನಿರ್ದೇಶಕನಿಗೆ ಅದೃಷ್ಟ
ಈ ವರೆಗೆ ಭಾರತದ ಐದು ಸಿನಿಮಾಗಳು ಮಾತ್ರವೇ ವಿದೇಶಿ ವಿಭಾಗದಲ್ಲಿ ಆಸ್ಕರ್ಸ್ನ ಶಾರ್ಟ್ ಲಿಸ್ಟ್ ಪಟ್ಟಿ ಸೇರಿವೆ. ಐದು ಸಿನಿಮಾಗಳಲ್ಲಿ ‘ಹೋಮ್ಬೌಂಡ್’ ಸಹ ಒಂದಾಗಿದೆ. ನಾಮಿನೇಷನ್ಸ್ ಪಟ್ಟಿಯನ್ನು ಜನವರಿ 22 ರಂದು ಘೋಷಣೆ ಮಾಡಲಿದ್ದು, ‘ಹೋಮ್ಬೌಂಡ್’ ಸಿನಿಮಾ ನಾಮಿನೇಷನ್ಸ್ಗೆ ಎಂಟ್ರಿ ಕೊಟ್ಟಲ್ಲಿ, ಭಾರತೀಯ ಚಿತ್ರರಂಗದ ಪಾಲಿಗೆ ಹೆಮ್ಮೆಯ ವಿಷಯವಾಗಲಿದೆ. ಈ ಹಿಂದೆ ಕೇವಲ ‘ಲಗಾನ್’ ಸಿನಿಮಾ ಮಾತ್ರವೇ ವಿದೇಶಿ ಸಿನಿಮಾ ವಿಭಾಗದಲ್ಲಿ ಆಸ್ಕರ್ಸ್ನ ನಾಮಿನೇಷನ್ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡ ಭಾರತೀಯ ಸಿನಿಮಾ ಆಗಿತ್ತು.
ಆದರೆ ‘ಹೋಮ್ಬೌಂಡ್’ಗೆ ಕಠಿಣ ಸ್ಪರ್ಧೆ ಸಹ ಇದೆ. ಇರಾಖ್ನ ‘ದಿ ಪ್ರೆಸಿಡೆಂಟ್ ಕೇಕ್’, ಪ್ಯಾಲೆಸ್ತೇನಿನ ‘ಪ್ಯಾಲೆಸ್ತೇನ್ 36’, ‘ದಕ್ಷಿಣ ಕೊರಿಯಾದ ‘ನೋ ಅದರ್ ಚಾಯ್ಸ್’ ಸಿನಿಮಾಗಳು ಕಠಿಣ ಸ್ಪರ್ಧೆ ಒಡ್ಡಲಿವೆ. ಮಾತ್ರವಲ್ಲದೆ ‘ಹೋಮ್ಬೌಂಡ್’ ಸಿನಿಮಾಕ್ಕೆ ಇನ್ನು ಮುಂದಿನ ಹಾದಿ ಕ್ರಮಿಸಲು ದೊಡ್ಡ ಮಟ್ಟದ ಪ್ರಚಾರದ ಅವಶ್ಯಕತೆಯೂ ಸಹ ಇದೆ.
‘ಹೋಮ್ಬೌಂಡ್’ ಸಿನಿಮಾ ಆಸ್ಕರ್ಸ್ ರೇಸಿನಲ್ಲಿ ಇದೆಯಾದರೂ ಸಿನಿಮಾ ಅಂತಿಮ ಹಂತ ತಲುಪಲು ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಭರ್ಜರಿ ಪ್ರಚಾರವನ್ನೂ ಮಾಡಬೇಕಿದೆ. ಆದರೆ ಸಿನಿಮಾದ ನಿರ್ಮಾಪಕರುಗಳ್ಯಾರು ಈ ಬಗ್ಗೆ ಹೆಚ್ಚಿಗೆ ತಲೆ ಕೆಡಿಸಿಕೊಂಡಂತಿಲ್ಲ. ಜನವರಿ 22 ರಂದು ನಾಮಿನೇಷನ್ಸ್ ಘೋಷಣೆ ಆಗಲಿದ್ದು, ಅಂದು ‘ಹೋಮ್ಬೌಂಡ್’ ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆಯುತ್ತದೆಯೇ ಇಲ್ಲವೇ ತಿಳಿಯಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




