AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅನುಷ್ಕಾ ಶೆಟ್ಟಿ ಸಿನಿಮಾ ಪ್ರಮೋಷನ್​ನಿಂದ ದೂರ ಇರೋಕೆ ಪ್ರಭಾಸ್ ಕಾರಣ? ಇಲ್ಲಿದೆ ನಿಜಾಂಶ

ಅನುಷ್ಕಾ ಶೆಟ್ಟಿ ಅವರು ಯಾವುದೇ ಸಿನಿಮಾ ಪ್ರಚಾರದಲ್ಲಿ ಭಾಗಿ ಆಗುವುದಿಲ್ಲ. ಇದಕ್ಕೆ ಕಾರಣವನ್ನು ಅವರು ರಿವೀಲ್ ಮಾಡಿಲ್ಲ. ಸಿನಿಮಾ ತಂಡದವರೇ ಪ್ರಮೋಷನ್​ನಲ್ಲಿ ಭಾಗಿ ಆಗಿಲ್ಲ ಎಂದರೆ ಚಿತ್ರಕ್ಕೆ ಹಿನ್ನಡೆ ಆಗುತ್ತದೆ. ‘ಮಿಸ್ ಶೆಟ್ಟಿ ಮಿಸ್ಟರ್ ಪೊಲಿಶೆಟ್ಟಿ’ ಸಿನಿಮಾಗೂ ಹಿನ್ನಡೆ ಆಗಿದೆ. ಅನುಷ್ಕಾ ಸಿನಿಮಾ ಪ್ರಚಾರಕ್ಕೆ ಏಕೆ ಬರುವುದಿಲ್ಲ ಎನ್ನುವ ಬಗ್ಗೆ ಹೊಸ ಸುದ್ದಿ ಹರಿದಾಡಿದೆ.

ಅನುಷ್ಕಾ ಶೆಟ್ಟಿ ಸಿನಿಮಾ ಪ್ರಮೋಷನ್​ನಿಂದ ದೂರ ಇರೋಕೆ ಪ್ರಭಾಸ್ ಕಾರಣ? ಇಲ್ಲಿದೆ ನಿಜಾಂಶ
ಅನುಷ್ಕಾ ಶೆಟ್ಟಿ
 ಶ್ರೀಲಕ್ಷ್ಮೀ ಎಚ್
| Edited By: |

Updated on: Sep 20, 2023 | 12:18 PM

Share

ನಟಿ ಅನುಷ್ಕಾ ಶೆಟ್ಟಿ ಹಾಗೂ ಪ್ರಭಾಸ್ (Prabhas) ಜೋಡಿಯನ್ನು ಅನೇಕರು ಇಷ್ಟಪಟ್ಟಿದ್ದಾರೆ. ತೆರೆಮೇಲೆ ಮಿಂಚಿರುವ ಈ ಜೋಡಿ ನಿಜ ಜೀವನದಲ್ಲೂ ಒಂದಾಗಬೇಕು ಎಂಬುದು ಅನೇಕರ ಆಸೆ. ಆದರೆ, ಅದು ಸಾಧ್ಯವಾಗಿಲ್ಲ. ಇದಕ್ಕೆ ಕಾರಣ ಕೂಡ ತಿಳಿದು ಬಂದಿಲ್ಲ. ಅನುಷ್ಕಾ ಶೆಟ್ಟಿ (Anushka Shetty) ಯಾವುದೇ ಸಿನಿಮಾ ಪ್ರಚಾರಕ್ಕೆ ಕರೆದರೂ ಹೋಗುವುದಿಲ್ಲ. ಇದಕ್ಕೆ ಪ್ರಭಾಸ್ ಜೊತೆಗಿನ ಪ್ರೇಮ ಕಹಾನಿಯೇ (Anushka Shetty Love Story) ಕಾರಣ ಎನ್ನಲಾಗುತ್ತಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಶುರುವಾಗಿದೆ.

ಅನುಷ್ಕಾ ಶೆಟ್ಟಿ ನಟನೆಯ ‘ಮಿಸ್ ಶೆಟ್ಟಿ ಮಿಸ್ಟರ್ ಪೊಲಿಶೆಟ್ಟಿ’ ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿದೆ. ಈ ಸಿನಿಮಾದಲ್ಲಿ ನವೀನ್ ಪೊಲಿಶೆಟ್ಟಿ ಅವರು ಅನುಷ್ಕಾಗೆ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಬಗ್ಗೆ ಕೆಲವರು ಮೆಚ್ಚುಗೆ ಸೂಚಿಸಿದ್ದಾರೆ. ಸಮಂತಾ ಸೇರಿ ಅನೇಕ ಸೆಲೆಬ್ರಿಟಿಗಳು ಸಿನಿಮಾಗೆ ಭೇಷ್ ಎಂದಿದ್ದಾರೆ. ಅವರು ಸಿನಿಮಾ ಪ್ರಚಾರಕ್ಕೆ ಅಷ್ಟಾಗಿ ಹೋಗಿಲ್ಲ. ಇದು ಸಿನಿಮಾಗೆ ಹಿನ್ನಡೆ ಆಗಿದೆ.

ಅನುಷ್ಕಾ ಶೆಟ್ಟಿ ಅವರು ಯಾವುದೇ ಸಿನಿಮಾ ಪ್ರಚಾರದಲ್ಲಿ ಭಾಗಿ ಆಗುವುದಿಲ್ಲ. ಇದಕ್ಕೆ ಕಾರಣವನ್ನು ಅವರು ರಿವೀಲ್ ಮಾಡಿಲ್ಲ. ಸಿನಿಮಾ ತಂಡದವರೇ ಪ್ರಮೋಷನ್​ನಲ್ಲಿ ಭಾಗಿ ಆಗಿಲ್ಲ ಎಂದರೆ ಚಿತ್ರಕ್ಕೆ ಹಿನ್ನಡೆ ಆಗುತ್ತದೆ. ‘ಮಿಸ್ ಶೆಟ್ಟಿ ಮಿಸ್ಟರ್ ಪೊಲಿಶೆಟ್ಟಿ’ ಸಿನಿಮಾಗೂ ಹಿನ್ನಡೆ ಆಗಿದೆ. ಅನುಷ್ಕಾ ಸಿನಿಮಾ ಪ್ರಚಾರಕ್ಕೆ ಏಕೆ ಬರುವುದಿಲ್ಲ ಎನ್ನುವ ಬಗ್ಗೆ ಹೊಸ ಸುದ್ದಿ ಹರಿದಾಡಿದೆ. ಅನುಷ್ಕಾ ಸಂದರ್ಶನಕ್ಕೆ ಹಾಜರಾದರೆ ಮದುವೆ ಬಗ್ಗೆ ಕೇಳಲಾಗುತ್ತದೆ. ಇದಕ್ಕೆ ಅವರು ಯಾವುದೋ ಒಂದು ಸ್ಪಷ್ಟನೆ ನೀಡಬಹುದು. ಆ ಬಳಿಕ ಸಹಜವಾಗಿಯೇ ಪ್ರಭಾಸ್ ಜೊತೆಗಿನ ಲಿಂಕಪ್ ಬಗ್ಗೆ ಕೇಳಲಾಗುತ್ತದೆ. ಈ ಕಾರಣದಿಂದಲೇ ಅವರು ಯಾವುದೇ ಸಿನಿಮಾ ಪ್ರಚಾರಕ್ಕೆ ಹೋಗಿಲ್ಲ.

ಇದನ್ನೂ ಓದಿ: ಬೆಂಗಳೂರಿನಲ್ಲಿ 3 ದಿನ ಕಂಬಳ; ಉದ್ಘಾಟನೆಗೆ ಬರಲಿದ್ದಾರೆ ಖ್ಯಾತ ನಟಿ ಅನುಷ್ಕಾ ಶೆಟ್ಟಿ

ಅನುಷ್ಕಾ ಶೆಟ್ಟಿ ಅವರ ದೇಹದ ತೂಕ ಹೆಚ್ಚಾಗಿದೆ. ಅವರು ತೂಕ ಕಡಿಮೆ ಮಾಡಿಕೊಳ್ಳಬೇಕು ಎನ್ನುವ ಹಠಕ್ಕೆ ಬಿದ್ದಿದ್ದಾರೆ. ಈ ಕಾರಣದಿಂದಲೇ ಅವರು ಕೆಲವು ಸಿನಿಮಾಗಳ ಆಫರ್ ರಿಜೆಕ್ಟ್ ಮಾಡಿದ್ದಾರಂತೆ. ಅವರು ಹಲವು ರೀತಿಯ ವ್ಯಾಯಾಮ ಮಾಡುತ್ತಿದ್ದಾರೆ. ಕಠಿಣ ಡಯಟ್ ಫಾಲೋ ಮಾಡುತ್ತಿದ್ದಾರೆ. ಆ ಮೂಲಕ ತೂಕ ಇಳಿಸಿಕೊಳ್ಳುವ ಆಲೋಚನೆಯಲ್ಲಿದ್ದಾರೆ.

ಇದನ್ನೂ ಓದಿ: ಬಾಹುಬಲಿ ಸಿನಿಮಾ ಬಳಿಕ ಚಿತ್ರರಂಗದಿಂದ ದೂರಾದರೇಕೆ ಅನುಷ್ಕಾ ಶೆಟ್ಟಿ?

ಚಿರಂಜೀವಿ ಮುಂದಿನ ಸಿನಿಮಾಗೆ ಅನುಷ್ಕಾ ಶೆಟ್ಟಿ ಅವರು ನಾಯಕಿ ಎನ್ನಲಾಗಿದೆ. ಈ ಚಿತ್ರದ ಶೂಟಿಂಗ್ 2024ರಲ್ಲಿ ಆರಂಭ ಆಗಲಿದೆ ಎನ್ನಲಾಗಿದೆ. ಯುವಿ ಕ್ರಿಯೇಷನ್ಸ್ ಬಂಡವಾಳ ಹೂಡಲಿದೆ ಎನ್ನುತ್ತಿವೆ ಮೂಲಗಳು. ಈ ಸಿನಿಮಾ ಶೂಟಿಂಗ್ ಆರಂಭಕ್ಕೂ ಮೊದಲು ಅನುಷ್ಕಾ ಶೆಟ್ಟಿ ತೂಕ ಇಳಿಸಿಕೊಳ್ಳಲು ಪ್ಲಾನ್ ಮಾಡಿದ್ದಾರೆ. ಅನುಷ್ಕಾ ಶೆಟ್ಟಿ ಹಾಗೂ ಪ್ರಭಾಸ್ ಇಬ್ಬರೂ ಬೆಸ್ಟ್​ ಫ್ರೆಂಡ್ಸ್ ಎಂದೇ ಹೇಳಿಕೊಳ್ಳುತ್ತಾ ಬರುತ್ತಿದ್ದಾರೆ. ಆದರೆ, ಇತ್ತೀಚೆಗೆ ಇವರು ಮುಖಾಮುಖಿ ಆಗಿಲ್ಲ. ಅನುಷ್ಕಾ ಉದ್ಯಮಿಯನ್ನು ಮದುವೆ ಆಗಲಿದ್ದಾರೆ ಎಂದು ಕೂಡ ಹೇಳಲಾಗುತ್ತಿದೆ. ಆದರೆ, ಈ ಬಗ್ಗೆ ಸ್ಪಷ್ಟನೆ ಸಿಕ್ಕಿಲ್ಲ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್