ಕನ್ನಡತಿ ರಚಿಕಾ ಸುರೇಶ್ಗೆ ಜೈಪುರ ಟೈಮ್ಸ್ ಫ್ಯಾಷನ್ ವೀಕ್‌ನಲ್ಲಿ ಹೆಜ್ಜೆ ಹಾಕುವ ಅವಕಾಶ
ರೂಪದರ್ಶಿ ರಚಿಕಾ ಸುರೇಶ್ ಅವರು ಈಗಾಗಲೇ ಹಲವು ಕಡೆಗಳಲ್ಲಿ ನಡೆದ ಸೌಂದರ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ. ಇತ್ತೀಚೆಗೆ ನಡೆದ ಜೈಪುರ ಟೈಮ್ಸ್ ಫ್ಯಾಷನ್ ವೀಕ್‌ನಲ್ಲಿ ಡಿಸೈನರ್ ಫಾರೆವರ್ ನವೀನ್ ಕುಮಾರ್ ಅವರ ಶೋ ಸ್ಟಾಪರ್ ಆಗಿ ರಚಿಕಾ ಸುರೇಶ್ ಹೆಜ್ಜೆ ಹಾಕಿದ್ದಾರೆ. ನಟಿಯೂ ಆಗಿರುವ ಅವರು ಚಿತ್ರರಂಗದಲ್ಲೂ ತೊಡಗಿಕೊಂಡಿದ್ದಾರೆ.

ಫ್ಯಾಷನ್ ಜಗತ್ತಿನಲ್ಲಿ ಕನ್ನಡದ ಅನೇಕರು ಹೆಸರು ಮಾಡುತ್ತಿದ್ದಾರೆ. ಖ್ಯಾತ ಫ್ಯಾಷನ್ ಡಿಸೈನರ್ ಫಾರೆವರ್ ನವೀನ್ ಕುಮಾರ್ ಅವರು ಈಗಾಗಲೇ ಅನೇಕ ಶೋಗಳಲ್ಲಿ ಭಾಗವಹಿಸಿದ್ದಾರೆ. ಇತ್ತೀಚೆಗೆ ನಡೆದ ಜೈಪುರ ಟೈಮ್ಸ್ ಫ್ಯಾಷನ್ ವೀಕ್‌ನಲ್ಲಿ ನವೀನ್ ಕುಮಾರ್ (Forever Naveen Kumar) ಪಾಲ್ಗೊಂಡಿದ್ದರು. ನವೀನ್ ಕುಮಾರ್ ಅವರ ಶೋ ಸ್ಟಾಪರ್ ಆಗಿ ಕನ್ನಡದ ನಟಿ, ರೂಪದರ್ಶಿ ರಚಿಕಾ ಸುರೇಶ್ (Rachika Suresh) ಅವರು ಭಾಗವಹಿಸಿ ಗಮನ ಸೆಳೆದರು.
ಫ್ಯಾಷನ್ ಡಿಸೈನರ್ ನವೀನ್ ಕುಮಾರ್ ಅವರು ಈಗಾಗಲೇ ದೇಶಾದ್ಯಂತ 140ಕ್ಕೂ ಅಧಿಕ ಫ್ಯಾಷನ್ ಶೋಗಳಲ್ಲಿ ಭಾಗವಹಿಸಿ ಹೆಸರು ಮಾಡಿದ್ದಾರೆ. ಅದೇ ರೀತಿ ಮಾಡೆಲ್ ರಚಿಕಾ ಸುರೇಶ್ ಅವರು ರೈತ ಕುಟುಂಬದಿಂದ ಬಂದಿದ್ದು, ರಾಷ್ಟ್ರಮಟ್ಟದಲ್ಲಿ ಫ್ಯಾಷನ್ ಶೋಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ರಚಿಕಾ ಸುರೇಶ್ ಅವರು ಮೊದಲಿನಿಂದಲೂ ಮಾಡೆಲಿಂಗ್ ಹಾಗೂ ಸಿನಿಮಾ ಎರಡೂ ಕ್ಷೇತ್ರಗಳಲ್ಲಿ ಮುನ್ನಡೆಯುತ್ತಿದ್ದಾರೆ.
ಇದನ್ನೂ ಓದಿ: ಫ್ಯಾಷನ್ ಐಕಾನ್ ಸೋನಂ ಕಪೂರ್ ಕೈಯಲ್ಲಿರುವ ಬ್ಯಾಗಿನ ಬೆಲೆ ಎಷ್ಟು ಲಕ್ಷಗಳು?
ರಚಿಕಾ ಸುರೇಶ್ ಅವರು ಈಗಾಗಲೇ ಅನೇಕ ಕಡೆಗಳಲ್ಲಿ ನಡೆದ ಸೌಂದರ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ. ಈಗ ಅವರು ಜೈಪುರ ಟೈಮ್ಸ್ ಫ್ಯಾಷನ್ ವೀಕ್‌ನಲ್ಲಿ ಫಾರೆವರ್ ನವೀನ್ ಕುಮಾರ್ ಅವರ ಶೋ ಸ್ಟಾಪರ್ ಆಗಿ ಹೆಜ್ಜೆ ಹಾಕಿದ್ದಾರೆ. ರಚಿಕಾ ಸುರೇಶ್ ಅವರು ಧರಿಸಿದ್ದ ಸುಂದರ ಕಾಸ್ಟೂಮ್ ಅನ್ನು ಫಾರೆವರ್ ನವೀನ್‌ಕುಮಾರ್ ಡಿಸೈನ್ ಮಾಡಿದ್ದಾರೆ. ಎರಡು ದಿನಗಳ ಕಾಲ ಈ ಸೌಂದರ್ಯ ಸ್ಪರ್ಧೆ ನಡೆದಿದೆ. ಇದರಲ್ಲಿ ಭಾರತದ ಅನೇಕ ಫ್ಯಾಷನ್ ಡಿಸೈನರ್ಗಳು ಹಾಗೂ ಮಾಡೆಲ್ಗಳು ಭಾಗಿಯಾಗಿದ್ದರು. ಕರ್ನಾಟಕದ ಬೆಂಗಳೂರು ಪರವಾಗಿ ನವೀನ್ ಕುಮಾರ್ ಅವರು ಭಾಗವಹಿಸಿದರು.
ಇದನ್ನೂ ಓದಿ: ಪ್ರತಿಷ್ಠಿತ ಮಿಲನ್ ಫ್ಯಾಷನ್ ವೀಕ್‌ನಲ್ಲಿ ಮಿಂಚಿದ ನಟಿ ರಶ್ಮಿಕಾ ಮಂದಣ್ಣ; ಇಲ್ಲಿದೆ ಫೋಟೋಸ್
ರೈತರ ಮಗಳಾದ ರಚಿಕಾ ಸುರೇಶ್ ಅವರು ಮಾಡೆಲಿಂಗ್ ಹಾಗೂ ಸಿನಿಮಾ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಕನ್ನಡ ಚಿತ್ರರಂಗ ಮಾತ್ರವಲ್ಲದೇ ಕಾಲಿವುಡ್ನಲ್ಲೂ ಅವರು ನಟಿಸುತ್ತಿದ್ದಾರೆ. ಸ್ಯಾಂಡಲ್ವುಡ್ ಹಾಗೂ ಕಾಲಿವುಡ್ ಸಿನಿಮಾಗಳ ಬಳಿಕ ರಚಿಕಾ ಸುರೇಶ್ ಅವರಿಗೆ ತೆಲುಗು ಚಿತ್ರರಂಗದಿಂದಲೂ ಅವಕಾಶ ಬರುತ್ತಿದೆಯಂತೆ. ಆ ಬಗ್ಗೆ ಅವರು ಅಧಿಕೃತ ಘೋಷಣೆ ಮಾಡುವುದು ಬಾಕಿ ಇದೆ. ಇಂಟರ್‌ನ್ಯಾಷನಲ್ ಫ್ಯಾಷನ್ ಶೋಗಳಲ್ಲೂ ಭಾಗವಹಿಸಿ ಗುರುತಿಸಿಕೊಂಡ ಅವರು ಹಲವಾರು ಪ್ರತಿಷ್ಠಿತ ಕಂಪನಿಗಳಿಗೆ ರೂಪದರ್ಶಿಯಾಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.