AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Riya Kumari: ಮಧ್ಯ ದಾರಿಯಲ್ಲಿ ನಟಿ ರಿಯಾ ಹತ್ಯೆ; ಗಂಡನ ಹೇಳಿಕೆ ಮೇಲೆ ಪೊಲೀಸರಿಗೆ ಮೂಡಿದೆ ಅನುಮಾನ

Riya Kumari shot dead: ನಟಿ ರಿಯಾ ಕುಮಾರಿ ಅವರು ಕುಟುಂಬ ಸಮೇತರಾಗಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಈ ಸಂದರ್ಭದಲ್ಲಿ ಗುಂಡಿನ ದಾಳಿ ಮಾಡಲಾಗಿದೆ. ಈ ಹತ್ಯೆ ಬಗ್ಗೆ ಸಾಕಷ್ಟು ಅನುಮಾನ ಮೂಡಿದೆ.

Riya Kumari: ಮಧ್ಯ ದಾರಿಯಲ್ಲಿ ನಟಿ ರಿಯಾ ಹತ್ಯೆ; ಗಂಡನ ಹೇಳಿಕೆ ಮೇಲೆ ಪೊಲೀಸರಿಗೆ ಮೂಡಿದೆ ಅನುಮಾನ
ರಿಯಾ ಕುಮಾರಿ
TV9 Web
| Edited By: |

Updated on:Dec 28, 2022 | 10:41 PM

Share

ಚಿತ್ರರಂಗಕ್ಕೆ ಮೇಲಿಂದ ಮೇಲೆ ಆಘಾತ ಎದುರಾಗುತ್ತಲೇ ಇದೆ. ಕಿರುತೆರೆ ನಟಿ ತುನಿಶಾ ಶರ್ಮಾ ಚಿತೆಯ ಬೆಂಕಿ ಆರುವ ಮುನ್ನವೇ ಮತ್ತೋರ್ವ ನಟಿಯ ಕೊಲೆ ಆಗಿದೆ. ಝಾರ್ಖಂಡ್​ ​ ಮೂಲದ ನಟಿ ರಿಯಾ ಕುಮಾರಿ (Riya Kumari) ಅವರನ್ನು ಮಧ್ಯ ದಾರಿಯಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಬುಧವಾರ (ಡಿ.28) ನಸುಕಿನಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ರಾಷ್ಟ್ರೀಯ ಹೆದ್ದಾರಿ 16ರಲ್ಲಿ ದರೋಡೆಕೋರರು ಈ ಕೃತ್ಯ ಎಸಗಿದ್ದಾರೆ ಎಂದು ರಿಯಾ ಕುಮಾರಿ ಅವರ ಪತಿ ಪ್ರಕಾಶ್​ ಕುಮಾರ್​ ಹೇಳಿಕೆ ನೀಡಿದ್ದಾರೆ. ಘಟನೆ (Riya Kumari Death) ನಡೆದಾಗ ಪ್ರಕಾಶ್​ ಕೂಡ ಜೊತೆಯಲ್ಲೇ ಇದ್ದರು. ಆದರೆ ಅವರ ಹೇಳಿಕೆ ಮೇಲೆ ಪೊಲೀಸರಿಗೆ ಅನುಮಾನ ಮೂಡಿದೆ. ಹಾಗಾಗಿ ಎಲ್ಲ ಆಯಾಮದಿಂದಲೂ ತನಿಖೆ ನಡೆಸಲಾಗುತ್ತಿದೆ.

ಝಾರ್ಖಂಡ್​ನ ಪ್ರಾದೇಶಿಕ ಸಿನಿಮಾಗಳಲ್ಲಿ ಮತ್ತು ಆಲ್ಬಂ ಸಾಂಗ್​ಗಳಲ್ಲಿ ನಟಿಸುವ ಮೂಲಕ ರಿಯಾ ಕುಮಾರಿ ಅವರು ಖ್ಯಾತಿ ಗಳಿಸಿದ್ದರು. ಅವರ ಪತಿ ಪ್ರಕಾಶ್​ ಕುಮಾರ್​ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ಮಗಳ ಜೊತೆ ಈ ದಂಪತಿ ಕಾರಿನಲ್ಲಿ ತೆರಳಿದ್ದಾಗ ಹೌರಾ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 16ರಲ್ಲಿ ದುರ್ಘಟನೆ ಸಂಭವಿಸಿದೆ.

ರಿಯಾ ಪತಿ ಪ್ರಕಾಶ್​ ಕುಮಾರ್​ ಹೇಳಿದ್ದೇನು?

ಪ್ರಕಾಶ್​ ಕುಮಾರ್​ ಹೇಳಿಕೆ ಪ್ರಕಾರ, ಬುಧವಾರ ರಾಂಚಿಯಿಂದ ಪಶ್ಚಿಮ ಬಂಗಾಳಕ್ಕೆ ಅವರು ಪತ್ನಿ ಮತ್ತು ಮಗಳ ಜೊತೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಬೆಳಗ್ಗೆ 6 ಗಂಟೆ ಸಮಯದಲ್ಲಿ ಮೂತ್ರ ವಿಸರ್ಜನೆ ಸಲುವಾಗಿ ಹೆದ್ದಾರಿಯಲ್ಲಿ ಕಾರು ನಿಲ್ಲಿಸಿದರು. ಈ ವೇಳೆ ಮೂವರು ದರೋಡೆಕೋರರು ದಾಳಿ ಮಾಡಿದರು. ಪ್ರಕಾಶ್​ ಕುಮಾರ್​ ಅವರನ್ನು ರಕ್ಷಿಸಲು ಬಂದ ಪತ್ನಿ ರಿಯಾ ಕುಮಾರಿಗೆ ಖದೀಮರು ಗುಂಡಿಕ್ಕಿದರು.

ಇದನ್ನೂ ಓದಿ
Image
Rahul Koli Death: ಆಸ್ಕರ್​ಗೆ ಭಾರತದಿಂದ ಆಯ್ಕೆ ಆದ ‘ಚೆಲ್ಲೋ ಶೋ’ ಚಿತ್ರದ ಬಾಲ ನಟ ಕ್ಯಾನ್ಸರ್​ನಿಂದ ನಿಧನ
Image
Breaking News: ಖ್ಯಾತ ನಟ ಅರುಣ್​ ಬಾಲಿ ನಿಧನ; ಹಿರಿಯ ಕಲಾವಿದನ ಅಗಲಿಕೆಗೆ ಕಂಬನಿ ಮಿಡಿದ ಚಿತ್ರರಂಗ
Image
Raju Srivastava Death: ಹಾಸ್ಯ ನಟ ರಾಜು ಶ್ರೀವಾಸ್ತವ​ ನಿಧನ; ಕಡೆಗೂ ಫಲಿಸಲಿಲ್ಲ ಅಭಿಮಾನಿಗಳ ಪ್ರಾರ್ಥನೆ
Image
Pradeep Patwardhan: ಹೃದಯಾಘಾತದಿಂದ ನಟ ಪ್ರದೀಪ್​ ಪಟವರ್ಧನ್​ ನಿಧನ; ಸಂತಾಪ ಸೂಚಿಸಿದ ಮಹಾರಾಷ್ಟ್ರ ಸಿಎಂ

ರಿಯಾ ಕುಮಾರಿ ಅವರ ಹತ್ಯೆ ಬಳಿಕ ದರೋಡೆಕೋರರು ಓಡಿಹೋದರು. ಆ ಬಳಿಕ ಪ್ರಕಾಶ್ ಕುಮಾರ್​ ಅವರು ಕಾರಿನಲ್ಲಿ ಪತ್ನಿಯನ್ನು ಕೂರಿಸಿಕೊಂಡು ಮೂರು ಕಿಲೋಮೀಟರ್ ತನಕ ಸಾಗಿ ಬಂದರು. ನಂತರ ಸ್ಥಳೀಯರ ಸಹಾಯ ಪಡೆದು ಆಸ್ಪತ್ರೆಗೆ ಸೇರಿಸಲಾಯಿತು. ಆದರೆ ಅಷ್ಟು ಹೊತ್ತಿಗಾಗಲೇ ರಿಯಾ ಕುಮಾರಿ ಪ್ರಾಣ ಪಕ್ಷಿ ಹಾರಿಹೋಗಿತ್ತು ಎಂದು ಪ್ರಕಾಶ್​ ಕುಮಾರ್​ ಹೇಳಿದ್ದಾರೆ.

ಗಂಡನ ಹೇಳಿಕೆಯಲ್ಲಿ ಮೂಡಿದೆ ಅನುಮಾನ:

ಪ್ರಕಾಶ್​ ಕುಮಾರ್​ ಹೇಳಿಕೆಯನ್ನು ಪೊಲೀಸರು ಸಂಪೂರ್ಣವಾಗಿ ಒಪ್ಪಿಕೊಳ್ಳಲು ಸಿದ್ಧರಿಲ್ಲ ಎಂದು ವರದಿ ಆಗಿದೆ. ಆ ನಿರ್ದಿಷ್ಟ ಜಾಗದಲ್ಲಿ ಕಾರು ನಿಲ್ಲುತ್ತದೆ ಎಂದು ದರೋಡೆಕೋರರಿಗೆ ಹೇಗೆ ಗೊತ್ತಿತ್ತು? ಒಂದು ವೇಳೆ ದರೋಡೆಕೋರರು ಫಾಲೋ ಮಾಡಿಕೊಂಡು ಬಂದಿದ್ದಾರೆ ಅಂದಾದರೆ ಅದು ಪ್ರಕಾಶ್​ಗೆ ಗೊತ್ತಾಗಲಿಲ್ಲವೇ ಎಂಬ ಪ್ರಶ್ನೆ ಎದುರಾಗಿದೆ. ಪ್ರಕಾಶ್ ಕಾರು ನಿಲ್ಲಿಸಿದ ಜಾಗ ಕೂಡ ಪಾರ್ಕಿಂಗ್​ಗೆ ಸೂಕ್ತವಾಗಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 10:41 pm, Wed, 28 December 22

Follow Us
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ
ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ