Jr NTR: ಆಸ್ಕರ್​ ಸಮಾರಂಭದ ಆರಂಭಕ್ಕೂ ಮುನ್ನವೇ ಬೇಸರದ ಸುದ್ದಿ ನೀಡಿದ ಜೂನಿಯರ್​ ಎನ್​ಟಿಆರ್​

|

Updated on: Mar 10, 2023 | 5:59 PM

Naatu Naatu Song | Oscars 2023: ‘ನಾವು ಸೂಕ್ತ ತಯಾರಿ ಮಾಡಿಕೊಳ್ಳದೇ ಆಸ್ಕರ್​ ವೇದಿಕೆ ಏರಲು ಆಗುವುದಿಲ್ಲ’ ಎಂದು ಜೂನಿಯರ್​ ಎನ್​ಟಿಆರ್​ ಹೇಳಿದ್ದಾರೆ. ಇದು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.

Jr NTR: ಆಸ್ಕರ್​ ಸಮಾರಂಭದ ಆರಂಭಕ್ಕೂ ಮುನ್ನವೇ ಬೇಸರದ ಸುದ್ದಿ ನೀಡಿದ ಜೂನಿಯರ್​ ಎನ್​ಟಿಆರ್​
ಜೂನಿಯರ್​ ಎನ್​ಟಿಆರ್
Follow us on

ಸಿನಿಪ್ರಿಯರ ಗಮನವೆಲ್ಲ ಆಸ್ಕರ್​ ಪ್ರಶಸ್ತಿಯ (Oscar Award 2023)  ಕಡೆಗಿದೆ. ಈ ಬಾರಿ ಮೂರು ವಿಭಾಗಗಳಲ್ಲಿ ಭಾರತದ ಸಿನಿಮಾಗಳು ನಾಮಿನೇಟ್​ ಆಗಿರುವುದರಿಂದ ಭಾರಿ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಮಾರ್ಚ್​ 13ರ ಮುಂಜಾನೆ ಆಸ್ಕರ್​ ಪ್ರಶಸ್ತಿ ಪ್ರದಾನ ಸಮಾರಂಭ ಪ್ರಸಾರ ಆಗಲಿದೆ. ‘ಆರ್​ಆರ್​ಆರ್​’ ಸಿನಿಮಾದ ‘ನಾಟು ನಾಟು..’ ಹಾಡು (Naatu Naatu Song) ‘ಬೆಸ್ಟ್​ ಒರಿಜಿನಲ್​ ಸಾಂಗ್​’ ವಿಭಾಗದಲ್ಲಿ ನಾಮನಿರ್ದೇಶನಗೊಂಡಿದೆ. ಈ ಹಾಡಿನಲ್ಲಿ ಹೆಜ್ಜೆ ಹಾಕಿರುವ ರಾಮ್​ ಚರಣ್​ ಮತ್ತು ಜೂನಿಯರ್​ ಎನ್​ಟಿಆರ್​ ಅವರು ಆಸ್ಕರ್​ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗಿ ಆಗಲು ಈಗಾಗಲೇ ಅಮೆರಿಕದ ಲಾಸ್​ ಏಂಜಲಿಸ್​ಗೆ ತೆರಳಿದ್ದಾರೆ. ಅಭಿಮಾನಿಗಳ ಪಾಲಿನ ಬೇಸರ ಏನೆಂದರೆ, ಜೂನಿಯರ್​ ಎನ್​ಟಿಆರ್ (Jr NTR)​ ಅವರು ಒಂದು ಕಹಿ ಸುದ್ದಿ ನೀಡಿದ್ದಾರೆ.

ಲಾಸ್​ ಏಂಜಲಿಸ್​ನ ಡಾಲ್ಬಿ ಥಿಯೇಟರ್​ನಲ್ಲಿ ಆಸ್ಕರ್​ ಸಮಾರಂಭ ನಡೆಯಲಿದೆ. ಹಾಲಿವುಡ್​ ಸೇರಿದಂತೆ ಪ್ರಪಂಚದ ವಿವಿಧ ಭಾಷೆಯ ಚಿತ್ರರಂಗದ ಗಣ್ಯರೆಲ್ಲ ಆ ಸಮಾರಂಭದಲ್ಲಿ ಭಾಗಿ ಆಗಲಿದ್ದಾರೆ. ಅಂಥ ವೇದಿಕೆಯಲ್ಲಿ ಜೂನಿಯರ್​ ಎನ್​ಟಿಆರ್​ ಮತ್ತು ರಾಮ್​ ಚರಣ್​ ಅವರು ‘ನಾಟು ನಾಟು..’ ಹಾಡಿಗೆ ಹೆಜ್ಜೆ ಹಾಕಲಿದ್ದಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಅದು ಸಾಧ್ಯವಿಲ್ಲ ಎಂದು ಜೂನಿಯರ್​ ಎನ್​ಟಿಆರ್​ ಹೇಳಿದ್ದಾರೆ.

‘ನಾನು ಡ್ಯಾನ್ಸ್​ ಮಾಡಬೇಕು ಅಂತ ಅಂದುಕೊಂಡಿದ್ದೆ. ಆದರೆ ಅದು ಸಾಧ್ಯವಾಗುತ್ತಿಲ್ಲ. ಯಾಕೆಂದರೆ ರಿಹರ್ಸಲ್​ ಮಾಡಲು ನಮಗೆ ಸಮಯ ಸಿಕ್ಕಿಲ್ಲ. ನಾವು ಸೂಕ್ತ ತಯಾರಿ ಮಾಡಿಕೊಳ್ಳದೇ ಜಗತ್ತಿನ ಅತಿ ದೊಡ್ಡ ವೇದಿಕೆ ಏರಲು ಆಗುವುದಿಲ್ಲ’ ಎಂದು ಜೂನಿಯರ್​ ಎನ್​ಟಿಆರ್​ ಹೇಳಿದ್ದಾರೆ.

ಇದನ್ನೂ ಓದಿ
‘ಗೋಲ್ಡನ್​ ಗ್ಲೋಬ್​​’ ಬಳಿಕ ವಿದೇಶದಲ್ಲಿ ಮತ್ತೆರಡು ಪ್ರಶಸ್ತಿ ಬಾಚಿಕೊಂಡ ‘ಆರ್​ಆರ್​ಆರ್​’ ಚಿತ್ರ
Golden Globes 2023: ‘ಗೋಲ್ಡನ್​ ಗ್ಲೋಬ್​’ ಪ್ರಶಸ್ತಿ ಪಡೆದ ಸಂಭ್ರಮದಲ್ಲಿ ‘ಆರ್​ಆರ್​ಆರ್​’ ತಂಡ; ಇಲ್ಲಿದೆ ಫೋಟೋ ಗ್ಯಾಲರಿ
Golden Globes 2023: ಅತ್ಯುತ್ತಮ ಒರಿಜಿನಲ್ ಸಾಂಗ್ ಪ್ರಶಸ್ತಿ ಬಾಚಿಕೊಂಡ ಆರ್​ಆರ್​ಆರ್​ನ ನಾಟು ನಾಟು ಹಾಡು
RRR: ಜಪಾನ್​ನಲ್ಲಿ ಮೊದಲ ದಿನವೇ 1 ಕೋಟಿ ರೂಪಾಯಿ ಗಳಿಸಿದ ‘ಆರ್​ಆರ್​ಆರ್​’: ಜೋರಾಗಿದೆ ಕ್ರೇಜ್​

ಇದನ್ನೂ ಓದಿ: RRR New Trailer: ಆರ್​ಆರ್​ಆರ್ ಹೊಸ ಟ್ರೈಲರ್ ಬಿಡುಗಡೆ, ಸಿನಿಮಾದಲ್ಲಿಲ್ಲದ ಕೆಲ ದೃಶ್ಯಗಳ ಸೇರ್ಪಡೆ

‘ನಾನು ಬ್ಯುಸಿ ಆಗಿದ್ದೆ. ರಾಮ್​ ಚರಣ್​ ಕೂಡ ಮೊದಲೇ ಒಪ್ಪಿಕೊಂಡ ಕೆಲಸಗಳ ಕಾರಣದಿಂದ ಬ್ಯುಸಿ ಆಗಿದ್ದರು. ರಿಹರ್ಸಲ್​ ಮಾಡಿಲ್ಲದ ಕಾರಣ ನಾವು ವೇದಿಕೆಯಲ್ಲಿ ನಾಟು ನಾಟು ಹಾಡಿಗೆ ಪರ್ಫಾರ್ಮ್​ ಮಾಡುವುದಿಲ್ಲ ಅಂತ ನನಗೆ ಅನಿಸುತ್ತದೆ. ನಮ್ಮ ಮ್ಯೂಸಿಕ್​ ಡೈರೆಕ್ಟರ್​ ಎಂ.ಎಂ. ಕೀರವಾಣಿ ಮತ್ತು ಗಾಯಕರಾದ ರಾಹುಲ್​ ಸಿಪ್ಲಿಗಂಜ್​ ಹಾಗೂ ಕಾಲ ಭೈರವ ಅವರು ಹಾಡು ಹೇಳಲಿದ್ದಾರೆ. ಪ್ರೇಕ್ಷಕರ ಜೊತೆ ಕುಳಿತು ಅದನ್ನು ನೋಡಲು ಚೆನ್ನಾಗಿರುತ್ತದೆ’ ಎಂದು ಜೂನಿಯರ್ ಎನ್​ಟಿಆರ್​ ಹೇಳಿದ್ದಾರೆ.

ಇದನ್ನೂ ಓದಿ: RRR Re Release: ಅಮೆರಿಕದ ಬಳಿಕ ಭಾರತದ ಎರಡು ರಾಜ್ಯಗಳಲ್ಲಿ ಆರ್​ಆರ್​ಆರ್ ಮರುಬಿಡುಗಡೆ

ರಾಜಮೌಳಿ ಅವರು ‘ಆರ್​ಆರ್​ಆರ್​’ ಚಿತ್ರವನ್ನು ಆಸ್ಕರ್ ಸ್ಪರ್ಧೆಗೆ ನಾಮಿನೇಟ್​ ಮಾಡಿಸಲು ಸಾಕಷ್ಟು ಹಣ ಕರ್ಚು ಮಾಡಿದ್ದಾರೆ ಎಂಬ ಆರೋಪ ಇದೆ. ಆ ಬಗ್ಗೆ ಇನ್ನೂ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆಸ್ಕರ್​ ಪ್ರಶಸ್ತಿ ಸಮಾರಂಭವನ್ನು ಮುಗಿಸಿಕೊಂಡು ಬಂದ ಬಳಿಕ ಅವರು ಈ ಕುರಿತು ಸ್ಪಷ್ಟನೆ ನೀಡಲಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.