Sai Pallavi: ‘ರಾಮ್ ಚರಣ್, ಜೂ. ಎನ್ಟಿಆರ್, ಅಲ್ಲು ಅರ್ಜುನ್ ಜತೆ ಒಟ್ಟಿಗೆ ಡ್ಯಾನ್ ಮಾಡ್ಬೇಕು’: ಸಾಯಿ ಪಲ್ಲವಿ
Tollywood News | Sai Pallavi: ಟಾಲಿವುಡ್ನ ಮೂವರು ಸ್ಟಾರ್ ಹೀರೋಗಳ ಪೈಕಿ ಯಾರ ಜೊತೆ ಡ್ಯಾನ್ಸ್ ಮಾಡಲು ಇಷ್ಟಪಡುತ್ತೀರಿ ಎಂದು ಸಾಯಿ ಪಲ್ಲವಿಗೆ ಪ್ರಶ್ನೆ ಕೇಳಲಾಯಿತು. ಅದಕ್ಕೆ ಅವರು ಜಾಣತನದಲ್ಲಿ ಉತ್ತರ ನೀಡಿದ್ದಾರೆ.
ನಟಿ ಸಾಯಿ ಪಲ್ಲವಿ (Sai Pallavi) ಅವರು ಅತ್ಯುತ್ತಮ ಡ್ಯಾನ್ಸರ್ ಎಂಬುದರಲ್ಲಿ ಅನುಮಾನವೇ ಬೇಡ. ‘ರೌಡಿ ಬೇಬಿ..’ ಹಾಡಿನಲ್ಲಿ ಅವರು ಹೆಜ್ಜೆ ಹಾಕಿದ ಪರಿ ಕಂಡು ಅಭಿಮಾನಿಗಳು ಸಖತ್ ಎಂಜಾಯ್ ಮಾಡಿದ್ದಾರೆ. ಅವರ ಟ್ಯಾಲೆಂಟ್ಗೆ ಅನುಗುಣವಾಗಿ ನೃತ್ಯ ಪ್ರಧಾನವಾದ ಒಂದು ಸಿನಿಮಾ ಮಾಡಬೇಕು ಎಂಬುದು ಅಭಿಮಾನಿಗಳ ಆಸೆ. ಅದಕ್ಕೆ ಇನ್ನೂ ಕಾಲ ಕೂಡಿ ಬಂದಿಲ್ಲ. ಸಾಯಿ ಪಲ್ಲವಿ ಭಾಗವಹಿಸುವ ಬಹುತೇಕ ಸಂದರ್ಶನಗಳಲ್ಲಿ ಡ್ಯಾನ್ಸ್ ಬಗ್ಗೆ ಪ್ರಶ್ನೆ ಎದುರಾಗುತ್ತದೆ. ಇತ್ತೀಚೆಗೆ ‘ನಿಜಂ ವಿಥ್ ಸ್ಮಿತಾ’ ಟಾಕ್ ಶೋನಲ್ಲಿ ಅವರು ಭಾಗವಹಿಸಿದ್ದರು. ಆಗ ಟಾಲಿವುಡ್ (Tollywood) ನಟರಾದ ರಾಮ್ ಚರಣ್, ಜೂನಿಯರ್ ಎನ್ಟಿಆರ್ ಮತ್ತು ಅಲ್ಲು ಅರ್ಜುನ್ (Allu Arjun) ಜೊತೆ ಡ್ಯಾನ್ಸ್ ಮಾಡಬೇಕು ಎಂಬ ಆಸೆಯನ್ನು ಸಾಯಿ ಪಲ್ಲವಿ ವ್ಯಕ್ತಪಡಿಸಿದ್ದಾರೆ.
ರಾಮ್ ಚರಣ್, ಜೂನಿಯರ್ ಎನ್ಟಿಆರ್, ಅಲ್ಲು ಅರ್ಜುನ್ ಈ ಮೂವರಲ್ಲಿ ಯಾರ ಜೊತೆ ಡ್ಯಾನ್ಸ್ ಮಾಡಲು ಇಷ್ಟಪಡುತ್ತೀರಿ ಎಂದು ಸಾಯಿ ಪಲ್ಲವಿಗೆ ಪ್ರಶ್ನೆ ಕೇಳಲಾಯಿತು. ಅದಕ್ಕೆ ಅವರು ಜಾಣತನದಲ್ಲಿ ಉತ್ತರ ನೀಡಿದ್ದಾರೆ. ಯಾವುದೇ ಒಬ್ಬ ಹೀರೋನ ಹೆಸರು ಹೇಳಿದರೆ ಇನ್ನುಳಿದ ಇಬ್ಬರು ಹೀರೋಗಳ ಫ್ಯಾನ್ಸ್ ಬೇಸರ ಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ. ಹಾಗಾಗಿ ‘ಈ ಮೂವರ ಜೊತೆಗೂ ಒಂದೇ ಹಾಡಿನಲ್ಲಿ ನಾನು ಡ್ಯಾನ್ಸ್ ಮಾಡಬೇಕು’ ಎಂದು ಸಾಯಿ ಪಲ್ಲವಿ ಹೇಳಿದ್ದಾರೆ.
ಇದನ್ನೂ ಓದಿ: Sai Pallavi: ಸೀತೆ ಪಾತ್ರದಲ್ಲಿ ನಟಿಸುತ್ತಾರಾ ಸಾಯಿ ಪಲ್ಲವಿ? ಇದು ಬೆಸ್ಟ್ ಆಯ್ಕೆ ಅಂತಾರೆ ಅಭಿಮಾನಿಗಳು
ಚಿತ್ರರಂಗದಲ್ಲಿ ಗ್ಲಾಮರ್ ಹಂಗು ಇಲ್ಲದೇ ಬೆಳೆದ ನಟಿ ಸಾಯಿ ಪಲ್ಲವಿ. ಹೀರೋ ಜೊತೆ ಮರಸುತ್ತುವ ಪಾತ್ರದ ಬದಲು ನಟನೆಯ ಮಹತ್ವ ಇರುವಂತಹ ಪಾತ್ರಗಳನ್ನು ಅವರು ಆಯ್ಕೆ ಮಾಡಿಕೊಳ್ಳುತ್ತಾರೆ. ಆ ಕಾರಣದಿಂದಲೇ ಅವರು ಚಿತ್ರರಂಗಲ್ಲಿ ಗಟ್ಟಿಯಾಗಿ ನೆಲೆ ಕಂಡುಕೊಂಡಿದ್ದಾರೆ. ಒಂದಕ್ಕಿಂತ ಒಂದು ಒಳ್ಳೆಯ ಆಫರ್ಗಳು ಅವರಿಗೆ ಸಿಗುತ್ತಿವೆ.
ಇದನ್ನೂ ಓದಿ: ಸಾಯಿ ಪಲ್ಲವಿಗೆ ಹಿನ್ನಡೆ: ಪೊಲೀಸ್ ವಿಚಾರಣೆಗೆ ಹಾಜರಾಗಲೇ ಬೇಕು ಎಂದ ಕೋರ್ಟ್
‘ಪುಷ್ಪ 2’ ಚಿತ್ರದಲ್ಲಿ ನಟಿಸುತ್ತಾರಾ ಸಾಯಿ ಪಲ್ಲವಿ?
ಸಾಯಿ ಪಲ್ಲವಿ ಅವರು ‘ಪುಷ್ಪ 2’ ಸಿನಿಮಾದಲ್ಲಿ ನಟಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಚಿತ್ರತಂಡದವರು ಅಧಿಕೃತವಾಗಿ ಏನನ್ನೂ ಹೇಳಿಲ್ಲ. ಸಾಯಿ ಪಲ್ಲವಿ ಕೂಡ ಯಾವುದೇ ವಿಚಾರ ಬಾಯಿ ಬಿಟ್ಟಿಲ್ಲ. ಹಾಗಿದ್ದರೂ ಕೂಡ ಟಾಲಿವುಡ್ ಅಂಗಳಲ್ಲಿ ಈ ಗಾಸಿಪ್ ಜೋರಾಗಿದೆ. ಈ ಚಿತ್ರದಲ್ಲಿ ಫಹಾದ್ ಫಾಸಿಲ್ ಅವರು ಒಂದು ಪಾತ್ರ ಮಾಡುತ್ತಿದ್ದಾರೆ. ಅವರ ಪತ್ನಿಯ ಪಾತ್ರದಲ್ಲಿ ಸಾಯಿ ಪಲ್ಲವಿ ಅಭಿನಯಿಸುತ್ತಾರೆ ಎಂಬ ಗಾಸಿಪ್ ಹಬ್ಬಿದೆ. ಈ ಗಾಸಿಪ್ ನಿಜವಾದರೆ ಅಭಿಮಾನಿಗಳಿಗೆ ಸಖತ್ ಖುಷಿ ಆಗಲಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.