AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಜಯ್ ಬಳಿಕ ತೆಲುಗು ರಾಜ್ಯಗಳಲ್ಲಿ ಜೂ ಎನ್​​ಟಿಆರ್, ರಾಜಕೀಯ ಎಂಟ್ರಿ ಸುಳಿವು ಕೊಟ್ಟ ನಟ?

Jr NTR and politics: ತಮಿಳುನಾಡಿನ ಸಿಎಂ ಆದ ಸೂಪರ್ ಸ್ಟಾರ್ ವಿಜಯ್ ಅವರ ಈ ಯಶಸ್ಸು, ಇತರೆ ಕೆಲವು ಸೂಪರ್ ಸ್ಟಾರ್​​ಗಳಲ್ಲಿ ರಾಜಕೀಯ ಮಹಾತ್ವಾಕಾಂಕ್ಷೆಯನ್ನು ಹುಟ್ಟಿಸಿರುವುದು ಸುಳ್ಳಲ್ಲ. ವಿಜಯ್ ಸಿಎಂ ಆದ ಬೆನ್ನಲ್ಲೆ, ತೆಲುಗು ಚಿತ್ರರಂಗದ ಸೂಪರ್ ಸ್ಟಾರ್ ಜೂ ಎನ್​​ಟಿಆರ್ ಸಹ ತಮ್ಮ ರಾಜಕೀಯ ಎಂಟ್ರಿಯನ್ನು ಪರೋಕ್ಷವಾಗಿ ಪ್ರದರ್ಶಿಸಿದ್ದಾರೆ. ಅವರ ಹುಟ್ಟುಹಬ್ಬದಂದು ಮಹತ್ ಕಾರ್ಯವೊಂದಕ್ಕೆ ಜೂ ಎನ್​​ಟಿಆರ್ ಕೈ ಹಾಕಿದ್ದಾರೆ.

ವಿಜಯ್ ಬಳಿಕ ತೆಲುಗು ರಾಜ್ಯಗಳಲ್ಲಿ ಜೂ ಎನ್​​ಟಿಆರ್, ರಾಜಕೀಯ ಎಂಟ್ರಿ ಸುಳಿವು ಕೊಟ್ಟ ನಟ?
Jr Ntr
ಮಂಜುನಾಥ ಸಿ.
|

Updated on: May 14, 2026 | 12:30 PM

Share

ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ವಿಜಯ್ (Vijay) ಈಗ ತಮಿಳುನಾಡಿನ ಸಿಎಂ ಆಗಿದ್ದಾರೆ. ಸೂಪರ್ ಸ್ಟಾರ್ ಆಗಿ ಸಿಕ್ಕ ಪ್ರಚಾರ, ಜನಪ್ರಿಯತೆಯನ್ನು ಅವರು ರಾಜಕೀಯ ಪ್ರವೇಶಕ್ಕೆ ಮೆಟ್ಟಿಲಾಗಿ ಬಳಸಿಕೊಂಡಿದ್ದು ಮಾತ್ರವಲ್ಲದೆ ಸಿಎಂ ಸಹ ಆಗಿದ್ದಾರೆ. ವಿಜಯ್ ಅವರ ಈ ಯಶಸ್ಸು, ಇತರೆ ಕೆಲವು ಸೂಪರ್ ಸ್ಟಾರ್​​ಗಳಲ್ಲಿ ರಾಜಕೀಯ ಮಹಾತ್ವಾಕಾಂಕ್ಷೆಯನ್ನು ಹುಟ್ಟಿಸಿರುವುದು ಸುಳ್ಳಲ್ಲ. ವಿಜಯ್ ಸಿಎಂ ಆದ ಬೆನ್ನಲ್ಲೆ, ತೆಲುಗು ಚಿತ್ರರಂಗದ ಸೂಪರ್ ಸ್ಟಾರ್ ಜೂ ಎನ್​​ಟಿಆರ್ ಸಹ ತಮ್ಮ ರಾಜಕೀಯ ಎಂಟ್ರಿಯನ್ನು ಪರೋಕ್ಷವಾಗಿ ಪ್ರದರ್ಶಿಸಿದ್ದಾರೆ. ಅವರ ಹುಟ್ಟುಹಬ್ಬದಂದು ಮಹತ್ ಕಾರ್ಯವೊಂದಕ್ಕೆ ಜೂ ಎನ್​​ಟಿಆರ್ ಕೈ ಹಾಕಿದ್ದಾರೆ.

ಜೂ ಎನ್​​ಟಿಆರ್ ಮೇ 20 ರಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದು, ಆ ದಿನ ಅವರ ಅಭಿಮಾನಿಗಳ ಸಂಘಗಳ ನೆರವಿನೊಂದಿಗೆ ದೊಡ್ಡ ಸಾಮಾಜಿಕ ಕಾರ್ಯಕ್ಕೆ ಕೈ ಹಾಕಿದ್ದಾರೆ. ಆ ದಿನ ಜೂ ಎನ್​​ಟಿಆರ್ ಹೆಸರಲ್ಲಿ 100 ಕೋಟಿ ಮೌಲ್ಯದ ‘ಸೋಷಿಯಲ್ ವೆಲ್​​ಫೇರ್ ಫಂಡ್’ ಒಂದನ್ನು ಸೃಷ್ಟಿಸಲು ಮುಂದಾಗಿದ್ದಾರೆ. ಈ ವೆಲ್​​ಫೇರ್ ಫಂಡ್ ಮೂಲಕ ಎರಡೂ ತೆಲುಗು ರಾಜ್ಯಗಳಲ್ಲಿ ತಮ್ಮ ಅಭಿಮಾನಿ ಸಂಘಗಳನ್ನು ಬಳಸಿಕೊಂಡು ಜೂ ಎನ್​​ಟಿಆರ್ ಅವರು ಸಾಮಾಜಿಕ ಕಾರ್ಯಗಳನ್ನು ಕೈಗೊಳ್ಳಲಿದ್ದಾರೆ. ನಟರ ‘ಸಾಮಾಜಿಕ ಕಾರ್ಯ’ದ ದೂರಗಾಮಿ ಪ್ರತಿಫಲ ಏನೆಂದು ಎಲ್ಲರಿಗೂ ಗೊತ್ತಿರುವುದೇ, ನಟರು ಸಾಮಾಜಿಕ ಕಾರ್ಯಕ್ಕೆ ಇಳಿದರೆಂದರೆ ಅದರ ಹಿಂದೆ ರಾಜಕೀಯ ಮಹತ್ವಾಕಾಂಕ್ಷೆ ಬಹುತೇಕ ಖಾತ್ರಿ.

ಇದನ್ನೂ ಓದಿ:ವಿಶ್ವಾಸಮತ ಗೆದ್ದ ಬಳಿಕ ಮಹತ್ವದ ಘೋಷಣೆ ಮಾಡಿದ ತಮಿಳುನಾಡು ಸಿಎಂ ಸಿ. ಜೋಸೆಫ್​​ ವಿಜಯ್​​

ಅಂದಹಾಗೆ ಜೂ ಎನ್​​ಟಿಆರ್ ಅವರಿಗೆ ರಾಜಕೀಯ ಹೊಸದಲ್ಲ. ಅವರು ಯುವಕರಾಗಿದ್ದಾಗಲೇ ರಾಜಕೀಯಕ್ಕೆ ಧುಮುಕಿದವರು. ಈಗ ಆಂಧ್ರದಲ್ಲಿ ಆಡಳಿತದಲ್ಲಿರುವ ಟಿಡಿಪಿ ಪಕ್ಷದ ಯುವ ರಾಜ್ಯಾಧ್ಯಕ್ಷರು ಸಹ ಆಗಿದ್ದರು ಜೂ ಎನ್​​ಟಿಆರ್. ಟಿಡಿಪಿಯ ಸ್ಟಾರ್ ಪ್ರಚಾರಕರಾಗಿಯೂ ಕೆಲಸ ಮಾಡಿದ್ದಾರೆ. ಅಖಂಡ ಆಂಧ್ರ ಪ್ರದೇಶದ ಹಲವು ನಗರಗಳನ್ನು ಸುತ್ತಿ ಟಿಡಿಪಿ ಪರವಾಗಿ ಪ್ರಚಾರವನ್ನೂ ಸಹ ಜೂ ಎನ್​​ಟಿಆರ್ ಮಾಡಿದ್ದಾರೆ. ಜೂ ಎನ್​​ಟಿಆರ್ ಅವರನ್ನು ಪಕ್ಷದ ಆಸ್ತಿಯೆಂದು ಚಂದ್ರಬಾಬು ನಾಯ್ಡು ಬಣ್ಣಿಸಿದ್ದರು. ಆದರೆ ಈಗ ಪರಿಸ್ಥಿತಿ ಬದಲಾಗಿದ್ದು, ಪಕ್ಷದ ಮುಖಂಡರಾದ ಚಂದ್ರಬಾಬು ನಾಯ್ಡು ಮತ್ತು ನಂದಮೂರಿ ಬಾಲಕೃಷ್ಣ ಅವರುಗಳು ಜೂ ಎನ್​​ಟಿಆರ್ ಅವರನ್ನು ಪಕ್ಷದಿಂದ ದೂರ ಇರಿಸಿದ್ದಾರೆ.

ಆದರೆ ಜೂ ಎನ್​​ಟಿಆರ್ ಅವರು ತಮ್ಮದೇ ಸ್ವಂತ ಪಕ್ಷ ಕಟ್ಟುವ ಯೋಜನೆ ಹಾಕಿಕೊಂಡಂತಿದ್ದು, ಅದೇ ಕಾರಣದಿಂದ ಈಗ ಅಭಿಮಾನಿ ಸಂಘಗಳ ಮೂಲಕ ರಾಜ್ಯದಾದ್ಯಂತ ಸಾಮಾಜ ಕಾರ್ಯವನ್ನು ಪ್ರಾರಂಭಿಸಿದ್ದಾರೆ. ವಿಜಯ್ ಸಹ ತಮ್ಮ ಅಭಿಮಾನಿ ಸಂಘಟನೆ ‘ವಿಜಯ್ ಮಕ್ಕಳ್ ಇಯಕ್ಕಂ’ ಮೂಲಕ ಸಾಮಾಜಿಕ ಕಾರ್ಯವನ್ನು ಮಾಡಿ, ಸಂಘವನ್ನು ಬಲಪಡಿಸಿ ಅದರ ಬಲದಿಂದಲೇ ಟಿವಿಕೆ ಪಕ್ಷವನ್ನು ಕಟ್ಟಿ ಬೆಳೆಸಿ ಈಗ ಸಿಎಂ ಆಗಿದ್ದಾರೆ. ಜೂ ಎನ್​​ಟಿಆರ್ ಸಹ ಇದೇ ಹಾದಿಯಲ್ಲಿ ನಡೆಯುವ ನಿರ್ಧಾರ ಮಾಡಿದಂತಿದ್ದಾರೆ.

ಜೂ ಎನ್​​ಟಿಆರ್​ ಭಾರಿ ಅಭಿಮಾನಿಗಳನ್ನು ಹೊಂದಿರುವ ನಟ. ಜೊತೆಗೆ ಅದ್ಭುತ ಮಾತುಗಾರ ಸಹ. ಅವರ ಕುಟುಂಬವೇ ರಾಜಕೀಯ ಕುಟುಂಬ ಹಾಗಾಗಿ ರಾಜಕೀಯ ಪಟ್ಟುಗಳು ಅವರಿಗೆ ಹೊಸದೇನೂ ಅಲ್ಲ. ಈಗಾಗಲೇ ಸಚಿವರಾಗಿರುವ, ಶಾಸಕರಾಗಿರುವ ಹಲವು ರಾಜಕಾರಣಿಗಳು ಜೂ ಎನ್​​ಟಿಆರ್ ಅವರಿಗೆ ಬಲು ಹತ್ತಿರದವರು. ಅಲ್ಲದೆ ಯಾವುದೇ ವಿವಾದ ಇಲ್ಲದ, ಎಲ್ಲ ರಾಜಕೀಯ ಪಕ್ಷಗಳು ಸಮಾನ ಗೌರವ ಕೊಡುವ ವ್ಯಕ್ತಿಯೂ ಅವರಾಗಿದ್ದಾರೆ. ಹಾಗಾಗಿ ಅವರು ರಾಜಕೀಯಕ್ಕೆ ಬಂದರೆ ಗೆಲುವು ತೀರ ಕಷ್ಟವೇನೂ ಅಲ್ಲ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Manjunatha C
Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​
ಸಿಎಂ ಆಗುವ ಮುನ್ನವೇ ಡಿಕೆಶಿ ರಾಜಕೀಯ ತಂತ್ರಗಾರಿಕೆ
ಸಿಎಂ ಆಗುವ ಮುನ್ನವೇ ಡಿಕೆಶಿ ರಾಜಕೀಯ ತಂತ್ರಗಾರಿಕೆ