‘ಕಲ್ಕಿ’ ಟೀಂ ಬೇಕಾಬಿಟ್ಟಿ ಲೆಕ್ಕ ಕೊಟ್ಟಿದೆ ಎಂದವರ ವಿರುದ್ಧ ಬಿತ್ತು 25 ಕೋಟಿ ರೂ. ಮಾನನಷ್ಟ ಮೊಕದ್ದಮೆ
‘ಕಲ್ಕಿ 2898 ಎಡಿ’ ನಿರ್ಮಾಪಕರು ಕೋರ್ಟ್ ಮೊರೆ ಹೋಗಿದ್ದಾರೆ. ಇಬ್ಬರ ವಿರುದ್ಧ ಬರೋಬ್ಬರಿ 25 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಈಗಾಗಲೇ ಸುಮಿತ್ ಹಾಗೂ ರೋಹಿತ್ಗೆ ಲೀಗಲ್ ನೋಟಿಸ್ ಹೋಗಿದೆ. ಇದರಿಂದ ಇಬ್ಬರೂ ಸಂಕಷ್ಟಕ್ಕೆ ಸಿಲುಕಿದ್ದಾರೆ.

‘ಕಲ್ಕಿ 2898 ಎಡಿ’ ಸಿನಿಮಾ ರಿಲೀಸ್ ಆಗಿ ತಿಂಗಳು ಕಳೆಯುತ್ತಾ ಬಂದಿದೆ. ಆದಾಗ್ಯೂ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಗಳಿಕೆ ಮಾಡುತ್ತಿದೆ. ಸದ್ಯ ಯಾವುದೇ ದೊಡ್ಡ ಸಿನಿಮಾ ಇಲ್ಲ. ಈ ಕಾರಣದಿಂದಲೇ ಜನರು ‘ಕಲ್ಕಿ 2898 ಎಡಿ’ ಸಿನಿಮಾ ವೀಕ್ಷಿಸಲು ತೆರಳುತ್ತಿದ್ದಾರೆ. ಪ್ರಭಾಸ್ ಹಾಗೂ ಅಮಿತಾಭ್ ಬಚ್ಚನ್ ಫ್ಯಾನ್ಸ್ ಮರಳಿ ಮರಳಿ ಈ ಚಿತ್ರ ವೀಕ್ಷಣೆ ಮಾಡುತ್ತಿದ್ದಾರೆ. ಹೀಗಾಗಿ, ಅನಾಯಾಸವಾಗಿ ‘ಕಲ್ಕಿ 2898 ಎಡಿ’ ಸಿನಿಮಾ 1000 ಕೋಟಿ ರೂಪಾಯಿ ಕ್ಲಬ್ ಸೇರಿದೆ. ಆದರೆ, ಕೆಲವರು ಈ ಲೆಕ್ಕಾಚಾರದ ಬಗ್ಗೆ ಅನುಮಾನ ಹೊರಹಾಕಿದ್ದಾರೆ. ಇವರ ವಿರುದ್ಧ ‘ಕಲ್ಕಿ 2898 ಎಡಿ’ ತಂಡದವರು 25 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.
ಪ್ಯಾನ್ ಇಂಡಿಯಾ ಸಿನಿಮಾಗಳು ಉತ್ತಮ ವಿಮರ್ಶೆ ಪಡೆದರೆ ಅನಾಯಾಸವಾಗಿ 500-1000 ಕೋಟಿ ರೂಪಾಯಿ ಗಳಿಕೆ ಮಾಡುತ್ತವೆ. ಕಳೆದ ಎರಡು ವರ್ಷಗಳಲ್ಲಿ ‘ಕೆಜಿಎಫ್ 2’, ‘ಜವಾನ್’, ‘ಪಠಾಣ್’, ‘ಜೈಲರ್’, ‘ಲಿಯೋ’, ‘ಅನಿಮಲ್’ ಸೇರಿ ಅನೇಕ ಚಿತ್ರಗಳು 500-1000 ಕೋಟಿ ರೂಪಾಯಿ ಬಿಸ್ನೆಸ್ ಮಾಡಿವೆ. ಅದೇ ರೀತಿ 1000 ಕೋಟಿ ರೂಪಾಯಿ ಕ್ಲಬ್ಗೆ ‘ಕಲ್ಕಿ 2898 ಎಡಿ’ ಸಿನಿಮಾ ಕೂಡ ಸೇರಿದೆ. ಆದರೆ, ಇದನ್ನು ಕೋಲ್ಕತ್ತಾ ಮೂಲದ ಕ್ರಿಟಿಕ್ಸ್ ಸುಮಿತ್ ಕಡೇಲ್ ಹಾಗೂ ರೋಹಿತ್ ಜೈಸ್ವಾಲ್ ಅವರು ಫೇಕ್ ಎಂದು ಕರೆಯುತ್ತಾ ಬಂದಿದ್ದರು.
‘ಕಲ್ಕಿ 2898 ಎಡಿ’ ತಂಡದವರು ಕೋರ್ಟ್ ಮೊರೆ ಹೋಗಿದ್ದಾರೆ. ಇಬ್ಬರ ವಿರುದ್ಧ ಬರೋಬ್ಬರಿ 25 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಈಗಾಗಲೇ ಸುಮಿತ್ ಹಾಗೂ ರೋಹಿತ್ಗೆ ಲೀಗಲ್ ನೋಟಿಸ್ ಹೋಗಿದೆ. ಇದರಿಂದ ಇಬ್ಬರೂ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಸುಮಿತ್ ಹಾಗೂ ರೋಹಿತ್ ‘ಸಮೋಸಾ ಕ್ರಿಟಿಕ್ಸ್’ ಹೆಸರಿನಿಂದ ಫೇಮಸ್ ಆಗಿದ್ದಾರೆ. ಸೋಶಿಯಲ್ ಮೀಡಿಯಾ ಖಾತೆ ಮೂಲಕ ಇಬ್ಬರೂ ನಿರಂತರವಾಗಿ ‘ಕಲ್ಕಿ 2898 ಎಡಿ’ ಸಿನಿಮಾ ಕಲೆಕ್ಷನ್ ಬಗ್ಗೆ ಟ್ವೀಟ್ ಮಾಡುತ್ತಲೇ ಇದ್ದರು. ಈ ಸಿನಿಮಾದ ನಿರ್ಮಾಪಕರು ಮೋಸಗಾರರು ಎಂದು ಹೇಳುತ್ತಿದ್ದರು.
‘ಕಲ್ಕಿ 2898 ಎಡಿ’ ಕಲೆಕ್ಷನ್ ಫೇಕ್ ಎಂದು ಹೇಳಲು ಇಬ್ಬರೂ ಸಾಕ್ಷಿಗಳನ್ನು ನೀಡಬೇಕು. ಅಲ್ಲದೆ, ನಿತ್ಯ ಸಿನಿಮಾ ಎಷ್ಟು ಗಳಿಕೆ ಮಾಡಿದೆ ಎಂಬುದರ ಬ್ರೇಕಪ್ ನೀಡಬೇಕು. ಇದರ ಜೊತೆಗೆ ಮಾನ ಹಾನಿ ಮಾಡಿದ್ದಕ್ಕೆ 25 ಕೋಟಿ ರೂಪಾಯಿ ಹಣ ಪಾವತಿಸಬೇಕಿದೆ.
ಇದನ್ನೂ ಓದಿ: ಸದ್ಯಕ್ಕಂತೂ ಒಟಿಟಿಗೆ ಬರಲ್ಲ ‘ಕಲ್ಕಿ 2898 ಎಡಿ’ ಸಿನಿಮಾ; ಎಷ್ಟು ತಿಂಗಳು ಕಾಯಬೇಕು?
‘ಕಲ್ಕಿ 2898 ಎಡಿ’ ಸಿನಿಮಾದಲ್ಲಿ ಅಮಿತಾಭ್ ಬಚ್ಚನ್, ಪ್ರಭಾಸ್, ದೀಪಿಕಾ ಪಡುಕೋಣೆ, ಕಮಲ್ ಹಾಸನ್ ಸೇರಿ ಅನೇಕರು ನಟಿಸಿದ್ದಾರೆ. ನಾಗ್ ಅಶ್ವಿನ್ ನಿರ್ದೇಶನದ ಈ ಚಿತ್ರಕ್ಕೆ ಅಶ್ವಿನಿ ದತ್ ನಿರ್ಮಾಣ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



