AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೇ ತಿಂಗಳಿಂದ ಡಿಸೆಂಬರ್​ವರೆಗೆ ಸಿನಿಪ್ರಿಯರಿಗೆ ಸುಗ್ಗಿ; ರಿಲೀಸ್ ಆಗಲಿವೆ ದಕ್ಷಿಣದ ಈ ಬಿಗ್​ ಬಜೆಟ್ ಸಿನಿಮಾಗಳು

ಮೇನಲ್ಲಿ ವಿಕ್ರಮ್ ನಟನೆಯ ‘ತಂಗಳನ್’ ಬಿಡುಗಡೆ ಆಗಲಿದೆ. ಪ್ರಭಾಸ್ ನಟನೆಯ ‘ಕಲ್ಕಿ 2898 ಎಡಿ’ ಸಿನಿಮಾ ಮೇ 9ರಂದು ರಿಲೀಸ್ ಆಗಬೇಕಿತ್ತು. ಆದರೆ, ಚುನಾವಣೆ ಅಬ್ಬರದ ಕಾರಣಕ್ಕೆ ಸಿನಿಮಾ ರಿಲೀಸ್ ದಿನಾಂಕ ಮುಂದಕ್ಕೆ ಹೋಗೋ ಸಾಧ್ಯತೆ ಇದೆ. ಈ ಸಿನಿಮಾ ಜೂನ್​ನಲ್ಲಿ ರಿಲೀಸ್ ಆಗೋ ಸಾಧ್ಯತೆ ಇದೆ.

ಮೇ ತಿಂಗಳಿಂದ ಡಿಸೆಂಬರ್​ವರೆಗೆ ಸಿನಿಪ್ರಿಯರಿಗೆ ಸುಗ್ಗಿ; ರಿಲೀಸ್ ಆಗಲಿವೆ ದಕ್ಷಿಣದ ಈ ಬಿಗ್​ ಬಜೆಟ್ ಸಿನಿಮಾಗಳು
ಮೇ ತಿಂಗಳಿಂದ ಡಿಸೆಂಬರ್​ವರೆಗೆ ಸಿನಿಪ್ರಿಯರಿಗೆ ಸುಗ್ಗಿ; ರಿಲೀಸ್ ಆಗಲಿವೆ ದಕ್ಷಿಣದ ಈ ಬಿಗ್​ ಬಜೆಟ್ ಸಿನಿಮಾಗಳು
 ಶ್ರೀಲಕ್ಷ್ಮೀ ಎಚ್
| Edited By: |

Updated on: Apr 12, 2024 | 9:03 AM

Share

2024 ಪೂರ್ಣಗೊಳ್ಳುತ್ತಾ ಬಂದಿದೆ. ಈ ಅವಧಿಯಲ್ಲಿ ಕನ್ನಡದ ‘ಒಂದು ಸರಳ ಪ್ರೇಮಕಥೆ’, ‘ಬ್ಲಿಂಕ್’, ‘ಯುವ’ (Yuva Movie), ಮಲಯಾಳಂನ ‘ಮಂಜುಮ್ಮೇಲ್ ಬಾಯ್ಸ್’, ‘ಪ್ರೇಮಲು’, ತೆಲುಗಿನ ‘ಹನುಮಾನ್’, ‘ಟಿಲ್ಲು ಸ್ಕ್ವೇರ್’ ಚಿತ್ರಗಳು ಗೆಲುವು ಕಂಡಿದ್ದು ಬಿಟ್ಟರೆ ದೊಡ್ಡ ಮಟ್ಟದಲ್ಲಿ ಯಾವುದೇ ಸಿನಿಮಾ ಸದ್ದು ಮಾಡಿಲ್ಲ. ಈಗ ಮೇ ತಿಂಗಳಿಂದ ಡಿಸೆಂಬರ್​ವರೆಗೆ ದಕ್ಷಿಣ ಭಾರತದಲ್ಲಿ ಸಿನಿಮಾ ಸುಗ್ಗಿ ನಡೆಯಲಿದೆ. ದೊಡ್ಡ ದೊಡ್ಡ ಸಿನಿಮಾಗಳು ರಿಲೀಸ್​ಗೆ ರೆಡಿ ಇವೆ. ಆ ಬಗ್ಗೆ ಇಲ್ಲಿದೆ ವಿವರ.

ಮೇನಲ್ಲಿ ವಿಕ್ರಮ್ ನಟನೆಯ ‘ತಂಗಳನ್’ ಬಿಡುಗಡೆ ಆಗಲಿದೆ. ಪ್ರಭಾಸ್ ನಟನೆಯ ‘ಕಲ್ಕಿ 2898 ಎಡಿ’ ಸಿನಿಮಾ ಮೇ 9ರಂದು ರಿಲೀಸ್ ಆಗಬೇಕಿತ್ತು. ಆದರೆ, ಚುನಾವಣೆ ಅಬ್ಬರದ ಕಾರಣಕ್ಕೆ ಸಿನಿಮಾ ರಿಲೀಸ್ ದಿನಾಂಕ ಮುಂದಕ್ಕೆ ಹೋಗೋ ಸಾಧ್ಯತೆ ಇದೆ. ಈ ಸಿನಿಮಾ ಜೂನ್​ನಲ್ಲಿ ರಿಲೀಸ್ ಆಗೋ ಸಾಧ್ಯತೆ ಇದೆ. ನಾಗ್ ಅಶ್ವಿನ್ ನಿರ್ದೇಶನದ ಈ ಸಿನಿಮಾದಲ್ಲಿ ಪ್ರಭಾಸ್, ಅಮಿತಾಭ್ ಬಚ್ಚನ್, ಕಮಲ್ ಹಾಸನ್, ದೀಪಿಕಾ ಪಡುಕೋಣೆ ಮೊದಲಾದವರು ನಟಿಸಲಿದ್ದಾರೆ. ‘ವಿಕ್ರಮ್’ ಗೆಲುವಿನ ಬಳಿಕ ಕಮಲ್ ಹಾಸನ್ ಖ್ಯಾತಿ ಹೆಚ್ಚಿದೆ. ಅವರ ನಟನೆಯ ‘ಇಂಡಿಯನ್ 2’ ಸಿನಿಮಾ ಜೂನ್​ನಲ್ಲಿ ರಿಲೀಸ್ ಆಗಲಿದೆ. ಈ ಚಿತ್ರಕ್ಕೆ ಖ್ಯಾತ ನಿರ್ದೇಶಕ ಶಂಕರ್ ಅವರು ಆ್ಯಕ್ಷನ್ ಕಟ್ ಹೇಳಿದ್ದಾರೆ.  ಇದರ ಜೊತೆಗೆ ಮಮ್ಮೂಟಿ ನಟನೆಯ ‘ಟರ್ಬೋ’ ಜೂನ್​ನಲ್ಲಿ ರಿಲೀಸ್ ಆಗಲಿದೆ.

ಜುಲೈನಲ್ಲಿ ದುಲ್ಖರ್ ಸಲ್ಮಾನ್ ಅಭಿನಯದ ‘ಲಕ್ಕಿ ಭಾಸ್ಕರ್’ ರಿಲೀಸ್ ಆಗುತ್ತಿದೆ.  ಜುಲೈನಲ್ಲಿ ರಿಲೀಸ್ ಆಗೋ ಈ ಸಿನಿಮಾ ಬಗ್ಗೆ ನಿರೀಕ್ಷೆ ಇದೆ. ಆಗಸ್ಟ್ ತಿಂಗಳಲ್ಲಿ ಸಿನಿಮಾ ಮಂದಿಗೆ ನಿಜಕ್ಕೂ ಹಬ್ಬವೇ ಸರಿ. ಆಗಸ್ಟ್ 15ರಂದು ಶಿವರಾಜ್​ಕುಮಾರ್ ನಟನೆಯ ‘ಭೈರತಿ ರಣಗಲ್’ ಸಿನಿಮಾ ಬಿಡುಗಡೆ ಆಗುತ್ತಿದೆ. ಇದು ‘ಮಫ್ತಿ’ ಚಿತ್ರದ ಪ್ರೀಕ್ವೆಲ್. ಇದೇ ದಿನ ತೆಲುಗಿನ ‘ಪುಷ್ಪ 2’ ಸಿನಿಮಾ ಬಿಡುಗಡೆ ಆಗಲಿದೆ. ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ನಟನೆಯ ಈ ಸಿನಿಮಾ ಬಗ್ಗೆ ನಿರೀಕ್ಷೆ ಇದೆ.

ಪವನ್ ಕಲ್ಯಾಣ್ ನಟನೆಯ ‘ಒಜಿ’ ಸಿನಿಮಾ ಸೆಪ್ಟೆಂಬರ್​ನಲ್ಲಿ ರಿಲೀಸ್ ಆಗಲಿದೆ. ಪವನ್ ಕಲ್ಯಾಣ್ ಸದ್ಯ ಚುನಾವಣೆ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ವಿವಿಧ ಕಡೆಗಳಿಗೆ ತೆರಳಿ ಅವರು ಸಿನಿಮಾ ಪ್ರಚಾರ ಮಾಡುತ್ತಿದ್ದಾರೆ. ವಿಜಯ್ ನಟನೆಯ ‘ಗ್ರೇಟೆಸ್ಟ್ ಆಫ್ ಆಲ್ ಟೈಮ್’ ಸಿನಿಮಾ ಕೂಡ ಸೆಪ್ಟೆಂಬರ್​ನಲ್ಲಿ ಬಿಡುಗಡೆ ಆಗಲಿದೆ.

ಜೂನಿಯರ್ ಎನ್​ಟಿಆರ್ ನಟನೆಯ ‘ದೇವರ’ ಸಿನಿಮಾ ಅಕ್ಟೋಬರ್​ನಲ್ಲಿ ಬಿಡುಗಡೆ ಆಗಲಿದೆ. ಈ ಸಿನಿಮಾದಲ್ಲಿ ಜಾನ್ವಿ ಕಪೂರ್ ನಟಿಸುತ್ತಿದ್ದಾರೆ. ಕೊರಟಾಲ ಶಿವ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.  ರಜನಿಕಾಂತ್ ನಟನೆಯ ‘ವೆಟ್ಟೈಯನ್’ ಸಿನಿಮಾ ಹಾಗೂ ಅಜಿತ್ ಕುಮಾರ್ ನಟನೆಯ ‘ವಿದಾ ಮುಯರ್ಚಿ’ ಚಿತ್ರ ಕೂಡ ಅಕ್ಟೋಬರ್​ನಲ್ಲಿ ಬಿಡುಗಡೆ ಆಗುತ್ತಿದೆ. ರಾಮ್ ಚರಣ್ ನಟನೆಯ ‘ಗೇಮ್ ಚೇಂಜರ್’ ಕೂಡ ಅಕ್ಟೋಬರ್​ನಲ್ಲಿ ರಿಲೀಸ್ ಆಗೋ ಸಾಧ್ಯತೆ ಇದೆ.

ಇದನ್ನೂ ಓದಿ: ರಾಜ್​ಕುಮಾರ್ ಮೃತಪಟ್ಟ ಸುದ್ದಿಯನ್ನು ಗೌಪ್ಯವಾಗಿ ಇಟ್ಟಿದ್ದರೆ ಆಗುತ್ತಿರಲಿಲ್ಲ ಅನಾಹುತ; ನಡೆದಿದ್ದೇನು?

ತಮಿಳು ನಟ ಸೂರ್ಯ ಅವರ ಖ್ಯಾತಿ ಸಾಕಷ್ಟು ಹೆಚ್ಚಿದೆ. ಅವರ ನಟನೆಯ ‘ಕಂಗುವ’ ನಿರೀಕ್ಷೆ ಮೂಡಿಸಿದೆ. ಬಾಬಿ ಡಿಯೋಲ್ ಕೂಡ ಈ ಚಿತ್ರದಲ್ಲಿ ನಟಿಸಿದ್ದಾರೆ. ಇದು ನವೆಂಬರ್ ಅಥವಾ ಡಿಸೆಂಬರ್​ನಲ್ಲಿ ರಿಲೀಸ್ ಆಗಲಿದೆ. ಬಾಲಯ್ಯ ಅಭಿನಯದ NBK109 ಕೂಡ ಇದೇ ಸಂದರ್ಭದಲ್ಲಿ ರಿಲೀಸ್ ಆಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ