AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಮಿಳು ಚಿತ್ರರಂಗದ ಬಗ್ಗೆ ಕಮಲ್ ಹಾಸನ್​ಗೆ ಅಸಮಾಧಾನ; ಓಪನ್ ಆಗಿ ಹೇಳಿದ ನಟ

ಕಮಲ್ ಹಾಸನ್ ಅವರು ತಮ್ಮ ಚಿತ್ರ ನಿರ್ಮಾಣದ ವೇಗವನ್ನು ಗಣನೀಯವಾಗಿ ಕಡಿಮೆ ಮಾಡಿದ್ದಾರೆ. ಒಂದು ಕಾಲದಲ್ಲಿ ವರ್ಷಕ್ಕೆ 20-30 ಚಿತ್ರಗಳನ್ನು ಮಾಡುತ್ತಿದ್ದ ಅವರು ಈಗ ವರ್ಷಕ್ಕೆ ಒಂದೆರಡು ಚಿತ್ರಗಳಿಗೆ ಸೀಮಿತರಾಗಿದ್ದಾರೆ. ಅವರ ಈ ನಿರ್ಧಾರಕ್ಕೆ ವಯಸ್ಸು ಕಾರಣ. ತಮಿಳು ಚಿತ್ರರಂಗದಲ್ಲಿನ ಸುಧಾರಣೆಯ ಕೊರತೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತಮಿಳು ಚಿತ್ರರಂಗದ ಬಗ್ಗೆ ಕಮಲ್ ಹಾಸನ್​ಗೆ ಅಸಮಾಧಾನ; ಓಪನ್ ಆಗಿ ಹೇಳಿದ ನಟ
ಕಮಲ್ ಹಾಸನ್
 ಶ್ರೀಲಕ್ಷ್ಮೀ ಎಚ್
| Edited By: |

Updated on: May 16, 2025 | 10:53 AM

Share

ಕಮಲ್ ಹಾಸನ್  (Kamal Haasan) ಅವರು ವೇಗ ತಗ್ಗಿಸಿದ್ದಾರೆ. ಅಂದರೆ ಸಿನಿಮಾ ಮಾಡುವ ವೇಗವನ್ನು ಕಡಿಮೆ ಮಾಡಿದ್ದಾರೆ. ಏಕೆಂದರೆ ಅವರ ನಟನೆಯ ಸಿನಿಮಾಗಳು ವರ್ಷಕ್ಕೆ ಒಂದೋ ಅಥವಾ ಎರಡೋ ರಿಲೀಸ್ ಆಗುತ್ತಿವೆ. ಇದಕ್ಕೆ ಅವರ ವಯಸ್ಸು ಕಾರಣ. ಆದರೆ, ಈ ಮೊದಲು ಒಂದೇ ವರ್ಷ ಅವರು 20-30 ಸಿನಿಮಾ ಮಾಡುತ್ತಿದ್ದರು. ಇದಕ್ಕೂ ವಯಸ್ಸು ಮತ್ತು ಉತ್ಸಾಹ ಕಾರಣ ಇರಬಹುದು. ಈ ಬಗ್ಗೆ ಅವರು ಮಾತನಾಡಿದ್ದಾರೆ.  ಈ ವೇಳೆ ಕಮಲ್ ಹಾಸನ್  ತಮಿಳು ಚಿತರಂಗದ ಬಗ್ಗೆ ಓಪನ್ ಆಗಿ ಅಸಮಾಧಾನ ಹೊರಹಾಕಿದ್ದಾರೆ.

ಕಮಲ್ ಹಾಸನ್ ಅವರು 1975ರಲ್ಲಿ 14 ಸಿನಿಮಾ, 1976ರಲ್ಲಿ 18 ಸಿನಿಮಾ, 1977ರಲ್ಲಿ 19 ಸಿನಿಮಾ ಮತ್ತು 1978ರಲ್ಲಿ 22 ಸಿನಿಮಾ ಮಾಡಿದ್ದರು. ಕಮಲ್ ಅವರು ಇದನ್ನು ಮೈಲಿಗಲ್ಲುಗಳಾಗಿ ಪರಿಗಣಿಸುವುದಿಲ್ಲ, ಬದಲಿಗೆ ಅದನ್ನು ತರಬೇತಿ ಅವಧಿಯಾಗಿ ತೆಗೆದುಕೊಂಡಿದ್ದರು. ಇತ್ತೀಚಿನ ದಿನಗಳಲ್ಲಿ ಅಪರೂಪಕ್ಕೆ ಸಿನಿಮಾ ಮಾಡುವ ನಟರು ಕಮಲ್ ಹಾಸನ್ ಅವರ ಸಾಧನೆಯಿಂದ ಕಲಿಯಬೇಕಿದೆ. ಇದರಿಂದ ಚಿತ್ರರಂಗದ ಬಿಸ್ನೆಸ್ ಹೆಚ್ಚಲಿದೆ.

ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿದ ಕಮಲ್ ಹಾಸನ್, ಅದನ್ನು ನಾನು ಎಂದಿಗೂ ಕೆಲಸ ಎಂದು ಭಾವಿಸಿರಲಿಲ್ಲ ಎಂದಿದ್ದಾರೆ. ‘ನನ್ನ ಕಲೆಯನ್ನು ಪರಿಷ್ಕರಿಸಿಕೊಳ್ಳಲು ನಾನು ಮಲಯಾಳಂ ಚಿತ್ರರಂಗಕ್ಕೆ ಹೋದೆ. ಇಲ್ಲಿ (ತಮಿಳು ಚಲನಚಿತ್ರೋದ್ಯಮದಲ್ಲಿ), ಎಲ್ಲವೂ ವಾಣಿಜ್ಯಮಯ ಆಗಿತ್ತು. ಹೀಗಾಗಿ, ಅದರಿಂದ ಅವರು ಎಂದಿಗೂ ಹೊರ ಬರುವುದಿಲ್ಲ. ಉತ್ತಮ ಸಂಗೀತ ಇದೆ. ಆದರೆ ಅದು ಇನ್ನೂ ಕಿರಿದಾದ ಹಾದಿಯಲ್ಲೇ ಸಾಗುತ್ತಿತ್ತು. ಅದರಲ್ಲಿ ಯಾವುದೇ ಸುಧಾರಣೆ ಇರಲಿಲ್ಲ. ಕೇಳಿದ್ದೇ ಕೆಳಲು ನನಗೆ ಇಷ್ಟ ಇರಲಿಲ್ಲ. ಹೀಗಾಗಿ, ನಾನು ಬೇರೆ ಇಂಡಸ್ಟ್ರಿಗೆ ಹೋದೆ’ ಎಂದಿದ್ದಾರೆ ಅವರು,

ಇದನ್ನೂ ಓದಿ
Image
ರಾಕೇಶ್ ಪೂಜಾರಿ ನೋಡಲು ರಿಷಬ್ ಏಕೆ ಬರಲಿಲ್ಲ? ಕೊನೆಗೂ ಸಿಕ್ತು ಉತ್ತರ
Image
ಸಮಂತಾ ಹಾಗೂ ರಾಜ್ ನಡುವಿನ ವಯಸ್ಸಿನ ಅಂತರ ಇಷ್ಟೊಂದಾ?
Image
VIDEO: ಲೈವ್​ಸ್ಟ್ರೀಮ್ ಮಾಡುವಾಗಲೇ ಗುಂಡಿಕ್ಕಿ ಇನ್​ಫ್ಲುಯೆನ್ಸರ್ ಹತ್ಯೆ
Image
‘ನೀವು ಹೇಗೆ ಎಂದು ಎಲ್ಲರಿಗೂ ಗೊತ್ತು’; ಚೈತ್ರಾಗೆ ನೇರವಾಗಿ ಹೇಳಿದ ಅಭಿಮಾನಿ

‘ಅದು ನನ್ನ ತರಬೇತಿ ಅವಧಿಯಾಗಿತ್ತು. ಆಗಲೂ ನನಗೆ ಅದು ತಿಳಿದಿತ್ತು. ಆದ್ದರಿಂದ, ನಾನು ಸಣ್ಣ ವಿಷಯಗಳ ಬಗ್ಗೆ ದೂರು ನೀಡಲಿಲ್ಲ. ಅನುಭವಕ್ಕಾಗಿ ನಾನು ಕೃತಜ್ಞನಾಗಿದ್ದೇನೆ’ ಎಂದು ಅವರು ಹೇಳಿದರು. ಈ ಮೂಲಕ ಸಾಕಷ್ಟು ಸಿನಿಮಾಗಳನ್ನು ಮಾಡಿ ಅನುಭವ ಪಡೆದ ಖುಷಿ ಅವರಿಗೆ ಇದೆ.

ಇದನ್ನೂ ಓದಿ: ದೇಶ ಮೊದಲು, ಸಿನಿಮಾ ಕಾರ್ಯಕ್ರಮ ರದ್ದು ಮಾಡಿದ ಕಮಲ್ ಹಾಸನ್

ಕಮಲ್ ಹಾಸನ್ ಅವರು ‘ಥಗ್ ಲೈಫ್’ ಸಿನಿಮಾ ಪ್ರಚಾರದಲ್ಲಿ ಬ್ಯುಸಿ ಇದ್ದಾರೆ. ಜೂನ್ 5ರಂದು ಚಿತ್ರ ತೆರೆಮೇಲೆ ಬರುತ್ತಿದೆ. ಮಣಿರತ್ನಂ ಅವರನ್ನು ಇದನ್ನು ನಿರ್ದೇಶನ ಮಾಡುತ್ತಿದ್ದಾರೆ ಅನ್ನೋದು ವಿಶೇಷ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ದಿನಾಂಕವನ್ನೂ ಹೇಳಿದ ಖ್ಯಾತ ಜ್ಯೋತಿಷಿ!
ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ದಿನಾಂಕವನ್ನೂ ಹೇಳಿದ ಖ್ಯಾತ ಜ್ಯೋತಿಷಿ!
ಕಾರೊಳಗೆ ಬಾಂಬ್ ಸ್ಫೋಟ, ಹಿರಿಯ ಸೇನಾಧಿಕಾರಿ ಫನಿಲ್ ಸರ್ವರೋವ್ ಸಾವು
ಕಾರೊಳಗೆ ಬಾಂಬ್ ಸ್ಫೋಟ, ಹಿರಿಯ ಸೇನಾಧಿಕಾರಿ ಫನಿಲ್ ಸರ್ವರೋವ್ ಸಾವು
ಗಾಳಿಯಲ್ಲಿ ಗುಂಡು ಹಾರಿಸಿ ಬಿಲ್ಡಪ್ ಕೊಟ್ಟ ಶಾಂತಲಿಂಗ ಸ್ವಾಮೀಜಿ!
ಗಾಳಿಯಲ್ಲಿ ಗುಂಡು ಹಾರಿಸಿ ಬಿಲ್ಡಪ್ ಕೊಟ್ಟ ಶಾಂತಲಿಂಗ ಸ್ವಾಮೀಜಿ!