ನಮ್ಮ ಪ್ರೊಡಕ್ಷನ್​ ಹೌಸ್​​ನಲ್ಲಿ ನಿನಗೆ ಅವಕಾಶ ಇಲ್ಲ; ಸ್ಟಾರ್​ ನಟನನ್ನೇ ಹೊರ ದಬ್ಬಿದ ಕರಣ್​ ಜೋಹರ್

ಕಾರ್ತಿಕ್​ ಆರಂಭದಲ್ಲಿ ಡೇಟ್ಸ್​ ಸಮಸ್ಯೆ ಎಂದು ಶೂಟಿಂಗ್​ಗೆ ಬರುತ್ತಿರಲಿಲ್ಲ. ನಂತರ ಕತೆ ವಿಚಾರಕ್ಕೆ ನಿರ್ಮಾಪಕರಿಗೂ ಹಾಗೂ ಕಾರ್ತಿಕ್​ಗೆ ಭಿನ್ನಾಭಿಪ್ರಾಯಗಳು ಮೂಡಲು ಆರಂಭವಾದವು.

ನಮ್ಮ ಪ್ರೊಡಕ್ಷನ್​ ಹೌಸ್​​ನಲ್ಲಿ ನಿನಗೆ ಅವಕಾಶ ಇಲ್ಲ; ಸ್ಟಾರ್​ ನಟನನ್ನೇ ಹೊರ ದಬ್ಬಿದ ಕರಣ್​ ಜೋಹರ್
ಕರಣ್​ ಜೋಹರ್
Edited By:

Updated on: Apr 16, 2021 | 5:28 PM

ನಿರ್ಮಾಪಕರು ಹಾಗೂ ನಟರ ನಡುವೆ ಮನಸ್ತಾಪಗಳು ಮೂಡೋದು ಸಹಜ. ಕೆಲವೊಂದು ಜಗಳಗಳು ಇಂಡಸ್ಟ್ರಿಯಲ್ಲೇ ಹುಟ್ಟಿ, ಅಲ್ಲಿಯೇ ಕಾಣೆಯಾಗುತ್ತವೆ. ಆದರೆ, ಕೆಲವು ಮನಸ್ತಾಪಗಳು ಮಾತ್ರ ಬಟಾಬಯಲಾಗುತ್ತವೆ. ಈಗ ಬಾಲಿವುಡ್​ನ ಖ್ಯಾತ ನಿರ್ಮಾಪಕ ಕರಣ್​ ಜೋಹರ್​ ಹಾಗೂ ಬಾಲಿವುಡ್​ನ ಖ್ಯಾತ ನಟನ ನಡುವೆ ಸಂಘರ್ಷ ಏರ್ಪಟ್ಟಿದೆ. ಇದು ಮಿತಿಮೀರಿದ್ದು, ಇನ್ನೆಂದಿಗೂ ನಮ್ಮ ಪ್ರೊಡಕ್ಷನ್​ನಲ್ಲಿ ಸ್ಥಾನವಿಲ್ಲ ಎನ್ನುವ ಖಡಕ್​ ಸಂದೇಶವನ್ನು ಕರಣ್​ ರವಾನಿಸಿದ್ದಾರೆ.

ಈ ಜಗಳ ಏರ್ಪಟ್ಟಿದ್ದು ಕರಣ್​ ಜೋಹರ್​ ಹಾಗೂ ಕಾರ್ತಿಕ್​ ಆರ್ಯನ್​ ನಡುವೆ. ದೋಸ್ತಾನ 2 ಸಿನಿಮಾಗೆ ಕಾರ್ತಿಕ್​ ಹೀರೋ ಆಗಿದ್ದರು. 2019ರಲ್ಲೇ ಈ ಬಗ್ಗೆ ಘೋಷಣೆ ಆಗಿತ್ತು. ಆದರೆ, ಕೊರೊನಾ ವೈರಸ್​ ಕಾಣಿಸಿಕೊಂಡಿದ್ದರಿಂದ ಸಿನಿಮಾ ಕೆಲಸಗಳು ಮುಂದೂಡಲ್ಪಟ್ಟಿದ್ದವು. ನಂತರ ಕಾರ್ತಿಕ್​ ಸಿನಿಮಾದಿಂದಲೇ ಹೊರ ಬಂದಿದ್ದರು. ಈಗ ಕೇಳಿ ಬರುತ್ತಿರುವ ಮಾಹಿತಿ ಏನೆಂದರೆ, ಕಾರ್ತಿಕ್​ ಆರ್ಯನ್​ ಜತೆ ಕರಣ್​ ಒಡೆತನದ ಧರ್ಮ ಪ್ರೊಡಕ್ಷನ್​ ಇನ್ನೆಂದೂ ಕೆಲಸ ಮಾಡದಿರಲು ನಿರ್ಧರಿಸಿದೆ.

ಕಾರ್ತಿಕ್​ ಆರಂಭದಲ್ಲಿ ಡೇಟ್ಸ್​ ಸಮಸ್ಯೆ ಎಂದು ಶೂಟಿಂಗ್​ಗೆ ಬರುತ್ತಿರಲಿಲ್ಲ. ನಂತರ ಕತೆ ವಿಚಾರಕ್ಕೆ ನಿರ್ಮಾಪಕರಿಗೂ ಹಾಗೂ ಕಾರ್ತಿಕ್​ಗೆ ಭಿನ್ನಾಭಿಪ್ರಾಯಗಳು ಮೂಡಲು ಆರಂಭವಾದವು. ಕಾರ್ತಿಕ್​ ಮೊದಲು ರಾಮ್​ ಮಾಧ್ವಾನಿ ಅವರ ಧಮಾಕಾ ಸಿನಿಮಾದ ಕೆಲಸಗಳನ್ನು ಪೂರ್ಣಗೊಳಿಸಲು ಹೆಚ್ಚು ಆಸಕ್ತಿ ತೋರಿದ್ದರು. ಇದು ಕರಣ್ ಕೋಪಕ್ಕೆ ಕಾರಣವಾಗಿದೆ. ಕೊನೆಗೆ ಕಾರ್ತಿಕ್​ ಅವರನ್ನು ಸಿನಿಮಾದಿಂದಲೇ ಕೈ ಬಿಡಲು ನಿರ್ಧರಿಸಲಾಗಿದೆ.

ಕಾರ್ತಿಕ್​ ಆರ್ಯನ್​

ಈ ವಿಚಾರದ ಬಗ್ಗೆ ಕೆಲವು ವಾರಗಳ ಕಾಲ ಕಾರ್ತಿಕ್​ ಹಾಗೂ ಕರಣ್​ ನಡುವೆ ಮುಸುಕಿನ ಗುದ್ದಾಟ ನಡೆದೇ ಇತ್ತು. ಕೊನೆಗೆ ಇಬ್ಬರ ನಡುವಿನ ಗೆಳೆತನ ಸಂಪೂರ್ಣವಾಗಿ ಮುರಿದು ಬಿದ್ದಿದೆ ಎನ್ನಲಾಗಿದೆ. ಈ ವಿಚಾರ ಸದ್ಯ ಬಾಲಿವುಡ್​ ಅಂಗಳದಲ್ಲಿ ಸಾಕಷ್ಟು ಚರ್ಚೆ ಆಗುತ್ತಿದೆ.

ಇದನ್ನೂ ಓದಿ: ಸೋತು ಸುಣ್ಣವಾಗಿರುವ ಶಾರುಖ್​ ಖಾನ್​ಗೆ ಈಗ ಸಿಗುತ್ತಿರುವ ಸಂಭಾವನೆ ಎಷ್ಟು?

ಕ್ಷಮಿಸಿ, ನಾನು ಸಂಭಾವನೆ ಪಡೆಯಲ್ಲ; ಶಾರುಖ್​ಗಾಗಿ ಸಲ್ಮಾನ್​ ಹೀಗೊಂದು ತ್ಯಾಗ!

Published On - 4:54 pm, Fri, 16 April 21

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us