AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕರ್ಣ’ ಧಾರಾವಾಹಿ; ನೆರವೇರಿತು ಕರ್ಣ-ನಿಧಿ ಮದುವೆ

ಝೀ ಕನ್ನಡದ ಜನಪ್ರಿಯ ಧಾರಾವಾಹಿ 'ಕರ್ಣ'ದಲ್ಲಿ ನಿಧಿ-ಕರ್ಣ ವಿವಾಹ ಮಹೋತ್ಸವ ಯಶಸ್ವಿಯಾಗಿ ನಡೆದಿದ್ದು, ವೀಕ್ಷಕರು ಕಾಯುತ್ತಿದ್ದ ಮಹಾ ತಿರುವು ದೊರೆತಿದೆ. ನಿತ್ಯಾ ಸಮ್ಮುಖದಲ್ಲಿ ನಡೆದ ಈ ಮದುವೆ, ಹಿಂದಿನ ಎಲ್ಲಾ ಗೊಂದಲಗಳಿಗೆ ತೆರೆ ಎಳೆದಿದೆ. ಇದು ಸೀರಿಯಲ್ ಪ್ರೇಕ್ಷಕರಲ್ಲಿ ರೋಮಾಂಚನ ಮೂಡಿಸಿದ್ದು, ಕಥೆಯ ಮುಂದಿನ ಸವಾಲುಗಳು ಮತ್ತಷ್ಟು ಕುತೂಹಲ ಕೆರಳಿಸಿವೆ.

‘ಕರ್ಣ’ ಧಾರಾವಾಹಿ; ನೆರವೇರಿತು ಕರ್ಣ-ನಿಧಿ ಮದುವೆ
ಕರ್ಣ ಧಾರಾವಾಹಿ
 ಶ್ರೀಲಕ್ಷ್ಮೀ ಎಚ್
| Edited By: |

Updated on: May 21, 2026 | 7:49 AM

Share

ಝೀ ಕನ್ನಡ ವಾಹಿನಿಯ ಅತ್ಯಂತ ಜನಪ್ರಿಯ ಮತ್ತು ಕುತೂಹಲ ಕೆರಳಿಸಿರುವ ‘ಕರ್ಣ’ ಧಾರಾವಾಹಿಯಲ್ಲಿ ಕೊನೆಗೂ ವೀಕ್ಷಕರು ಬಹುದಿನಗಳಿಂದ ಕಾಯುತ್ತಿದ್ದ ಮಹಾ ತಿರುವು ಎದುರಾಗಿದೆ. ಕಥೆಯ ನಾಯಕ ಕರ್ಣ ಹಾಗೂ ನಿಧಿ ನಡುವಿನ ವಿವಾಹ ಮಹೋತ್ಸವವು ಹಿರಿಯರ ಸಮ್ಮುಖದಲ್ಲಿ ಅತ್ಯಂತ ನಾಟಕೀಯವಾಗಿ ಮತ್ತು ಯಶಸ್ವಿಯಾಗಿ ಸಂಪೂರ್ಣಗೊಂಡಿದೆ. ಈ ಮಹತ್ವದ ಬೆಳವಣಿಗೆಯು ಸೀರಿಯಲ್ ಪ್ರೇಕ್ಷಕರಲ್ಲಿ ಭಾರಿ ರೋಮಾಂಚನ ಉಂಟುಮಾಡಿದೆ.

ಈ ಹಿಂದೆ ಕಥೆಯಲ್ಲಿ ಕರ್ಣ ಮತ್ತು ನಿತ್ಯಾ ಮದುವೆ ನಡೆದಂತೆ ಬಿಂಬಿಸಲಾಗಿದ್ದರೂ, ಅದು ಕೇವಲ ಪರಿಸ್ಥಿತಿಯ ಒತ್ತಡಕ್ಕೆ ಮಣಿದು ನಡೆದ ನಾಟಕವಾಗಿತ್ತೇ ಹೊರತು ಅಧಿಕೃತವಾಗಿರಲಿಲ್ಲ. ಕರ್ಣನ ನಿಜವಾದ ಪ್ರೀತಿ ನಿಧಿಯಾಗಿದ್ದರಿಂದ, ಇಬ್ಬರ ಮದುವೆ ಯಾವಾಗ ಆಗುತ್ತದೆ ಎಂಬ ತಳಮಳ ವೀಕ್ಷಕರಲ್ಲಿತ್ತು. ಈಗ ಆ ಎಲ್ಲಾ ಗೊಂದಲಗಳು ಹಾಗೂ ಅಡೆತಡೆಗಳಿಗೆ ಸಂಪೂರ್ಣವಾಗಿ ತೆರೆ ಬಿದ್ದಿದೆ. ವಿಶೇಷವೆಂದರೆ, ಸ್ವತಃ ನಿತ್ಯಾ ಸಮ್ಮುಖದಲ್ಲೇ ಕರ್ಣ ಮತ್ತು ನಿಧಿ ಇಬ್ಬರೂ ಹಸೆಮಣೆ ಏರಿ ಸಪ್ತಪದಿ ತುಳಿದಿದ್ದಾರೆ.

ಕರ್ಣ ತನ್ನ ಪ್ರೀತಿಯ ನಿಧಿಯ ಕೊರಳಿಗೆ ಮಾಂಗಲ್ಯ ಧಾರಣೆ ಮಾಡುವ ಮೂಲಕ ಅವಳನ್ನು ತನ್ನ ಅಧಿಕೃತ ಧರ್ಮಪತ್ನಿಯನ್ನಾಗಿ ಸ್ವೀಕರಿಸಿದ್ದಾನೆ. ಇಡೀ ಕುಟುಂಬ ಸಡಗರದಿಂದ ಈ ಮದುವೆಯಲ್ಲಿ ಭಾಗಿಯಾಗಿದೆ.

View this post on Instagram

A post shared by Zee Kannada (@zeekannada)

ಕರ್ಣ-ನಿಧಿ ಕಲ್ಯಾಣ’ದ ಈ ವಿಶೇಷ ಸಂಚಿಕೆಯು ಜೀ ಕನ್ನಡದಲ್ಲಿ ರಾತ್ರಿ 8 ಗಂಟೆಗೆ ಪ್ರಸಾರವಾಗಲಿದೆ. ಈ ಶುಭ ಮುಹೂರ್ತದ ಬಳಿಕ ಇವರ ದಾಂಪತ್ಯ ಜೀವನದಲ್ಲಿ ಯಾವೆಲ್ಲಾ ಹೊಸ ಸವಾಲುಗಳು ಎದುರಾಗಲಿವೆ ಮತ್ತು ಕಥೆ ಯಾವ ಹೊಸ ದಿಕ್ಕಿನಲ್ಲಿ ಸಾಗಲಿದೆ ಎಂಬುದನ್ನು ಕಾದುನೋಡಬೇಕಿದೆ.

ಇದನ್ನೂ ಓದಿ: ನಿತ್ಯಾಗೆ ಗೊತ್ತಾಯ್ತ ಪ್ರೀತಿಯ ಸತ್ಯ; ಕರ್ಣ-ನಿಧಿ ವಿವಾಹ ಮಾಡಿಸಲು ಮುಂದಾದ ಸಹೋದರಿ

ರಮೇಶ್​​ಗೆ ಈಗಾಗಲೇ ಕರ್ಣ ಹಾಗೂ ನಿಧಿ, ನಿತ್ಯಾ ಮೇಲೆ ದ್ವೇಷ ಇದೆ. ಮಗನ ಯಶಸ್ಸನ್ನು ಅವನು ಎಂದಿಗೂ ಸಹಿಸೋದಿಲ್ಲ. ಕರ್ಣ ಬೀದಿಯಲ್ಲಿ ಸಿಕ್ಕ ಮಗ ಎಂದು ಅವನು ಭಾವಿಸಿದ್ದಾನೆ. ಆದರೆ, ಕರ್ಣನೇ ಅವನ ನಿಜವಾದ ಮಗ ಎಂಬ ವಿಷಯ ಇನ್ನೂ ಆತನಿಗೆ ತಿಳಿದಿಲ್ಲ. ಅದು ತಿಳಿದ ಬಳಿಕ ಕಥೆಗೆ ಮತ್ತಷ್ಟು ತಿರುವು ಎದುರಾಗುವ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಇಂದು ಶೃಂಗೇರಿ ಬಂದ್, ಖಾಸಗಿ ಶಾಲೆ-ಕಾಲೇಜಿಗೂ ರಜೆ
ಇಂದು ಶೃಂಗೇರಿ ಬಂದ್, ಖಾಸಗಿ ಶಾಲೆ-ಕಾಲೇಜಿಗೂ ರಜೆ
ಬೀದರ್​ನಲ್ಲಿ ನಿವೃತ್ತ ಅಗ್ನಿಶಾಮಕ ಸಿಬ್ಬಂದಿ ಮನೆಯಲ್ಲಿ ಚಿನ್ನಾಭರಣ ಕಳ್ಳತನ
ಬೀದರ್​ನಲ್ಲಿ ನಿವೃತ್ತ ಅಗ್ನಿಶಾಮಕ ಸಿಬ್ಬಂದಿ ಮನೆಯಲ್ಲಿ ಚಿನ್ನಾಭರಣ ಕಳ್ಳತನ
ಗ್ಯಾಂಗ್​ಸ್ಟರ್ ಸಂದೀಪ್​ಗೆ ಡ್ರಮ್ ಬಾರಿಸಿ ಸ್ವಾಗತ ಕೋರಿದ ಗ್ರಾಮಸ್ಥರು
ಗ್ಯಾಂಗ್​ಸ್ಟರ್ ಸಂದೀಪ್​ಗೆ ಡ್ರಮ್ ಬಾರಿಸಿ ಸ್ವಾಗತ ಕೋರಿದ ಗ್ರಾಮಸ್ಥರು
ಬೆಂಗಳೂರಿನ ಹಲವೆಡೆ ತಡರಾತ್ರಿ ಮಳೆ ಅಬ್ಬರ: ವಾಹನ ಸವಾರರ ಪರದಾಟ
ಬೆಂಗಳೂರಿನ ಹಲವೆಡೆ ತಡರಾತ್ರಿ ಮಳೆ ಅಬ್ಬರ: ವಾಹನ ಸವಾರರ ಪರದಾಟ
ರವಿ ಕನ್ಯಾ, ಚಂದ್ರ ಧನು ರಾಶಿಯಲ್ಲಿ ಸಂಚಾರ: 12 ರಾಶಿಗಳ ಇಂದಿನ ದಿನ ಭವಿಷ್ಯ
ರವಿ ಕನ್ಯಾ, ಚಂದ್ರ ಧನು ರಾಶಿಯಲ್ಲಿ ಸಂಚಾರ: 12 ರಾಶಿಗಳ ಇಂದಿನ ದಿನ ಭವಿಷ್ಯ
ಸಾಮೂಹಿಕ ಗಣೇಶ ವಿಸರ್ಜನೆ ವೇಳೆ ಕೋಮು ಸೌಹಾರ್ದತೆ ಮೆರೆದ ಮುಸ್ಲಿಂ ಬಾಂಧವರು
ಸಾಮೂಹಿಕ ಗಣೇಶ ವಿಸರ್ಜನೆ ವೇಳೆ ಕೋಮು ಸೌಹಾರ್ದತೆ ಮೆರೆದ ಮುಸ್ಲಿಂ ಬಾಂಧವರು
ಬದರಿನಾಥದ ಮಹಿಳೆಯರ ಜೊತೆ ಜಾನಪದ ನೃತ್ಯ ಮಾಡಿದ ಸಿಎಂ ಪುಷ್ಕರ್ ಸಿಂಗ್ ಧಾಮಿ!
ಬದರಿನಾಥದ ಮಹಿಳೆಯರ ಜೊತೆ ಜಾನಪದ ನೃತ್ಯ ಮಾಡಿದ ಸಿಎಂ ಪುಷ್ಕರ್ ಸಿಂಗ್ ಧಾಮಿ!
ವೇದಿಕೆ ಮೇಲೆಯೇ ಶಿಡ್ಲಘಟ್ಟ ತಹಶೀಲ್ದಾರ್​​ಗೆ ಡಿಸಿ ಕ್ಲಾಸ್
ವೇದಿಕೆ ಮೇಲೆಯೇ ಶಿಡ್ಲಘಟ್ಟ ತಹಶೀಲ್ದಾರ್​​ಗೆ ಡಿಸಿ ಕ್ಲಾಸ್
ಸಿನಿಮಾ ಸೆನ್ಸಾರ್​​ಗೆ ಹೊಸ ಮಾರ್ಗಸೂಚಿ: ಇಲ್ಲಿದೆ ಪೂರ್ಣ ಮಾಹಿತಿ ವಿಡಿಯೋ
ಸಿನಿಮಾ ಸೆನ್ಸಾರ್​​ಗೆ ಹೊಸ ಮಾರ್ಗಸೂಚಿ: ಇಲ್ಲಿದೆ ಪೂರ್ಣ ಮಾಹಿತಿ ವಿಡಿಯೋ
ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಹೆಚ್.ಸಿ. ಮಹದೇವಪ್ಪ ಟಾಂಗ್
ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಹೆಚ್.ಸಿ. ಮಹದೇವಪ್ಪ ಟಾಂಗ್