ಜನ ಬಾರದೆ ಶೋ ಕ್ಯಾನ್ಸಲ್, ಸ್ಟಾರ್ ಸಿನಿಮಾಕ್ಕೆ ಇದೆಂಥ ಅವಸ್ಥೆ
ಸ್ಟಾರ್ ನಟರ ಸಿನಿಮಾ ಬಿಡುಗಡೆ ಆಗುತ್ತವೆಂದರೆ ಅಭಿಮಾನಿಗಳು ಹಬ್ಬದಂತೆ ಆಚರಣೆ ಮಾಡುತ್ತಾರೆ. ಸಿನಿಮಾ ಚೆನ್ನಾಗಿಲ್ಲದಿದ್ದರೂ ಮೊದಲ ದಿನವಾದರೂ ಸಿನಿಮಾ ಹೌಸ್ಫುಲ್ ಆಗುತ್ತದೆ. ಆದರೆ ತಮಿಳಿನ ಸ್ಟಾರ್ ನಟನ ಹೊಸ ಸಿನಿಮಾ ಮೊದಲ ದಿನವೇ ಹಲವೆಡೆ ಹಲವು ಶೋಗಳು ಕ್ಯಾನ್ಸಲ್ ಆಗಿವೆ. ಸಿನಿಮಾ ನೋಡಲು ಜನ ಬರದೇ ಇದ್ದ ಕಾರಣಕ್ಕೆ ಸಿನಿಮಾ ಶೋ ಅನ್ನು ರದ್ದು ಮಾಡಲಾಗಿದೆ.

ಹೊಸ ಸಿನಿಮಾ, ಅದರಲ್ಲೂ ಸ್ಟಾರ್ ನಟರೊಬ್ಬರ ಹೊಸ ಸಿನಿಮಾ ಬಿಡುಗಡೆ ಆದಾಗ ಸಹಜವಾಗಿಯೇ ಕುತೂಹಲ ಇರುತ್ತದೆ. ಸಿನಿಮಾ ಒಂದೊಮ್ಮೆ ಕೆಟ್ಟದಾಗಿದ್ದರೂ ಮೊದಲ ಶೋ ಆದರೂ ಹೌಸ್ಫುಲ್ ಆಗುತ್ತದೆ. ಆದರೆ ತಮಿಳಿನ ಸ್ಟಾರ್ ನಟನ ಸಿನಿಮಾದ ರಿಲೀಸ್ನ ಮೊದಲ ದಿನವೇ ಸಿನಿಮಾದ ಹಲವು ಶೋಗಳು ರದ್ದಾಗಿವೆ. ಹೆಚ್ಚಿನ ಜನ ಸಿನಿಮಾ ನೋಡಲು ಬಾರದೇ ಇದ್ದ ಕಾರಣಕ್ಕೆ ಸಿನಿಮಾದ ಶೋಗಳನ್ನು ರದ್ದು ಮಾಡಲಾಗಿದೆ ಎಂದು ವರದಿಯಾಗಿದೆ.
ತಮಿಳಿನ ಸ್ಟಾರ್ ನಟ ಸೂರ್ಯ ಅವರ ಸಹೋದರ ಕಾರ್ತಿ ನಟನೆಯ ಹೊಸ ಸಿನಿಮಾ ‘ಸರ್ದಾರ್ 2’ ಇಂದು (ಸೆಪ್ಟೆಂಬರ್ 10) ಬಿಡುಗಡೆ ಆಗಿದೆ. ಪಿಎಸ್ ಮಿತ್ರನ್ ನಿರ್ದೇಶನದ ಈ ಸಿನಿಮಾನಲ್ಲಿ ಮಾಳವಿಕಾ ಮೋಹನನ್, ಆಶಿಕಾ ರಂಗನಾಥ್, ಎಸ್ಜೆ ಸೂರ್ಯ ಇನ್ನಿತರರು ನಟಿಸಿದ್ದಾರೆ. ಸಿನಿಮಾ, ಭಿನ್ನ ಮಾದರಿಯ ಸ್ಪೈ ಆಕ್ಷನ್ ಸಿನಿಮಾ ಆಗಿದ್ದು, ಸಿನಿಮಾನಲ್ಲಿ ಹಾಸ್ಯದ ಜೊತೆಗೆ ಸಾಕಷ್ಟು ಅಂಶಗಳಿವೆ. ಇಂದು (ಸೆಪ್ಟೆಂಬರ್ 2) ಸಿನಿಮಾ ಬಿಡುಗಡೆ ಆಗಿದ್ದು, ಮೊದಲ ದಿನವೇ ಸಿನಿಮಾದ ಬಗ್ಗೆ ಋಣಾತ್ಮಕ ಅಭಿಪ್ರಾಯಗಳು ಹರಿದಾಡಿವೆ.
‘ಸರ್ದಾರ್ 2’ ಸಿನಿಮಾ ತಮಿಳಿನ ಜೊತೆಗೆ ತೆಲುಗು ಭಾಷೆಯಲ್ಲಿ ಸಹ ಬಿಡುಗಡೆ ಆಗಿದೆ. ವಿಶೇಷವಾಗಿ ತೆಲುಗು ಜನರನ್ನು ಸೆಳೆಯಲು ಕಾರ್ತಿ, ಎಸ್ಜೆ ಸೂರ್ಯ ಅವರುಗಳು ಸಾಕಷ್ಟು ವಿಶೇಷ ಸಂದರ್ಶನಗಳನ್ನು ಸಹ ಮಾಡಿದ್ದರು. ಏನೇ ಮಾಡಿದರೂ ತೆಲುಗು ರಾಜ್ಯಗಳಲ್ಲಿ ‘ಸರ್ದಾರ್ 2’ ಸಿನಿಮಾ ನೋಡಲು ಜನ ಬಂದಿಲ್ಲ. ಆಂಧ್ರ, ತೆಲಂಗಾಣದ ಹಲವು ಪ್ರಮುಖ ನಗರಗಳ ಮಲ್ಟಿಪ್ಲೆಕ್ಸ್ಗಳಲ್ಲಿ ‘ಸರ್ದಾರ್ 2’ ಸಿನಿಮಾ ಪ್ರದರ್ಶಿಸಲಾಗಿತ್ತು. ಆದರೆ ಸಿನಿಮಾ ಬಿಡುಗಡೆ ಆದ ದಿನವೇ ಸಿನಿಮಾದ ಹಲವು ಶೋಗಳು ರದ್ದಾಗಿವೆ.
ಇದನ್ನೂ ಓದಿ:ಒಂದೇ ವರ್ಷದಲ್ಲಿ ಮೂರನೇ ಹಿಟ್ ಸಿನಿಮಾ ಕೊಡಲು ಸಜ್ಜಾದ ಸೂರ್ಯ
‘ಸರ್ದಾರ್ 2’ ಸಿನಿಮಾಕ್ಕೆ ನಿರೀಕ್ಷಿತ ಸಂಖ್ಯೆಯ ಜನ ಬಂದಿಲ್ಲ. ಕೆಲ ವರದಿಗಳ ಪ್ರಕಾರ, ಆಂಧ್ರ-ತೆಲಂಗಾಣದ ಕೆಲ ಚಿತ್ರಮಂದಿರಗಳಲ್ಲಿ ಒಬ್ಬರೂ ಪ್ರೇಕ್ಷಕರು ಇರಲಿಲ್ಲವಂತೆ ಇದೇ ಕಾರಣಕ್ಕೆ ಸಿನಿಮಾದ ಶೋಗಳನ್ನು ರದ್ದು ಮಾಡಲಾಗಿದೆ. ಸಿನಿಮಾದ ಮೊದಲ ಶೋನ ಬಳಿಕ ಸೆಕೆಂಡ್ ಶೋಗಳು ಹಲವೆಡೆ ಕ್ಯಾನ್ಸಲ್ ಆಗಿರುವುದು ಚಿತ್ರತಂಡಕ್ಕೆ ದೊಡ್ಡ ಹಿನ್ನಡೆ ಆಗಿದೆ. ಖುದ್ದು ಕಾರ್ತಿಗೆ ಸಹ ಇದು ಹಿನ್ನಡೆ ಆಗಿದೆ.
‘ಸರ್ದಾರ್ 2’ ಸಿನಿಮಾವನ್ನು ಪಿಎಸ್ ಮಿತ್ರನ್ ನಿರ್ದೇಶನ ಮಾಡಿದ್ದಾರೆ. ವಿಶೇಷವೆಂದರೆ ಇವರೊಟ್ಟಿಗೆ ಯಶ್ ತಮ್ಮ ಮುಂದಿನ ಸಿನಿಮಾ ಮಾಡಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ ಈಗ ನೋಡಿದರೆ ಜನರೇ ಇಲ್ಲದೆ ಸಿನಿಮಾ ಅನ್ನೇ ರದ್ದು ಮಾಡಲಾಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




