ಸಿಸಿಎಲ್ (CCL) ಸೀಸನ್ 10ರ ಆರಂಭಕ್ಕೆ ದಿನಗಣನೆ ಆರಂಭ ಆಗಿದೆ. ಫೆಬ್ರವರಿ 23ರಿಂದ ಪ್ರತೀ ವೀಕೆಂಡ್ ದೇಶದ ವಿವಿಧ ಕಡೆಗಳಲ್ಲಿ ಮ್ಯಾಚ್ಗಳು ನಡೆಯಲಿವೆ. ಈ ಬಾರಿ ಜಿಯೋ ಸಿನಿಮಾದಲ್ಲಿ ಪಂದ್ಯಗಳು ನೇರ ಪ್ರಸಾರ ಕಾಣಲಿವೆ. ‘ಕರ್ನಾಟಕ ಬುಲ್ಡೋಜರ್ಸ್’ ತಂಡಕ್ಕೆ ಕಿಚ್ಚ ಸುದೀಪ್ (Kichcha Sudeep) ನಾಯಕನಾಗಿದ್ದಾರೆ. ಒಟ್ಟೂ ಎಂಟು ತಂಡಗಳು ಪಂದ್ಯಗಳನ್ನು ಆಡಲಿವೆ. ಪ್ರತಿ ತಂಡದ ನಾಯಕನ ಬಗ್ಗೆ ಇಲ್ಲಿದೆ ವಿವರ.
‘ಮುಂಬೈ ಹೀರೋಸ್’ ತಂಡಕ್ಕೆ ಸಲ್ಮಾನ್ ಖಾನ್ ಅವರು ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದಾರೆ. ರಿತೇಶ್ ದೇಶಮುಖ್ ಈ ತಂಡದ ಕ್ಯಾಪ್ಟನ್. ಸೋಹೈಲ್ ಖಾನ್ ತಂಡದ ಮಾಲೀಕರಾಗಿದ್ದಾರೆ. ‘ತೆಲುಗು ವಾರಿಯರ್ಸ್’ ತಂಡಕ್ಕೆ ವೆಂಕಟೇಶ್ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದಾರೆ. ಟಾಲಿವುಡ್ ನಟ ಅಖಿಲ್ ಅಕ್ಕಿನೇನಿ ಕ್ಯಾಪ್ಟನ್.
CCL 2024 Promo screened on Burj Khalifa watched live by actors and celebrities of 8 film industries. CCL is bigger than ever. League starts from 23rd February. @ccl #CCL2024 #CCLonBurjKhalifa#Karnatakabulldozers@karbulldozers@KicchaSudeep@Theactorpradeep@PROHarisarasu pic.twitter.com/ZX8sFzTi8Y
— KFI Corner (@KFICorner) February 3, 2024
‘ಕರ್ನಾಟಕ ಬುಲ್ಡೋಜರ್ಸ್’ ತಂಡವನ್ನು ಕಿಚ್ಚ ಸುದೀಪ್ ಮುನ್ನಡೆಸುತ್ತಿದ್ದಾರೆ. ‘ಕೇರಳ ಸ್ಟ್ರೈಕರ್ಸ್’ ತಂಡಕ್ಕೆ ಮೋಹನ್ಲಾಲ್ ಸಹ-ಮಾಲೀಕರಾಗಿದ್ದಾರೆ. ಇಂದ್ರಜಿತ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ‘ಭೋಜಪುರಿ ದಬಾಂಗ್ಸ್’ ತಂಡಕ್ಕೆ ಮನೋಜ್ ತಿವಾರಿ ಕ್ಯಾಪ್ಟನ್. ‘ಪಂಜಾಬ್ ದೆ ಶೇರ್’ ತಂಡವನ್ನು ಬಾಲಿವುಡ್ ನಟ ಸೋನು ಸೂದ್ ಮುನ್ನಡೆಸುತ್ತಿದ್ದಾರೆ. ‘ಬೆಂಗಾಲ್ ಟೈಗರ್ಸ್’ ತಂಡಕ್ಕೆ ಬೋನಿ ಕಪೂರ್ ಒಡೆತನ ಇದೆ. ಜಿಸ್ಸು ಸೇನ್ಗುಪ್ತ ನಾಯಕನಾಗಿದ್ದಾರೆ.
ಇದನ್ನೂ ಓದಿ: ದುಬೈ ಬುರ್ಜ್ ಖಲೀಫಾ ಮೇಲೆ ಸಿಸಿಎಲ್ ಪ್ರೋಮೋ; ಇತರ ಸ್ಟಾರ್ಸ್ ಜೊತೆ ಪೋಸ್ ಕೊಟ್ಟ ಸುದೀಪ್
ತಂಡಗಳ ಹೆಸರು ಹಾಗೂ ಅವರ ನಾಯಕರ ಹೆಸರು..
ಕರ್ನಾಟಕ ಬುಲ್ಡೋಜರ್ಸ್- ಕ್ಯಾಪ್ಟನ್: ಕಿಚ್ಚ ಸುದೀಪ್
ಮುಂಬೈ ಹೀರೋಸ್- ಕ್ಯಾಪ್ಟನ್: ರಿತೇಶ್ ದೇಶಮುಖ್
ಕೇರಳ ಸ್ಟ್ರೈಕರ್ಸ್- ಕ್ಯಾಪ್ಟನ್: ಇಂದ್ರಜಿತ್ ಸುಕುಮಾರನ್
ತೆಲುಗು ವಾರಿಯರ್ಸ್- ಕ್ಯಾಪ್ಟನ್: ಅಖಿಲ್ ಅಕ್ಕಿನೇನಿ
ಬೆಂಗಾಲ್ ಟೈಗರ್ಸ್- ಕ್ಯಾಪ್ಟನ್: ಜಿಸ್ಸು ಸೇನ್ಗುಪ್ತ
ಭೋಜ್ಪುರಿ ದಬಾಂಗ್ಸ್- ಕ್ಯಾಪ್ಟನ್: ಮನೋಜ್ ತಿವಾರಿ
ಚೆನ್ನೈ ರೈನೋಸ್- ಕ್ಯಾಪ್ಟನ್: ಆರ್ಯ
ಪಂಜಾಬ್ ದಿ ಶೇರ್- ಕ್ಯಾಪ್ಟನ್: ಸೋನು ಸೂದ್
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:13 am, Sat, 3 February 24