AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಬಾಲಿವುಡ್​​ ಮಾಫಿಯಾ’ ಇದೆ, ಚಿತ್ರರಂಗದ ನೀಚತನದ ಬಗ್ಗೆ ನಟ ಕುನಾಲ್ ಮಾತು

Kunal Khemu: ಬಾಲಿವುಡ್​​ ಒಳಗಿನ ಕತೆ ಬಲು ಕರಾಳವಾಗಿದೆ. ಬಾಲಿವುಡ್​ನ ನೀಚ ರಾಜಕೀಯ, ನೆಪೊಟಿಸಮ್, ಫೇವರಿಸಮ್, ಉದ್ಯಮದ ಮೇಲೆ ಕೆಲವೇ ವ್ಯಕ್ತಿಗಳ ಹಿಡಿತ, ದ್ವೇಷ, ಅಸೂಯೆಗಳ ಕತೆಗಳು ಬರೆದಷ್ಟೂ ಬಾಲಿವುಡ್​​ನಲ್ಲಿವೆ. ಇದೀಗ ಎರಡು ದಶಕದಿಂದಲೂ ಬಾಲಿವುಡ್​ನ ಭಾಗವಾಗಿರುವ ಖ್ಯಾತ ನಟ ಕುನಾಲ್ ಖೇಮು ಬಾಲಿವುಡ್​​ನ ಈ ನೀಚತನದ ಬಗ್ಗೆ ಮಾತನಾಡಿದ್ದಾರೆ.

‘ಬಾಲಿವುಡ್​​ ಮಾಫಿಯಾ’ ಇದೆ, ಚಿತ್ರರಂಗದ ನೀಚತನದ ಬಗ್ಗೆ ನಟ ಕುನಾಲ್ ಮಾತು
Kunal Khemu
ಮಂಜುನಾಥ ಸಿ.
|

Updated on: Jun 28, 2026 | 3:53 PM

Share

ಬಾಲಿವುಡ್ (Bollywood)​​ ಹೊರಗಿನಿಂದ ನೋಡುವವರಿಗೆ ಲಕ್ಷಾಂತರ ಕೋಟಿ ರೂಪಾಯಿಯ ಉದ್ಯಮ, ಸಖತ್ ಥಳುಕು-ಬಳುಕು, ನಟ-ನಟಿಯರ ನಡುವೆ ಅಪಾರ ಪ್ರೀತಿ, ಗೌರವ ಕಂಡು ಬರುತ್ತದೆ. ಆದರೆ ಒಳಗಿನ ಕತೆ ಬಲು ಕರಾಳವಾಗಿದೆ. ಬಾಲಿವುಡ್​ನ ನೀಚ ರಾಜಕೀಯ, ನೆಪೊಟಿಸಮ್, ಫೇವರಿಸಮ್, ಉದ್ಯಮದ ಮೇಲೆ ಕೆಲವೇ ವ್ಯಕ್ತಿಗಳ ಹಿಡಿತ, ದ್ವೇಷ, ಅಸೂಯೆಗಳ ಕತೆಗಳು ಬರೆದಷ್ಟೂ ಬಾಲಿವುಡ್​​ನಲ್ಲಿವೆ. ಇದೀಗ ಎರಡು ದಶಕದಿಂದಲೂ ಬಾಲಿವುಡ್​ನ ಭಾಗವಾಗಿರುವ ಖ್ಯಾತ ನಟ ಕುನಾಲ್ ಖೇಮು ಬಾಲಿವುಡ್​​ನ ಈ ನೀಚತನದ ಬಗ್ಗೆ ಮಾತನಾಡಿದ್ದಾರೆ.

ಕುನಾಲ್ ಖೇಮು, 1993 ರಿಂದಲೂ ಹಿಂದಿ ಸಿನಿಮಾಗಳಲ್ಲಿ ನಟಿಸುತ್ತಾ ಬಂದವರು. ಬಾಲನಟನಾಗಿ ಹೆಸರು ಮಾಡಿದ್ದ ಕುನಾಲ್ 2005 ರಲ್ಲಿ ಬಿಡುಗಡೆ ಆದ ‘ಕಲ್ಯುಗ್’ ಸಿನಿಮಾ ಮೂಲಕ ನಾಯಕರಾದವರು. ಆ ಬಳಿಕ ಹಲವಾರು ಸಿನಿಮಾಗಳಲ್ಲಿ ನಾಯಕನಾಗಿ, ಸಹ ನಾಯಕನಾಗಿ ನಟಿಸಿದ್ದಾರೆ. ಈಗಲೂ ಸಹ ಹಾಸ್ಯ ಪ್ರಧಾನ ಸಿನಿಮಾಗಳಲ್ಲಿ ಕುನಾಲ್ ಖೇಮುಗೆ ಬಲು ಬೇಡಿಕೆ ಇದೆ. ಪ್ರಖ್ಯಾತ ಪಟೌಡಿ ಕುಟುಂಬದ ಅಳಿಯನೂ ಆಗಿರುವ ಕುಮಾನ್ ಖೇಮು, ಇದೀಗ ಬಾಲಿವುಡ್​​ನಲ್ಲಿರುವ ನೀಚತನಗಳ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ.

‘ಮೊದಲೆಲ್ಲ ಬಾಲಿವುಡ್​​ನಲ್ಲಿ ಅತಿಯಾದ ಗುಂಪುಗಾರಿಕೆಗಳು ಇರುತ್ತಿತ್ತು. ಆಗೆಲ್ಲ ಕೆಲವೇ ಕುಟುಂಬಗಳು ಸಿನಿಮಾ ನಿರ್ಮಾಣ ಮಾಡುತ್ತಿದ್ದವು. ಹಾಗಾಗಿ ಕೆಲವೇ ಕುಟುಂಬಗಳ ಕೈಯಲ್ಲಿ ಇಡೀ ಚಿತ್ರರಂಗ ಇರುತ್ತಿತ್ತು. ಫೇವರಿಸಂ ಸಹ ಆಗೆಲ್ಲ ಬಹಳ ಇರುತ್ತಿತ್ತು. ಕೆಲವರು ಉದ್ದೇಶಪೂರ್ವಕವಾಗಿ ಕೆಲವರನ್ನು ತಡೆಯುತ್ತಿದ್ದರು. ಆದರೆ ಕಾರ್ಪೊರೇಟ್​ ಸಂಸ್ಥೆಗಳು ಉದ್ಯಮಕ್ಕೆ ಕಾಲಿಟ್ಟಮೇಲೆ ಆ ಬಿಗಿ ಹಿಡಿತ ತುಸು ಸಡಿಲಿಕೆ ಆಯ್ತು’ ಎಂದಿದ್ದಾರೆ ಕುನಾಲ್ ಖೇಮು. ಮುಂದುವರೆದು ಮಾತನಾಡಿ, ‘ಹಿಂದೆ ಎಲ್ಲ ನೀವು ಚಿತ್ರರಂಗದಲ್ಲಿ ಉಳಿಯಬೇಕೆಂದರೆ ಯಾವುದಾದರೂ ಒಂದು ಕುಟುಂಬದ ಹತ್ತಿರದವರಾಗಿ ಅಥವಾ ಒಂದು ಗುಂಪಿನ ಸದಸ್ಯರಾಗಿ ಗುರುತಿಸಿಕೊಳ್ಳಬೇಕಿತ್ತು. ಇಲ್ಲವಾದರೆ ನೀವು ಚಿತ್ರರಂಗದಲ್ಲಿ ಉಳಿಯುವುದೇ ಕಷ್ಟವಾಗುತ್ತಿತ್ತು’ ಎಂದಿದ್ದಾರೆ ಕುನಾಲ್.

ಇದನ್ನೂ ಓದಿ:ಅಲ್ಲು ಅರ್ಜುನ್ ಜೊತೆ ಸಿನಿಮಾ, ಶೂಟಿಂಗ್​ಗೆ ಹಾಜರಾದ ರಶ್ಮಿಕಾ ಮಂದಣ್ಣ

ಬಾಲಿವುಡ್​​ನಲ್ಲಿ ಇರುವ ಲೆಕ್ಕಾಚಾರದ ಬಗ್ಗೆ ಮಾತನಾಡಿರುವ ಕುನಾಲ್ ಖೇಮು, ‘ನಾವು ಈಗ ಲೆಕ್ಕಾಚಾರದಲ್ಲಿ ಸಿನಿಮಾ ಮಾಡುತ್ತಿದ್ದೇವೆ. ಸಿನಿಮಾ ನಿರ್ಮಾಣ ಆಗುತ್ತಿರುವುದು ಸಹ ಪ್ರತಿಭೆ ಮೇಲೆ ಅಲ್ಲ ಬದಲಿಗೆ ಲೆಕ್ಕಾಚಾರದ ಮೇಲೆ, ಹಾಗಾಗಿ ನಾವು ಈಗ ಸಿನಿಮಾ ಮಾಡುತ್ತಿದ್ದೇವೆ ಎನ್ನುತ್ತಿಲ್ಲ ಬದಲಿಗೆ ಪ್ರಾಜೆಕ್ಟ್ ಎಂದು ಕರೆಯುತ್ತಿದ್ದೇವೆ’ ಎಂದು ಕಟು ಸತ್ಯ ಹೇಳಿದರು ನಟ.

ಕುನಾಲ್ ಖೇಮು ಅವರು ‘ಗೂಲ್​​ಮಾಲ್’, ‘ಗೋ ಗೋವಾ ಗಾನ್’, ‘ಲೂಟ್​​ಕೇಸ್’, ‘ಕಲ್ಯುಗ್’, ‘ಮಡಗಾವ್ ಎಕ್ಸ್​​ಪ್ರೆಸ್’ ಇನ್ನೂ ಕೆಲವು ಸಿನಿಮಾಗಳಿಂದ ಜನಪ್ರಿಯರು. ಇದೀಗ ಅವರು ‘ಮಡಗಾಂವ್ ಎಕ್ಸ್​​ಪ್ರೆಸ್’ ಸಿನಿಮಾದ ನಿರ್ದೇಶನವನ್ನೂ ಸಹ ಮಾಡಿದ್ದಾರೆ. ಮುಂದೆ ಅವರು ‘ಗೋಲ್​​ಮಾಲ್ 5’ ಸಿನಿಮಾನಲ್ಲಿ ನಟಿಸಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us