AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮನೆಯಲ್ಲಿ ಸುಲಭವಾಗಿ ಬೆಳೆಸ್ಬೋದು ತಾಜಾ ಕೊತ್ತಂಬರಿ ಸೊಪ್ಪು; ನಿಮಗಾಗಿ ಇಲ್ಲಿದೆ ಸಲಹೆ

ಅನೇಕರು ತಾವು ಮಾಡುವ ಪ್ರತಿಯೊಂದು ಅಡುಗೆಗೂ ಕೊತ್ತಂಬರಿ ಸೊಪ್ಪನ್ನು ಸೇರಿಸುತ್ತಾರೆ. ಈ ಸೊಪ್ಪು ಅಡುಗೆಯ ಘಮ, ರುಚಿಯನ್ನು ಹೆಚ್ಚಿಸುವುದಲ್ಲದೇ ಆರೋಗ್ಯಕ್ಕೂ ಸಖತ್‌ ಪ್ರಯೋಜನಕಾರಿ. ಮಾರುಕಟ್ಟೆಯಲ್ಲಿ ಹೇರಳವಾಗಿ ಈ ಸೊಪ್ಪು ಲಭ್ಯವಿದ್ದು, ಇದು ಎಷ್ಟು ಫ್ರೆಶ್‌ ಮತ್ತು ರಾಸಾಯನಿಕಮುಕ್ತವಾಗಿರುತ್ತೆ ಎಂದು ಹೇಳಲು ಸಾಧ್ಯವಿಲ್ಲ. ಆದ್ದರಿಂದ ನಿತ್ಯ ಅಡುಗೆಗೆ ಬಳಸುವ ಕೊತ್ತಂಬರಿ ಸೊಪ್ಪನ್ನು ಮನೆಯಲ್ಲಿಯೇ ಸುಲಭವಾಗಿ ಬೆಳೆಸಬಹುದು. ಇದಕ್ಕಾಗಿ ಈ ಸಿಂಪಲ್‌ ಟಿಪ್ಸ್‌ ಪಾಲಿಸಿದರೆ ಸಾಕು.

ಮನೆಯಲ್ಲಿ ಸುಲಭವಾಗಿ ಬೆಳೆಸ್ಬೋದು ತಾಜಾ ಕೊತ್ತಂಬರಿ ಸೊಪ್ಪು; ನಿಮಗಾಗಿ ಇಲ್ಲಿದೆ ಸಲಹೆ
ಕೊತ್ತಂಬರಿ ಸೊಪ್ಪುImage Credit source: Getty Images
ಮಾಲಾಶ್ರೀ ಅಂಚನ್​
|

Updated on: Jul 29, 2026 | 6:31 PM

Share

ಮುಖ್ಯಾಂಶಗಳು

  • ಕೊತ್ತಂಬರಿ ಸೊಪ್ಪು ಅಡುಗೆಯ ರುಚಿ, ಘಮವನ್ನು ದುಪ್ಪಟ್ಟುಗೊಳಿಸುತ್ತದೆ
  • ಮಾರುಕಟ್ಟೆಯಲ್ಲಿ ಲಭ್ಯವಿರುವ ಕೊತ್ತಂಬರಿ ಸೊಪ್ಪು ರಾಸಾಯನಿಕಮುಕ್ತವಾಗಿರುತ್ತದೆ ಎಂದು ಹೇಳಲು ಸಾಧ್ಯವಿಲ್ಲ
  • ಮನೆಯಲ್ಲಿಯೇ ನೀವು ಫ್ರೆಶ್‌ ಕೊತ್ತಂಬರಿ ಸೊಪ್ಪನ್ನು ಬೆಳೆಯಬಹುದು

ಅಡುಗೆಯ ಘಮ ಮತ್ತು ರುಚಿಯನ್ನು ಹೆಚ್ಚಿಸುವಲ್ಲಿ ಕೊತ್ತಂಬರಿ ಸೊಪ್ಪು (Coriander leaves) ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ. ಅಡುಗೆಯ ರುಚಿ ಹೆಚ್ಚಿಸುವುದು ಮಾತ್ರವಲ್ಲ ಇದು ಆರೋಗ್ಯಕ್ಕೂ ಸಖತ್‌ ಪ್ರಯೋಜನಕಾರಿ. ಉತ್ಕರ್ಷಣ ನಿರೋಧಕಗಳು, ಖನಿಜಗಳು ಮತ್ತು ವಿಟಮಿನ್‌ಗಳಂತಹ ಪೋಷಕಾಂಶಗಳಿಂದ ಸಮೃದ್ಧವಾಗಿರುವ ಕೊತ್ತಂಬರಿ ಸೊಪ್ಪು  ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದಲ್ಲದೆ, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಈ ಆರೋಗ್ಯ ಪ್ರಯೋಜನ ಮತ್ತು ಅಡುಗೆಯ ರುಚಿ, ಪರಿಮಳವನ್ನು ಹೆಚ್ಚಿಸುವ ಕಾರಣ ಬಹುತೇಕ ಎಲ್ಲರೂ ಸಾಂಬಾರ್‌, ರಸಂ, ಚಟ್ನಿ, ಪಲ್ಯ ಇತ್ಯಾದಿ ಅಡುಗೆಗಳಿಗೆ ಕೊತ್ತಂಬರಿ ಸೊಪ್ಪನ್ನು ಸೇರಿಸುತ್ತಾರೆ. ಇಷ್ಟೆಲ್ಲಾ ಪ್ರಯೋಜನಗಳನ್ನು ಹೊಂದಿರುವ ಕೊತ್ತಂಬರಿ ಸೊಪ್ಪನ್ನು ಮಾರುಕಟ್ಟೆಯಿಂದ ಖರೀದಿಸುವ ಬದಲು ಫ್ರೆಶ್‌ ಆಗಿ ಮನೆಯಲ್ಲಿಯೇ ಬೆಳೆಯಬಹುದು. ಹೌದು ಈ ಕೆಲವೊಂದು ಟಿಪ್ಸ್‌ಗಳ ಸಹಾಯದಿಂದ ಪಾಟ್‌ನಲ್ಲಿಯೂ ಸುಲಭವಾಗಿ ಕೊತ್ತಂಬರಿ ಸೊಪ್ಪನ್ನು ಬೆಳೆಯಬಹುದು.

ಮನೆಯಲ್ಲಿ ಕೊತ್ತಂಬರಿ ಸೊಪ್ಪು ಬೆಳೆಯಲು ಈ ಹಂತಗಳನ್ನು ಪಾಲಿಸಿ:

ಪಾಟ್‌ ಆಯ್ಕೆ: ಸ್ವಂತ ಮನೆಯಲ್ಲಿರುವವರು ಮನೆಯಂಗಳ, ಹಿತ್ತಲಿನಲ್ಲಿ ಬೆಳೆಯಬಹುದು. ಫ್ಲ್ಯಾಟ್‌ಗಳಲ್ಲಿ ಇರುವವರೂ ಸಹ ಕೊತ್ತಂಬರಿ ಸೊಪ್ಪನ್ನು ಬೆಳೆಯಬಹುದು. ಕೊತ್ತಂಬರಿ ಸೊಪ್ಪು ಬೆಳೆಯಲು, ಮೊದಲು ಕನಿಷ್ಠ 6 ರಿಂದ 8 ಇಂಚು ಆಳವಿರುವ ಪಾಟ್‌ ಅಥವಾ ಪಾತ್ರೆಯನ್ನು ಆರಿಸಿ. ಪಾಟ್‌ ಅಗಲವಾಗಿರುವಂತೆ ನೋಡಿಕೊಳ್ಳಿ.

ಮಣ್ಣಿನ ಆಯ್ಕೆ: ಮಣ್ಣಿನ ಆಯ್ಕೆಯ ಬಗ್ಗೆಯೂ ಕಾಳಜಿ ವಹಿಸಬೇಕು. ಕೊತ್ತಂಬರಿ ಸೊಪ್ಪು ಬೆಳೆಯಲು, ಮಣ್ಣು ಸಡಿಲವಾಗಿರಬೇಕು ಮತ್ತು ಪೋಷಕಾಂಶಗಳಿಂದ ಸಮೃದ್ಧವಾಗಿರಬೇಕು. ಇದಕ್ಕಾಗಿ ತೋಟದ ಮಣ್ಣಿಗೆ ಪೋಷಕಾಂಶಗಳನ್ನು ಒದಗಿಸುವ ಹಸುವಿನ ಗೊಬ್ಬರ ಅಥವಾ ವರ್ಮಿಕಾಂಪೋಸ್ಟ್  ಮರಳು ಅಥವಾ ಕೊಕೊಪೀಟ್ ಬೆರೆಸಿ ಪಾಟ್‌ನಲ್ಲಿ ಹಾಕಿಡಿ.

ಕೊತ್ತಂಬರಿ ಬೀಜಗಳ ಆಯ್ಕೆ: ಮಾರುಕಟ್ಟೆಯಿಂದ ಉತ್ತಮ ಗುಣಮಟ್ಟದ ಕೊತ್ತಂಬರಿ ಬೀಜಗಳನ್ನು ಖರೀದಿಸಿ ಮತ್ತು ಆ ಬೀಜಗಳು ಮುರಿದು ಹೋಗಿಲ್ಲ ಅಥವಾ ಯಾವುದೇ ಹಾನಿಗೊಳಗಾಗಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ. ಆರೋಗ್ಯಕರ ಬೀಜಗಳನ್ನೇ ಆಯ್ಕೆ ಮಾಡಿ. ಈ ಕೊತ್ತಂಬರಿ ಬೀಜಗಳನ್ನು ಅವುಗಳನ್ನು ಸಮತಟ್ಟಾದ ಮೇಲ್ಮೈನಲ್ಲಿ ಇರಿಸಿ ಬೀಜ ಎರಡು ಭಾಗಗಳಾಗುವಂತೆ ಲಘುವಾಗಿ ಪುಡಿಮಾಡಿ.

ಇದನ್ನೂ ಓದಿ: ಜಸ್ಟ್‌ ಟಿಪ್ಸ್‌ ಪಾಲಿಸುವ ಮೂಲಕ ಮನೆಯಂಗಳದಲ್ಲಿಯೇ ಸುಲಭವಾಗಿ ಬೆಳೆಯಬಹುದು ಕರಿಬೇವಿನ ಗಿಡ

ಬೀಜ ಬಿತ್ತುವ ಪ್ರಕ್ರಿಯೆ: ಎರಡು ಭಾಗಗಳನ್ನಾಗಿ ವಿಂಗಡಿಸಿದ ಬಳಿಕ ಕೊತ್ತಂಬರಿ ಬೀಜಗಳನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿ, ಇದು ಸಿಪ್ಪೆಯನ್ನು ಮೃದುಗೊಳಿಸುತ್ತದೆ ಮತ್ತು ಅವು ವೇಗವಾಗಿ ಮೊಳಕೆಯೊಡೆಯಲು ಸಹಾಯ ಮಾಡುತ್ತದೆ. ಮರುದಿನ ಬೆಳಿಗ್ಗೆ, ಬೀಜಗಳನ್ನು ನೀರಿನಿಂದ ಸೋಸಿ ಮೊದಲೇ ಪಾಟ್‌ನಲ್ಲಿ ಹಾಕಿಟ್ಟ ಮಣ್ಣಿನ ಮೇಲೆ ಹರಡಿ. ಪರ್ಯಾಯವಾಗಿ, ನೀವು ನಿಮ್ಮ ಬೆರಳಿನಿಂದ ಮಣ್ಣಿನಲ್ಲಿ ಸಣ್ಣ ರಂಧ್ರಗಳನ್ನು ಮಾಡಿ ಬೀಜಗಳನ್ನು ಅವುಗಳೊಳಗೆ ಇಡಬಹುದು.  ನಂತರ, ಮಣ್ಣನ್ನು ತೇವಗೊಳಿಸಲು ಸ್ಪ್ರೇ ಬಾಟಲಿಯಿಂದ ಸ್ವಲ್ಪ ನೀರನ್ನು ಸಿಂಪಡಿಸಿ

ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಲಘುವಾಗಿ ನೀರು ಹಾಕಿ ಮತ್ತು ಮಧ್ಯಮ ಸೂರ್ಯನ ಬೆಳಕು ಬೀಳುವ ಸ್ಥಳದಲ್ಲಿ ಪಾಟ್‌ ಇರಿಸಿ. ಸರಿಯಾಗಿ ಅರೈಕೆ ಮಾಡಿದರೆ 10 ರಿಂದ 15 ದಿನಗಳಲ್ಲಿ ಬೀಜಗಳಿಂದ ಗಿಡ ಬೆಳೆಯಲು ಪ್ರಾರಂಭಿಸುತ್ತವೆ ಮತ್ತು ಗಿಡ ಬೆಳೆದು  ಸುಮಾರು 3 ವಾರಗಳಲ್ಲಿ, ನೀವು ಫ್ರೆಶ್‌ ಮತ್ತು ಆರ್ಗಾನಿಕ್ ಕೊತ್ತಂಬರಿ ಸೊಪ್ಪನ್ನು ಕೊಯ್ಲು ಮಾಡಲು ಪ್ರಾರಂಭಿಸಬಹುದು. ಹೀಗೆ ಮನೆಯಲ್ಲಿ ಕೊತ್ತಂಬರಿ ಬೆಳೆಯುವುದು ತುಂಬಾನೇ ಸುಲಭ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
37 ಟಿಎಂಸಿ ಸಾಮರ್ಥ್ಯದ ಹೇಮಾವತಿಯಲ್ಲಿ ಉಳಿದಿದ್ದು ಕೇವಲ 24 ಟಿಎಂಸಿ
37 ಟಿಎಂಸಿ ಸಾಮರ್ಥ್ಯದ ಹೇಮಾವತಿಯಲ್ಲಿ ಉಳಿದಿದ್ದು ಕೇವಲ 24 ಟಿಎಂಸಿ
ಕಾವೇರಿ ಜಲ ವಿವಾದ: ಸಂಕಷ್ಟ ಸೂತ್ರ ಪಾಲಿಸುವಂತೆ CWRC ಸಲಹೆ
ಕಾವೇರಿ ಜಲ ವಿವಾದ: ಸಂಕಷ್ಟ ಸೂತ್ರ ಪಾಲಿಸುವಂತೆ CWRC ಸಲಹೆ
ಭೋಪಾಲ್‌ನಲ್ಲಿ ಹಿಂಸಾಚಾರಕ್ಕೆ ತಿರುಗಿದ ರೈತರ ಪ್ರತಿಭಟನೆ
ಭೋಪಾಲ್‌ನಲ್ಲಿ ಹಿಂಸಾಚಾರಕ್ಕೆ ತಿರುಗಿದ ರೈತರ ಪ್ರತಿಭಟನೆ
ಕುತೂಹಲಕಾರಿ ಘಟ್ಟ ತಲುಪಿದ ಸಂಪುಟ ವಿಸ್ತರಣೆ ಕಸರತ್ತು
ಕುತೂಹಲಕಾರಿ ಘಟ್ಟ ತಲುಪಿದ ಸಂಪುಟ ವಿಸ್ತರಣೆ ಕಸರತ್ತು
ರಾಜ್ಯದ ಜಲ ಪ್ರದೇಶ ನೋಡಲು ತಮಿಳುನಾಡು ಸಿಎಂಗೆ ಹೆಲಿಕಾಪ್ಟರ್ ವ್ಯವಸ್ಥೆ
ರಾಜ್ಯದ ಜಲ ಪ್ರದೇಶ ನೋಡಲು ತಮಿಳುನಾಡು ಸಿಎಂಗೆ ಹೆಲಿಕಾಪ್ಟರ್ ವ್ಯವಸ್ಥೆ
ಸಿನಿಮಾಕ್ಕೆ ‘ಲವ್ ಕಾಕ್ಟೆಲ್’ ಎಂದು ಹೆಸರಿಟ್ಟಿದ್ದೇಕೆ? ಹರೀಶ್ ರಾಜ್ ಉತ್ತರ
ಸಿನಿಮಾಕ್ಕೆ ‘ಲವ್ ಕಾಕ್ಟೆಲ್’ ಎಂದು ಹೆಸರಿಟ್ಟಿದ್ದೇಕೆ? ಹರೀಶ್ ರಾಜ್ ಉತ್ತರ
ಅಂಗವಿಕಲನಂತೆ ನಟಿಸಿ ಮೊಬೈಲ್ ಕದಿಯುತ್ತಿದ್ದ ಉತ್ತರ ಪ್ರದೇಶದ ಭಿಕ್ಷುಕ ಸೆರೆ
ಅಂಗವಿಕಲನಂತೆ ನಟಿಸಿ ಮೊಬೈಲ್ ಕದಿಯುತ್ತಿದ್ದ ಉತ್ತರ ಪ್ರದೇಶದ ಭಿಕ್ಷುಕ ಸೆರೆ
ಕಾವೇರಿ ವಿವಾದ ನಡುವೆಯೂ ವಿಜಯ್ ಸ್ವಾಗತಕ್ಕೆ ವಿಧಾನಸೌಧದಲ್ಲಿ ಭರದ ಸಿದ್ಧತೆ!
ಕಾವೇರಿ ವಿವಾದ ನಡುವೆಯೂ ವಿಜಯ್ ಸ್ವಾಗತಕ್ಕೆ ವಿಧಾನಸೌಧದಲ್ಲಿ ಭರದ ಸಿದ್ಧತೆ!
ಹರೀಶ್ ರಾಜ್​ಗೆ ರೊಮ್ಯಾಂಟಿಕ್ ಸ್ಟಾರ್ ಬಿರುದು; ಹೊಸ ಸಿನಿಮಾ ಕುರಿತು ಮಾತು
ಹರೀಶ್ ರಾಜ್​ಗೆ ರೊಮ್ಯಾಂಟಿಕ್ ಸ್ಟಾರ್ ಬಿರುದು; ಹೊಸ ಸಿನಿಮಾ ಕುರಿತು ಮಾತು
ಕಾವೇರಿ ನೀರು ಹಂಚಿಕೆ ವಿವಾದ: ಸಚಿವ ರಾಮಲಿಂಗಾ ರೆಡ್ಡಿ ತುರ್ತು ಸಭೆ
ಕಾವೇರಿ ನೀರು ಹಂಚಿಕೆ ವಿವಾದ: ಸಚಿವ ರಾಮಲಿಂಗಾ ರೆಡ್ಡಿ ತುರ್ತು ಸಭೆ