AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಣ ಕೇಳಿದ್ದಕ್ಕೆ ಹಲ್ಲೆ, ಬೆದರಿಕೆ: ‘ಲಾಪತಾ ಲೇಡೀಸ್’ ನಟ ಕಣ್ಣೀರು

laapataa ladies actor: ‘ಲಾಪತಾ ಲೇಡೀಸ್’ ಚಿತ್ರದಲ್ಲಿ ನಟಿಸಿದ ಪ್ರತಿಭಾವಂತ ನಟ ಸತೇಂದ್ರ ಸೋನಿ ಇದೀಗ ಇಂಥಹುದೇ ಒಂದು ಸಂಕಷ್ಟಕ್ಕೆ ಗುರಿ ಆಗಿದ್ದಾರೆ. ಸಿನಿಮಾನಲ್ಲಿ ನಟಿಸಿ, ನಟಿಸಿದ್ದಕ್ಕೆ ಹಣ ಕೇಳಿದ್ದಕ್ಕೆ ಅವರ ಮೇಲೆ ಹಲ್ಲೆ ಮಾಡಿರುವ ಜೊತೆಗೆ ಹಣ ಕೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆಯನ್ನೂ ಸಹ ಹಾಕಲಾಗಿದೆಯಂತೆ.

ಹಣ ಕೇಳಿದ್ದಕ್ಕೆ ಹಲ್ಲೆ, ಬೆದರಿಕೆ: ‘ಲಾಪತಾ ಲೇಡೀಸ್’ ನಟ ಕಣ್ಣೀರು
Satendra Soni
ಮಂಜುನಾಥ ಸಿ.
|

Updated on:Jun 28, 2026 | 7:01 PM

Share

ಚಿತ್ರರಂಗಕ್ಕೆ (Movie Industry) ಎರಡು ಮುಖಗಳಿರುತ್ತವೆ. ಸೂಪರ್ ಸ್ಟಾರ್ ಆದವರಿಗೆ ಅವಶ್ಯಕತೆ ಇಲ್ಲದೆಯೋ ನೂರಾರು ಕೋಟಿ ಹಣ ನೀಡಲಾಗುತ್ತದೆ. ಆದರೆ ಪ್ರತಿಭಾವಂತ ನಟರಿಗೆ ಕೊಡುವ ಹಣ ಕೊಡಲು ಸಹ ಹಿಂದೆ ಮುಂದೆ ನೋಡಲಾಗುತ್ತದೆ. ‘ಲಾಪತಾ ಲೇಡೀಸ್’ ಚಿತ್ರದಲ್ಲಿ ನಟಿಸಿದ ಪ್ರತಿಭಾವಂತ ನಟ ಸತೇಂದ್ರ ಸೋನಿ ಇದೀಗ ಇಂಥಹುದೇ ಒಂದು ಸಂಕಷ್ಟಕ್ಕೆ ಗುರಿ ಆಗಿದ್ದಾರೆ. ಸಿನಿಮಾನಲ್ಲಿ ನಟಿಸಿ, ನಟಿಸಿದ್ದಕ್ಕೆ ಹಣ ಕೇಳಿದ್ದಕ್ಕೆ ಅವರ ಮೇಲೆ ಹಲ್ಲೆ ಮಾಡಿರುವ ಜೊತೆಗೆ ಹಣ ಕೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆಯನ್ನೂ ಸಹ ಹಾಕಲಾಗಿದೆಯಂತೆ.

ಸತೇಂದ್ರ ಸೋನಿ ಅವರು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಈ ಬಗ್ಗೆ ವೀಡಿಯೊ ಒಂದನ್ನು ಹಂಚಿಕೊಂಡಿದ್ದಾರೆ. ವಿಡಿಯೋನಲ್ಲಿ ಕಣ್ಣೀರು ಹಾಕುತ್ತಿರುವ ನಟ ಸತೇಂದ್ರ ಸೋನಿ, ‘ನಾನು ‘ಪೇಟ್ ಫಾಲ್ಕಿ’ ಹೆಸರಿನ ಸಿನಿಮಾ ಶೂಟಿಂಗ್​​ಗಾಗಿ ಮಧ್ಯ ಪ್ರದೇಶದ ಮಯ್ಯಾರ್​ಗೆ ಬಂದಿದ್ದೆ. 50 ಸಾವಿರ ರೂಪಾಯಿ ಸಂಭಾವನೆ ಕೊಡುವುದಾಗಿ ನನಗೆ ಹೇಳಿ ನಿರ್ದೇಶಕ ಪುಷ್ಪೇಂದ್ರ ಸಿಂಗ್ ಸಹಿ ಮಾಡಿಸಿಕೊಂಡಿದ್ದರು. ಎಂಟು ದಿನಗಳ ಶೂಟಿಂಗ್ ಮುಗಿಸಿದ್ದೇನೆ. ಆದರೆ ಬಾಕಿ ಹಣ ಕೇಳಿದ್ದಕ್ಕೆ ನನಗೆ ಬೆದರಿಕೆ ಹಾಕಲಾಗಿದೆ. ಮಾತ್ರವಲ್ಲದೆ ಸಿನಿಮಾದ ನಿರ್ದೇಶಕರು ಅವರ ಪತ್ನಿಯೊಟ್ಟಿಗೆ ಸೇರಿಕೊಂಡು ನನ್ನ ಮೇಲೆ ಹಲ್ಲೆ ಸಹ ಮಾಡಿದ್ದಾರೆ’ ಎನ್ನುತ್ತಾ ಕಣ್ಣೀರು ಹಾಕಿದ್ದಾರೆ.

ಮತ್ತೊಂದು ವಿಡಿಯೋನಲ್ಲಿ ನಟ ಸತೇಂದ್ರ ಸೋನಿ ಇತರೆ ಇಬ್ಬರು ಸಹನಟರೊಟ್ಟಿಗೆ ಮುಂಬೈಗೆ ಬಂದು ತಲುಪಿರುವುದಾಗಿ ಹೇಳಿದ್ದು, ಇದು ಅತ್ಯಂತ ಭಯಾನಕ ಅನುಭವ ಆಗಿತ್ತು. ನಮಗೆ ಮಯ್ಯಾರ್ ಪೊಲೀಸರು, ಅಲ್ಲಿನ ಎಸ್​​ಎಚ್​​ಓ ಇತರೆ ಕೆಲವು ರಾಜಕಾರಣಿಗಳು ಸಹಾಯ ಮಾಡಿದರು. ಇಲ್ಲದೇ ಹೋಗಿದ್ದಿದ್ದರೆ ನಾವು ಇಂದು ಮುಂಬೈಗೆ ಬರುವುದೇ ದುಸ್ತರ ಆಗಿರುತ್ತಿತ್ತು. ನಮಗೆ ಇದು ಇಂಥಹಾ ಮೊದಲ ಅನುಭವ, ಬಹಳ ಕೆಟ್ಟದಾದ ಅನುಭವ ಇದಾಗಿತ್ತು’ ಎಂದಿದ್ದಾರೆ.

ಸತೇಂದ್ರ ಸೋನಿ, ಬಾಲಿವುಡ್​​ನ ಯಶಸ್ವಿ ಸಿನಿಮಾ ‘ಲಾಪತಾ ಲೇಡೀಸ್’ ನಲ್ಲಿ ನಟಿಸಿದ್ದರು. ಸಿನಿಮಾನಲ್ಲಿ ಅವರು ನಾಯಕಿ ಫೂಲ್ ಜೊತೆಗೆ ರೈಲ್ವೆ ಸ್ಟೇಷನ್​​ನಲ್ಲಿ ಜೊತೆಗಿರುವ ಚೋಟು ಎಂಬ ಪಾತ್ರದಲ್ಲಿ ನಟಿಸಿದ್ದರು. ಆ ಸಿನಿಮಾ ಮತ್ತು ಅವರ ಪಾತ್ರ ದೊಡ್ಡ ಹಿಟ್ ಆಗಿತ್ತು. ಅದರ ನಂತರ ಸತೇಂದ್ರ ಸೋನಿ ಅವರಿಗೆ ಹಲವು ಸಿನಿಮಾಗಳಲ್ಲಿ ಪಾತ್ರಗಳು ಧಕ್ಕುತ್ತಿವೆ. ಆದರೆ ಈಗ ಸಿನಿಮಾ ಒಂದರಲ್ಲಿ ನಟಿಸಲು ಹೋದಾಗ ಅವರ ಮೇಲೆ ದೌರ್ಜನ್ಯ ಎಸಗಲಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:09 pm, Sun, 28 June 26

Follow Us
ತಾಯಿ ನಮ್ಮನ್ನಗಲಿದ್ದಾರೆ ಎನ್ನುವುದು ನೆನಸಿಕೊಳ್ಳಲಿಕ್ಕೂ ಸಾಧ್ಯವಿಲ್ಲ: hdk
ತಾಯಿ ನಮ್ಮನ್ನಗಲಿದ್ದಾರೆ ಎನ್ನುವುದು ನೆನಸಿಕೊಳ್ಳಲಿಕ್ಕೂ ಸಾಧ್ಯವಿಲ್ಲ: hdk
37 ಟಿಎಂಸಿ ಸಾಮರ್ಥ್ಯದ ಹೇಮಾವತಿಯಲ್ಲಿ ಉಳಿದಿದ್ದು ಕೇವಲ 24 ಟಿಎಂಸಿ
37 ಟಿಎಂಸಿ ಸಾಮರ್ಥ್ಯದ ಹೇಮಾವತಿಯಲ್ಲಿ ಉಳಿದಿದ್ದು ಕೇವಲ 24 ಟಿಎಂಸಿ
ಕಾವೇರಿ ಜಲ ವಿವಾದ: ಸಂಕಷ್ಟ ಸೂತ್ರ ಪಾಲಿಸುವಂತೆ CWRC ಸಲಹೆ
ಕಾವೇರಿ ಜಲ ವಿವಾದ: ಸಂಕಷ್ಟ ಸೂತ್ರ ಪಾಲಿಸುವಂತೆ CWRC ಸಲಹೆ
ಭೋಪಾಲ್‌ನಲ್ಲಿ ಹಿಂಸಾಚಾರಕ್ಕೆ ತಿರುಗಿದ ರೈತರ ಪ್ರತಿಭಟನೆ
ಭೋಪಾಲ್‌ನಲ್ಲಿ ಹಿಂಸಾಚಾರಕ್ಕೆ ತಿರುಗಿದ ರೈತರ ಪ್ರತಿಭಟನೆ
ಕುತೂಹಲಕಾರಿ ಘಟ್ಟ ತಲುಪಿದ ಸಂಪುಟ ವಿಸ್ತರಣೆ ಕಸರತ್ತು
ಕುತೂಹಲಕಾರಿ ಘಟ್ಟ ತಲುಪಿದ ಸಂಪುಟ ವಿಸ್ತರಣೆ ಕಸರತ್ತು
ರಾಜ್ಯದ ಜಲ ಪ್ರದೇಶ ನೋಡಲು ತಮಿಳುನಾಡು ಸಿಎಂಗೆ ಹೆಲಿಕಾಪ್ಟರ್ ವ್ಯವಸ್ಥೆ
ರಾಜ್ಯದ ಜಲ ಪ್ರದೇಶ ನೋಡಲು ತಮಿಳುನಾಡು ಸಿಎಂಗೆ ಹೆಲಿಕಾಪ್ಟರ್ ವ್ಯವಸ್ಥೆ
ಸಿನಿಮಾಕ್ಕೆ ‘ಲವ್ ಕಾಕ್ಟೆಲ್’ ಎಂದು ಹೆಸರಿಟ್ಟಿದ್ದೇಕೆ? ಹರೀಶ್ ರಾಜ್ ಉತ್ತರ
ಸಿನಿಮಾಕ್ಕೆ ‘ಲವ್ ಕಾಕ್ಟೆಲ್’ ಎಂದು ಹೆಸರಿಟ್ಟಿದ್ದೇಕೆ? ಹರೀಶ್ ರಾಜ್ ಉತ್ತರ
ಅಂಗವಿಕಲನಂತೆ ನಟಿಸಿ ಮೊಬೈಲ್ ಕದಿಯುತ್ತಿದ್ದ ಉತ್ತರ ಪ್ರದೇಶದ ಭಿಕ್ಷುಕ ಸೆರೆ
ಅಂಗವಿಕಲನಂತೆ ನಟಿಸಿ ಮೊಬೈಲ್ ಕದಿಯುತ್ತಿದ್ದ ಉತ್ತರ ಪ್ರದೇಶದ ಭಿಕ್ಷುಕ ಸೆರೆ
ಕಾವೇರಿ ವಿವಾದ ನಡುವೆಯೂ ವಿಜಯ್ ಸ್ವಾಗತಕ್ಕೆ ವಿಧಾನಸೌಧದಲ್ಲಿ ಭರದ ಸಿದ್ಧತೆ!
ಕಾವೇರಿ ವಿವಾದ ನಡುವೆಯೂ ವಿಜಯ್ ಸ್ವಾಗತಕ್ಕೆ ವಿಧಾನಸೌಧದಲ್ಲಿ ಭರದ ಸಿದ್ಧತೆ!
ಹರೀಶ್ ರಾಜ್​ಗೆ ರೊಮ್ಯಾಂಟಿಕ್ ಸ್ಟಾರ್ ಬಿರುದು; ಹೊಸ ಸಿನಿಮಾ ಕುರಿತು ಮಾತು
ಹರೀಶ್ ರಾಜ್​ಗೆ ರೊಮ್ಯಾಂಟಿಕ್ ಸ್ಟಾರ್ ಬಿರುದು; ಹೊಸ ಸಿನಿಮಾ ಕುರಿತು ಮಾತು