Nayanthara: ಅವಳಿ ಮಕ್ಕಳ ಪೂರ್ಣ ಹೆಸರು ಬಹಿರಂಗಪಡಿಸಿದ ನಟಿ ನಯನತಾರಾ
Nayanthara Children Name: ನಟಿ ನಯನತಾರಾ ಅವರು ಇತ್ತೀಚೆಗೆ ಚೆನ್ನೈನಲ್ಲಿ ಒಂದು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗಿ ಆಗಿದ್ದರು. ಆ ವೇಳೆ ಅವರಿಗೆ ಮಕ್ಕಳ ಬಗ್ಗೆ ಪ್ರಶ್ನೆ ಎದುರಾಯಿತು.
ಕುಟುಂಬ ಮತ್ತು ಸಿನಿಮಾ ಎರಡರ ಕಡೆಗೂ ನಟಿ ನಯನತಾರಾ (Nayanthara) ಅವರು ಗಮನ ಹರಿಸುತ್ತಿದ್ದಾರೆ. ಇಬ್ಬರು ಮಕ್ಕಳ ಆರೈಕೆಯಲ್ಲಿ ಅವರು ಬ್ಯುಸಿ ಆಗಿದ್ದಾರೆ. 2022ರಲ್ಲಿ ಬಾಡಿಗೆ ತಾಯಿ ಮೂಲಕ ನಯನತಾರಾ ಮತ್ತು ವಿಘ್ನೇಶ್ ಶಿವನ್ (Vignesh Shivan) ಅವರು ಅವಳಿ ಗಂಡು ಮಕ್ಕಳನ್ನು ಪಡೆದರು. ಉಯಿರ್ ಮತ್ತು ಉಳಗಂ ಎಂದು ಅವರು ಮಕ್ಕಳಿಗೆ ಹೆಸರು ಇಟ್ಟಿದ್ದಾರೆ. ಆದರೆ ಮುದ್ದು ಮಕ್ಕಳ ಪೂರ್ತಿ ಹೆಸರು ಏನು ಎಂಬುದನ್ನು ಅವರು ಇಷ್ಟು ದಿನಗಳ ಕಾಲ ಬಹಿರಂಗಪಡಿಸಿರಲಿಲ್ಲ. ಈಗ ಖಾಸಗಿ ಕಾರ್ಯಕ್ರಮದ ವೇದಿಕೆಯಲ್ಲಿ ಅವರು ಮಕ್ಕಳ (Nayanthara Children) ಪೂರ್ಣ ಹೆಸರು ಏನು ಎಂಬುದನ್ನು ತಿಳಿಸಿದ್ದಾರೆ. ಆ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ನಯನತಾರಾ ಅವರು ಇತ್ತೀಚೆಗೆ ಚೆನ್ನೈನಲ್ಲಿ ಒಂದು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗಿ ಆಗಿದ್ದರು. ಆ ವೇಳೆ ಅವರಿಗೆ ಮಕ್ಕಳ ಬಗ್ಗೆ ಪ್ರಶ್ನೆ ಎದುರಾಯಿತು. ಮಕ್ಕಳ ಪೂರ್ಣ ಹೆಸರು ಏನು ಎಂದು ಕೇಳಲಾಯಿತು. ಆಗ ಮೈಕ್ ಕೈಗೆತ್ತಿಕೊಂಡ ಅವರು, ‘ನನ್ನ ಮೊದಲ ಮಗನ ಹೆಸರು ಉಯಿರ್ ರುದ್ರೋನೀಲ್ ಎನ್. ಶಿವನ್ ಹಾಗೂ ನನ್ನ ಎರಡನೇ ಮಗನ ಹೆಸರು ಉಳಗ್ ದೈವಗನ್ ಎನ್. ಶಿವನ್’ ಎಂದು ಹೇಳಿದರು.
ಇದನ್ನೂ ಓದಿ: Surrogacy: ಬಾಡಿಗೆ ತಾಯ್ತನದಿಂದ ನಯನತಾರಾ ಮಗು ಪಡೆದ ಪ್ರಕರಣ; ಆಸ್ಪತ್ರೆ ಬಂದ್ ಮಾಡಿಸಲು ಶಿಫಾರಸ್ಸು
ನಯನತಾರಾ ಅವರು ನಿರ್ದೇಶಕ ವಿಘ್ನೇಶ್ ಶಿವನ್ ಜೊತೆ ಹಲವು ವರ್ಷಗಳ ಕಾಲ ಲಿವಿಂಗ್ ರಿಲೇಷನ್ಶಿಪ್ನಲ್ಲಿ ಇದ್ದರು. ಬಳಿಕ ಅವರು ಮದುವೆ ಆಗುವ ನಿರ್ಧಾರಕ್ಕೆ ಬಂದರು. 2022ರ ಜೂನ್ 9ರಂದು ಅವರಿಬ್ಬರ ಕಲ್ಯಾಣ ನೆರವೇರಿತು. ಈ ಸ್ಟಾರ್ ಸೆಲೆಬ್ರಿಟಿಗಳ ವಿವಾಹ ಸಮಾರಂಭಕ್ಕೆ ಅನೇಕ ಗಣ್ಯರು ಹಾಜರಿ ಹಾಕಿದ್ದರು. 2022ರ ಅಕ್ಟೋಬರ್ 9ರಂದು ಬಾಡಿಗೆ ತಾಯಿ ಮೂಲಕ ಈ ದಂಪತಿ ಅವಳಿ ಮಕ್ಕಳನ್ನು ಪಡೆದರು.
ಇದನ್ನೂ ಓದಿ: ಅವಳಿ ಮಕ್ಕಳ ಜತೆ ನಯನತಾರಾ-ವಿಘ್ನೇಶ್
ಚಿತ್ರರಂಗದಲ್ಲಿ ನಿರ್ದೇಶಕನಾಗಿ ವಿಘ್ನೇಶ್ ಶಿವನ್ ಅವರು ಬ್ಯುಸಿ ಆಗಿದ್ದಾರೆ. ಕಾಲಿವುಡ್ನಲ್ಲಿ ಅವರಿಗೆ ಬೇಡಿಕೆ ಇದೆ. ನಯನತಾರಾ ಅವರು ಬಹುಭಾಷೆಯಲ್ಲಿ ಫೇಮಸ್ ಆಗಿದ್ದಾರೆ. ಈಗ ಅವರಿಗೆ 38 ವರ್ಷ ವಯಸ್ಸು. ಅನೇಕ ಸಿನಿಮಾ ಆಫರ್ಗಳು ಅವರ ಕೈಯಲ್ಲಿವೆ. ಶಾರುಖ್ ಖಾನ್ ನಟನೆಯ ‘ಜವಾನ್’ ಸಿನಿಮಾದಲ್ಲಿ ಅವರು ಮುಖ್ಯ ಪಾತ್ರ ಮಾಡುತ್ತಿದ್ದಾರೆ.
And finally, #Nayanthara reveals her twin boys’ names… ?❤
Uyir Rudronil N Shivan ❤ Ulag Dhaiveg N Shivan ❤ https://t.co/7g1tYhclCd pic.twitter.com/CCHFyFthUT
— N’cafe… (@NayanCafe) April 2, 2023
ಕೆಲವು ಸೆಲೆಬ್ರಿಟಿಗಳು ತಮ್ಮ ಮಕ್ಕಳ ಮುಖ ತೋರಿಸಲು ಹಿಂದೇಟು ಹಾಕುವುದಿಲ್ಲ. ಆದರೆ ಕೆಲವರು ಈ ವಿಚಾರದಲ್ಲಿ ಖಾಸಗಿತನಕ್ಕೆ ಹೆಚ್ಚು ಮಹತ್ವ ನೀಡುತ್ತಾರೆ. ನಯನತಾರಾ ಹಾಗೂ ವಿಘ್ನೇಶ್ ಶಿವನ್ ದಂಪತಿ ಕೂಡ ತಮ್ಮ ಮಕ್ಕಳ ಮುಖ ಕಾಣುವಂತಹ ಫೋಟೋಗಳನ್ನು ಈವರೆಗೂ ಹಂಚಿಕೊಂಡಿಲ್ಲ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.