Lakshana Serial: ದುಡ್ಡಿಗಾಗಿ ತನ್ನ ಕುಟುಂಬವನ್ನು ಬೀದಿಪಾಲು ಮಾಡುತ್ತಾಳಾ ದುರಹಂಕಾರಿ ಶ್ವೇತಾ

ಮನೆ ಮಾರಿದರೆ ಐವತ್ತು ಲಕ್ಷವಾದರೂ ಸಿಕ್ಕೇ ಸಿಗುತ್ತದೆ ಎಂದು ಅಂದುಕೊಂಡ ಆಕೆ ತನ್ನ ತಂದೆಯ ಹೆಸರಿನಲ್ಲಿರುವ ಮನೆಯನ್ನು ಹೇಗಾದರೂ ನನ್ನ ಹೆಸರಿಗೆ ಮಾಡಬೇಕು ಎಂದು ಒಬ್ಬಳೇ ಮಾತನಾಡುತ್ತಾ ನಿಂತಿರುತ್ತಾಳೆ.

Lakshana Serial: ದುಡ್ಡಿಗಾಗಿ ತನ್ನ ಕುಟುಂಬವನ್ನು ಬೀದಿಪಾಲು ಮಾಡುತ್ತಾಳಾ ದುರಹಂಕಾರಿ ಶ್ವೇತಾ
Lakshana Serial:
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on:Sep 30, 2022 | 1:29 PM

ಪ್ರತಿದಿನ ಕಲರ್ಸ್ ಕನ್ನಡದಲ್ಲಿ ರಾತ್ರಿ 8.30ಕ್ಕೆ ಪ್ರಸಾರವಾಗುತ್ತಿರುವ ಲಕ್ಷಣ ಧಾರವಾಹಿ ದಿನದಿಂದ ದಿನಕ್ಕೆ ಅದ್ಭುತ ಸ್ಟೋರಿಯೊಂದಿಗೆ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಮಿಲ್ಲಿಯ ಕುತಂತ್ರದಿಂದ ದುಡ್ಡಿನ ದುರಾಸೆಗೆ ಬಲಿಯಾದ ಶ್ವೇತಾ ತಾನು ಹೇಗಾದರೂ ಶ್ರೀಮಂತಳಾಗಬೇಕು ಎಂಬ ತಯಾರಿಯಲ್ಲಿದ್ದಾಳೆ. ಬ್ಲಾಕ್ ಮನಿ ಪಡೆಯಲು ಬೇಕಾಗಿರುವಷ್ಟು ದುಡ್ಡು ನನ್ನಲ್ಲಿ ಹೇಗೆ ಬರಲು ಸಾಧ್ಯ, ಐವತ್ತು ರೂಪಾಯಿಗೂ ಮನೆಯವರ ಬಳಿ ಕೈ ಚಾಚುವ ಪರಿಸ್ಥಿತಿ ನನ್ನದಾಗಿದೆ ಎಂದು ಯೋಚಿಸುತ್ತಾ ಕುಳಿತಿದ್ದ ಶ್ವೇತಾಳಿಗೆ ಈ ಮನೆಯನ್ನು ಮಾರುವ ಕೆಟ್ಟ ಅಲೋಚನೆ ಮೂಡಿದೆ.

ಮನೆ ಮಾರಿದರೆ ಐವತ್ತು ಲಕ್ಷವಾದರೂ ಸಿಕ್ಕೇ ಸಿಗುತ್ತದೆ ಎಂದು ಅಂದುಕೊಂಡ ಆಕೆ ತನ್ನ ತಂದೆಯ ಹೆಸರಿನಲ್ಲಿರುವ ಮನೆಯನ್ನು ಹೇಗಾದರೂ ನನ್ನ ಹೆಸರಿಗೆ ಮಾಡಬೇಕು ಎಂದು ಒಬ್ಬಳೇ ಮಾತನಾಡುತ್ತಾ ನಿಂತಿರುತ್ತಾಳೆ. ಆಗಾ ಶ್ವೇತಾಳ ಈ ಮಾತು ಮಿಲ್ಲಿಯ ಕಿವಿಗೆ ಬಿದ್ದ ತಕ್ಷಣ ಶ್ವೇತಾಳ ಬಳಿಗೆ ಬಂದು ಮನೆಯನ್ನು ಮಾರುವ ಯೋಚನೆಯನ್ನು ಮಾಡುತ್ತಿದ್ದೀಯಾ ನಿಲ್ಲು ತುಕರಾಮ್ ಅಂಕಲ್‌ಗೆ ಈಗಲೇ ಎಲ್ಲಾ ವಿಷಯವನ್ನು ಹೇಳುತ್ತೇನೆ ಎಂದು ಭಯ ಪಡಿಸುತ್ತಾಳೆ.

ಮಿಲ್ಲಿ ಈ ವಿಷಯವನ್ನು ತುಕರಾಮ್ ಬಳಿ ಹೇಳಿದರೆ ತನ್ನ ಪ್ಲಾನ್ ಎಲ್ಲಾ ಹಾಳಾಗಿ ಬಿಡುತ್ತದೆ ಎಂದುಕೊಂಡ ಶ್ವೇತಾ ನಿನಗೂ ಶೇರ್ ಕೊಡುತ್ತೇನೆ ಎಂದು ಮಿಲ್ಲಿಗೆ ಹೇಳುತ್ತಾಳೆ. ಶ್ವೇತಾ ಮತ್ತು ಮಿಲ್ಲಿ ಇಬ್ಬರೂ ಸೇರಿ ಮನೆಯನ್ನು ಶ್ವೇತಾಳ ಹೆಸರಿಗೆ ಮಾಡಲು ಒಂದು ಪ್ಲಾನ್ ರೂಪಿಸುತ್ತಾರೆ. ಅವರು ರೂಪಿಸಿದ ಪ್ಲಾನ್ ಪ್ರಕಾರ ಮಿಲ್ಲಿಯು ಶ್ವೇತಾನಿಗೆ ಅವಮಾನ ಮಾಡುವಂತೆ ಮಾತನಾಡುತ್ತಾಳೆ.

ನನ್ನಲ್ಲಿ ನನ್ನದೆ ಹೆಸರಿನ ಆಸ್ತಿಯಿದೆ, ದುಡ್ಡು ಇದೆ. ನಿನ್ನಲ್ಲಿ ಏನಿದೆ, ನೀನು ತಿರುಬೋಕಿ ಅಂತೆಲ್ಲಾ ಬೈಯುತ್ತಾಳೆ. ಅದಕ್ಕೆ ಶ್ವೇತಾ ಕೂಡಾ ಬೋರಾಗಿ ಬೈಗುಳದ ಮಾತನಾಡುತ್ತಾಳೆ. ಇವರಿಬ್ಬರ ಜೋರಾದ ಮಾತುಗಳನ್ನು ಕೇಳಿದ ತುಕರಾಮ್ ಹಾಗೂ ಶ್ವೇತಳ ಅಜ್ಜಿ ರೂಮ್‌ಗೆ ಓಡಿ ಬಂದು ಏನಾಯಿತು ಎಂದು ಕೇಳುವಾಗ ನೀವು ನನಗೆ ಏನು ಆಸ್ತಿ ಮಾಡಿಲ್ಲವಂತೆ ಎಂದು ಮಿಲ್ಲಿ ನನಗೆ ಅವಮಾನ ಮಾಡುತ್ತಿದ್ದಾಳೆ ಅಂತಾ ಶ್ವೇತಾ ಹೇಳುತ್ತಾಳೆ. ಇದರಿಂದ ಕೋಪಗೊಂಡ ತುಕರಾಮ್ ನನ್ನ ಮಗಳಿಗೆ ಅವಮಾನ ಮಾಡಲು ನೀನ್ಯಾರು ನನ್ನ ಮಗಳಿಗೆ ಅವಮಾನ ಮಾಡಲು, ಈ ಮನೆ ನನ್ನ ಮಗಳದ್ದು, ಹೆಚ್ಚಿಗೆ ಮಾತನಾಡಿದರೆ ಮನೆಯಿಂದ ಹೊರಗೆ ದಬ್ಬುತ್ತೇನೆ ಎಂದು ಮಿಲ್ಲಿಗೆ ಹೇಳಿದಾಗ ಆಕೆ ಪ್ರತ್ಯುತರ ನೀಡಿ ಅದು ನಿಜನೇ ತಾನೆ ಸಿ.ಎಸ್ ಸರ್ ನೋಡಿ ತಮ್ಮ ಮಗಳಿಗೆ ಎಷ್ಟೆಲ್ಲಾ ಆಸ್ತಿ ಮಾಡಿದ್ದಾರೆ. ನೀವು ಏನು ಮಾಡಿದ್ದೀರಾ ಎಂದು ಕೇಳುತ್ತಾಳೆ.

ಇದಕ್ಕೆ ಶ್ವೇತಾ ನನ್ನ ತಂದೆಯನ್ನು ಆ ಮನುಷ್ಯನ ಜೊತೆ ಹೋಳಿಸಬೇಡ, ನಾನು ಕೇಳಿದರೆ ಈ ಮನೆಯನ್ನೇ ನನ್ನ ಹೆಸರಿಗೆ ಮಾಡುತ್ತಾರೆ ಅಂತಾ ಹೇಳುತ್ತಾಳೆ. ಕುತಂತ್ರಿ ಶ್ವೇತಾಳ ಈ ಮಾತಿನಿಂದ ಗಾಬರಿಗೊಂಡ ಸೃಷ್ಠಿ ತನ್ನ ತಂದೆ ದಯವಿಟ್ಟು ಈ ಕೆಲಸ ಮಾಡಬೇಡಿ, ನಮಗೆ ಇರುವುದೊಂದೇ ಸೂರು ಅದು ನಿಮ್ಮ ಹೆಸರಿನಲ್ಲಿ ಇರಲಿ ಎಂದು ಅಂಗಳಾಚುತ್ತಾಳೆ. ಇದನ್ನು ಕೇಳಲು ನೀನ್ಯಾರು ಮನೆಯನ್ನು ನನ್ನ ಮುದ್ದಿನ ಮಗಳ ಹೆಸರಿಗೆ ಮಾಡುತ್ತೇನೆ ಎಂದು ತುಕರಾಮ್ ಹೇಳಿದಾಗ ನನಗೆ ತುಂಬಾ ವಕೀಲರು ಪರಿಚಯವಿದ್ದರೆ, ಆ ಕೆಲಸ ನಾಳೆನೇ ಆಗಿ ಬಿಡಿ ಅಂತಾ ಶ್ವೇತಾ ಬಹಳ ಉತ್ಸಾಹದಿಂದ ಹೇಳುತ್ತಾಳೆ. ಶ್ವೇತಾ ತನ್ನ ಕೈಯಾರೆ ಮನೆಯವರನ್ನು ಬೀದಿಗೆ ತಂದು ಈ ಡ್ರಾಮಾ ಎಲ್ಲಿಗೆ ಹೋಗಿ ತಳುಪುತ್ತದೆ ಎಂದು ಮುಂದೆ ಕಾದು ನೋಡಬೇಕಾಗಿದೆ.

ಮಾಲಾಶ್ರೀ ಅಂಚನ್ 

Published On - 1:26 pm, Fri, 30 September 22

ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ
ಕೇರಳವನ್ನು ಮಿನಿ ಪಾಕಿಸ್ತಾನ ಎಂದು ಕರೆದ ಸಚಿವ ನಿತೇಶ್​ ರಾಣೆ
ಕೇರಳವನ್ನು ಮಿನಿ ಪಾಕಿಸ್ತಾನ ಎಂದು ಕರೆದ ಸಚಿವ ನಿತೇಶ್​ ರಾಣೆ