ಸ್ಟಾರ್ ಹೀರೋಗಳಿಗೆ ಸರಿಸಾಟಿಯಾಗಿ ಸಂಭಾವನೆ ಪಡೆದ ನಿರ್ದೇಶಕ ಲೋಕೇಶ್ ಕನಗರಾಜ್

ಲೋಕೇಶ್ ಕನಗರಾಜ್ ಅವರು ರಜನಿಕಾಂತ್ ಅಭಿನಯದ ‘ಕೂಲಿ’ ಚಿತ್ರಕ್ಕೆ ದೊಡ್ಡ ಮೊತ್ತದ ಸಂಭಾವನೆ ಪಡೆದಿದ್ದಾರೆ. ಇದು ನಿರ್ದೇಶಕರ ಸಂಭಾವನೆಯಲ್ಲಿ ಹೊಸ ದಾಖಲೆಯಾಗಿದೆ. ಲೋಕೇಶ್ ಅವರ ಹಿಂದಿನ ಚಿತ್ರ ‘ಲಿಯೋ’ ಯಶಸ್ಸಿನಿಂದಾಗಿ ಈ ಸಂಭಾವನೆ ಹೆಚ್ಚಾಗಿದೆ ಎಂದು ಅವರು ಹೇಳಿದ್ದಾರೆ. ಆಗಸ್ಟ್ 14 ರಂದು ಸಿನಿಮಾ ಬಿಡುಗಡೆಯಾಗಲಿದೆ.

ಸ್ಟಾರ್ ಹೀರೋಗಳಿಗೆ ಸರಿಸಾಟಿಯಾಗಿ ಸಂಭಾವನೆ ಪಡೆದ ನಿರ್ದೇಶಕ ಲೋಕೇಶ್ ಕನಗರಾಜ್
ಲೋಕೇಶ್ ಕನಗರಾಜ್
Edited By:

Updated on: Jul 15, 2025 | 11:30 AM

ಪ್ರತಿ ಸಿನಿಮಾದಲ್ಲಿ ಹೀರೋಗೆ ಹೆಚ್ಚಿನ ಸಂಭಾವನೆ ಸಿಗುತ್ತದೆ. ಆ ಬಳಿಕ ಉಳಿದ ಕಲಾವಿದರಿಗೆ. ಹೆಚ್ಚಿನ ಸಂದರ್ಭದಲ್ಲಿ ನಿರ್ದೇಶಕರಿಗೂ ದೊಡ್ಡ ಮಟ್ಟದ ಸಂಭಾವನೆ ನೀಡುವುದಿಲ್ಲ ಎನ್ನಬಹುದು. ಆದರೆ, ಈಗ ಕಾಲ ಬದಲಾಗಿದೆ. ನಿರ್ದೇಶಕರು ಕೂಡ ಹೀರೋಗೆ ಸರಿಸಾಟಿಯಾಗಿ ಸಂಭಾವನೆ ಪಡೆಯುತ್ತಾರೆ. ಇದಕ್ಕೆ ಹೊಸ ಉದಾಹರಣೆ ಲೋಕೇಶ್ ಕನಗರಾಜ್. ಅವರು ರಜನಿಕಾಂತ್ (Rajinikanth) ನಟನೆಯ ‘ಕೂಲಿ’ ಸಿನಿಮಾ ನಿರ್ದೇಶನ ಮಾಡಿದ್ದು, ಇದಕ್ಕಾಗಿ ದೊಡ್ಡ ಮಟ್ಟದಲ್ಲಿ ಸಂಭಾವನೆ ಪಡೆದ ವಿಚಾರ ರಿವೀಲ್ ಆಗಿದೆ.

ಲೋಕೇಶ್ ಕನಗರಾಜ್ ಅವರು ‘ಕೂಲಿ’ ಚಿತ್ರಕ್ಕಾಗಿ ಸಾಕಷ್ಟು ಶ್ರಮಿಸಿದ್ದಾರೆ. ಈ ಸಿನಿಮಾ ಆಗಸ್ಟ್ 14ರಂದು ರಿಲೀಸ್ ಆಗಲಿದೆ ಕನ್ನಡದ ಉಪೇಂದ್ರ, ತೆಲುಗಿನ ಅಕ್ಕಿನೇನಿ ನಾಗಾರ್ಜುನ ಹಾಗೂ ಆಮಿರ್ ಖಾನ್ ಅವರ ಅತಿಥಿ ಪಾತ್ರವನ್ನು ಈ ಚಿತ್ರದಲ್ಲಿ ನೀವು ನೋಡಬಹುದು. ಈ ಚಿತ್ರಕ್ಕಾಗಿ ಲೋಕೇಶ್ ಅವರು ಬರೋಬ್ಬರಿ 50 ಕೋಟಿ ರೂಪಾಯಿ ಸಂಭಾವನೆ ಪಡೆದುಕೊಂಡಿದ್ದಾರೆ. ಇದಕ್ಕೆ ಕಾರಣವನ್ನೂ ಅವರು ನೀಡಿದ್ದಾರೆ.

‘ನೀವು ಸಿನಿಮಾಗೆ 50 ಕೋಟಿ ರೂಪಾಯಿ ಪಡೆದುಕೊಂಡಿದ್ದರಂತೆ ಹೌದೇ’ ಎಂದು ಕೇಳಲಾಯಿತು. ಇದಕ್ಕೆ ಅವರು ಆಸಕ್ತಿದಾಯಕ ಉತ್ತರ ನೀಡಿದರು. ‘ನೀವು ನನ್ನ 50 ಕೋಟಿ ರೂಪಾಯಿ ಸಂಭಾವನೆಯ ಬಗ್ಗೆ ಕೇಳುತ್ತಿದ್ದೀರಿ. ಆದರೆ ನನ್ನ ಕೊನೆಯ ಚಿತ್ರ ಲಿಯೋ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ನೀಡಿ 600 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತು. ಹೀಗಾಗಿ ನನ್ನ ಸಂಭಾವನೆ ಕೂಡ ದ್ವಿಗುಣಗೊಂಡಿದೆ. ಇದು ಬೇಡಿಕೆ ಮತ್ತು ಪೂರೈಕೆಯ ಕ್ಷೇತ್ರ. ನಾನು ಪ್ರತಿ ಪೈಸೆಗೂ ಶ್ರಮಿಸುತ್ತಿದ್ದೇನೆ’ ಎಂದು ಲೋಕೇಶ್ ವಿಶ್ವಾಸದಿಂದ ಹೇಳಿದರು.

ಇದನ್ನೂ ಓದಿ
ಮುಂದಿನ ಮೂರು ವರ್ಷ ರಜನಿಕಾಂತ್ ಬ್ಯುಸಿ; ಮತ್ತೆ ಮೂರು ಸಿನಿಮಾ ಫೈನಲ್
ಪಾತ್ರ ಕೊಡದ್ದಕ್ಕೆ ಸಿಟ್ಟು; ಯಶಸ್ಸು ಕೊಟ್ಟ ಬನ್ಸಾಲಿ ಮರೆತ ರಣವೀರ್ ಸಿಂಗ್
ರಶ್ಮಿಕಾ ಸಿನಿಮಾ ಪ್ರಚಾರಕ್ಕೆ ಸಹಾಯ ಮಾಡಲಿದ್ದಾರೆ ಜೂ.ಎನ್​ಟಿಆರ್​-ಹೃತಿಕ್
‘ರಾಮಾಯಣ’ ಬಜೆಟ್ ನಾಲ್ಕು ಸಾವಿರ ಕೋಟಿ; ಯಶ್ ಪಾಲೆಷ್ಟು?

‘ಕೂಲಿ’ ಸಿನಿಮಾದಲ್ಲಿ ರಜನಿ ಅವರನ್ನು ನೀವು ಕಣ್ತುಂಬಿಕೊಳ್ಳಬಹುದು. ಈ ಸಿನಿಮಾ 14ರಂದು ತೆರೆಗೆ ಬರಲಿದೆ. ಈ ಚಿತ್ರಕ್ಕೆ ಯಾವುದೇ ಟೀಸರ್ ಇಲ್ಲ. ಆಗಸ್ಟ್ 2ರಂದು ಸಿನಿಮಾದ ಟ್ರೇಲರ್ ರಿಲೀಸ್ ಆಗಲಿದೆ.

ಇದನ್ನೂ ಓದಿ: ಮುಂದಿನ ಮೂರು ವರ್ಷ ರಜನಿಕಾಂತ್ ಬ್ಯುಸಿ; ಮತ್ತೆ ಮೂರು ಸಿನಿಮಾ ಫೈನಲ್

‘ರಜನಿಕಾಂತ್ ಅವರು ಸ್ಟುಡಿಯೋದಲ್ಲಿ  ಸಿನಿಮಾ ನೋಡಿದ್ದಾರೆ. ಅವರ ಪ್ರತಿಕ್ರಿಯೆ ನನಗೆ ತುಂಬಾ ಸಂತೋಷ ತಂದಿತು. ಚಿತ್ರ ನೋಡಿದ ನಂತರ, ಅವರು ಎದ್ದುನಿಂತು ನನ್ನನ್ನು ಗಟ್ಟಿಯಾಗಿ ತಬ್ಬಿಕೊಂಡು, ಇದು ದಳಪತಿ ದಿನಗಳನ್ನು ನೆನಪಿಸುತ್ತದೆ ಎಂದು ಹೇಳಿದರು. ಫೈನಲ್ ಕಟ್‌ನಿಂದ ಪ್ರಭಾವಿತರಾದ ರಜನಿಕಾಂತ್ ಸರ್ ಅವರನ್ನು ನೋಡುವುದು ನನಗೆ ಭಾವನಾತ್ಮಕವಾಗಿತ್ತು’ ಎಂದಿದ್ದಾರೆ ಅವರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.