‘ಆ ಪಾತ್ರಕ್ಕೆ ಪ್ರಾಮುಖ್ಯತೆ ಏಕೆ’: ‘ಕಲ್ಕಿ 2898 ಎಡಿ’ ಕತೆ ಬಗ್ಗೆ ಆಕ್ರೋಶ

Kalki 2898 AD: ಪ್ರಭಾಸ್ ನಟನೆಯ ಕಲ್ಕಿ 2898 ಎಡಿ ಸಿನಿಮಾ ಕಳೆದ ವರ್ಷ ಬಿಡುಗಡೆ ಆಗಿ ಬಾಕ್ಸ್ ಆಫೀಸ್​ನಲ್ಲಿ ದಾಖಲೆಗಳನ್ನು ಬರೆಯಿತು. ಇದೀಗ ಜಪಾನ್​ನಲ್ಲಿ ಬಿಡುಗಡೆ ಆಗಿ ಅಲ್ಲಿಯೂ ಒಳ್ಳೆಯ ಕಲೆಕ್ಷನ್ ಮಾಡುತ್ತಿದೆ. ಆದರೆ ತೆಲುಗು ಚಿತ್ರರಂಗದಲ್ಲಿ ಎರಡು ದಶಕದಿಂದ ಕೆಲಸ ಮಾಡುತ್ತಿರುವ ಜನಪ್ರಿಯ ವ್ಯಕ್ತಿಯೊಬ್ಬರು ‘ಕಲ್ಕಿ’ ಸಿನಿಮಾದ ಕತೆಯನ್ನು ಬಹುವಾಗಿ ಟೀಕಿಸಿದ್ದಾರೆ.

‘ಆ ಪಾತ್ರಕ್ಕೆ ಪ್ರಾಮುಖ್ಯತೆ ಏಕೆ’: ‘ಕಲ್ಕಿ 2898 ಎಡಿ’ ಕತೆ ಬಗ್ಗೆ ಆಕ್ರೋಶ
Kalki 2898 Ad
Follow us
ಮಂಜುನಾಥ ಸಿ.
|

Updated on: Jan 07, 2025 | 11:18 AM

ಕಳೆದ ವರ್ಷ ಜೂನ್ ತಿಂಗಳಲ್ಲಿ ಬಿಡುಗಡೆ ಆಗಿದ್ದ ‘ಕಲ್ಕಿ 2898 ಎಡಿ’ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಅಬ್ಬರ ಎಬ್ಬಿಸಿತ್ತು. ಭವಿಷ್ಯದಲ್ಲಿ ನಡೆಯುವ ಕತೆಯನ್ನು ತಂತ್ರಜ್ಞಾನ ಬಳಸಿ ಅದ್ಭುತವಾಗಿ ಚಿತ್ರೀಕರಿಸಲಾಗಿತ್ತು. ಸಿನಿಮಾದಲ್ಲಿ ಮಹಾಭಾರತದ ಕತೆಯ ಎಳೆಯನ್ನು ಸಹ ಸೇರಿಸಲಾಗಿತ್ತು. ಸಿನಿಮಾದ ಕ್ಲೈಮ್ಯಾಕ್ಸ್​ ಅಂತೂ ಪ್ರೇಕ್ಷಕರಿಗೆ ಬಹಳ ಇಷ್ಟವಾಗಿತ್ತು. ಸಿನಿಮಾದಲ್ಲಿ ಪ್ರಭಾಸ್ ಕರ್ಣನ ಪಾತ್ರದಲ್ಲಿ ಹಾಗೂ ಅಮಿತಾಬ್ ಬಚ್ಚನ್ ಅಶ್ವತ್ಥಾಮನ ಪಾತ್ರದಲ್ಲಿ ನಟಿಸಿದ್ದರು. ಆದರೆ ಇದೀಗ ತೆಲುಗು ಚಿತ್ರರಂಗದ ಜನಪ್ರಿಯ ವ್ಯಕ್ತಿಯೊಬ್ಬರು ‘ಕಲ್ಕಿ 2898 ಎಡಿ’ ಸಿನಿಮಾವನ್ನು, ಅದರ ಕತೆಯನ್ನು ಕಟು ಮಾತುಗಳಲ್ಲಿ ಟೀಕಿಸಿದ್ದಾರೆ.

2005 ರಿಂದಲೂ ತೆಲುಗು ಚಿತ್ರರಂಗದಲ್ಲಿ ಗೀತ ಸಾಹಿತಿಯಾಗಿ, ಚಿತ್ರಕತೆ ಬರಹಗಾರನಾಗಿ ಕೆಲಸ ಮಾಡುತ್ತಿರುವ ಅನಂತ ಶ್ರೀರಾಮ್, ‘ಕಲ್ಕಿ 2898 ಎಡಿ’ ಸಿನಿಮಾದ ಕತೆಯನ್ನು ಬಹಿರಂಗ ಸಭೆಯಲ್ಲಿ ಟೀಕೆ ಮಾಡಿದ್ದಾರೆ. ಕೃಷ್ಣ ಜಿಲ್ಲೆಯಲ್ಲಿ ನಡೆದ ಬೃಹತ್ ಹಿಂದೂ ಸಮಾವೇಷದಲ್ಲಿ ಭಾಗವಹಿಸಿ ಮಾತನಾಡಿದ ಅನಂತ್ ಶ್ರೀರಾಮ್, ‘ತೆಲುಗು ಚಿತ್ರರಂಗದಲ್ಲಿ ದಶಕಗಳಿಂದಲೂ ಕರ್ಣನನ್ನು ಹೀರೋ ಆಗಿ ತೋರಿಸುತ್ತಿರುವುದು ನಡೆಯುತ್ತಲೇ ಬಂದಿದೆ. ದಶಕಗಳಿಂದ ಆರಂಭಿಸಿ ನಿಮ್ಮೆ-ಮೊನ್ನೆ ತೆರೆಗೆ ಬಂದ ‘ಕಲ್ಕಿ’ ಸಿನಿಮಾದ ವರೆಗೆ ಕರ್ಣನನ್ನು ಅನವಷ್ಯಕವಾಗಿ ಮಹಾನ್ ಎಂದು ಬಿಂಬಿಸಲಾಗಿದೆ’ ಎಂದಿದ್ದಾರೆ.

‘ಅನವಶ್ಯಕವಾಗಿ ಕರ್ಣನನ್ನು ಹೀರೋ ಮಾಡಲು ಮುಂದಾಗಿರುವ ತೆಲುಗು ಚಿತ್ರರಂಗದ ಬಗ್ಗೆ ನನಗೆ ಬೇಸರ ಇದೆ, ಅವರ ಈ ಕಾರ್ಯದ ಬಗ್ಗೆ ಚಿತ್ರರಂಗಕ್ಕೆ ಸೇರಿದ ವ್ಯಕ್ತಿಯಾಗಿ ನನಗೆ ನಾಚಿಕೆ ಇದೆ. ಆಗಿನ ನಿರ್ದೇಶಕರು ಮತ್ತು ಈಗಿನ ನಿರ್ದೇಶಕರೂ ಸಹ ಕರ್ಣನನ್ನು ಸುಖಾ ಸುಮ್ಮನೆ ಹೀರೋ ಮಾಡುತ್ತಿದ್ದಾರೆ. ತಪ್ಪನ್ನು ತಪ್ಪು ಎಂದು ಹೇಳದಿದ್ದರೆ ನಾವು ಹಿಂದೂ ಧರ್ಮವನ್ನು ಆಚರಿಸದಂತೆ ಅಲ್ಲ. ಕರ್ಣನನ್ನು ಅರ್ಜುನನಿಗಿಂತಲೂ ಶ್ರೇಷ್ಠ ಎಂದು ಬಿಂಬಿಸುವುದನ್ನು ನಾವು ವಿರೋಧಿಸಬೇಕಿದೆ ’ ಎಂದು ಅನಂತ್ ಶ್ರೀರಾಮ್ ಹೇಳಿದ್ದಾರೆ.

ಇದನ್ನೂ ಓದಿ:‘ಕಲ್ಕಿ 2898 ಎಡಿ’ ಚಿತ್ರಕ್ಕಾಗಿ ಜಪಾನಿ ಭಾಷೆಯಲ್ಲಿ ಮಾತನಾಡಿ ಪ್ರಭಾಸ್

ಅದೇ ಭಾಷಣದಲ್ಲಿ ಮಾತನಾಡುತ್ತಾ, ತಾವು ವಿಷ್ಣುವಿನ ಕುರಿತಾಗಿ ಸಿನಿಮಾ ಒಂದರಲ್ಲಿ ‘ಬ್ರಹ್ಮಾಂಡ ನಾಯಕುಡು’ (ಬ್ರಹ್ಮಾಂಡ ನಾಯಕ) ಎಂದು ಬರೆದಿದ್ದೆ, ಆದರೆ ಆ ಸಿನಿಮಾದ ನಿರ್ಮಾಪಕ ಅದನ್ನು ತೆಗೆದು ಹಾಕುವಂತೆ ಹೇಳಿದ, ಇದೇ ಕಾರಣಕ್ಕೆ ನಾನು ಆ ಸಿನಿಮಾದಲ್ಲಿ ಕೆಲಸ ಮಾಡುವುದನ್ನು ಕೈ ಬಿಟ್ಟೆ’ ಎಂದು ಅನಂತ್ ಶ್ರೀರಾಮ್ ಹೇಳಿಕೊಂಡಿದ್ದಾರೆ.

‘ಕಲ್ಕಿ 2898 ಎಡಿ’ ಸಿನಿಮಾದ ಕ್ಲೈಮ್ಯಾಕ್ಸ್​ನಲ್ಲಿ ಕರ್ಣನ ಪಾತ್ರಧಾರಿಯಾಗಿ ಪ್ರಭಾಸ್ ಎಂಟ್ರಿ ಆಗುತ್ತದೆ. ಆಗ ಕರ್ಣನ ಪಾತ್ರವನ್ನು ವೈಭವೀಕರಿಸಿ ತೋರಿಸಲಾಗಿದೆ. ಅದೇ ಸೀನ್​ನಲ್ಲಿ ಅರ್ಜುನನ್ನು ಕರ್ಣನಿಗಿಂತಲೂ ಕಡಿಮೆ ಶೂರ, ಕರ್ಣನಿಗಿಂತಲೂ ಕಡಿಮೆ ಸಾಮರ್ಥ್ಯ ಇರುವ ವ್ಯಕ್ತಿ ಎಂದು ಪರೋಕ್ಷವಾಗಿ ಬಿಂಬಿಸಲಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್