
ಮಾಧುರಿ ದೀಕ್ಷಿತ್ (Madhuri Dixit) ಅವರಿಗೆ ಇಂದು (ಮೇ 15) ಜನ್ಮದಿನದ ಸಂಭ್ರಮ. ಅವರಿಗೆ ಎಲ್ಲರೂ ಶುಭಾಶಯ ಕೋರುತ್ತಿದ್ದಾರೆ. ಮಾಧುರಿ ದೀಕ್ಷಿತ್ ಅವರು ಇತ್ತೀಚೆಗೆ ಅಷ್ಟಾಗಿ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿಲ್ಲದೇ ಇರಬಹುದು. ಆದರೆ, ಸಾಲು ಸಾಲು ಚಿತ್ರಗಳನ್ನು ನೀಡಿ ಒಂದು ಕಾಲದಲ್ಲಿ ಭರ್ಜರಿ ಫೇಮಸ್ ಆಗಿದ್ದರು. ವಿಶೇಷ ಎಂದರೆ ಸಲ್ಮಾನ್ ಖಾನ್ ಅವರಿಗಿಂತ ಹೆಚ್ಚಿನ ಸಂಭಾವನೆ ಪಡೆದು ಅವರು ಗಮನ ಸೆಳೆದಿದ್ದರು. ಇದು ಅವರ ಹೆಚ್ಚುಗಾರಿಕೆ ಎಂದೇ ಹೇಳಬಹುದು.
ಮಾಧುರಿ ದೀಕ್ಷಿತ್ ಅವರು ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದು ಕೇವಲ 17ನೇ ವಯಸ್ಸಿಗೆ ಅನ್ನೋದು ನಿಮಗೆ ಗೊತ್ತಾ? ಅವರು ನಟಿಸಿದ ಮೊದಲ ಸಿನಿಮಾ ‘ಅಬೋದ್’. ಈ ಚಿತ್ರವು 1984ರಲ್ಲಿ ತೆರೆಗೆ ಬಂತು. ಅಂದರೆ ಸರಿಯಾಗಿ 41 ವರ್ಷಗಳ ಹಿಂದೆ ಮಾಧುರಿ ಅವರು ಬಣ್ಣದ ಲೋಕವನ್ನು ಪ್ರವೇಶ ಮಾಡಿದ್ದರು. ಆ ಬಳಿಕ ಅವರು ನಟಿಸಿದ್ದು ‘ತೇಜಾಬ್’ ಚಿತ್ರದಲ್ಲಿ. ಇದರ ‘ಏಕ್ ದೋ ತೀನ್..’ ಹಾಡು ಸೂಪರ್ ಹಿಟ್ ಎನಿಸಿಕೊಂಡಿತು. ಆ ಬಳಿಕ ಮಾಧುರಿ ಅವರು ದೇಶಾದ್ಯಂತ ಜನಪ್ರಿಯತೆ ಪಡೆದರು. ರಾತ್ರೋ ರಾತ್ರಿ ಅವರು ಸ್ಟಾರ್ ಆಗಿ ಬಿಟ್ಟರು. ಮಾಧುರಿ ಅವರನ್ನು ಯಾರೂ ಹಿಡಿಯುವವರೇ ಇರಲಿಲ್ಲ.
80ರ ದಶಕದಲ್ಲಿ ಬಾಲಿವುಡ್ನಲ್ಲಿ ಶ್ರೀದೇವಿ ದೊಡ್ಡ ಹೆಸರು ಮಾಡಿದ್ದರು. ಅವರಿಗೆ ಸರಿಸಾಟಿಯಾಗಿ ನಿಲ್ಲವಷ್ಟು ಜನಪ್ರಿಯತೆ ಮಾಧುರಿ ದೀಕ್ಷಿತ್ ಅವರಿಗೆ ಇತ್ತು. ಇಲ್ಲಿ ಅವರು ಕೇವಲ ಗ್ಲಾಮರ್ ಪಾತ್ರಗಳ ಬದಲು ನಟನೆಗೆ ತೂಕ ಇರೋ ಸಿನಿಮಾಗಳನ್ನು ಒಪ್ಪಿಕೊಂಡ ಕಾರಣಕ್ಕೆ ಬೇಗ ಜನಪ್ರಿಯತೆ ಪಡೆದರು ಅವರು. ‘ಆಜ ನಚಲೇ’ ಮತ್ತು ‘ಗುಲಾಬ್ ಗ್ಯಾಂಗ್’ ಸಿನಿಮಾಗಳವರೆಗೂ ಅವರು ಇದೇ ಸೂತ್ರವನ್ನು ಅನುಸರಿಸಿಕೊಂಡು ಬಂದರು.
ಇದನ್ನೂ ಓದಿ: ಅನುಷ್ಕಾ-ವಿರಾಟ್ ಲಂಡನ್ನಲ್ಲಿ ಸೆಟಲ್ ಆಗಿದ್ದೇಕೆ? ಮಾಧುರಿ ದೀಕ್ಷಿತ್ ಪತಿಯಿಂದ ಮಾಹಿತಿ ರಿವೀಲ್
1994ರಲ್ಲಿ ‘ಹಮ್ ಆಪ್ಕೆ ಹೈ ಕೌನ್’ ಚಿತ್ರದಲ್ಲಿ ಸಲ್ಮಾನ್ ಖಾನ್ ಹಾಗೂ ಮಾಧುರಿ ದೀಕ್ಷಿತ್ ಒಟ್ಟಿಗೆ ನಟಿಸಿದ್ದರು. ಸಲ್ಲು ಕೂಡ ಜನಪ್ರಿಯತೆ ಪಡೆದಿದ್ದರು. ಈ ಸಿನಿಮಾದಲ್ಲಿ ಸಲ್ಮಾನ್ ಖಾನ್ಗಿಂತಲೂ ಹೆಚ್ಚು ಸಂಭಾವನೆಯನ್ನು ಮಾಧುರಿಗೆ ನೀಡಲಾಗಿತ್ತಂತೆ ಅನ್ನೋದು ಅಚ್ಚರಿಯ ವಿಚಾರ. ಮಾಧುರಿಗೆ ಅಂದು ಇದ್ದ ಬೇಡಿಕೆಗೆ ಸಾಕ್ಷಿ ಇದು. ಇಂದಿಗೂ ಡ್ಯಾನ್ಸ್ ಸಂಬಂಧಿತ ಟಿವಿ ಕಾರ್ಯಕ್ರಮಗಳ ಜಡ್ಜ್ ಆಗಿ ಅವರು ಕೆಲಸ ಮಾಡುತ್ತಿದ್ದಾರೆ. ಅಪಾರ ಸಂಖ್ಯೆಯ ಅಭಿಮಾನಿಗಳು, ಸ್ನೇಹಿತರು ಮತ್ತು ಸೆಲೆಬ್ರಿಟಿಗಳು ಮಾಧುರಿಗೆ ಇಂದು ಜನ್ಮದಿನದ ಶುಭಾಶಯ ಕೋರುತ್ತಿದ್ದಾರೆ. ಅವರು ‘ಭೂಲ್ ಭುಲಯ್ಯ 3’ ಚಿತ್ರದಲ್ಲಿ ಕೊನೆಯದಾಗಿ ಕಾಣಿಸಿಕೊಂಡರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.