ಚಿನ್ನದ ಬಣ್ಣದ ಐಶಾರಾಮಿ ಕಾರು ಖರೀದಿಸಿದ ಮಹೇಶ್ ಬಾಬು: ಬೆಲೆ ಎಷ್ಟು ಗೊತ್ತೆ?

Mahesh Babu: ನಟ ಮಹೇಶ್ ಬಾಬು ಹೊಸ ರೇಂಜ್ ರೋವರ್ ಕಾರು ಖರೀದಿಸಿದ್ದಾರೆ. ಬೆಲೆ ಎಷ್ಟು ಗೊತ್ತೆ?

ಚಿನ್ನದ ಬಣ್ಣದ ಐಶಾರಾಮಿ ಕಾರು ಖರೀದಿಸಿದ ಮಹೇಶ್ ಬಾಬು: ಬೆಲೆ ಎಷ್ಟು ಗೊತ್ತೆ?
ಮಹೇಶ್ ಬಾಬು
Follow us
ಮಂಜುನಾಥ ಸಿ.
|

Updated on: Aug 05, 2023 | 10:01 PM

ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆವ ನಟರಲ್ಲಿ ಮಹೇಶ್ ಬಾಬು (Mahesh Babu) ಸಹ ಒಬ್ಬರು. ಸಿನಿಮಾ ನಟನೆ ಜೊತೆಗೆ ಹಲವು ಜನಪ್ರಿಯ ಬ್ರ್ಯಾಂಡ್​ಗಳ ಜಾಹೀರಾತುಗಳಿಗೂ ಅವರು ಬೇಡಿಕೆಯ ನಟರು. ವರ್ಷಕ್ಕೆ ಒಂದು ಹೆಚ್ಚೆಂದರೆ ಎರಡನೇ ಸಿನಿಮಾ ಮಾಡಿದರೂ ಸಹ ಭಾರಿ ದೊಡ್ಡ ಸಂಭಾವನೆಯನ್ನೇ (remuneration) ಮಹೇಶ್ ಪಡೆಯುತ್ತಾರೆ. ಸಂಭಾವನೆಯ ಗಾತ್ರಕ್ಕೆ ತಕ್ಕಂತೆ ಅವರ ಜೀವನ ಶೈಲಿಯೂ ಇದೆ. ಅವರ ದೊಡ್ಡ ಸಂಭಾವನೆಗೆ ತಕ್ಕಂತೆ ಭಾರಿ ಮೊತ್ತದ ಕಾರ್ ಒಂದನ್ನು ನಟ ಮಹೇಶ್ ಬಾಬು ಖರೀದಿ ಮಾಡಿದ್ದಾರೆ.

ಮಹೇಶ್ ಬಾಬು ಇತ್ತೀಚೆಗಷ್ಟೆ ರೇಂಜ್ ರೋವರ್ ಕಾರು ಖರೀದಿಸಿದ್ದಾರೆ. ಸಾಮಾನ್ಯವಾಗಿ ಎಲ್ಲರೂ ಗ್ರಾಫೈಟ್ ಬ್ಲ್ಯಾಕ್, ಬ್ಲ್ಯಾಕ್, ಬಿಳಿ ಬಣ್ಣದ ರೇಂಜ್ ರೋವರ್ ಕಾರು ಖರೀದಿ ಮಾಡಿದರೆ, ಮಹೇಶ್ ಬಾಬು ಮಾತ್ರ ಚಿನ್ನದ ಬಣ್ಣದ ರೇಂಜ್ ರೋವರ್ ಖರೀದಿ ಮಾಡಿದ್ದಾರೆ. ಈ ಕಾರಿಗೆ ಬರೋಬ್ಬರಿ 5.4 ಕೋಟಿ ರೂಪಾಯಿ ತೆತ್ತಿದ್ದಾರೆ ಮಹೇಶ್ ಬಾಬು. ರೇಂಜ್ ರೋವರ್ ನ ಮಾದರಿಗಳಲ್ಲಿಯೇ ಅತ್ಯಂತ ದುಬಾರಿ ಮಾದರಿಯ ಕಾರು ಇದಾಗಿದೆ.

ಇದನ್ನೂ ಓದಿ:ಮುಂಚೆಯೇ ಒಂದೇ ಸಿನಿಮಾದಲ್ಲಿ ಕೆಲಸ ಮಾಡಿದ್ದರು ಮಹೇಶ್ ಬಾಬು-ರಾಜಮೌಳಿ: ಯಾವುದು ಆ ಸಿನಿಮಾ?

ಮಹೇಶ್ ಬಾಬು ಮಾತ್ರವೇ ಅಲ್ಲದೆ ತೆಲುಗಿನ ಇತರೆ ಕೆಲವು ನಟರ ಮೆಚ್ಚಿನ ಕಾರು ರೇಂಜ್ ರೋವರ್ ಆಗಿದೆ. ನಟ ಚಿರಂಜೀವಿ, ಜೂ ಎನ್​ಟಿಆರ್, ನಾಗ ಚೈತನ್ಯ ಇತರೆ ಕೆಲವು ನಟರುಗಳ ಬಳಿ ರೇಂಜ್ ರೋವರ್ ಕಾರು ಇದೆ. ಆದರೆ ಯಾರ ಬಳಿಯೂ ಚಿನ್ನದ ಬಣ್ಣದ, ಇಷ್ಟು ಅಡ್ವಾನ್ಸ್ ತಂತ್ರಜ್ಞಾನವುಳ್ಳ ರೇಂಜ್ ರೋವರ್ ಕಾರು ಇಲ್ಲ. ಸ್ವತಃ ಮಹೇಶ್ ಬಾಬು ಬಳಿ ರೇಂಜ್ ರೋವರ್ ವೋಗ್ ಮಾದರಿ ಕಾರು ಇದೆ. ಅದರ ಜೊತೆಗೆ ಈಗ ಗೋಲ್ಡ್ ಎಡಿಷನ್ ಕಾರನ್ನು ಖರೀದಿ ಮಾಡಿದ್ದಾರೆ.

ಮಹೇಶ್ ಬಾಬು ಬಳಿ ಹಲವು ಐಶಾರಾಮಿ ಕಾರುಗಳಿವೆ. ರೋಲ್ಸ್ ರಾಯ್ಸ್ ಗೋಸ್ಟ್, ಆಡಿ 7, ಬಿಎಂಡಬ್ಲು 7, ರೋಲ್ಸ್ ರಾಯ್ಸ್ ವೋಗ್, ಬೆಂಜ್ ಎಸ್ ಕ್ಲಾಸ್, ಇನ್ನೋವಾ ಕ್ರಿಸ್ಟಾ ಕಾರುಗಳಿವೆ. ಇವುಗಳ ಜೊತೆಗೆ ಈಗ ರೇಂಜ್ ರೋವರ್ ಹೊಸ ಕಾರು ಸಹ ಸೇರ್ಪಡೆಯಾಗಿದೆ.

ಮಹೇಶ್ ಬಾಬು ಐಶಾರಾಮಿ ಜೀವನ ನಡೆಸುವ ನಟ. ಶೂಟಿಂಗ್ ಇಲ್ಲದ ಸಮಯವನ್ನು ಕುಟುಂಬದೊಟ್ಟಿಗೆ ಬಹುತೇಕ ಹೊರದೇಶದಲ್ಲಿಯೇ ಕಳೆಯುತ್ತಾರೆ ಮಹೇಶ್ ಬಾಬು. ಮಹೇಶ್ ಬಾಬು ಅವರ ಇಬ್ಬರು ಮಕ್ಕಳ ವಿದ್ಯಾಭ್ಯಾಸ ನಡೆಯುತ್ತಿರುವುದು ಸಹ ವಿದೇಶದಲ್ಲಿಯೇ. ವಿದೇಶದಲ್ಲಿ ಐಶಾರಾಮಿ ಮನೆಯನ್ನು ಸಹ ಮಹೇಶ್ ಬಾಬು ಹೊಂದಿದ್ದಾರೆ. ಅಂತೆಯೇ ಹೈದರಾಬಾದ್​ನಲ್ಲಿ ಸಹ ಭಾರಿ ಬಂಗಲೆಯೊಂದನ್ನು ಮಹೇಶ್ ಹೊಂದಿದ್ದಾರೆ.

ಸಿನಿಮಾಗಳ ವಿಷಯಕ್ಕೆ ಬರುವುದಾದರೆ ಮಹೇಶ್ ಬಾಬು ಪ್ರಸ್ತುತ ‘ಗುಂಟೂರು ಖಾರಂ’ ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸಿನಿಮಾವನ್ನು ತೆಲುಗಿನ ಜನಪ್ರಿಯ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನ ಮಾಡುತ್ತಿದ್ದಾರೆ. ಕತೆಯಲ್ಲಿ ತಿದ್ದುಪಡಿಗಳ ಕಾರಣದಿಂದಾಗಿ ಸಿನಿಮಾದ ಚಿತ್ರೀಕರಣ ನಿರೀಕ್ಷೆಗಿಂತಲೂ ತಡವಾಗಿ ನಡೆಯುತ್ತಿದೆ. ‘ಗುಂಟೂರು ಖಾರಂ’ ಸಿನಿಮಾದ ಬಿಡುಗಡೆ ಬಳಿಕ ಮಹೇಶ್ ಬಾಬು, ರಾಜಮೌಳಿ ಜೊತೆಗಿನ ಸಿನಿಮಾದ ಚಿತ್ರೀಕರಣ ಪ್ರಾರಂಭ ಮಾಡಲಿದ್ದಾರೆ. ಆ ಸಿನಿಮಾದ ಮೇಲೆ ವಿಶ್ವದ ಸಿನಿಮಾ ಪ್ರೇಮಿಗಳು ನಿರೀಕ್ಷೆ ಇರಿಸಿಕೊಂಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ