ಮಹೇಶ್​ ಬಾಬು ಪತ್ನಿಗೆ ಸಿಕ್ಕಿಲ್ಲ ಸ್ಪೆಷಲ್​ ಅಧಿಕಾರ; ತಪ್ಪುಗಳ ಬಗ್ಗೆ ಬಾಯ್ಬಿಟ್ಟ ‘ಪ್ರಿನ್ಸ್​’

ಸಂಭಾವನೆ ರೂಪದಲ್ಲಿ ಮಹೇಶ್​ ಬಾಬು ಕೋಟ್ಯಂತರ ರೂಪಾಯಿ ಸಂಪಾದಿಸುತ್ತಾರೆ. ಈ ಎಲ್ಲ ವ್ಯವಹಾರಗಳಲ್ಲೂ ಅವರ ಪತ್ನಿ ನಮ್ರತಾ ಶಿರೋಡ್ಕರ್ ಭಾಗಿ ಆಗುತ್ತಾರೆ. ಆದರೆ ಒಂದು ವಿಚಾರದಲ್ಲಿ ಮಾತ್ರ ಹೆಂಡತಿಗೆ ಮಹೇಶ್​ ಬಾಬು ಅಧಿಕಾರ ನೀಡಿಲ್ಲ.

ಮಹೇಶ್​ ಬಾಬು ಪತ್ನಿಗೆ ಸಿಕ್ಕಿಲ್ಲ ಸ್ಪೆಷಲ್​ ಅಧಿಕಾರ; ತಪ್ಪುಗಳ ಬಗ್ಗೆ ಬಾಯ್ಬಿಟ್ಟ ‘ಪ್ರಿನ್ಸ್​’
ಮಹೇಶ್ ಬಾಬು, ನಮ್ರತಾ ಶಿರೋಡ್ಕರ್

ಟಾಲಿವುಡ್​ನ ಸ್ಟಾರ್​ ನಟ ಮಹೇಶ್​ ಬಾಬು ಪಕ್ಕಾ ಫ್ಯಾಮಿಲಿ ಮ್ಯಾನ್​. ತಮ್ಮ ಕುಟುಂಬಕ್ಕೆ ಅವರು ಹೆಚ್ಚು ಸಮಯ ನೀಡುತ್ತಾರೆ. ಸಿನಿಮಾ ಕೆಲಸಗಳು ಇಲ್ಲದೇ ಇರುವಾಗ ಅವರು ಸಂಪೂರ್ಣವಾಗಿ ತಮ್ಮ ಕುಟುಂಬದ ಸದಸ್ಯರ ಜೊತೆ ಕಾಲ ಕಳೆಯಲು ಇಷ್ಟಪಡುತ್ತಾರೆ. ಇತ್ತೀಚೆಗೆ ಅವರು ಪ್ರತಿಷ್ಠಿತ ಮ್ಯಾಗಜಿನ್​ವೊಂದಕ್ಕೆ ಸಂದರ್ಶನ ನೀಡಿದ್ದು, ತಮ್ಮ ಫ್ಯಾಮಿಲಿ ಬಗ್ಗೆ ಕೆಲವೊಂದು ವಿಚಾರಗಳನ್ನು ಮುಕ್ತವಾಗಿ ಮಾತನಾಡಿದ್ದಾರೆ. ಪತ್ನಿ ನಮ್ರತಾ ಶಿರೋಡ್ಕರ್ ಬಗ್ಗೆಯೂ ಮಹೇಶ್​ ಬಾಬು ಇಂಟರೆಸ್ಟಿಂಗ್​ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಮಹೇಶ್​ ಬಾಬು ಸಿನಿಮಾಗಳು ಟಾಲಿವುಡ್​ನಲ್ಲಿ ದೊಡ್ಡ ಮಟ್ಟದ ಬ್ಯುಸಿನೆಸ್​ ಮಾಡುತ್ತವೆ. ಅಲ್ಲದೇ ಅವರು ಸ್ವಂತ ಮಲ್ಟಿಪ್ಲೆಕ್ಸ್​ ಕೂಡ ಹೊಂದಿದ್ದಾರೆ. ಅನೇಕ ಜಾಹೀರಾತುಗಳಲ್ಲಿ ನಟಿಸುವ ಮೂಲಕ ಕೋಟ್ಯಂತರ ರೂಪಾಯಿ ಸಂಪಾದಿಸುತ್ತಾರೆ. ಈ ಎಲ್ಲ ವ್ಯವಹಾರಗಳಲ್ಲೂ ಅವರ ಪತ್ನಿ ಭಾಗಿ ಆಗುತ್ತಾರೆ. ಡೇಟ್ಸ್​ಗಳನ್ನೂ ಅವರು ನೋಡಿಕೊಳ್ಳುತ್ತಾರೆ. ಆದರೆ ಒಂದು ವಿಚಾರದಲ್ಲಿ ಮಾತ್ರ ಪತ್ನಿಗೆ ಮಹೇಶ್​ ಬಾಬು ಅಧಿಕಾರ ನೀಡಿಲ್ಲ.

ಹೌದು, ಮಹೇಶ್​ ಬಾಬು ಅವರು ತಮ್ಮ ಸಿನಿಮಾದ ಕಥೆಗಳನ್ನು ಪತ್ನಿ ಬಳಿ ಚರ್ಚೆ ಮಾಡುವುದೇ ಇಲ್ಲ. ಸ್ಕ್ರಿಪ್ಟ್​ ವಿಚಾರದಲ್ಲಿ ನಮ್ರತಾ ತಲೆ ಹಾಕುವಂತಿಲ್ಲ. ಅದನ್ನು ಸ್ವತಃ ಮಹೇಶ್​ ಬಾಬು ಹೇಳಿಕೊಂಡಿದ್ದಾರೆ. ‘ಈ ರೀತಿ ಒಂದು ನಿಯಮ ಮಾಡಿಕೊಂಡಿದ್ದೇನೆ. ಸಿನಿಮಾ ಸ್ಕ್ರಿಪ್ಟ್​ಗಳ ಬಗ್ಗೆ ನಾನು ನಮ್ರತಾ ಜೊತೆ ಚರ್ಚೆ ಮಾಡುವುದಿಲ್ಲ. ನನ್ನ ಸಿನಿಮಾಗೆ ಕಥೆಗಳನ್ನು ನಾನೇ ಆಯ್ಕೆ ಮಾಡಿಕೊಳ್ಳುತ್ತೇನೆ. ಮೊದಲಿನಿಂದ ಇಂದಿನವರೆಗೆ ಇದೇ ರೀತಿ ನಡೆದುಕೊಂಡು ಬಂದಿದೆ’ ಎಂದು ಅವರು ಹೇಳಿದ್ದಾರೆ.

ಮಹೇಶ್​ ಬಾಬು ಅವರ ಈ ನಿರ್ಧಾರಕ್ಕೂ ಕಾರಣ ಇದೆ. ಒಂದು ವೇಳೆ ಸ್ಕ್ರಿಪ್ಟ್​ ಆಯ್ಕೆಯಲ್ಲಿ ಸೋತರೆ ಅದರ ಸಂಪೂರ್ಣ ಹೊಣೆಯನ್ನು ಮಹೇಶ್​ ಬಾಬು ಅವರೇ ಹೊತ್ತುಕೊಳ್ಳುತ್ತಾರೆ. ‘ನನ್ನ ತಪ್ಪಿನಿಂದ ನಾನು ಪಾಠ ಕಲಿಯುತ್ತೇನೆ. ನಂತರ ಬೆಳವಣಿಗೆ ಹೊಂದಿದ್ದೇನೆ’ ಎನ್ನುವ ಅವರು ತಮ್ಮ ಸೋಲಿಗೆ ಬೇರೆಯವರನ್ನು ಹೊಣೆ ಮಾಡಲು ಸಿದ್ಧರಿಲ್ಲ. ಆ ಕಾರಣದಿಂದ ಕಥೆ ಆಯ್ಕೆಯಲ್ಲಿ ಭಾಗಿ ಆಗುವ ಅಧಿಕಾರವನ್ನು ಹೆಂಡತಿಗೆ ನೀಡಿಲ್ಲ.

ಸದ್ಯ ಮಹೇಶ್​ ಬಾಬು ನಟನೆಯ ‘ಸರ್ಕಾರು ವಾರಿ ಪಾಟ’ ಸಿನಿಮಾ ಬಿಡುಗಡೆಗೆ ಸಿದ್ಧವಾಗುತ್ತಿದೆ. ಈ ಸಿನಿಮಾದಲ್ಲಿ ಮಹೇಶ್​ ಬಾಬುಗೆ ಜೋಡಿಯಾಗಿ ಕೀರ್ತಿ ಸುರೇಶ್​ ಅಭಿನಯಿಸಿದ್ದಾರೆ. 2022ರ ಜ.13ರಂದು ಆ ಚಿತ್ರ ಬಿಡುಗಡೆ ಆಗಲಿದೆ. ಬಳಿಕ ರಾಜಮೌಳಿ ಮತ್ತು ತ್ರಿವಿಕ್ರಮ್​ ಜೊತೆ ಮಹೇಶ್​ ಬಾಬು ಸಿನಿಮಾ ಮಾಡಲಿದ್ದಾರೆ.

ಇದನ್ನೂ ಓದಿ:

ದಳಪತಿ ವಿಜಯ್​ ಮತ್ತು ಮಹೇಶ್​ ಬಾಬು ಪತ್ನಿ ನಮ್ರತಾ ಹಳೇ ವಿಚಾರ ಎಳೆದು ತಂದ ಫ್ಯಾನ್ಸ್​

ಇಂಗ್ಲಿಷ್​ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಡಲಿದ್ದಾರೆ ಮಹೇಶ್​ ಬಾಬು ಮಗಳು? ನಟನ ಅಚ್ಚರಿಯ ಹೇಳಿಕೆ

Read Full Article

Click on your DTH Provider to Add TV9 Kannada