Vijay Babu: ಮಲಯಾಳಂನ ಖ್ಯಾತ ನಟ, ನಿರ್ಮಾಪಕ ವಿಜಯ್ ಬಾಬು ವಿರುದ್ಧ ಲೈಂಗಿಕ ಕಿರುಕುಳ ಆರೋಪ; ಪ್ರಕರಣ ದಾಖಲು

ದಕ್ಷಿಣ ಎರ್ನಾಕುಲಂ ಪೊಲೀಸರು ಏಪ್ರಿಲ್ 22ರಂದು ಮಹಿಳೆಯೋರ್ವರು ನೀಡಿರುವ ದೂರಿನ ಮೇರೆಗೆ ನಟ, ನಿರ್ಮಾಪಕ ವಿಜಯ್ ಬಾಬು ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ದೂರಿನಲ್ಲಿ ನಟನ ವಿರುದ್ಧ ಹಲವು ಆರೋಪಗಳನ್ನು ಮಾಡಲಾಗಿದೆ.

Vijay Babu: ಮಲಯಾಳಂನ ಖ್ಯಾತ ನಟ, ನಿರ್ಮಾಪಕ ವಿಜಯ್ ಬಾಬು ವಿರುದ್ಧ ಲೈಂಗಿಕ ಕಿರುಕುಳ ಆರೋಪ; ಪ್ರಕರಣ ದಾಖಲು
ವಿಜಯ್ ಬಾಬು
Follow us
| Updated By: shivaprasad.hs

Updated on: Apr 27, 2022 | 2:03 PM

ಮಲಯಾಳಂ ನಟ ಮತ್ತು ನಿರ್ಮಾಪಕ ವಿಜಯ್ ಬಾಬು (Vijay Babu) ವಿರುದ್ಧ ಕೇರಳ ಪೊಲೀಸರು ಲೈಂಗಿಕ ದೌರ್ಜನ್ಯದ (Sexual Assualt) ಆರೋಪದ ಮೇಲೆ ಪ್ರಕರಣ ದಾಖಲಿಸಿದ್ದಾರೆ. ದಕ್ಷಿಣ ಎರ್ನಾಕುಲಂ ಪೊಲೀಸರು ಏಪ್ರಿಲ್ 22ರಂದು ಮಹಿಳೆಯೋರ್ವರು ನೀಡಿರುವ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ ಎಂದು ವರದಿಗಳು ಹೇಳಿವೆ. ದೂರಿನಲ್ಲಿ ವಿಜಯ್ ಬಾಬು ವಿರುದ್ಧ ಹಲವು ಆರೋಪಗಳನ್ನು ಮಾಡಲಾಗಿದೆ. ಕೊಚ್ಚಿಯ ಫ್ಲಾಟ್‌ನಲ್ಲಿ ನಟ ತಮ್ಮ ಮೇಲೆ ಒಂದಕ್ಕಿಂತಲೂ ಅಧಿಕ ಬಾರಿ ಹಲ್ಲೆ ನಡೆಸಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ. ದೂರು ನೀಡಿರುವ ಮಹಿಳೆ ಕೋಳಿಕ್ಕೋಡ್ ಜಿಲ್ಲೆಯವರಾಗಿದ್ದು, ವಿಜಯ್ ಬಾಬು ಅವರ ಚಲನಚಿತ್ರಗಳಲ್ಲಿ ಪಾತ್ರಗಳನ್ನು ನೀಡುವ ನೆಪದಲ್ಲಿ ಈ ಅಪರಾಧ ಎಸಗಿದ್ದಾರೆ ಎಂದು ತಿಳಿಸಿದ್ದಾರೆ. ಪೊಲೀಸರು ಇನ್ನೂ ವಿಜಯ್ ಬಾಬುರನ್ನು ಪ್ರಶ್ನಿಸಿಲ್ಲ ಅಥವಾ ಬಂಧಿಸಿಲ್ಲ.

ಫೇಸ್​ಬುಕ್ ಲೈವ್​ನಲ್ಲಿ ಆರೋಪ ಹೊರಿಸಿದ ಮಹಿಳೆಯ ಹೆಸರನ್ನು ತಿಳಿಸಿ, ಮರು ಆರೋಪ ಮಾಡಿದ ವಿಜಯ್ ಬಾಬು:

ಈ ನಡುವೆ ವಿಜಯ್ ಬಾಬು ಈ ಆರೋಪಕ್ಕೆ ಫೇಸ್​ಬುಕ್ ಲೈವ್ ಮೂಲಕ ಉತ್ತರಿಸಿದ್ದಾರೆ. ಈ ಪ್ರಕರಣದಲ್ಲಿ ತಾವು ಬಲಿಪಶು ಎಂದು ವಿಜಯ್ ಬಾಬು ಹೇಳಿಕೊಂಡಿದ್ದು, ದೂರು ನೀಡಿರುವ ಮಹಿಳೆಯೇ ಆರೋಪಿ ಎಂದಿದ್ದಾರೆ. ಅಲ್ಲದೇ ಈ ಬಗ್ಗೆ ಮಾನನಷ್ಟ ಮೊಕದ್ದಮೆ ಹೂಡುವುದಾಗಿಯೂ ವಿಜಯ್ ಬಾಬು ಹೇಳಿದ್ದಾರೆ.

ತಮ್ಮ ಲೈವ್ ಸೆಷನ್​ನಲ್ಲಿ ವಿಜಯ್ ಬಾಬು ಮಹಿಳೆಯ ಹೆಸರನ್ನು ಬಹಿರಂಗಪಡಿಸಿದ್ದು, ಕಾನೂನನ್ನು ಮುರಿದಿದ್ದಾರೆ. ಸಂತ್ರಸ್ತೆಯ ಹೆಸರನ್ನು ಬಹಿರಂಗಪಡಿಸಬಾರದು ಎಂಬ ನಿಯಮವಿದ್ದರೂ ವಿಜಯ್ ಬಾಬು ಹೆಸರನ್ನು ಬಹಿರಂಗಪಡಿಸಿದ್ದು, ಇದರ ಪರಿಣಾಮಗಳನ್ನು ಎದುರಿಸಲು ಸಿದ್ಧ ಎಂದಿದ್ದಾರೆ.

ಮಹಿಳೆಯ ವಿರುದ್ಧ ತಮ್ಮ ಬಳಿ ಇರುವ ದಾಖಲೆಗಳನ್ನು ಬಹಿರಂಗಪಡಿಸಲು ಸಿದ್ಧ. ಆದರೆ ಅವರ ಕುಟುಂಬಕ್ಕೆ ಹಾನಿಯಾಗುವುದನ್ನು ಬಯಸುವುದಿಲ್ಲ ಎಂದಿರುವ ವಿಜಯ್ ಬಾಬು, ತಾವು ಕೇವಲ ತಮ್ಮ ಕುಟುಂಬಕ್ಕೆ, ಸ್ನೇಹಿತರ ಪ್ರಶ್ನೆಗಳಿಗೆ ಸ್ಪಷ್ಟನೆ ನೀಡುತ್ತೇನೆ ಎಂದಿದ್ದಾರೆ.

ವಿಜಯ್ ಬಾಬು ಮಲಯಾಳಂನ ಖ್ಯಾತ ನಿರ್ಮಾಣ ಸಂಸ್ಥೆಗಳಲ್ಲಿ ಒಂದಾದ ‘ಫ್ರೈಡೆ ಫಿಲ್ಮ್ ಹೌಸ್’ನ ಸಂಸ್ಥಾಪಕರಾಗಿದ್ದು, ನಟರಾಗಿಯೂ ಗುರುತಿಸಿಕೊಂಡಿದ್ದಾರೆ.

ಸಂತ್ರಸ್ತೆಯ ಹೆಸರು ಬಹಿರಂಗಪಡಿಸಿದ್ದಕ್ಕೆ ವಿಜಯ್ ಬಾಬು ಮೇಲೆ ಮತ್ತೊಂದು ಪ್ರಕರಣ ದಾಖಲು

ಮಹಿಳೆ ನೀಡಿದ ದೂರನ್ನು ಅಲ್ಲಗಳೆಯುವ ವೇಳೆ ಉದ್ದೇಶಪೂರ್ವಕವಾಗಿ ಸಂತ್ರಸ್ತೆಯ ಹೆಸರನ್ನು ಬಹಿರಂಗಪಡಿಸಿದ್ದ ಕಾರಣ, ದಕ್ಷಿಣ ಎರ್ನಾಕುಲಂ ಪೊಲೀಸ್ ಠಾಣೆಯಲ್ಲಿ ವಿಜಯ್ ಬಾಬು ವಿರುದ್ಧ ಮತ್ತೊಂದು ದೂರು ದಾಖಲಾಗಿದೆ.

ಇದನ್ನೂ ಓದಿ: ಪಂಜಾಬ್ ಸರ್ಕಾರದಲ್ಲಿ ಭಿನ್ನಮತದ ನಡುವೆಯೇ ಸಚಿವರ ವಿರುದ್ಧದ ಮೀಟೂ ಪ್ರಕರಣ ಮುನ್ನೆಲೆಗೆ

‘ಕೆಜಿಎಫ್​ 2’ ಮಾತ್ರವಲ್ಲ, ಅತಿ ಹೆಚ್ಚು ಕಲೆಕ್ಷನ್​ ಮಾಡಿದ ಟಾಪ್​ 10 ಸಿನಿಮಾಗಳ ಲಿಸ್ಟ್​ ಇಲ್ಲಿದೆ..