AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂಗಳೂರು: ಕ್ಯಾಬ್ ಚಾಲಕನ ಟೆರರಿಸ್ಟ್ ಎಂದ ಮಲಯಾಳಂ ನಟ ಜಯಕೃಷ್ಣನ್ ಬಂಧನ

ಸೆ.09ರಂದು ಮಂಗಳೂರಿಗೆ ಬಂದಿದ್ದ ಜಯಕೃಷ್ಣನ್, ಸಂತೋಷ್ ಅಬ್ರಾಹಂ, ವಿಮಲ್ ಊಬರ್ ಬುಕ್ ಮಾಡಿದ್ದರು. ಊಬರ್ ಕ್ಯಾಬ್ ಚಾಲಕ ಶಫೀಕ್ ಕಾರು ಬುಕ್ ಆಯಿತು. ಕರೆ ಮಾಡಿ ಎಲ್ಲಿಗೆ ಬರಬೇಕು ಎಂದು ಕೇಳಿದಾಗ, ಬೈದಿದ್ದರು. ಕುಟುಂಬದವರ ಬಗ್ಗೆಯೂ ಕೆಟ್ಟದಾಗಿ ಮಾತನಾಡಿದ್ದರು. ಇದರಿಂದ ಕುಪಿತಗೊಂಡ ಶಫೀಕ್ ದೂರು ದಾಖಲು ಮಾಡಿದ್ದರು.

ಮಂಗಳೂರು: ಕ್ಯಾಬ್ ಚಾಲಕನ ಟೆರರಿಸ್ಟ್ ಎಂದ ಮಲಯಾಳಂ ನಟ ಜಯಕೃಷ್ಣನ್ ಬಂಧನ
ಜಯ ಕೃಷ್ಣನ್
ರಾಜೇಶ್ ದುಗ್ಗುಮನೆ
|

Updated on:Oct 11, 2025 | 2:56 PM

Share

ಕೇರಳ ಚಿತ್ರರಂಗದ ಹಿರಿಯ ನಟ ಜಯಕೃಷ್ಣನ್ ಬಂಧನ ಆಗಿದೆ. ಮಂಗಳೂರಿನಲ್ಲಿ ಕ್ಯಾಬ್ ಚಾಲಕನಿಗೆ ಟೆರರಿಸ್ಟ್ ಎಂದು ನಿಂದಿಸಿದ ಆರೋಪ ಅವರ ಮೇಲೆ ಇದೆ. ಜಯಕೃಷ್ಣನ್ ಸೇರಿ ಮೂವರ ಮೇಲೆ ದೂರು ದಾಖಲು ಮಾಡಲಾಗಿತ್ತು. ಈಗ ಪೊಲೀಸರು ನಟನ ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.

ಸೆ.09ರಂದು ಮಂಗಳೂರಿಗೆ ಬಂದಿದ್ದ ಜಯಕೃಷ್ಣನ್, ಸಂತೋಷ್ ಅಬ್ರಾಹಂ, ವಿಮಲ್ ಊಬರ್ ಬುಕ್ ಮಾಡಿದ್ದರು. ಊಬರ್ ಕ್ಯಾಬ್ ಚಾಲಕ ಶಫೀಕ್ ಕಾರು ಬುಕ್ ಆಯಿತು. ಕರೆ ಮಾಡಿ ಎಲ್ಲಿಗೆ ಬರಬೇಕು ಎಂದು ಕೇಳಿದಾಗ, ಅವರು ಮೊದಲು ಹಿಂದಿಯಲ್ಲಿ ಮಾತನಾಡಿದ್ದರು. ಶಫೀಕ್ ಕನ್ನಡದಲ್ಲಿ ಮಾತನಾಡಿದಾಗ, ಮಲಯಾಳಂನಲ್ಲಿ ಮಾತನಾಡುವಂತೆ ಜಯಕೃಷ್ಣನ್ ಸೂಚಿಸಿದ್ದರು.

ಕರೆ ಮಾಡಿದಾಗ ಅಪ್ಪ-ಅಮ್ಮನಿಗೆ ಬೈದಿದ್ದಾರೆ. ಮುಸ್ಲಿಂ ಟೆರರಿಸ್ಟ್ ಎಂದೆಲ್ಲ ಹೇಳಿದ್ದಾರೆ ಎಂಬುದು ರಫೀಕ್ ಆರೋಪ. ‘ಮುಸ್ಲಿಂ ತೀರ್ವವಾದಿ, ಟೆರರಿಸ್ಟ್ ಅಂತಾ ಅಪಹಾಸ್ಯ ಮಾಡಿದ್ದಾರೆ. ಅವರಿಗೆ ಕಾರು ಬೇಡ. ಕ್ಯಾಬ್​ನವರನ್ನು ಆಟ ಆಡಿಸೋಕೆ ಈ ರೀತಿ ಮಾಡಿದ್ದಾರೆ’ ಎಂದು ರಫೀಕ್ ದೂರಿದ್ದಾರೆ.

ಇದನ್ನೂ ಓದಿ
Image
ವಿದೇಶದಲ್ಲೂ ಆಸ್ತಿ ಹೊಂದಿದ್ದಾರೆ ಅಮಿತಾಭ್ ಬಚ್ಚನ್; ಇಲ್ಲಿದೆ ವಿವರ
Image
ಒಂದಲ್ಲ, ಎರಡಲ್ಲ ಆರು ಗಂಟೆ ಸ್ನಾನ ಮಾಡಿದ ಸತೀಶ್; ಒಡೆಯಿತು ತಾಳ್ಮೆಯ ಕಟ್ಟೆ
Image
‘ಕಾಂತಾರ: ಚಾಪ್ಟರ್ 1’; ಕರ್ನಾಟಕದ ಗಳಿಕೆ ಹಿಂದಿಕ್ಕಿದ ಉತ್ತರದ ಮಂದಿ
Image
‘ಅಮೃತಧಾರೆ’ ಧಾರಾವಾಹಿಯಲ್ಲಿ ರೋಚಕ ತಿರುವು; ಮಗಳು ಗೌತಮ್​ಗೆ ಸಿಕ್ಕೇ ಬಿಟ್ಳು

ಇದನ್ನೂ ಓದಿ: ಮತ್ತೆ ಬಿಗ್ ಬಾಸ್​ಗೆ ಬಂದ ರಕ್ಷಿತಾ ಶೆಟ್ಟಿ ಇಷ್ಟು ದಿನ ಎಲ್ಲಿದ್ರು? ಉತ್ತರಿಸಿದ ಮಂಗಳೂರು ಹುಡುಗಿ

ಅನೇಕ ಕ್ಯಾಬ್ ಚಾಲಕರಿಗೆ ಜಯಕೃಷ್ಣನ್ ಇದೇ ರೀತಿ ಆಟ ಆಡಿಸಿದ್ದಾರೆ ಎನ್ನಲಾಗಿದೆ. ಕ್ಯಾಬ್ ಬುಕ್ ಮಾಡಿದ ಬಳಿಕ ಕಾರು ಚಾಲಕ 500 ಮೀಟರ್ ದೂರದಲ್ಲಿರುವಾಗ ರೈಡ್​ನ ಕ್ಯಾನ್ಸಲ್ ಮಾಡುತ್ತಿದ್ದರು. ಇದನ್ನು ದಕ್ಷಿಣ ಕನ್ನಡ ಜಿಲ್ಲೆಯ ಆನ್ಲೈನ್ ಟ್ಯಾಕ್ಸಿ ಚಾಲಕರ ಸಂಘ ಮಾಡಿತ್ತು. ಈಗ ಜಯಕೃಷ್ಣನ್ ಅವರ ಬಂಧನ ಆಗಿದೆ.

ಜಯಕೃಷ್ಣನ್ ಅವರು 1994ರಿಂದ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಈಗ ಅವರು ಪೋಷಕ ಪಾತ್ರಗಳ ಮೂಲಕ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಅವರು ಕಿರುತೆರೆಯಲ್ಲೂ ಆ್ಯಕ್ಟೀವ್ ಆಗಿದ್ದು, ಧಾರಾವಾಹಿಗಳಲ್ಲಿ ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 2:41 pm, Sat, 11 October 25

Follow Us
ದುಬೈನಲ್ಲಿರುವ ಅಮೆರಿಕದ ರಾಯಭಾರಿ ಕಚೇರಿ ಮೇಲೆ ಇರಾನ್ ಡ್ರೋನ್ ದಾಳಿ
ದುಬೈನಲ್ಲಿರುವ ಅಮೆರಿಕದ ರಾಯಭಾರಿ ಕಚೇರಿ ಮೇಲೆ ಇರಾನ್ ಡ್ರೋನ್ ದಾಳಿ
ವಿಶ್ವದ ನಂ.1 ಆಟಗಾರನಿಗೆ ಸೋಲುಣಿಸಿದ ಲಕ್ಷ್ಯ ಸೇನ್
ವಿಶ್ವದ ನಂ.1 ಆಟಗಾರನಿಗೆ ಸೋಲುಣಿಸಿದ ಲಕ್ಷ್ಯ ಸೇನ್
ವಿದೇಶ ಪ್ರವಾಸ ಮುಗಿಸಿ ಬೆಂಗಳೂರಿಗೆ ವಾಪಸ್​​ ಆದ ಕಾಂಗ್ರೆಸ್​ ಶಾಸಕರು
ವಿದೇಶ ಪ್ರವಾಸ ಮುಗಿಸಿ ಬೆಂಗಳೂರಿಗೆ ವಾಪಸ್​​ ಆದ ಕಾಂಗ್ರೆಸ್​ ಶಾಸಕರು
ಸ್ತ್ರೀಯರು ಶಾಸ್ತ್ರಾನುಸಾರ ಸನ್ಯಾಸಿನಿ ಆಗಬಹುದಾ?
ಸ್ತ್ರೀಯರು ಶಾಸ್ತ್ರಾನುಸಾರ ಸನ್ಯಾಸಿನಿ ಆಗಬಹುದಾ?
ಇಂದು ಈ ರಾಶಿಯವರು ಅಪರಿಚಿತರೊಂದಿಗೆ ವ್ಯವಹಾರಗಳಲ್ಲಿ ಜಾಗರೂಕರಾಗಿರಿ
ಇಂದು ಈ ರಾಶಿಯವರು ಅಪರಿಚಿತರೊಂದಿಗೆ ವ್ಯವಹಾರಗಳಲ್ಲಿ ಜಾಗರೂಕರಾಗಿರಿ
ನಿಧಿ ಆಸೆಗಾಗಿ ಅಪಾರ್ಟ್​​​ಮೆಂಟ್​​ನ ಬೇಸ್ಮೆಂಟ್​​ ಅಗೆದ ಬಿಲ್ಡರ್​: ವಿಡಿಯೋ
ನಿಧಿ ಆಸೆಗಾಗಿ ಅಪಾರ್ಟ್​​​ಮೆಂಟ್​​ನ ಬೇಸ್ಮೆಂಟ್​​ ಅಗೆದ ಬಿಲ್ಡರ್​: ವಿಡಿಯೋ
ಕನ್ನಡ ಚಿತ್ರರಂಗಕ್ಕೆ 93ರ ಸಂಭ್ರಮ: ಒಂದೇ ವೇದಿಕೆಯಲ್ಲಿ ಸೆಲೆಬ್ರಿಟಿಗಳು
ಕನ್ನಡ ಚಿತ್ರರಂಗಕ್ಕೆ 93ರ ಸಂಭ್ರಮ: ಒಂದೇ ವೇದಿಕೆಯಲ್ಲಿ ಸೆಲೆಬ್ರಿಟಿಗಳು
ದರ್ಶನ್ ಜೊತೆ ‘ಭೀಮ ತೀರದಲ್ಲಿ’ ಸಿನಿಮಾ ಯಾಕೆ ಮಾಡಲಿಲ್ಲ? ಸಿಕ್ತು ಉತ್ತರ
ದರ್ಶನ್ ಜೊತೆ ‘ಭೀಮ ತೀರದಲ್ಲಿ’ ಸಿನಿಮಾ ಯಾಕೆ ಮಾಡಲಿಲ್ಲ? ಸಿಕ್ತು ಉತ್ತರ
ಇರಾನ್​ನ ಮೆಹ್ರಾಬಾದ್ ವಿಮಾನ ನಿಲ್ದಾಣದ ಮೇಲೆ ಬಾಂಬ್ ದಾಳಿ
ಇರಾನ್​ನ ಮೆಹ್ರಾಬಾದ್ ವಿಮಾನ ನಿಲ್ದಾಣದ ಮೇಲೆ ಬಾಂಬ್ ದಾಳಿ
ಇರಾನ್‌ನ ಸುಪ್ರೀಂ ಲೀಡರ್ ಆಯ್ಕೆ ಸಮಿತಿ ಕಟ್ಟಡದ ಮೇಲೆ ಇಸ್ರೇಲ್ ದಾಳಿ
ಇರಾನ್‌ನ ಸುಪ್ರೀಂ ಲೀಡರ್ ಆಯ್ಕೆ ಸಮಿತಿ ಕಟ್ಟಡದ ಮೇಲೆ ಇಸ್ರೇಲ್ ದಾಳಿ