‘ಕಾತಲ್​ ದಿ ಕೋರ್’ ಚಿತ್ರದ ಫಸ್ಟ್ ಲುಕ್​ ಹಂಚಿಕೊಂಡ ಮಮ್ಮುಟ್ಟಿ

ಮಮ್ಮುಟ್ಟಿ ಹಾಗೂ ಜ್ಯೋತಿಕಾ ಮುಖ್ಯಪಾತ್ರದಲ್ಲಿ ನಟಿಸಿರುವ ‘ಕಾತಲ್​ ದಿ ಕೋರ್'​ ಸಿನಿಮಾದ ಫಸ್ಟ್​ ಲುಕ್​ನ್ನು ಚಿತ್ರದ ನಾಯಕ ಮಮ್ಮುಟ್ಟಿ ಹಂಚಿಕೊಂಡಿದ್ದಾರೆ.

‘ಕಾತಲ್​ ದಿ ಕೋರ್' ಚಿತ್ರದ ಫಸ್ಟ್ ಲುಕ್​ ಹಂಚಿಕೊಂಡ ಮಮ್ಮುಟ್ಟಿ
ಮಮ್ಮುಟ್ಟಿ, ಜ್ಯೋತಿಕಾ
Follow us
TV9 Web
| Updated By: ಕಿರಣ್ ಹನುಮಂತ್​ ಮಾದಾರ್

Updated on: Nov 13, 2022 | 2:10 PM

ಮಮ್ಮುಟ್ಟಿ(mammootty) ಶನಿವಾರ(ನವೆಂಬರ್​ 12) ತಮ್ಮ ಟ್ವಿಟರ್​ ಖಾತೆಯಲ್ಲಿ ‘ಕಾತಲ್​ ದಿ ಕೋರ್​'(kathal the core)ಚಿತ್ರದ ಫಸ್ಟ್​ ಲುಕ್​ ಪೋಸ್ಟ್​ ಬಿಡುಗಡೆ ಮಾಡಿದ್ದಾರೆ. ಪೋಸ್ಟ್​ರ್​ನಲ್ಲಿ ಮಮ್ಮುಟ್ಟಿ ಹಾಗೂ ಚಿತ್ರದ ನಾಯಕಿ ಜ್ಯೋತಿಕಾ ಅವರು ಮನೆಯ ಎದುರುಗಡೆ ಕುಳಿತು ನಗುತ್ತಿದ್ದಾರೆ. ಮೇಲ್ನೋಟಕ್ಕೆ ಪೋಸ್ಟರ್​ ನೋಡಿದರೆ ಕಾತಲ್​ ಸಿನಿಮಾವು ಮಧ್ಯವಯಸ್ಕ ದಂಪತಿಗಳ ರೊಮ್ಯಾಂಟಿಕ್​ ಕಾಮಿಡಿಯಿಂದ ಕೂಡಿದ ಸಿನಿಮಾ ಆಗಿರಬಹುದು ಎನಿಸುತ್ತದೆ.

ಜ್ಯೋತಿಕಾ ಅವರ ಮೂರನೇ ಮಲಯಾಳಂ ಸಿನಿಮಾ ಇದಾಗಿದ್ದು, (2007)ರಲ್ಲಿ ‘ರಕ್ಕಿಲಿಪಟ್ಟು’, (2009) ರಲ್ಲಿ ‘ಸೀತಾ ಕಲ್ಯಾಣಂ’ ನಲ್ಲಿ ನಟಿಸಿದ್ದಾರೆ. ಇದೀಗ ಅವರು ‘ಕಾತಲ್​ ದಿ ಕೋರ್’ ಸಿನಿಮಾದಲ್ಲಿ ಮಮ್ಮುಟ್ಟಿ ಜೊತೆ ಜೋಡಿಯಾಗಿ ನಟಿಸುತ್ತಿದ್ದು, ಇದು ಮಮ್ಮುಟ್ಟಿ ಅವರೊಟ್ಟಿಗೆ ಮೊದಲ ಸಿನಿಮಾ ಆಗಿದೆ. ಚಿತ್ರದ ಮೊದಲ ಪೋಸ್ಟರ್​ನಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದೆ. ಮಮ್ಮುಟ್ಟಿ ಅವರು ಈಗಾಗಲೇ ತಮ್ಮ ಹಿಂದಿನ ಚಿತ್ರ ‘ರೋರ್​ಸ್ಚಾಚ್​’ನ ಯಶಸ್ಸಿನಲ್ಲಿದ್ದಾರೆ.

ಇದನ್ನೂ ಓದಿ:Mammootty Birthday: 70ನೇ ಜನ್ಮದಿನ ಆಚರಿಸಿಕೊಳ್ಳುತ್ತಿರುವ ಮಾಲಿವುಡ್ ಸ್ಟಾರ್ ಮಮ್ಮುಟ್ಟಿ; ಕನ್ನಡದಲ್ಲೂ ಮಿಂಚಿದ್ದರು ಈ ನಟ!

ಇನ್ನು ಈ ಸಿನಿಮಾ ಮಲಯಾಳಂ ಅಭಿಮಾನಿಗಳಲ್ಲಿ ಭಾರಿ ಹೈಫ್​ ಕ್ರಿಯೇಟ್​ ಮಾಡಿದೆ. ಈ ಸಿನಿಮಾವನ್ನು ಜಿಯೋ ಬೇಬಿ ನಿರ್ದೇಶನ ಮಾಡಿದ್ದು ‘ದಿ ಗ್ರೇಟ್​ ಇಂಡಿಯನ್​ ಕಿಚನ್​’ ಮತ್ತು ‘ಕಿಲೋಮೀಟರ್ಸ್​ ಕಿಲೋಮೀಟರ್ಸ್’ ಚಿತ್ರಗಳ ಮೂಲಕ ವಿಮರ್ಶಾತ್ಮಕ ಮೆಚ್ಚುಗೆ ಗಳಿಸಿದ ನಿರ್ದೇಶಕ ಜಿಯೋ ಬೇಬಿ ಈ ಬಾರಿ ಪ್ರೇಕ್ಷಕರಿಗೆ ಯಾವ ರೀತಿಯ ಕಥೆಯ ಮೂಲಕ ಬರಲಿದ್ದಾರೆ ಎಂದು ಕಾದು ನೋಡಬೇಕಾಗಿದೆ. ಸಾಲು.ಕೆ. ಥಾಮಸ್​ ಕ್ಯಾಮರಾ ವರ್ಕ್​ ಮಾಡಿದ್ದು, ಚಿತ್ರಕ್ಕೆ ಮ್ಯಾಥ್ಯೂಸ್​ ಪುಲಿಕನ್​ ಸಂಗೀತ ಸಂಯೋಜಿಸಿದ್ದಾರೆ, ಮಮ್ಮುಟ್ಟಿ ಮತ್ತು ದುಲ್ಕರ್​ ಸಲ್ಮಾನ್​ ಅವರ ಬ್ಯಾನರ್​ಗಳಾದ ಮಮ್ಮುಟ್ಟಿ ಕಂಪನಿ ಹಾಗೂ ವೇಫೇರರ್​ ಫಿಲ್ಮ್ಸ್ ಸಹ-ನಿರ್ಮಾಣ ಮಾಡಿದ್ದಾರೆ.

ಇನ್ನಷ್ಟು ಮನರಂಜನಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ