AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mangli Shivaratri Song: ಶ್ರೀಕಾಳಹಸ್ತಿ ದೇವಸ್ಥಾನದಲ್ಲಿ ಹಾಡಿ, ಕುಣಿದು ಭಕ್ತರ ಭಾವನೆಗೆ ಧಕ್ಕೆ ತಂದ ಗಾಯಕಿ ಮಂಗ್ಲಿ

Mangli Srikalahasti Song: ಶಿವರಾತ್ರಿ ಹಬ್ಬಕ್ಕಿಂತಲೂ ಕೆಲವೇ ದಿನಗಳ ಮುನ್ನ ಮಂಗ್ಲಿ ಅವರು ಶ್ರೀಕಾಳಹಸ್ತಿ ದೇವಸ್ಥಾನದಲ್ಲಿ ಈ ಹಾಡನ್ನು ಚಿತ್ರೀಕರಿಸಿದ್ದಾರೆ. ದೇಗುಲದ ಪ್ರಮುಖ ಜಾಗಗಳಲ್ಲಿ ಅವರು ಹಾಡಿ, ಕುಣಿದಿದ್ದಾರೆ.

Mangli Shivaratri Song: ಶ್ರೀಕಾಳಹಸ್ತಿ ದೇವಸ್ಥಾನದಲ್ಲಿ ಹಾಡಿ, ಕುಣಿದು ಭಕ್ತರ ಭಾವನೆಗೆ ಧಕ್ಕೆ ತಂದ ಗಾಯಕಿ ಮಂಗ್ಲಿ
ಮಂಗ್ಲಿ
ಮದನ್​ ಕುಮಾರ್​
|

Updated on:Feb 21, 2023 | 5:35 PM

Share

ಪ್ರಸಿದ್ಧ ಗಾಯಕಿ ಮಂಗ್ಲಿ (Singer Mangli) ಅವರು ತೆಲುಗು ಮತ್ತು ಕನ್ನಡ ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ. ಅವರ ವಿಶೇಷ ಕಂಠಕ್ಕೆ ಕೇಳುಗರು ಮರುಳಾಗಿದ್ದಾರೆ. ನಟನೆಯಲ್ಲೂ ಅವರು ಬ್ಯುಸಿ ಆಗಿದ್ದಾರೆ. ಒಂದೆಡೆ ಮಂಗ್ಲಿ ಅವರ ಜನಪ್ರಿಯತೆ ಹೆಚ್ಚಿದಂತೆ ಇನ್ನೊಂದೆಡೆ ವಿವಾದಗಳು ಕೂಡ ಅವರನ್ನು ಸುತ್ತಿಕೊಳ್ಳುತ್ತಿವೆ. ಶಿವರಾತ್ರಿ (Shivaratri 2023) ಪ್ರಯುಕ್ತ ಮಂಗ್ಲಿ ಅವರು ‘ಭಂ ಭಂ ಭೋಲೆ..’ ಎಂಬ ಹಾಡನ್ನು ಬಿಡುಗಡೆ ಮಾಡಿದ್ದಾರೆ. ಅಭಿಮಾನಿಗಳಿಗೆ ಈ ಹಾಡು ಇಷ್ಟ ಆಗಿದೆ. ಯೂಟ್ಯೂಬ್​ನಲ್ಲಿ 37 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆ ಕಂಡು ಮುನ್ನುಗ್ಗುತ್ತಿದೆ. ಆದರೆ ಒಂದಷ್ಟು ಜನರು ಗರಂ ಆಗಿದ್ದಾರೆ. ಈ ಹಾಡನ್ನು ಶ್ರೀಕಾಳಹಸ್ತಿ ದೇವಸ್ಥಾನದಲ್ಲಿ (Srikalahasti Temple) ಚಿತ್ರೀಕರಣ ಮಾಡಿರುವುದರಿಂದ ವಿವಾದ ಹುಟ್ಟಿಕೊಂಡಿದೆ.

ಆಂಧ್ರ ಪ್ರದೇಶದ ತಿರುಪತಿ ಜಿಲ್ಲೆಯಲ್ಲಿ ಇರುವ ಶ್ರೀಕಾಳಹಸ್ತಿ ದೇವಸ್ಥಾನಕ್ಕೆ ಅಸಂಖ್ಯಾತ ಭಕ್ತರು ಭೇಟಿ ನೀಡುತ್ತಾರೆ. ಶಿವ ಭಕ್ತರ ಪಾಲಿಗೆ ಇದು ಪವಿತ್ರ ಕ್ಷೇತ್ರ. ಅದ್ದೂರಿಯಾಗಿ ಇಲ್ಲಿ ಶಿವರಾತ್ರಿ ಆಚರಿಸಲಾಗುತ್ತದೆ. ದೇವಸ್ಥಾನದ ಒಳಗೆ ವಿಡಿಯೋ ಚಿತ್ರೀಕರಣ ಮಾಡಲು ಅವಕಾಶ ಇಲ್ಲ. ಭಕ್ತಾದಿಗಳು ಮೊಬೈಲ್​ನಲ್ಲೂ ಚಿತ್ರೀಕರಿಸುವಂತಿಲ್ಲ. ಆದರೆ ಈ ನಿಯಮವನ್ನು ಗಾಯಕಿ ಮಂಗ್ಲಿ ಮತ್ತು ಅವರ ತಂಡದವರು ಮುರಿದಿದ್ದಾರೆ.

Mangli: ಮೊದಲ ಬಾರಿಗೆ ಮಂಗ್ಲಿ ಕಂಠದಲ್ಲಿ ತುಳು ಹಾಡು; ‘ಬಿರ್ದ್‌ದ ಕಂಬಳ’ ಚಿತ್ರಕ್ಕೆ ಸಾಂಗ್​​ ರೆಕಾರ್ಡಿಂಗ್​

ಇದನ್ನೂ ಓದಿ
Image
Singer Mangli: ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ತೆಲುಗು ಗಾಯಕಿ ಮಂಗ್ಲಿ ‘ವಂದೇ ಮಾತರಂ’ ಘೋಷ
Image
ಪುನೀತ್ ಸರ್ ಒಬ್ಬ ಕಲಾವಿದನಿಗಿಂತ ಹೆಚ್ಚು ಶ್ರೇಷ್ಠ ವ್ಯಕ್ತಿಯಾಗಿದ್ದರು, ಅವರಂಥವರು ನಮಗೆ ಪುನಃ ಸಿಗಲಾರರು: ಮಂಗ್ಲಿ
Image
Singer Mangli: ‘ಏಕ್​ ಲವ್ ಯಾ’ ಸುದ್ದಿಗೋಷ್ಠಿಯಲ್ಲಿ ಪುನೀತ್​ ನೆನೆದು ಕಣ್ಣೀರು ಹಾಕಿದ ಗಾಯಕಿ ಮಂಗ್ಲಿ
Image
Mangli: ಕನ್ನಡಕ್ಕೆ ಬಂದ ಮಂಗ್ಲಿ! ‘ಕಣ್ಣೇ ಅದಿರಿಂದಿ..’ ಬಳಿಕ ‘ಕರಿಯಾ ಐ ಲವ್​ ಯೂ’ ಎಂದ ಸೆನ್ಸೇಷನಲ್​ ಸಿಂಗರ್​

ಈ ವರ್ಷದ ಶಿವರಾತ್ರಿ ಹಬ್ಬಕ್ಕಿಂತಲೂ ಕೆಲವೇ ದಿನಗಳ ಮುನ್ನ ಮಂಗ್ಲಿ ಅವರು ಶ್ರೀಕಾಳಹಸ್ತಿ ದೇವಸ್ಥಾನದಲ್ಲಿ ಈ ಹಾಡನ್ನು ಚಿತ್ರೀಕರಿಸಿದ್ದಾರೆ. ದೇಗುಲದ ಪ್ರಮುಖ ಜಾಗಗಳಲ್ಲಿ ಅವರು ಹಾಡಿ, ಕುಣಿದಿದ್ದಾರೆ. ಹಾಗಾದರೆ ಅವರಿಗೆ ಅನುಮತಿ ಕೊಟ್ಟವರು ಯಾರು? ಮಂಗ್ಲಿಗೆ ಒಂದು ನ್ಯಾಯ, ಭಕ್ತಾದಿಗಳಿಗೆ ಇನ್ನೊಂದು ನ್ಯಾಯವೇ ಎಂದು ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ.

Singer Mangli: ಸಿಂಗರ್​ ಮಂಗ್ಲಿ ಈಗ ಹೀರೋಯಿನ್​; ಚಂದ್ರಚೂಡ್​ ನಿರ್ದೇಶನದ ‘ಪಾದರಾಯ’ ಚಿತ್ರದಲ್ಲಿ ನಟನೆ

ಶ್ರೀಕಾಳಹಸ್ತಿ ದೇವಸ್ಥಾನದ ಉಸ್ತುವಾರಿ ನೋಡಿಕೊಳ್ಳುತ್ತಿರುವವರು ಇದಕ್ಕೆ ಉತ್ತರಿಸಬೇಕು ಎಂದು ನೆಟ್ಟಿಗರು ಪಟ್ಟು ಹಿಡಿದಿದ್ದಾರೆ. ಎಲ್ಲರ ಕಣ್ತಪ್ಪಿಸಿ ಈ ಹಾಡನ್ನು ಚಿತ್ರೀಕರಿಸಲು ಸಾಧ್ಯವಿಲ್ಲ. ಇದರಲ್ಲಿ ದೇವಸ್ಥಾನದವರೂ ಕೈ ಜೋಡಿಸಿದ್ದಾರೆ ಎಂಬ ಕಮೆಂಟ್​ಗಳು ಬರುತ್ತಿವೆ.

Mangli: ಮೈಸೂರಿಗೆ ಬಂದು ‘ಕನ್ನಡ ನನಗೆ ಎರಡನೇ ಮನೆ’ ಎಂದು ತೆಲುಗಿನಲ್ಲೇ ಹೇಳಿದ ಗಾಯಕಿ ಮಂಗ್ಲಿ

ಮಂಗ್ಲಿ ಅವರ ಅನೇಕ ಹಾಡುಗಳು ಸೂಪರ್​ ಹಿಟ್​ ಆಗಿವೆ. ಕನ್ನಡದಲ್ಲಿ ಅವರು ಒಂದಷ್ಟು ಗೀತೆಗಳಿಗೆ ಧ್ವನಿ ನೀಡಿದ್ದಾರೆ. ಕೆಲವು ವಿಶೇಷ ಸಂದರ್ಭಗಳಲ್ಲಿ ಅವರು ಕರುನಾಡಿಗೆ ಬಂದು ಸಂಗೀತ ಕಾರ್ಯಕ್ರಮ ನೀಡಿದ್ದುಂಟು. ಚಿಕ್ಕಬಳ್ಳಾಪುರದಲ್ಲಿ ಇತ್ತೀಚೆಗೆ ಒಂದು ಕಾರ್ಯಕ್ರಮ ನಡೆದಾಗ ಕನ್ನಡದಲ್ಲಿ ನಮಸ್ಕಾರ ಎಂದು ಹೇಳಲು ಅವರು ಹಿಂದೇಟು ಹಾಕಿದ್ದರು. ಅದು ಕನ್ನಡಿಗರ ಕೋಪಕ್ಕೆ ಕಾರಣ ಆಗಿತ್ತು.

ಈ ವರ್ಷದ ಬಳ್ಳಾರಿ ಉತ್ಸವದಲ್ಲಿ ಕೂಡ ಮಂಗ್ಲಿ ಭಾಗವಹಿಸಿದ್ದರು. ಆ ವೇಳೆ ಅವರ ಕಾರಿನ ಮೇಲೆ ಕಲ್ಲು ತೂರಾಟ ಆದ ಬಗ್ಗೆ ವರದಿ ಆಗಿತ್ತು. ಆದರೆ ಅಂಥ ಘಟನೆ ನಡೆದೇ ಇಲ್ಲ ಎಂದು ಮಂಗ್ಲಿ ಅವರು ಸೋಶಿಯಲ್​ ಮೀಡಿಯಾ ಮೂಲಕ ಸ್ಪಷ್ಟನೆ ನೀಡಿದ್ದರು. ಹೀಗೆ ಒಂದಿಲ್ಲೊಂದು ಕಾರಣದಿಂದ ಮಂಗ್ಲಿ ಅವರ ಹೆಸರು ವಿವಾದದಲ್ಲಿ ತಳುಕು ಹಾಕಿಕೊಳ್ಳುತ್ತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 5:35 pm, Tue, 21 February 23

ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ